Advertisment

ಬೇರೆಯವ್ರಿಂದ ಪ್ರಶಂಸೆ.. ಕೆಲಸದ ಮೇಲೆ ಗಮನ ಇರಲಿ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಬದುಕ್ತಾ ಇರೋದೇ ಮರ್ಯಾದೆಗೋಸ್ಕರ..’ ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ..!

ಮೇಷ

RASHI_BHAVISHA_MESHA

  • ನಿಮ್ಮ ಜೀವನದಲ್ಲಿ ಬದಲಾವಣೆಯ ಘಟ್ಟ ಎನ್ನಬಹುದು
  • ನಿಮ್ಮ ನಿರ್ಧಾರ ಬೇರೆಯವರಿಗೆ ಮಾದರಿಯಾಗಿ ಪ್ರಶಂಸೆಗೆ ಪಾತ್ರರಾಗುತ್ತೀರಿ
  • ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವುದರಿಂದ ಇಂದು ಸಂತೋಷವಾಗಿರುತ್ತೀರಿ
  • ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರಿಗೆ ಸಂತೋಷವನ್ನುಂಟುಮಾಡತ್ತೆ 
  • ಪ್ರೇಮಿಗಳಿಗೆ ಬಹಳ ಹಿನ್ನಡೆಯ ದಿನವಾಗಲಿದೆ
  • ವಿವಾದಾಸ್ಪದ ವಿಷಯಗಳಲ್ಲಿ ಹುಷಾರಾಗಿರಿ
  • ನೌಕರಿಯಲ್ಲಿ ಪ್ರಗತಿ ಕಾಣುವ ದಿನವಾಗಿದೆ
  • ವಿದ್ಯಾರಾಜಗೋಪಾಲ ಮಂತ್ರ ಪಠಿಸಿ

ವೃಷಭ 

RASHI_BHAVISHA_VRSHABA

  • ಯಂತ್ರೋಪಕರಣಗಳನ್ನ, ವಾಹನಗಳನ್ನ ಬಾಡಿಗೆಗೆ ಕೊಡುವವರಿಗೆ ಉತ್ತಮ ದಿನ
  • ನಿಮ್ಮ ತೀರ್ಮಾನಗಳು ಭವಿಷ್ಯಕ್ಕೆ ಬುನಾದಿಯಾಗುವ ದಿನ
  • ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು ಜಾಗ್ರತೆ 
  • ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರಿಗೆ ಶುಭಫಲವಿದೆ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ 

RASHI_BHAVISHA_MITHUNA

  • ವೃತ್ತಿಯಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುತ್ತೀರಿ
  •  ಸತ್ಯಶೋಧನೆಯಿಂದ ಉಂಟಾಗುವ ಆಂತರಿಕ ಗೊಂದಲಗಳು ಇಂದು ನಿವಾರಣೆಯಾಗುತ್ತವೆ
  • ಆಂತರಿಕ ಶತ್ರುಗಳಿಂದ ಅಡಚಣೆ ಉಂಟಾಗಬಹುದು ಎಚ್ಚರಿಕೆ ಇರಲಿ
  • ನಿಮ್ಮ ಕೆಲಸದಲ್ಲಿ ಯಾವತ್ತೂ ಹಿಂಜರಿಯಬೇಡಿ ಯಶಸ್ಸು ನಿಮ್ಮದಾಗುತ್ತೆ
  • ಜಗನ್ಮೋಹನ ಮಂತ್ರವನ್ನು ಪಠಿಸಿ

ಕಟಕ

ನಿಮ್ಮ ಸ್ಥಾನದಿಂದ ಗೌರವ, ಪುರಸ್ಕಾರ ದೊರೆಯಬಹುದು.. ಕುಟುಂಬ ಇಷ್ಟ ಪಡುತ್ತದೆ; ಇಲ್ಲಿದೆ ಇಂದಿನ ಭವಿಷ್ಯ!

  • ಕ್ರೀಡಾಪಟುಗಳಿಗೆ ಉತ್ತಮ ಲಾಭ, ಗೌರವ-ಪುರಸ್ಕಾರಗಳು ಸಿಗುವ ದಿನವಾಗಿದೆ
  • ನಿಮ್ಮ ಯೋಜನೆಗಳಿಗೆ ವಿಶೇಷ ಬೆಂಬಲ ಸಿಗುವ ದಿನ
  • ನಯವಾಗಿ ಸಮಾಧಾನದಿಂದ ಅವರೊಂದಿಗೆ ವ್ಯವಹರಿಸಿ
  • ಸಾಲಕ್ಕಾಗಿ ಪ್ರಿಯರು ಸಂಬಂಧಿಕರು ಮನೆ ಹತ್ತಿರ ಬರುವ ಸಾಧ್ಯತೆ ಇದೆ
  • ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ
  • ಲಕ್ಷ್ಮೀವಾಸುದೇವ ಮಂತ್ರವನ್ನು ಜಪಿಸುವುದು ಒಳಿತು

ಸಿಂಹ

RASHI_BHAVISHA_SIMHA

  • ಯಾವುದೇ ಮುಲಾಜಿಗೆ ಒಳಗಾಗದೆ ವ್ಯವಹಾರಸ್ಥರಾಗಿದ್ದರೆ ಒಳಿತು
  • ಆಧಾತ್ಮಿಕ ಚಿಂತನೆ ನಿಮ್ಮ ಮನಸಲ್ಲಿ ನಡೆಯುತ್ತದೆ
  • ವಿವಾಹ ವಿಚಾರಕ್ಕೆ ಚಾಲನೆ ಸಿಗುವಂತಹ ದಿನ
  •  ನಿರಾಸೆಯಿಂದ ಹೊರಬಂದು ನಿಮ್ಮ ಕೆಲಸ ಕಾರ್ಯದಲ್ಲಿ ತೊಡಗಿರಿ
  • ದೀರ್ಘಕಾಲದ ಖಾಯಿಲೆಯಿಂದ ಗುಣಮುಖರಾಗುತ್ತೀರಿ 
  • ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
  • ಎರಡನೇ ಮದುವೆಗೆ ಇಂದು ಶುಭಫಲವಿದೆ
  • ಕೂರ್ಮ ಮಂತ್ರ ಶ್ರವಣ ಮಾಡಿ
Advertisment

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತರಕಾರಿ ವ್ಯಾಪಾರಿಗಳಿಗೆ ಹಾಗೂ ಪ್ರಾಣಿಗಳನ್ನ ಮಾರುವ ದಲ್ಲಾಳಿಗಳಿಗೆ ಆತಂಕ ಎದುರಾಗುವ ಸಾಧ್ಯತೆ ಇದೆ
  • ಸಂಪನ್ಮೂಲಗಳನ್ನ ಕ್ರೋಡಿಕರಿಸಲು ಹಲವಾರು ರೀತಿ ಪ್ರಯತ್ನಿಸುತ್ತೀರಿ
  • ನಿಮ್ಮ ಬಗ್ಗೆ  ಇರೋ ಅಭಿಪ್ರಾಯ ಮನಸ್ಸಿಗೆ ಹಿತವೆನಿಸುತ್ತದೆ
  • ಬೇರೆಯವರಿಂದ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿರುತ್ತದೆ
  • ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
  • ಆಹಾರ ಸೇವಿಸಬೇಕಾದರೆ ಜಾಗರೂಕರಾಗಿರಿ 
  • ದಾಂಪತ್ಯದಲ್ಲಿ  ವಿರಸ ಮೂಡಬಹುದು ಸರಿ ಪಡಿಸಿಕೊಳ್ಳಿ
  • ಏಕಾಕ್ಷರ ನರಸಿಂಹ ಮಂತ್ರ ಶ್ರವಣ ಮಾಡಿ 

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರೋಗ್ಯದಲ್ಲಿ ಸಮಸ್ಯೆಗಳಾಗಬಹುದು ಜಾಗ್ರತೆ ವಹಿಸಿ
  • ಹೊಸ ಸಂಬಂಧ  ಹೊಸ ಪರಿಚಯ ಗೆಳತನ ಎಲ್ಲವೂ ಲಭ್ಯವಾಗುವ ದಿನ
  • ಯಾವುದು ಸರಿ ಅನಿಸುತ್ತೆ ಅದನ್ನ ಮಾತ್ರ ಮಾಡಿ
  • ಮನಸ್ಸಿನ ಬೇಸರ ನಿವಾರಣೆಗೆ ಹೊಸ ಜಗತ್ತಿನ ಅರಿವಿನ ಅಗತ್ಯವಿರುತ್ತದೆ
  • ಇಂದು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುವಿರಿ 
  • ವಸ್ತ್ರ ವ್ಯಾಪಾರಿಗಳಿಗೆ ಲಾಭದ ದಿನ
  • ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಮನಸ್ತಾಪ
  • ದಧಿವಾಮನ ಮಂತ್ರ ಜಪಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಮನಸ್ಸಿಗೆ ಮನೆಗೆ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ ಉಂಟು ಮಾಡುವ ಸಾಧ್ಯತೆ
  • ಯಾವುದೇ ಆತುರವಾದ ನಿರ್ಧಾರ ಬೇಡ  
  •  ನೆರೆಹೊರೆಯವರೊಂದಿಗೆ ವಿಶ್ವಾಸದಿಂದಿರಿ
  • ಜೀವನದ ಸಾರ್ಥಕತೆಯ ಬಗ್ಗೆ  ಹುಡುಕಾಟ ನಡೆಯಬಹುದು
  • ಧಾರ್ಮಿಕ,ಆದ್ಯಾತ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸು ಹರದಾಡುತ್ತೆ ಗಮನ ಹರಿಸಿ
  • ಇಂದು ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
  • ಸ್ತ್ರೀಯರಿಗೆ ಸಾಂಸಾರಿಕ ಜೀವನದಲ್ಲಿ ತೃಪ್ತಿ ಸಿಗುವ ದಿನ
  • ಶಂಕರನಾರಾಯಣನನ್ನು ಪ್ರಾರ್ಥಿಸಿ
Advertisment

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಾತ್ಸಲ್ಯಪೂರ್ಣ ಮಾತಿನಿಂದಾಗಿ ಕುಟುಂಬದಲ್ಲಿ ಹೆಚ್ಚಿನ ವಿಶ್ವಾಸಗಳಿಸುತ್ತೀರಿ
  • ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ನಿಮ್ಮದಾಗತ್ತದೆ
  • ಅನಿರೀಕ್ಷಿತ ಧನಾಗಮ ಆಗಲಿದೆ
  • ನಿರ್ಧಾರಗಳನ್ನು ಬದಲಿಸುವುದರಿಂದ ನೌಕರಿಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ
  • ಪ್ರಯಾಣದ ವಿಚಾರವಾಗಿ ಬೇಸರವಾಗುತ್ತದೆ
  • ನಿಮ್ಮನ್ನು ಮಕ್ಕಳು ಹೆಚ್ಚು ಪ್ರೀತಿಸುವ ದಿನವಾಗಿದೆ
  • ರಾಮರಕ್ಷಾ ಸ್ತೋತ್ರ ಪಠಿಸಿ

ಮಕರ

RASHI_BHAVISHA_MAKARA

  • ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕು
  • ಮೂಲವ್ಯಾಧಿ ಇರೋರಿಗೆ ಶಸ್ತ್ರ ಚಿಕಿತ್ಸೆ ಆಗುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿ
  • ಕುಟುಂಬದಲ್ಲಿ ಕಿರಿಕಿರಿ ಆಗುವ ದಿನ
  • ಇಂದು ಅಧಿಕವಾಗಿ ಆರ್ಥಿಕ ನಷ್ಟವಾಗಬಹುದು
  • ಮಾನಸಿಕ ನೆಮ್ಮದಿ ಇಲ್ಲದೆ ಇರುವ ದಿನ
  • ಆರೋಗ್ಯದ ಕಡೆ ಗಮನಕೊಡಿ
  • ದಂಪತಿಗಳು ಹಾಗೂ ಮಕ್ಕಳ ಮಧ್ಯೆ ಬೇಸರದ ವಾತಾವರಣ ಉಂಟಾಗಬಹುದು
  • ಇಂದು ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
  • ವಿಷ್ಣುತ್ರಯೀ ಮಂತ್ರವನ್ನ ಜಪಿಸಿ

ಕುಂಭ

RASHI_BHAVISHA_KUMBHA

  • ನಿಮ್ಮ ವಿರೋಧಿಗಳೆ ನಿಮಗೆ ಆಶ್ಚರ್ಯವಾಗುವ ರೀತಿಯಲ್ಲಿ  ಬೆಂಬಲ ನೀಡಬಹುದು
  • ನಿಮ್ಮ ಸಮಸ್ಯೆಗಳಿಗೆ ಸರಳವಾದ ಪರಿಹಾರ ಕಂಡುಕೊಳ್ಳುತ್ತೀರಿ
  • ಪಾರಂಪರಿಕ ವೃತ್ತಿಯಲ್ಲಿ ಗೌರವ ಸಿಗುವ ದಿನವಾಗಿದೆ
  • ಕಟ್ಟಡ ಸಾಮಾಗ್ರಿ ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ
  • ಅಪರಿಚಿತರಿಂದ ಮೋಸಹೋಗುವ ಸಾಧ್ಯತೆಯಿದೆ ಎಚ್ಚರಿಕೆ
  • ಇಂದು ನಿಂದನೆಗೆ ಒಳಗಾಗುವ ಸಾಧ್ಯತೆಯಿದೆ ಎಚ್ಚರಿಕೆ
  • ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುವ ದಿನ
  • ಈಶ್ವರನನ್ನು ಪ್ರಾರ್ಥನೆ ಮಾಡಿ
Advertisment

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅಧಿಕಾರ ಪ್ರಾಪ್ತಿಯಲ್ಲಿ ಕಿರಿಕಿರಿ ಉಂಟಾಗಬಹುದು
  • ಮಕ್ಕಳ ವಿಚಾರದಲ್ಲಿ ವಾದ-ವಿವಾದಗಳಿಂದ ಬೇಸರವಾಗುವ ಸಂಭವ
  • ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತೆ
  • ಇಂದು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ 
  • ಕುಟುಂಬದಲ್ಲಿ ವಾದ-ವಿವಾದಗಳಿಂದ ರಾಜಿಯಾಗಬಹುದು 
  • ಈ ದಿವಸ ಸಂಗಾತಿಯೊಂದಿಗೆ ವಿರಸ
  • ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ದಿನವಾಗಿದೆ
  • ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು
  • ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ
  • ಗುರು ಪ್ರಾರ್ಥನೆ ಮಾಡಿ

ಇದನ್ನೂ ಓದಿ:ರಸ್ತೆಯಲ್ಲಿ ವಾಹನ ನಿಲ್ಲಿಸಿದರೇ, ಮೊದಲಿಗೆ ಟೋಯಿಂಗ್, ಬಳಿಕ ಹರಾಜು! ಎಚ್ಚರ ವಾಹನ ಮಾಲೀಕರೇ ಎಚ್ಚರ!

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment