Advertisment

ಆರೋಗ್ಯ, ಹಣ ಎಲ್ಲವೂ ಸೂಪರ್, ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ವಿಶಾಖ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್.. ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಸಾಧ್ಯತೆ!

ಮೇಷ

  • ನಿಮ್ಮ ಧಾರಾಳತೆಯಿಂದ ಬೇರೆಯವರಿಗೆ ಅನುಕೂಲ
  • ವೃತ್ತಿ ವ್ಯಾಪಾರದಲ್ಲಿ ಅನುಕೂಲ 
  • ಮನೆಯಲ್ಲಿ ಕಿರಿಕಿರಿ ಉಂಟಾಗಬಹುದು
  • ಈ ದಿನ ಆರೋಗ್ಯ ಹಣ ಚೆನ್ನಾಗಿರುತ್ತದೆ
  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಮಾತಿನಿಂದಾಗುವ ತೊಂದರೆ ಕುಟುಂಬದ ಮೇಲೆ ಪರಿಣಾಮ ಬೀರಬಹುದು
  • ಸರಸ್ವತಿಯನ್ನು ಪ್ರಾರ್ಥಿಸಿ

ವೃಷಭ

  • ಮನೆ ಬದಲಾಯಿಸುವ ಯೋಚನೆ ಸಧ್ಯಕ್ಕೆ ಬೇಡ
  • ಮಾನಸಿಕ ನೆಮ್ಮದಿ ಸಿಕ್ಕರೇ ಉಳಿದೆಲ್ಲಾ ನಿಮ್ಮ ವಶವಾಗಬಹುದು
  • ಹಿರಿಯರ ಆಶ್ರಯದಿಂದ ಸಮಾಧಾನ
  • ಕ್ರೀಡಾಪಟುಗಳು ವಿಶೇಷ ಎಚ್ಚರಿಕೆ ವಹಿಸಬೇಕು
  • ಗರ್ಭಿಣಿ ಸ್ತ್ರೀಯರೇ ಎಚ್ಚರವಹಿಸಿ
  • ಯಾವುದೇ ವಿವಾದಗಳು ಬೇಡ
  • ಕೃಷ್ಣನನ್ನು ತುಳಸಿಯಿಂದ ಪೂಜಿಸಿ
Advertisment

ಮಿಥುನ

  • ಮಾನಸಿಕ ಧೈರ್ಯ ಕಡಿಮೆ ಬೇಸರ ಅಗಬಹುದು
  • ಊಹಾಪೋಹಗಳಿಂದ ಮಾನಸಿಕ ಖಿನ್ನತೆ
  • ಗೋವಿಗೆ ಅಕ್ಕಿಬೆಲ್ಲ ನೀಡಿ
  • ಆರ್ಥಿಕ ತೊಂದರೆಯಿಲ್ಲ ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
  • ಅಪರಿಚಿತ ವ್ಯಕ್ತಿಯೊಂದಿಗೆ ವಿವಾದ 
  • ಮನೆಯ ಸಮಸ್ಯೆಗಳಿಂದ ಉದ್ವೇಗ
  • ಕೇವಲ ಹಣದಿಂದ ಏನೂ ಸಾಧಿಸಲಾಗದು ಎಂದು ತಿಳಿಯಬೇಕಾದ ದಿನ

ಕಟಕ

  • ಕೌಟುಂಬಿಕ ಸಾಮರಸ್ಯ ಸಂತೋಷವನ್ನು ಅನುಭವಿಸುತ್ತೀರಿ
  • ಯಾರನ್ನೂ ಹೆಚ್ಚು ಹಚ್ಚಿಕೊಳ್ಳಬೇಡಿ ದುಃಖ ಆಗಬಹುದು
  • ಮಕ್ಕಳಿಂದ ಖುಷಿ ಸಿಗಲಿದೆ
  • ಆಹಾರ ಮತ್ತು ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
  • ಮನಸ್ಸಿಗೆ ನೆಮ್ಮದಿಯಿಂದಿರುವ ದಿನ
  • ನಿಮ್ಮ ವ್ಯವಹಾರದಿಂದ ಬೇರೆಯವರಿಗೆ ಲಾಭವಿದೆ
  • ಶ್ರೀರಾಮನನ್ನು ಪ್ರಾರ್ಥಿಸಿ

ಸಿಂಹ 

  • ಬಂಧುಗಳಿಂದ ಸಹಾಯ ಅನುಕೂಲವಿದೆ
  • ಸಾಲಗಾರರ ಕಾಟದಿಂದ ಮುಕ್ತಿ ಹೊಂದುತ್ತೀರಿ
  • ಯಶಸ್ಸಿದೆ ಅಲ್ಪ ಪ್ರಯತ್ನ ಮಾಡಿ
  • ಶಿಕ್ಷಣರಂಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಅನುಕೂಲ
  • ನಿಮ್ಮ ಮನಸ್ಥಿತಿಯನ್ನು ಹಾಗೇ ಕಾಯ್ದುಕೊಳ್ಳಿ
  • ಬೇರೆಯವರ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು
  • ರಾಜರಾಜೇಶ್ವರಿಯನ್ನು ಅರ್ಚಿಸಿ
Advertisment

ಕನ್ಯಾ

  • ಕಾರ್ಯಕ್ಷೇತ್ರಗಳಲ್ಲಿ ಶೀಘ್ರ ಬದಲಾವಣೆ
  • ಹಣದ ವಿಚಾರದಲ್ಲಿ ನಿಮ್ಮ ಆದಾಯ ಗಮನಿಸಿ
  • ಪ್ರೇಮಿಗಳಿಗೆ ಉತ್ತಮ ದಿನ
  • ಬೇರೆಯವರ ಪ್ರೀತಿಗೆ ನೀವು ಪಾತ್ರರಾಗಬಹುದು
  • ನಿಮ್ಮ ಸಂತೋಷವನ್ನು ಬೇರೆಯವರಿಗೆ ಹಂಚಿ
  • ಬೇರೆಯವರು ಅವರ ಕಷ್ಟವನ್ನು ನಿಮ್ಮ ಹತ್ತಿರ ಹೇಳಿಕೊಳ್ಳಬಹುದು
  • ಇಷ್ಟದೇವತಾ ಪ್ರಾರ್ಥನೆ

ತುಲಾ

  • ಹಣವಿದೆ ನೆಮ್ಮದಿಯಿಲ್ಲ 
  • ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಬೇಕು
  • ನಿಮ್ಮ ಮಾತಿನಿಂದಲೇ ಅವಮಾನ ಆಗಬಹುದು 
  • ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು
  • ಮಾನಸಿಕ ದುಃಖ ನಿಮ್ಮನ್ನು ಕಾಡಬಹುದು
  • ಮನೆಯಲ್ಲಿ ಪರಸ್ಪರ ಅನ್ಯೋನ್ಯತೆ ಕಾಪಾಡಿಕೊಳ್ಳಬೇಕು
  • ದುರ್ಗಾದೇವಿಯನ್ನು ಪ್ರಾರ್ಥಿಸಿ

ವೃಶ್ಚಿಕ

  • ವೈವಾಹಿಕ ಜೀವನದ ಏರಿಳಿತಗಳ ಅನುಭವ
  • ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ
  • ನಿಮ್ಮ ಬುದ್ಧಿವಂತಿಕೆ ಕೆಲಸ ಮಾಡುತ್ತದೆ
  • ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
  • ಆಧ್ಯಾತ್ಮಿಕ ಲಾಭಕ್ಕಾಗಿ ಧ್ಯಾನ  ಯೋಗ ಮಾಡಿ
  • ಪ್ರೇಮಿಗಳಿಗೆ ಸಾಧಾರಣವಾದ ದಿನ 
  • ವಿಷ್ಣುವನ್ನು ಸ್ಮರಿಸಿ
Advertisment

ಧನುಸ್ಸು

  • ಕುಟುಂಬದಲ್ಲಿ ಸಂಘರ್ಷ ಆಗಬಬಹುದು
  • ಪ್ರಯತ್ನ ಪೂರ್ವಕವಾಗಿ ಸಂತೋಷ ಪಡೆಯಬೇಕು
  •  ಮಧ್ಯವರ್ತಿಗಳಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು
  • ಹಣ ಬರುತ್ತದೆ ಅಪಮಾನವೂ ಇರುತ್ತದೆ
  • ಈ ದಿನ ಕೋಪ ನಿಯಂತ್ರಣದಲ್ಲಿರಲಿ
  • ಕೆಲವು ಗಂಭೀರ ಸಮಸ್ಯೆಗಳು ಎದುರಾಗುತ್ತವೆ
  • ಈಶ್ವರಾರಾಧನೆ ಮಾಡಿ

ಮಕರ

  • ವಾದ ವಿವಾದಗಳ ವಿಚಾರದಲ್ಲಿ ಸಿಲುಕುತ್ತೀರಿ
  • ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
  • ಬೇರೆಯವರ ಅವಲಂಬನೆ ಬೇಡ
  • ಕೋರ್ಟ್ ವ್ಯವಹಾರದಲ್ಲಿ ಜಯ ಸಿಗಲಿದೆ
  • ವೃತ್ತಿಯಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು
  • ಆಹಾರ ನಿಯಂತ್ರಣದಲ್ಲಿರಲಿ
  • ಕುಲದೇವತಾ ಆರಾಧನೆ ಮಾಡಿ

ಕುಂಭ

  • ಸಮಯೋಚಿತ ಬದಲಾವಣೆಗೆ ಆದ್ಯತೆ ನೀಡಿ
  • ಮಾನಸಿಕ ಶಾಂತಿ ಕಡಿಮೆ
  • ಕುಟುಂಬದ ಸದಸ್ಯರ ಬಗ್ಗೆ ಕಾಳಜಿಯಿರಲಿ
  • ಆರ್ಥಿಕ ಸಮಸ್ಯೆಯಿರುವುದಿಲ್ಲ
  • ಹಳೆಯ ಗೆಳೆಯರ ಸಂಪರ್ಕದಿಂದ ಸಮಸ್ಯೆಯಾಗಬಹುದು
  • ಹೊಸ ವಸ್ತ್ರ ಖರೀದಿ ವಿಚಾರದಲ್ಲಿ ನಿರಾಸೆ
  • ನವಗ್ರಹರ ಆರಾಧನೆ ಮಾಡಿ
Advertisment

ಮೀನ

  • ಹಳೆಯ ನೆನಪುಗಳೊಂದಿಗೆ ಸಂತೋಷ ಕಾಣುತ್ತೀರಿ
  • ಯಾವುದೇ ರೀತಿಯ ಹೊಸ ವ್ಯವಹಾರ ಬೇಡ
  • ಸಹೋದರರ ಸಹಕಾರ ಸಿಗಲಿದೆ
  • ಮಕ್ಕಳೊಂದಿಗೆ ನಿಮ್ಮ ಅಮೂಲ್ಯ ಸಮಯ ಕಳೆಯುತ್ತೀರಿ
  • ವೃತ್ತಿಯಲ್ಲಿ ಸ್ವಲ್ಪ ವ್ಯತ್ಯಯ ಅಗಬಹುದು
  • ಹಣದ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು
  • ಲಕ್ಷ್ಮಿದೇವಿ ಪ್ರಾರ್ಥನೆ ಮಾಡಿ

ಇದನ್ನೂ ಓದಿ: ಚಂದದ ಕುಟುಂಬ ಹಾಳು ಮಾಡಲು ಬಂದಳಾ ಪ್ರಿಯಾ..? ನಂದಗೋಕುಲ ವೀಕ್ಷಕರಲ್ಲಿ ಕಾಡಿದ ಆತಂಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Horoscope Rashi Bhavishya
Advertisment
Advertisment
Advertisment