/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:56ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ವನ್ಯ’ ಸಿನಿಮಾ ಆಯ್ಕೆ
ಮೇಷ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆ ಹರಿಯುತ್ತದೆ
- ಮನಸ್ಸಿಗೆ ನೆಮ್ಮದಿ ದೊರೆಯುವ ದಿನ
- ಮನೆ, ದೇವಾಲಯಗಳಲ್ಲಿ ಕುಟುಂಬದ ಹಿತಕ್ಕಾಗಿ ಧರ್ಮಕಾರ್ಯ
- ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಆತ್ಮಗೌರವಕ್ಕೆ ಕೊರತೆ ಆಗಬಹುದು
- ಸಮಸ್ಯೆಗಳನ್ನು ಪ್ರಾಯೋಗಿಕ ರೀತಿಯಿಂದ ಬಗೆಹರಿಸಿಕೊಳ್ಳಿ
- ತತ್ವ ಸಿದ್ಧಾಂತದ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟದ ದಿನ
- ನವಗ್ರಹ ಆರಾಧನೆ ಮಾಡಿ
ವೃಷಭ:
- ರಾಜಕಾರಣಿಗಳಿಗೆ ಹೊಸ ಸುದ್ದಿ ಸಾಧ್ಯತೆ
- ಇಂದು ಹಣದ ವಿಚಾರದಲ್ಲಿ ಗೊಂದಲ ಆಗಬಹುದು
- ಸಂಗೀತಕಾರರಿಗೆ ತಮ್ಮ ಕಾರ್ಯದಲ್ಲಿ ಹಿನ್ನಡೆಯಾಗುವುದರಿಂದ ಕಾರ್ಯಕ್ರಮ ರದ್ದಾಗುವ ಸೂಚನೆ
- ಮಕ್ಕಳ ಉತ್ತಮ ಫಲಿತಾಂಶದಿಂದ ಸಮಾಧಾನ ಸಿಗಲಿದೆ
- ಗಂಟಲಿನ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
- ಆದಾಯ ಖರ್ಚಿನ ಅಸ್ಪಷ್ಟತೆಯಿಂದ ತೊಳಲಾಡಬಹುದು
- ಶಿವಾರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಕೆಲಸದ ಒತ್ತಡ ಇದ್ದಾಗ್ಲೂ ಜನಸೇವೆ ಮಾಡಿ ಗೌರವ ಹೆಚ್ಚಾಗುತ್ತದೆ
- ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ಶುಭದಿನ
- ಪ್ರೇಮಿಗಳಿಗೆ ಉತ್ತಮವಾದ ದಿನ
- ಸ್ಮೇಹಿತರೊಂದಿಗೆ ನಿಮ್ಮ ವಿದ್ಯಾಭ್ಯಾಸ ಕೆಲಸ ಆಲೋಚನೆಗಳ ಬಗ್ಗೆ ಚರ್ಚಿಸಿದರೆ ಒಳ್ಳೆಯದು
- ಬೆಳ್ಳಂಬೆಳಗ್ಗೆ ಕಹಿ ಘಟನೆಯಿಂದ ಮನೆಯಲ್ಲಿ ಅಶಾಂತಿ ಸಾಧ್ಯತೆ
- ಕೋದಂಡರಾಮನ ಪ್ರಾರ್ಥನೆ ಮಾಡಿ
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ಆಕಸ್ಮಿಕವಾಗಿ ಹಣ ಸಿಗುವುದರಿಂದ ಅಹಂಕಾರ ಬರಬಹುದು
- ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
- ಇಂದು ಹಣ ಹೂಡಿಕೆಯಿಂದ ಮನಸ್ಸಿಗೆ ಸಮಾಧಾನ ಸಿಗಬಹುದು
- ಹಣದ ವ್ಯವಹಾರ ಹೂಡಿಕೆಯನ್ನು ಮಧ್ಯಾಹ್ನದ ನಂತರ ಮಾಡಿ
- ನಿಮ್ಮ ತಾಳ್ಮೆ ವಿನಯ ಮಾತ್ರ ನಿಮ್ಮನ್ನು ಕಾಪಾಡಬಲ್ಲದು
- ನಿಮ್ಮನ್ನು ನೀವು ಮರೆಯುವ ಸಾಧ್ಯತೆ ಇದೆ
- ಶ್ರೀರಾಮ ಪರಿವಾರ ದೇವತೆಗಳನ್ನು ಆರಾಧನೆ ಮಾಡಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಮಕ್ಕಳ ಆರೋಗ್ಯ ಹದಗೆಡಬಹುದು ವೈದ್ಯರ ಸಲಹೆ ಪಡೆಯಿರಿ
- ವೃತ್ತಿಪರರು ನಿಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
- ಸಮಾಜದಲ್ಲಿ ನಿಮ್ಮ ಚಿಂತನೆ ವಿಚಾರಗಳಿಗೆ ಮನ್ನಣೆ ದೊರೆಯುತ್ತದೆ
- ಬಹಳ ಕಾಲದ ನಂತರ ನಿಮ್ಮ ಪ್ರೀತಿ ಪಾತ್ರರ ದರ್ಶನದಿಂದ ಮನಸ್ಸಿಗೆ ಆನಂದ
- ಇಂದು ನಿಮ್ಮ ಮಾತುಗಳಲ್ಲಿ ಗೊಂದಲವಿಲ್ಲದೆ ಸ್ಪಷ್ಟವಾಗಿರಲಿ
- ಸೂರ್ಯದೇವನ ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರ ವಿಷಯಕ್ಕೆ ತಲೆ ಹಾಕಬೇಡಿ ಅವಮಾನ ಸಾಧ್ಯತೆ
- ನಿಮ್ಮ ಆಲೋಚನೆಗಳು ಕುಟುಂಬಕ್ಕೆ ಸೀಮಿತವಾಗಿರದೆ ಸಮಾಜಮುಖಿಯಾಗಿರಲಿ
- ಇಂದು ಮಕ್ಕಳ ಶಿಕ್ಷಣ ವಿಚಾರವಾಗಿ ಉತ್ತಮ ದಿನ
- ಹೊಸ ಸಂಪರ್ಕಗಳಿಂದ ಮನಸ್ಸಿಗೆ ಖುಷಿಯಾಗಬಹುದು
- ವೈಯಕ್ತಿಕ ಲಾಭಕ್ಕೆ ನಂಬಿದವರಿಂದ ಮೋಸ ಸಾಧ್ಯತೆ
- ಚಿನ್ನಾಭರಣಗಳ ಖರೀದಿ ಬೇಡ, ಮನೆಯಲ್ಲಿರುವ ಆಭರಣಗಳ ಬಗ್ಗೆ ಜಾಗ್ರತೆ ಇರಲಿ
- ವೀರಾಂಜನೇಯನ ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಾಧ್ಯತೆ
- ವೈವಾಹಿಕ ಜೀವನ ಸುಖದಾಯಕವಾಗಿರುತ್ತದೆ
- ಅವಿವಾಹಿತರಿಗೆ ವಿವಾಹ ವಿಚಾರದಲ್ಲಿ ಶುಭಫಲ
- ಎಲ್ಲರ ಹಾರೈಕೆಯಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯತೆ
- ಕಾರ್ಯಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಸಾಧನೆಯ ಬದಲಾವಣೆ ಸಾಧ್ಯತೆ
- ಇಂಜಿನಿಯರ್ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
- ಇಂದು ಆದಾಯದಲ್ಲಿ ಹೆಚ್ಚಳ ಕಾಣಲಿದೆ
- ಆತ್ಮವಿಶ್ವಾಸ ಹೆಚ್ಚಾಗಿ ಸಂತೋಷ ಉಂಟಾಗಬಹುದು
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಜಮೀನು ಆಸ್ತಿ ವಿಚಾರಗಳ ಬಗ್ಗೆ ಪರ ವಿರೋಧ ಚರ್ಚೆ ಸಾಧ್ಯತೆ
- ಹೃದ್ರೋಗಿಗಳು ತುಂಬಾ ಕಷ್ಟ ಅನುಭವಿಸುವ ಸಾಧ್ಯತೆ ಇದೆ
- ಇಂದು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
- ಔಷಧೋಪಚಾರಗಳು ಪರಿಣಾಮ ಬೀರದೆ ಇರಬಹುದು ಎಚ್ಚರ
- ನೀವು ಬಳಸುವ ವಾಹನ ಬಗ್ಗೆ ಜಾಗ್ರತೆ ಇರಲಿ ವಾಹನದಿಂದ ನಷ್ಟವಿದೆ
- ಮನೆಯ ಹೊರಗಡೆ ವಿನಾಕಾರಣ ಜಗಳವಾಗಬಹುದು ಎಚ್ಚರಿಕೆ ಇರಲಿ
- ಉಗ್ರ ನರಸಿಂಹನ ಆರಾಧನೆ ಮಾಡಿ
ಧನಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ ಮಾತಾಡಲು ಒಪ್ಪುವುದಿಲ್ಲ
- ನಿಮ್ಮ ಶತ್ರುಗಳ ಮಾತಿನಿಂದ ನಿಮ್ಮ ಆತ್ಮೀಯರು ನಿಮ್ಮನ್ನು ಅವಮಾನಿಸುವ ಸಾಧ್ಯತೆ
- ಸೈದ್ಧಾಂತಿಕವಾಗಿ ಮಾಡಬೇಕಿರುವ ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆ
- ಇಂದು ನಿಮ್ಮ ವೈಯಕ್ತಿಕ ಪ್ರತಿಷ್ಠೆ ಅಹಂಕಾರ ಬಿಟ್ಟರೆ ಒಳ್ಳೆಯದು
- ಸಮಾಜದಲ್ಲಿ ಚಿಕ್ಕವರ ಮುಂದೆ ಚಿಕ್ಕವರಾಗುವ ಸಾಧ್ಯತೆ ಇದೆ
- ಕಲ್ಕಿ ಭಗವಾನರನ್ನು ಸ್ಮರಿಸಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಅವಸರದಲ್ಲಿ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ ಎಚ್ಚರಿಕೆ ಇರಲಿ
- ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣಕ್ಕಾಗಿ ವೇದಿಕೆ ಸಿದ್ಧಪಡಿಸಿಕೊಳ್ಳಲು ಉತ್ತಮ ದಿನ
- ಪೂರ್ವಿಕರು ಹಿರಿಯರು ಮಾಡಿದ ಧರ್ಮ ಕರ್ಮಗಳಿಂದ ನಿಮಗೆ ಯಶಸ್ಸು ಸಿಗುತ್ತದೆ
- ವ್ಯಾಪಾರಿಗಳಿಗೆ ಉದ್ವೇಗ ಹೆಚ್ಚು ಆದ್ದರಿಂದ ತಾಳ್ಮೆಯಿಂದ ವರ್ತಿಸಿ
- ಹೊಸ ಕೆಲಸವನ್ನು ಶುರು ಮಾಡುವ ಯೋಚನೆ ಬರುತ್ತದೆ ಅನುಕೂಲವೂ ಇದೆ
- ವಾಹನ ಚಾಲಕರು ನಿಯಮಾನುಸಾರ ವಾಹನ ಚಾಲನೆ ಮಾಡಿದರೆ ಒಳ್ಳೆಯದು
- ನಿಮ್ಮ ಗುರುಗಳನ್ನು ಆರಾಧಿಸಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ಬೇರೆಯವರಿಗೆ ಸಹಾಯ ಮಾಡುತ್ತೀರಿ ಇದರಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ
- ಹಿಂದೆ ಮಾಡಿದ್ದ ಉತ್ತಮ ಕೆಲಸಗಳಿಗೆ ಇಂದು ಮೆಚ್ಚುಗೆ ಸಿಗುತ್ತದೆ
- ದೊಡ್ಡ ಉದ್ದಿಮೆ-ಕೈಗಾರಿಕೆಗಳನ್ನು ಹೊಂದಿರುವವರಿಗೆ ಶುಭಫಲ
- ಹೊಸ ಕೆಲಸಗಳು ಯೋಜನೆಗಳು ಆರಂಭವಾಗುವ ದಿನ
- ಕುಟುಂಬಕ್ಕೆ ಹೊಸ ಅತಿಥಿ ಆಗಮನ ಸಾಧ್ಯತೆ ಇದೆ
- ನಿಮ್ಮ ವೃತ್ತಿಯಲ್ಲಿ ಸಮಾಧಾನ ಸಿಗುವ ದಿನ
- ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ಸದಸ್ಯರ ಮಧ್ಯೆ ಕಲಹ ಸಾಧ್ಯತೆ
- ನಿಮಗೆ ಇಂದು ಹಿತಶತೃಗಳಿಂದ ತೊಂದರೆ ಸಾಧ್ಯತೆ ಎಚ್ಚರಿಕೆ ಇರಲಿ
- ಇಂದು ಶಾಂತವಾಗಿರಿ ನಿಮ್ಮ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಿ
- ಅನಾರೋಗ್ಯ ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕೋರ್ಟ್​​ನಲ್ಲಿ ಇತ್ಯರ್ಥ ಆಗಲಿದೆ
- ಈಶ್ವರನ ಆರಾಧಿಸಿ
ಇದನ್ನೂ ಓದಿ: ಜಾಹ್ನವಿ, ಅಶ್ವಿನಿ ಸ್ನೇಹ ಅಂತ್ಯ.. ಹೇಗಿದ್ರು, ಹೇಗಾದ್ರು ಅಂತಿದ್ದಾರೆ ಬಿಗ್​ಬಾಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us