ಇವತ್ತು ಮಾನಸಿಕ ನೆಮ್ಮದಿಯಿಲ್ಲ, ಜಿಗುಪ್ಸೆ -ಈ ರಾಶಿಯವರಿಗೆ ಎಚ್ಚರ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಪಾಲ್ಗುಣ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ವರೆಗೆ ಇರಲಿದೆ.

author-image
Ganesh Kerekuli
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಈ ದೃಶ್ಯದ ಹಿಂದೆ ಸಹಿಸಲಾಗದ ಸಂಕಟ, ತೀರಲಾರದ ನೋವು.. ಅಮ್ಮ ಎಲ್ಲಿಗೆ ಹೋದ್ಲು..?

ಮೇಷ

  • ಬಂಧುಗಳ ಭೇಟಿಯಿಂದ ಸಮಾಧಾನ
  • ದೂರದ ಊರಿನಿಂದ ಸಿಹಿ ಸುದ್ದಿ
  • ಉತ್ತಮ ಜ್ಞಾನ ಸಂವೇದನೆಗೆ ಅವಕಾಶ
  • ಹಿರಿಯರನ್ನು ನಿರ್ಲಕ್ಷಿಸಬೇಡಿ
  • ಒಳ್ಳೆ ಹಾಸ್ಯ ಮಾಡುವವರಿಂದ ಆಕರ್ಷಿತರಾಗಬಹುದು
  • ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮಾತುಕತೆ  
  • ಉಮಾಮಹೇಶ್ವರರನ್ನು ಪ್ರಾರ್ಥಿಸಿ

ವೃಷಭ

  • ಕುಟುಂಬದಲ್ಲಿ ಅನಿರೀಕ್ಷಿತ ಸಮಾಚಾರವಿರುತ್ತದೆ
  • ನಿಮ್ಮ ಪ್ರೀತಿ ಮಿತ್ರರು ನಿಮಗೆ ಕೈ ಕೊಡಬಹುದು
  • ಹಣದ ವಿಚಾರದಲ್ಲಿ ಜಾಗ್ರತೆವಹಿಸಿ - ನಷ್ಟ
  • ಹಳೆಯ ಶರೀರದ ನೋವು ಮರುಕಳಿಸಬಹುದು
  • ಆತ್ಮವಿಶ್ವಾಸದಿಂದ ನಿಮ್ಮ ಜೀವನ ಹಸನಾಗುತ್ತದೆ
  • ಆರೋಗ್ಯದಲ್ಲಿ ಗಮನವಿರಲಿ - ಆರೈಕೆ ಮಾಡಿಕೊಳ್ಳಿ
  • ನಿಮ್ಮ ಕೋಪದಿಂದ ನಿಷ್ಠೂರರಾಗುತ್ತೀರಿ
  • ನವಗ್ರಹರ ಆರಾಧನೆ ಮಾಡಿ

ಮಿಥುನ

  • ಭೂ ಸಂಬಂಧೀ ವ್ಯವಹಾರಕ್ಕೆ ಅನುಕೂಲವಿದೆ - ಸಮಾಧಾನವಿಲ್ಲ
  • ವಿರೋಧಗಳಿಮದ ಸಮಸ್ಯೆ ಕಾಡಬಹುದು
  • ಮಕ್ಕಳಿಗೆ ತೊಂದರೆ ಕಾಣಬಹುದು
  • ಕಾರ್ಯ ನಿಮಿತ್ತ ಪ್ರಯಾಣ
  • ಪರರ ವಸ್ತು ನಿಮ್ಮ ಕೈಯಲ್ಲಿದ್ದು ಸಮಸ್ಯೆಯಾಗಬಹುದು
  • ಭೂವಹಾರ ಮಂತ್ರ ಪಠನೆ ಮಾಡಿ

ಕಟಕ

  • ಸುಳ್ಳಿನಿಂದ ವಿಷಯವಾದ್ರೂ ತುಂಬಾ ಎಚ್ಚರಿಕೆ ವಹಿಸಿ
  • ವಿದ್ಯಾರ್ಥಿಗಳಿಗೆ ಅನುಕೂಲವಲ್ಲದ ದಿನ
  • ಮನೆಯವರಲ್ಲಿ ಭಿನ್ನಾಭಿಪ್ರಾಯ ನಿಮ್ಮದೇ ಮೇಲುಗೈ
  • ರಸ್ತೆ ಅಪಘಾತದ ಸೂಚನೆ
  • ಚಿನ್ನ  ಬೆಳ್ಳಿ ಹಣ ಕಳೆದುಕೊಳ್ಳಬಹುದು
  • ಕೋರ್ಟ್ ಕೇಸ್ ಗಳು ಇತ್ಯರ್ಥ ಆಗಲಿದೆ
  • ಮೃತ್ಯುಂಜಯನನ್ನು ಪೂಜಿಸಿ

ಸಿಂಹ

  • ಸ್ನೇಹಿತರು - ಬಂಧುಗಳು ನಿಮ್ಮ ಉಪಯೋಗ ಪಡೆಯುತ್ತಾರೆ
  • ಯಾವ ವಿಚಾರದಲ್ಲೂ ಸರಿಯಾದ ನಿರ್ಧಾರವಿಲ್ಲ
  • ಗರ್ಭಿಣಿಯರಿಗೆ ಕಾಲುನೋವಿನಿಂದ ಸಮಸ್ಯೆ
  • ಅನಗತ್ಯ ಆಲೋಚನೆಗಳಿಂದ ಮಾನಸಿಕ ಬೇಸರ
  • ಉದ್ಯೋಗದ ದೃಷ್ಟಿಯಿಂದ ಹಿನ್ನಡೆ
  • ಸಾಯಂಕಾಲ ಶುಭವಾರ್ತೆ ಸಿಗಲಿದೆ
  • ಗಣಪತಿಯನ್ನು ಬಿಳೀ ಎಕ್ಕದ ಹೂವಿನಿಂದ ಪೂಜಿಸಿ

ಕನ್ಯಾ

  • ಮನೆಯ ಅಲಂಕಾರಕ್ಕಾಗಿ  ವಸ್ತು ಖರೀದಿಗೆ ಖರ್ಚು
  • ಸಾಮಾಜಿಕ ಕಾರ್ಯಕ್ರಮದಲ್ಲಿ ಸ್ಥಾನಮಾನವಿರುತ್ತದೆ
  • ದಿನವಿಡಿ ಶ್ರಮಾದಾಯಕ ಕೆಲಸ ತೃಪ್ತಿಯಿರುತ್ತದೆ
  • ನಷ್ಟವಾಗಿದ್ದ ವಸ್ತು  ಹಣ ಸಿಗಬಹುದು
  • ಪ್ರಾಣಿ ವ್ಯಾಪಾರಿಗಳಿಗೆ ಲಾಭವಿದೆ
  • ಹಿರಿಯರ ಗುರುಗಳ ಆಶೀರ್ವಾದ ಲಭಿಸುತ್ತದೆ
  • ಕಾರ್ತವೀಱರ್ಜುನನ್ನು ಪ್ರಾರ್ಥನೆ  ಮಾಡಿ

ತುಲಾ

  • ಹಳೆಯ ನೆನಪುಗಳಿಂದ ನೋವು  ಬೇಸರ ಆಗಲಿದೆ
  • ವ್ಯಾಪಾರಕ್ಕಾಗಿ ಹಣ ಹೂಡಿಕೆ  ಬೇಡ
  • ನಿಮ್ಮ ಏಕಾಗ್ರತೆಗೆ ತೊಂದರೆಯಿದೆ
  • ಮಕ್ಕಳಿಂದ ಶುಭ ವಾರ್ತೆ  ಸಂತೋಷ
  • ನಿಮ್ಮ ವೈಯಕ್ತಿಕ ಜೀವನಕ್ಕಾಗಿ ಸಮಯ ನೀಡಿ
  • ನಿಮ್ಮ ಉದ್ದೇಶದ ಬಗ್ಗೆ ಮುಕ್ತವಾಗಿ ಚರ್ಚಿಸಿ
  • ಆಂಜನೇಯನ ಸ್ಮರಣೆ ಮಾಡಿ

ವೃಶ್ಚಿಕ

  • ಮನೆ ಕೆಲಸದ ಬಗ್ಗೆ ಕಾಳಜಿ ವಹಿಸಿ  ಗೌರವವಿದೆ
  • ದೀರ್ಘಕಾಲದ ಸಮಸ್ಯೆಗೆ ಪರಿಹಾರ
  • ಕೆಲಸದ ಒತ್ತಡದಿಂದ ಕೋಪ ಬರಬಹುದು
  • ಆರೋಗ್ಯದ ಬಗ್ಗೆ ತಾತ್ಸಾರ ಬೇಡ
  • ನಿಮ್ಮ ವರ್ತನೆ ಮನೆಯವರಿಗೆ ಬೇಸರ ತರಬಹುದು
  • ದೂರದ ಬಂಧುಗಳು ಸ್ನೇಹಿತರು ಮನೆಗೆ  ಬರಬಹುದು
  • ನರಸಿಂಹನನ್ನು ಆರಾಧಿಸಿ

ಧನುಸ್ಸು

  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ರಸ್ತೆ ದಾಟುವಾಗ ವಾಹನ ಚಾಲನೆಯಲ್ಲಿ ಜಾಗ್ರತೆ  ತೊಂದರೆಯಿದೆ
  • ಕ್ರೀಡಾರಂಗದಲ್ಲಿರುವವರಿಗೆ ಹೆಚ್ಚಿನ ಅನುಕೂಲ
  • ಮಾನಸಿಕ ದ್ವೇಷ  ಅಸೂಯೆಗಳನ್ನು ದೂರಮಾಡಿ
  • ಸ್ನೇಹಿತರು ಅಭಯ ನಿಮ್ಮ ಧೈರ್ಯ ಹೆಚ್ಚಿಸುತ್ತದೆ
  • ಸೋದರಮಾವನ ಸಂಬಂಧದಲ್ಲಿ ಘರ್ಷಣೆಯಾಗಬಹುದು
  • ದುರ್ಗಾರಾಧನೆ ಮಾಡಿ

ಮಕರ

  • ಮಕ್ಕಳ ಚಿಂತೆಯಿಂದ ಹೊರಬನ್ನಿ
  • ಆತ್ಮವಿಶ್ವಾಸ ಬೆಳೆದಷ್ಟು ಅನುಕೂಲವಿರುತ್ತದೆ
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ  ಸಹಾಯಧನ
  • ಜೀವನದ ನಿರಾಸೆಗಳನ್ನು ದೂರಮಾಡಿ  ಆಶಾದಾಯಕರಾಗಿರಿ
  • ಅಚ್ಚರಿಯ ಘಟನೆ ನಡೆಯಬಹುದು
  • ಆರ್ಥಿಕ ಹಿನ್ನಡೆ ಆದ್ರೂ ಸಮಾಧಾನವಿರಲಿ
  • ಕಲಿಯುವ ಮಕ್ಕಳಿಗೆ ಅಧ್ಯಯನ ಸಾಮಾಗ್ರಿ ಕೊಡಿಸಿ

ಕುಂಭ

  • ಆಲಸ್ಯ ದೂರ ಮಾಡಿ ಆನಂದವಾಗಿರಿ
  • ಹಳೆಯ ಸ್ನೇಹಿತರ ಭೇಟಿ ಉತ್ಸಾಹ ತರಲಿದೆ
  • ಹೆಚ್ಚು ವ್ಯಯ ಆಗುವುದರಿಂದ  ಕುಟುಂಬ ಕಲಹ
  • ಜೀವನ ಶೈಲಿ ಬದಲಿಸಲು ಪ್ರಯತ್ನ  ಆಗುವುದಿಲ್ಲ
  • ಅನುಮಾನದ ಸಮಯ ಮನಸ್ಸಿಗೆ ಕಿರಿಕಿರಿ
  • ಅನಗತ್ಯ ಕೆಲಸದಿಂದ ಸಮಯ ವ್ಯರ್ಥ ಆಗಬಹುದು
  • ಕುಲದೇವತಾ ಆರಾಧನೆ ಮಾಡಿ

ಮೀನ

  • ಮಾನಸಿಕ ನೆಮ್ಮದಿಯಿಲ್ಲ ಜಿಗುಪ್ಸೆ
  • ತಂದೆಯವರಿಂದ ಉತ್ತಮ ಸಲಹೆ ಹಣ ಸಹಾಯ
  • ಪ್ರೇಮಿಗಳಿಗೆ ಉತ್ತಮವಾದ ದಿನ
  • ಸಂಬಂಧಿಕರಿಂದ ಹಣಕ್ಕಾಗಿ ಒತ್ತಾಯ
  • ವ್ಯಾಪಾರದಲ್ಲಿ ಹಾನಿ ಪರ್ಯಾಯ  ವ್ಯವಸ್ಥೆಗೆ ಚಿಂತನೆ
  • ಕೆಲಸದ ಒತ್ತಡ  ತಾಳ್ಮೆ ಪರೀಕ್ಷೆಯ ದಿನ
  • 12 ಸಲ ಅಶ್ವತ್ಥ ಪ್ರದಕ್ಷಿಣೆ ಮಾಡಿ

ಇದನ್ನೂ ಓದಿ: ಹರಿಣಗಳಿಗೆ ಕಾದಿಗೆ ‘ಫೈವ್​ ಸ್ಟಾರ್’​ ಪಂಚ್.. ಪಂದ್ಯಕ್ಕೂ ಮುನ್ನವೇ ಭಯ ಹುಟ್ಟಿಸಿದ ಸ್ಟಾರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment