/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ಇವತ್ತು ಆತ ಇದ್ದಿದ್ರೆ ಇರಾನ್ ನೋಡುತ್ತಿದ್ದ ನರಕವೇ ಬೇರೆ! ಇವನು ಕಿಂಗ್ ಆಫ್ ಶಾಡೋಸ್!
ಮೇಷ
- ಸಾಲ ಮಾಡುವ ಸಂದರ್ಭ ಬರಬಹುದು
- ಸಂಬಂಧಿಕರಲ್ಲಿ ಮಾತಿನಿಂದ ಬೇಸರವಾಗಬಹುದು
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
- ವ್ಯಾವಹಾರಿಕವಾಗಿ ದೊಡ್ಡ ನಿರ್ಧಾರ ಮಾಡುತ್ತೀರಿ
- ಇಂದು ಮಾನಸಿಕ ಅಸಮಾಧಾನ
- ತಾಯಿಯ ಜೊತೆ ಜಗಳ ಆಗುವುದರಿಂದ ದ್ವೇಷ ಉಂಟಾಗಬಹುದು
- ನವಗ್ರಹರ ಆರಾಧನೆ ಮಾಡಿ
ವೃಷಭ
- ಮಕ್ಕಳ ಚಟುವಟಿಕೆ ಬಗ್ಗೆ ದೃಢ ನಿರ್ಧಾರ ಮಾಡುತ್ತೀರಿ
- ಕುಟುಂಬದಲ್ಲಿ ಸಾಮರಸ್ಯವಿರುವ ದಿನ
- ನಿಮ್ಮ ಭಾವನೆಗೆ ಹೊಡೆತ ಬೀಳಬಹುದು
- ಇಂದು ಧನಾಗಮನ ಆಗಲಿದೆ
- ಸಂಬಂಧಿಕರ ಮನೆಗೆ ಭೇಟಿ ನೀಡುವುದರಿಂದ ಸಂತೋಷ ಆಗಲಿದೆ
- ಹಣದ ಸಮಸ್ಯೆ ದೂರವಾಗಬಹುದು
- ಗೋ ಸೇವೆಯನ್ನು ಮಾಡಿ
ಮಿಥುನ
- ಆರೋಗ್ಯದ ಸಮಸ್ಯೆ ಕಾಡಬಹುದು
- ಬೇರೆಯವರ ಮಾತು ನಿಮಗೆ ಪಥ್ಯ ಆಗಲಿದೆ
- ಸ್ವಯಂಕೃತ ಅಪರಾಧಗಳನ್ನು ಮಾಡುತ್ತೀರಿ
- ಆಸ್ತಿಗೆ ಕುತ್ತು ಬರಬಹುದು ಭೀತಿ ಕಾಡಬಹುದು
- ಮಾನಸಿಕ ನೆಮ್ಮದಿಗೆ ಭಂಗ ಬರಬಹುದು
- ಆರ್ಥಿಕ ಬೆಳವಣಿಗೆಗೆ ಅವಕಾಶವಿರುವ ದಿನ
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ಕಟಕ
- ಸರ್ಕಾರಿ ಉದ್ಯೋಗಿಗಳಿಗೆ ಲಾಭದ ದಿನ
- ಸೋಲು ಮತ್ತು ನಷ್ಟದ ಭೀತಿ ಕಾಡಲಿದೆ
- ಅಧಿಕ ಖರ್ಚಿನಿಂದ ಅಸಮಾಧಾನ ಆಗಬಹುದು
- ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗಬಹುದು
- ಕಾನೂನಿನ ಹೋರಾಟಕ್ಕೆ ಜಯವಿದೆ
- ಮಾತಿನಿಂದ ಸಮಸ್ಯೆ ಉಂಟಾಗಬಹುದು
- ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ವಿದೇಶ ಪ್ರಯಾಣಕ್ಕೆ ಚಿಂತನೆ ನಡೆಸುತ್ತೀರಿ
- ದುಶ್ಚಟಗಳಿರುವವರಿಗೆ ಸಮಸ್ಯೆಗಳಿಂದ ತೊಂದರೆಯಾಗಬಹುದು
- ಪ್ರೇಮಿಗಳಿಗೆ ಸವಾಲುಗಳು ಎದುರಾಗಲಿದೆ
- ಹೆಚ್ಚಿನ ವಿದ್ಯಾಭ್ಯಾಸದ ಚಿಂತೆ ವಿದ್ಯಾರ್ಥಿಗಳಿಗೆ ಇರಲಿದೆ
- ಕುಟುಂಬದಲ್ಲಿ ಸಿಹಿ ಸುದ್ದಿ ಕೇಳಬಹುದು
- ಸಹೋದರ ವರ್ಗದಿಂದ ಸಹಾಯ ಆಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಉದ್ಯೋಗದಲ್ಲಿ ಪ್ರಶಂಸೆ ಸಿಗಬಹುದು
- ಸಂಬಂಧಿಕರಲ್ಲಿ ಕಿರಿಕಿರಿ ಉಂಟಾಗಬಹುದು
- ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದು
- ಮಿತ್ರರಿಂದ ಲಾಭವಾಗುವ ದಿನ
- ಮಕ್ಕಳಿಂದ ಲಾಭ ಸಹಾಯ ಸಿಗಬಹುದು
- ಆಸ್ತಿಯ ಖರೀದಿ ಆದರೆ ಅಸಮಾಧಾನ
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ತುಲಾ
- ಹೊಂದಾಣಿಕೆಯ ಅಭಾವ ಕಾಣಬಹುದು
- ಉದ್ಯೋಗ ಅಥವಾ ವೃತ್ತಿಯಲ್ಲಿ ಸಮಾಧಾನ
- ಆಸ್ತಿಯ ಸಮಸ್ಯೆ ಬಗೆಹರಿಯುವುದಿಲ್ಲ
- ಮಾನಸಿಕ ಸಮಾಧಾನದ ದಿನ
- ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿ ಹೊಂದಲಿದೆ
- ಅಧಿಕ ಖರ್ಚು ಆಗಲಿದೆ
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ
- ಹಣ ಹೂಡಿಕೆಯಲ್ಲಿ ಆಸಕ್ತಿ ಉಂಟಾಗಲಿದೆ ಆದರೆ ಪ್ರಯೋಜನವಿಲ್ಲ
- ಆರೋಗ್ಯದಲ್ಲಿ ಏರುಪೇರು ಆಗಬಹುದು
- ಉದ್ಯೋಗಸ್ಥರಿಗೆ ಕಿರಿಕಿರಿ ಉಂಟಾಗಲಿದೆ
- ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
- ಅನಿರೀಕ್ಷಿತವಾಗಿ ವಂಚನೆಯಾಗಬಹುದು
- ಭರವಸೆಗೆ ಮಾತ್ರ ಮಾರು ಹೋಗಬೇಡಿ
- ದುರ್ಗಾರಾಧನೆ ಮಾಡಿ ಮಾಡಿ
ಧನಸ್ಸು
- ಮನೆಯಲ್ಲಿ ಅಶಾಂತಿಯ ವಾತಾವರಣ
- ಉದ್ಯೋಗದಲ್ಲಿ ಸಮಸ್ಯೆಯಾಗಬಹುದು
- ಹಣದ ವಿಚಾರಕ್ಕೆ ಜಗಳ ಸಾಧ್ಯತೆ
- ನಷ್ಟ ನಿರಾಸೆ ಬೇಸರ ಉಂಟಾಗಬಹುದು
- ಇಂದು ಮಕ್ಕಳಿಂದ ಸಮಾಧಾನ ಆಗಲಿದೆ
- ಪ್ರಯಾಣದ ಸಾಧ್ಯತೆಯಿಂದ ಶುಭವಿದೆ
- ಶಿವಾರಾಧನೆ ಮಾಡಿ
ಮಕರ
- ಪ್ರಯಾಣದ ನೆಪದಿಂದ ಮನೆಯಿಂದ ದೂರ ಆಗುತ್ತೀರಿ
- ಇಂದು ಮಿತ್ರರೇ ಶತ್ರುಗಳಾಗುವರು
- ಅನಾರೋಗ್ಯದ ಭೀತಿ ಕಾಡಲಿದೆ
- ಕಾನೂನಿನ ಹೋರಾಟಕ್ಕೆ ಮುಂದಾಗುತ್ತೀರಿ
- ಎಲ್ಲಾ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
- ಎಲ್ಲರ ಜೊತೆಯಲ್ಲೂ ಕೂಡ ನಿಷ್ಠೂರ ಆಗುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಸಮಾಜದಲ್ಲಿ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಟೀಕೆಗೆ ಒಳಗಾಗುತ್ತೀರಿ
- ಅನಾರೋಗ್ಯದಿಂದ ಪಾರಾಗುತ್ತೀರಿ
- ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ
- ಇಂದು ಆಕಸ್ಮಿಕ ಧನಲಾಭ ಆಗಲಿದೆ
- ವಿದ್ಯಾಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
- ಮಕ್ಕಳಿಂದ ಅನುಕೂಲ ಆದರೆ ಭಯ
- ನವಗ್ರಹರ ಆರಾಧನೆ ಮಾಡಿ
ಮೀನಾ
- ಮನೆಯಲ್ಲಿ ಶುಭಕಾರ್ಯದ ಚಿಂತೆ ಇರಲಿದೆ
- ಸ್ಥಿರಾಸ್ತಿ ನಷ್ಟ ಆಗುವ ಸಾಧ್ಯತೆ ಇದೆ
- ಸಮಾಜದಲ್ಲಿ ಮನೆಯಲ್ಲಿ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ
- ಪಾಲುದಾರಿಕೆ ಹಣ ಹೂಡಿಕೆಯಿಂದ ನಷ್ಟ ಅನುಭವಿಸುತ್ತೀರಿ
- ವಾಹನ ಚಾಲನೆಯಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು
- ಇಂದು ವ್ಯವಹಾರದಲ್ಲಿ ಅನುಕೂಲ
- ಕುಲದೇವತಾ ಪ್ರಾರ್ಥನೆ ಮಾಡಿ
ಇದನ್ನೂ ಓದಿ: ಇವತ್ತು ದಕ್ಷಿಣ ಆಫ್ರಿಕಾ ತಂಡಕ್ಕಿದೆ ಸೈಕಲಾಜಿಕಲ್ ಅಂಡ್ವಾಂಟೇಜ್.. ಹೇಗೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us