Advertisment

Horoscope: ಉದ್ಯೋಗಿಗಳಿಗೆ ಖುಷಿ ಸುದ್ದಿ.. ಹೇಗಿದೆ ನಿಮ್ಮ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಧನಿಷ್ಠಾ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಜೈಲಿನಲ್ಲೇ ನಟ ದರ್ಶನ್‌ಗೆ ಇಂದು 49ನೇ ಹುಟ್ಟುಹಬ್ಬದ ಸಂಭ್ರಮ: ದರ್ಶನ್ ಭೇಟಿಯಾದ ಹೆಂಡ್ತಿ, ಮಗ

ಮೇಷ 

ನಿಮ್ಮ ಜೊತೆಯಲ್ಲಿ  ಕೆಲಸ ಮಾಡಲು ಕೆಲವರು ಇಷ್ಟಪಡುತ್ತಾರೆ
ವಿಶ್ರಾಂತಿಯ ಕೊರತೆ ಅನಾರೋಗ್ಯಕ್ಕೆ ಕಾರಣ
ಸರ್ಕಾರಿ ಉದ್ಯೋಗಿಗಳಿಗೆ ಶುಭವಿದೆ
ಮಕ್ಕಳ ಚಿಂತೆ ಬಿಡಿ ಯಶಸ್ಸು ಕಾಣುತ್ತಾರೆ
ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಬಹುದು
ಶತ್ರುಗಳಿಗೆ ಎದುರಾಳಿಗಳಿಗೆ ನಿಮ್ಮ ಹೆದರಿಕೆಯಿರಬಹುದು
ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿ

ವೃಷಭ

  • ಬಹುದಿನಗಳ ಉದ್ವಿಗ್ನತೆ ದೂರವಾಗಬಹುದು
  • ವಿರೋಧಿಗಳ ಎದುರು ಚಿಕ್ಕವರಾಗುತ್ತೀರಿ
  • ಆಧ್ಯಾತ್ಮಿಕ ವಿಚಾರಗಳಲ್ಲಿ ಚಿಂತಿಸಿ ನೆಮ್ಮದಿ ಇದೆ
  • ಈ ದಿನ ಹೆಚ್ಚು ವ್ಯಯ ಮಾಡುತ್ತೀರಿ
  • ತರಕಾರಿ ವ್ಯಾಪಾರಿಗಳಿಗೆ ಲಾಭವಿದೆ
  • ಸಮಾಜದ ಗೌರವದ ಹಿಂದೆ ಅಪಮಾನ  ಜವಾಬ್ದಾರಿಯಿರಬಹುದು
  • ಮನೆದೇವರ ಆರಾಧನೆ ಮಾಡಿ
Advertisment

ಮಿಥುನ

  • ನವದಂಪತಿಗಳಲ್ಲಿ ಹೊಂದಾಣಿಕೆ ಇರಲಿ
  • ಷೇರು ಹೂಡಿಕೆಗೆ ಅನುಕೂಲವಿದೆ
  • ಈ ದಿನ ಆದಾಯ ಹೆಚ್ಚಳ ಆಗಲಿದೆ
  • ತಂದೆಯ ಆಸ್ತಿ  ವೈಯಕ್ತಿಕ ವಿಚಾರಗಳಿಗೆ ಬೇಸರ
  • ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ
  • ಉದ್ಯಮದಾರರಿಗೆ ಶುಭ ಲಾಭವಿದೆ ಆಪಾದನೆ
  • ಈಶ್ವರಾರಾಧನೆ ಮಾಡಿ

ಕಟಕ

  • ಗೊಂದಲವಿರುವ ಕೆಲಸಕ್ಕೆ ಕೈ ಹಾಕಬೇಡಿ
  • ದೊಡ್ಡ ನಿರ್ಧಾರಗಳನ್ನು ಈ ದಿನ ಮಾಡಬೇಡಿ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿರಬಹುದು
  • ಶತ್ರುಕಾಟ ಎದುರಿಸುವ ಶಕ್ತಿಯಿರುವುದಿಲ್ಲ
  • ಆತ್ಮೀಯರ ಮಾತಿನಿಂದ ದುಃಖ ಆಗಬಹುದು
  • ಮನೆಯ ವಾತಾವರಣದಿಂದ ಒತ್ತಡ ಹೆಚ್ಚಾಗಲಿದೆ
  • ಸರಸ್ವತೀ ದೇವಿಯನ್ನು ಪ್ರಾರ್ಥಿಸಿ

ಸಿಂಹ

  • ಕುಟುಂಬ ಸದಸ್ಯರಿಗೆ ಸಮಯ ನೀಡದೆ ನಿಷ್ಠೂರ ಆಗುತ್ತೀರಿ
  • ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಹೆಚ್ಚಾಗಲಿದೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಾಯಕವಾಗಿದೆ
  • ಸಂಶೋಧಕರಿಗೆ ಉತ್ತಮ ಸಮಯ
  • ಸಣ್ಣ ವ್ಯಾಪಾರಸ್ಥರಿಗೆ ಲಾಭ
  • ಧಾರ್ಮಿಕ ಕಾರ್ಯಗಳ ಚಿಂತನೆ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥಿಸಿ
Advertisment

ಕನ್ಯಾ

  • ಕೈ ಕೆಳಗೆ ಕೆಲಸ ಮಾಡುವವರಿಗೆ ಸಮಸ್ಯೆ ಉಂಟಾಗಬಹುದು
  • ನಿಮ್ಮ ಮಾತಿನಿಂದಲೇ ಸಿಕ್ಕಿಹಾಕಿಕೂಳ್ಳಬಹುದು
  • ಅಪರಿಚಿತರೊಂದಿಗೆ ವ್ಯವಹಾರ ಬೇಡ
  • ಮನೆಕಟ್ಟುವ ವಿಚಾರವನ್ನು ಮುಂದೂಡಿದರೆ ಒಳ್ಳೆಯದು
  • ಮಾತು ಸ್ಪಷ್ಟ ಆದರೆ ಬೇರೆಯವರಿಗೆ ಕಠಿಣ ಎನಿಸಬಹುದು
  • ಸಮಯೋಚಿತವಾಗಿ ವರ್ತಿಸಿ
  • ಅನ್ನಪೂರ್ಣೇಶ್ವರಿಯಹನ್ನು ಪ್ರಾರ್ಥಿಸಿ

ತುಲಾ

  • ಉದ್ಯೋಗ ಸ್ಥಳ ಬದಲಾವಣೆ ಆಲೋಚನೆ ಒಳ್ಳೆಯದಲ್ಲ
  • ಮನೆಯಿಂದ ಹೊರಗಿದ್ದರೆ ಸಂತೋಷ ಆಗಬಹುದು
  • ನಿಮಗೆ ದುಡ್ಡಿನ ಬಗ್ಗೆ ಯೋಚನೆ ಇಲ್ಲ
  • ಸಮಾಜ ಸೇವೆಯಲ್ಲಿ ಸಿಲುಕಿ ದ್ರೋಹವಾಗಬಹುದು
  • ತಾಯಿಯ ಆರೋಗ್ಯ ಗಮನಿಸಿ 
  • ದಾಂಪತ್ಯದಲ್ಲಿ ಸಮಸ್ಯೆ ಕಲಹ ಉಂಟಾಗಬಹುದು
  • ವ್ಯಾವಾರದಲ್ಲಿ ದೊಡ್ಡ  ಆಘಾತ ಆಗಬಹುದು
  • ಶ್ರೀ ರಾಮನನ್ನು ಪೂಜಿಸಿ

ವೃಶ್ಚಿಕ

  • ವೈಯಕ್ತಿಕ ವ್ಯವಹಾರದಲ್ಲಿ ಬೇರೆಯವರನ್ನು ನಂಬುವಂತಿಲ್ಲ
  • ವಿದ್ಯಾರ್ಥಿಗಳಿಗೆ ಮನಶ್ಚಾಂಚಲ್ಯ ಆಗಲಿದೆ
  • ಆಸ್ತಿ ಖರೀದಿ ಮಾರಾಟ ವಿಚಾರದಲ್ಲಿ ವಿವಾದ ಉಂಟಾಗಬಹುದು
  • ಹಣದ ವಿಚಾರಚಾಗಿ ಭರವಸೆ ನೀಡಬಾರದು
  • ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಶುಭವಿಲ್ಲ
  • ಭೂದೇವಿಯನ್ನು ಪ್ರಾರ್ಥಿಸಿ
Advertisment

ಧನುಸ್ಸು 

  • ಮನಸ್ಸಿನ ಗೊಂದಲ ನಿವಾರಣೆಯಾಗಲಿ
  • ನೌಕರಿ ಮತ್ತು ವೃತ್ತಿಯಲ್ಲಿ ಲಾಭ
  • ಜನಪ್ರಿಯತೆ ಹೆಚ್ಚಾಗಲು ಅವಕಾಶಗಳಿವೆ
  • ಭಿನ್ನಾಭಿಪ್ರಾಯದಿಂದ ಕೆಲಸದಲ್ಲಿ ಹಿನ್ನಡೆ
  • ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಬಹುದು
  • ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ
  • ಮನೆದೇವರ ಪ್ರಾರ್ಥನೆ ಮಾಡಿ

ಮಕರ

  • ಭಯ ಆತಂಕ ಸೃಷ್ಟಿಯಾಗಬಹುದು
  • ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು
  • ಕುಟುಂಬದಲ್ಲಿ ಬೆಂಬಲವಿರಬಹುದು ಆದರೆ ಸಮಾಧಾನವಿಲ್ಲ
  • ವಿರೋಧಿಗಳಿಂದ ಅವಮಾನ  ಸಾಧ್ಯತೆ
  • ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಿಫಲರಾಗುತ್ತೀರಿ
  • ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚಾಗಿರುತ್ತದೆ
  • ದುರ್ಗಾದೇವಿ ಆರಾಧನೆ

ಕುಂಭ

  • ಗುರಿ ತಲುಪಲು ಪರಿಶ್ರಮ ಪಡಬೇಕು
  • ಹಿತೈಷಿಗಳಿಂದ ಉತ್ತಮ ಸಲಹೆ
  • ವ್ಯಾಪಾರ ವ್ಯವಹಾರದಲ್ಲಿ ಉನ್ನತಿ
  • ವೈವಾಹಿಕ ಜೀವನದಲ್ಲಿ ಕಿರಿಕಿರಿ ಉಂಟಾಗಬಹುದು
  • ತಾಯಿಯವರ ಜೊತೆ ಜಗಳ ಸಂಭವ
  • ಪ್ರೀತಿ ಮತ್ತು ಸಂಬಂಧಗಳಲ್ಲಿ ನಂಬಿಕೆ ಮುಖ್ಯ
  • ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
Advertisment

ಮೀನ

  • ನೀವಂದುಕೊಂಡ ಕೆಲಸಗಳು ನಿಧಾನವಾಗಬಹುದು
  • ನಿಮ್ಮ ದೌರ್ಬಲ್ಯಗಳನ್ನು ಗೌಪ್ಯಮಾಡಬೇಡಿ
  • ಈ ದಿನ ಪ್ರಯಾಣ ಒಳ್ಳೆಯದಲ್ಲ
  • ಮಧುಮೇಹಿಗಳಿಗೆ ತೊಂದರೆ ಎಚ್ಚರಿಕೆ
  • ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
  • ಆರೋಗ್ಯದ ಬಗ್ಗೆ ಕಾಳಜಿ ಇರಲಿ
  • ಧನ್ವಂತರಿ ಪ್ರಾರ್ಥನೆ ಮಾಡಿ

ಇದನ್ನೂ ಓದಿ: ರಿಷಭ್ ಶೆಟ್ಟಿರಿಂದ ಮತ್ತೊಂದು ಪೌರಾಣಿಕ ಸಿನಿಮಾಗೆ ಫೆಬ್ರವರಿ 22 ರಂದು ಮುಹೂರ್ತ!: ಅಂಜನಾದ್ರಿಯಲ್ಲಿ ಜೈ ಹನುಮಾನ್‌ಗೆ ಚಾಲನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment
Advertisment
Advertisment