/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ರಾಜಾರಾಣಿ ಖ್ಯಾತಿಯ ಹರ್ಷಿತಾ-ವಿನಯ್ ಬಾಳಲ್ಲಿ ಹೊಸ ಬೆಳಕು..!
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಮಾಜದ ಒಳಿತಿಗಾಗಿ ಶ್ರಮ ಪಡುತ್ತೀರಿ
- ನಿಮ್ಮ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ದಿನ
- ವ್ಯಾಪರಸ್ಥರಿಗೆ ಗ್ರಾಹಕರಿಂದ ಮೆಚ್ಚುಗೆ ದೊರೆಯುತ್ತದೆ
- ಸಹಕಾರ ಬ್ಯಾಂಕ್ ಫೈನಾನ್ಸ್​ ಬಡ್ಡಿ ವ್ಯಾಪಾರಸ್ಥರಿಗೆ ಶುಭ ದಿನ
- ಇಂದಿನ ವ್ಯವಹಾರದಲ್ಲಿ ಮೇಲುಗೈ ಸಾಧಿಸುವ ಸೂಚನೆಯಿದೆ
- ಕನಕದುರ್ಗಾ ಪ್ರಾರ್ಥನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪೆಟ್ರೋಲ್ ಬಂಕ್ ಗ್ಯಾಸ್ ಏಜೆನ್ಸಿ ಹೊಂದಿರುವವರಿಗೆ ಅನುಕೂಲಕರ
- ಇಂದು ಕೆಲಸ ಕಾರ್ಯಗಳಲ್ಲಿ ತುಂಬಾ ವಿಳಂಬ ಸಾಧ್ಯತೆ
- ಬ್ಯಾಂಕ್ ಸಾಲ ಮುಕ್ತಾಯವಾಗಲಿದೆ
- ಹೊಸ ವ್ಯವಹಾರದ ಹಾದಿ ಸುಗಮವಾಗಲಿದೆ
- ಇಂಜಿನಿಯರ್ ವಿದ್ಯಾರ್ಥಿಗಳಿಗೆ ಶುಭಸುದ್ದಿ
- ವಾಯುಸ್ತುತಿ ಪಠಣೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾತಿನ ಚಕಮಕಿಯಿಂದ ಕೋಪ ಹೆಚ್ಚಾಗಬಹುದು ಕೋಪ ನಿಯಂತ್ರಣದಲ್ಲಿರಲಿ
- ಭೂ-ವ್ಯವಹಾರ, ರಿಯಲ್ ಎಸ್ಟೇಟ್ ಮಾಡುವವರಿಗೆ ಇಂದು ಧನಲಾಭ
- ನಿಮಗೆ ದೊರೆಯುವ ಹಣ ರಾತ್ರಿಯ ಸಮಯದಲ್ಲಿ ಸಿಗಬಹುದು
- ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಹೆಚ್ಚು ಹಣ ಖರ್ಚಾಗಬಹುದು
- ಮರಗೆಲಸ ಮಾಡುವವರಿಗೆ ಒಳ್ಳೆಯ ದಿನ, ರಾವಣಕೃತ ಶನಿ ಸ್ತೋತ್ರ ಪಠಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಭೂಮಿ ಖರೀದಿ ಅಥವಾ ಮಾರಾಟ ಬೇಡ
- ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳಿ
- ಕೋರ್ಟು ಕಚೇರಿಗಳಲ್ಲಿರುವ ಕಾರ್ಯ ಇವತ್ತು ಇತ್ಯರ್ಥ ಆಗುವ ಸೂಚನೆಗಳಿವೆ
- ಹಲವು ದಿನಗಳಿಂದ ಮುಗಿಯದ ಕಾರ್ಯ ಇಂದು ತಿರುವು ಪಡೆಯುತ್ತದೆ
- ವರಾಹ ಸ್ವಾಮಿಯನ್ನು ಆರಾಧಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಬರಹಗಾರರಾಗಿದ್ದರೆ ದೂರದೂರಿಗೆ ಪ್ರಯಾಣ ಮಾಡ್ತೀರಿ
- ವಾಹನ ಚಾಲನೆಯಿಂದ ನಷ್ಟ ಅನುಭವಿಸಬಹುದು
- ವಿದೇಶಿ ಪ್ರಯಾಣ ಅರ್ಧಕ್ಕೆ ನಿಲ್ಲುವುದು
- ಆರೋಗ್ಯ ಹದಗೆಡಬಹುದು ಎಚ್ಚರಿಕೆಯಿಂದಿರಿ
- ಇಂದು ಪ್ರಯಾಣ ಮುಂದೂಡಿದರೆ ಒಳ್ಳೆಯದು
- ವಾಹನ ಅಪಘಾತ ವಾಹನ ಕೆಟ್ಟು ಹೋಗಬಹುದು ಜಾಗ್ರತೆ
- ಗಣಪತಿಗೆ ಗರಿಕೆ ಅರ್ಪಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆತ್ಮೀಯರ ಮನೆಯಿಂದ ಶುಭ ಸುದ್ದಿ ಬರುತ್ತದೆ
- ಸಮಾಜದಲ್ಲಿ ಗೌರವ ಮನ್ನಣೆ ದೊರೆಯುತ್ತದೆ
- ಇಂದು ಸರಳವಾಗಿ ವರ್ತಿಸಿ ಅಹಂಕಾರ ಬೇಡ
- ಕೆಲಸ ಕಾರ್ಯಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
- ಪ್ರೇಮಿಗಳಿಗೆ ಶುಭಸುದ್ದಿ ಸಿಗಲಿದೆ
- ಅಶ್ವತ್ಥ ಮರಕ್ಕೆ 12 ಪ್ರದಕ್ಷಿಣೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿಂದಿನಿಂದ ಕೂಡಿಟ್ಟ ಹಣ ಇವತ್ತು ಹೆಚ್ಚು ಖರ್ಚಾಗುವ ಸಾಧ್ಯತೆ
- ಲೇವಾದೇವಿ ವ್ಯವಹಾರಗಳಲ್ಲಿ ಸ್ವಲ್ಪ ನಷ್ಟ ಸಂಭವಿಸಬಹುದು
- ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗುವುದಿಲ್ಲ
- ವಿನಾಕಾರಣ ವಾದ ವಿವಾದಗಳು ಸೃಷ್ಟಿಯಾಗಬಹುದು
- ನಿಮ್ಮ ಆದಾಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ
- ಪಾರ್ವತಿ ದೇವಿಯನ್ನು ಆರಾಧನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವೈಯ್ಯಕ್ತಿಕ ಕೆಲಸಗಳಲ್ಲಿ ಸ್ವಲ್ಪ ಏರುಪೇರು ಕಾಣುಬಹುದು
- ಇಂದು ನಿಮ್ಮ ಜನಸೇವೆಯ ಕೆಲಸಗಳಿಗೆ ಜನರು ಸ್ಪಂದಿಸುತ್ತಾರೆ
- ನೀವು ಸಂಕಲ್ಪ ಮಾಡಿದ ಕೆಲಸಗಳಿಗೆ ವಿರೋಧಿಗಳಿಂದ ಅಡ್ಡಿಯಾಗಬಹುದು
- ವಿರೋಧ ಮಾಡಿಕೊಂಡು ಕೆಲಸ ಸಾಧಿಸಲು ಆಗುವುದಿಲ್ಲ
- ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು
- ಮೇಧಾ ದಕ್ಷಿಣಾಮೂರ್ತಿಯ ಪ್ರಾರ್ಥನೆ ಮಾಡಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮಗೆ ಅನಾರೋಗ್ಯ ಕಾಡಬಹುದು ತಾತ್ಸಾರ ಮಾಡದೆ ವೈದ್ಯರ ಸಲಹೆ ಪಡೆಯಿರಿ
- ಎಲ್ಲಾ ಕಾರ್ಯಗಳಿಗೂ ಕಠಿಣ ಪರಿಶ್ರಮ ಬೇಕಾಗುತ್ತದೆ
- ಸೂಕ್ಷ್ಮ ಕೆಲಸಗಳಲ್ಲಿ ಜಾಗ್ರತೆ ವಹಿಸಿ
- ಈ ದಿನ ಎಲ್ಲಾ ರೀತಿಯಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ
- ಶನೇಶ್ಚರನನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿಜ್ಞಾನ ವಿಷಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ದಿನ
- ಚಿತ್ರೋದ್ಯಮದಲ್ಲಿ ನಾಟಕಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆ
- ಇಂದು ವಿದ್ಯಾರ್ಥಿಗಳಿಗೆ ಲಾಭದ ದಿನ
- ಮದುವೆ ವಿಚಾರದಲ್ಲಿ ಗೊಂದಲ ಏರ್ಪಡಬಹುದು
- ಹೊಸದಾಗಿ ಚಿತ್ರೋದ್ಯಮಕ್ಕೆ ಸೇರುವವರಿಗೆ ಅತ್ಯಂತ ಶುಭ ದಿನ
- ಕೃಷಿಕರಿಗೆ ಉತ್ತಮ ಫಲ ಸಿಗುವ ದಿನ
- ಕುಲದೇವತಾ ಆರಾಧನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭವಿದೆ
- ಇಂದು ಗೊಂದಲದ ಪರಿಸ್ಥಿತಿ ಸಾಧ್ಯತೆ
- ಕಲಾವಿದರಿಗೆ ಸಮಾಜದಲ್ಲಿ ವಿಶೇಷವಾದ ಮನ್ನಣೆ ಸಿಗುತ್ತದೆ
- ಇಂದು ಕೈಗೆ ಬರಬೇಕಾದ ಹಣ ಬರುವುದಿಲ್ಲ
- ನಿಮ್ಮ ವೃತ್ತಿ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ
- ಅಷ್ಟಲಕ್ಷ್ಮಿಯ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರ್ಕಾರಿ ನೌಕರರಿಗೆ ಅನುಕೂಲವಾಗುವ ದಿನ
- ನಿಮ್ಮ ಮಾತಿನಿಂದಲೇ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ
- ಬಾಕಿ ಇರುವ ಕೆಲಸಗಳು ಇಂದು ಸ್ವಲ್ಪ ನಿಧಾನವಾಗಿ ಪೂರ್ಣಗೊಳ್ಳುತ್ತವೆ
- ನಿಮ್ಮ ಮಾತು ಬಹಳ ನಿಯಂತ್ರಣದಲ್ಲಿರಬೇಕು
- ಸರ್ಕಾರಿ ಕೆಲಸಗಾರರಿಗೆ ಬಡ್ತಿ ಸಿಗಲಿದೆ, ವಾಗ್ದೇವತಾ ಆರಾಧನೆ ಮಾಡಿ
ಇದನ್ನೂ ಓದಿ: ಸಾವಿನಲ್ಲೂ ಒಂದಾದ ಬೀಳಗಿ ಪಟ್ಟಣದ ದಂಪತಿ!: ಪತಿ ಸಾವಿನ ಸುದ್ದಿ ಕೇಳಿ ಪತ್ನಿಗೆ ಹೃದಯಾಘಾತ!!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us