ಯೂಟ್ಯೂಬರ್​​​ಗಳ ಮೇಲಿನ ಕೇಸ್​ಗೆ ಟ್ವಿಸ್ಟ್​.. 7 FIR, ಓರ್ವ ಆರೋಪಿಯ ಬಂಧನ..!

ಧರ್ಮಸ್ಥಳದ ಸಮಾಧಿ ರಹಸ್ಯದ ಬಗ್ಗೆ ಎಸ್​​ಐಟಿ ತನಿಖೆ ನಿರ್ಣಾಯಕ ಹಂತ ತಲುಪಿದೆ. ಸಾಕ್ಷ್ಯ ದೂರುದಾರ ಗುರುತು ಮಾಡಿದ ಜಾಗಗಳಲ್ಲಿ ಉತ್ಖನನ ಕಾರ್ಯಾಚರಣೆ ಕೊನೆಯ ಘಟ್ಟಕ್ಕೆ ಬಂದಿದೆ. ಈ ನಡುವೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ ಎಂಬ ಆರೋಪದಡಿ ಯೂಟ್ಯೂಬರ್‌ಗಳಿಗೆ ಧರ್ಮದೇಟು ನೀಡಲಾಗಿದೆ.

author-image
Ganesh
Dharmasthala youtuber
Advertisment

ಧರ್ಮಸ್ಥಳದ ಸಮಾಧಿ ರಹಸ್ಯದ ಬಗ್ಗೆ ಎಸ್​​ಐಟಿ ತನಿಖೆ ನಿರ್ಣಾಯಕ ಹಂತ ತಲುಪಿದೆ. ಸಾಕ್ಷ್ಯ ದೂರುದಾರ ಗುರುತು ಮಾಡಿದ ಜಾಗಗಳಲ್ಲಿ ಉತ್ಖನನ ಕಾರ್ಯಾಚರಣೆ ಕೊನೆಯ ಘಟ್ಟಕ್ಕೆ ಬಂದಿದೆ. ಈ ನಡುವೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ ಎಂಬ ಆರೋಪದಡಿ ಯೂಟ್ಯೂಬರ್‌ಗಳಿಗೆ ಧರ್ಮದೇಟು ನೀಡಲಾಗಿದೆ. ಘಟನೆ ಸಂಬಂಧ ಒಟ್ಟು ಏಳು ಎಫ್​​ಐಆರ್​​​ ದಾಖಲಾಗಿವೆ.

ಧರ್ಮಸ್ಥಳದ ನೇತ್ರಾವತಿಯ ಪಾಂಗಳ ಎಂಬಲ್ಲಿ ಗುಂಪು ಘರ್ಷಣೆ ಆಗಿದೆ. ಸುಳ್ಳು ಆರೋಪ ಮಾಡಿದ್ದಾರೆಂದು 3 ಯೂಟ್ಯೂಬರ್​ಗಳ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.. ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಟ್ಟ ಘಟನೆ ನಡೆದಿದೆ.. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ಸಹ ನಡೆಸಿದ್ದಾರೆ.. ಪ್ರಕರಣ ಸಂಬಂಧ 7 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಯೂಟ್ಯೂಬರ್ಸ್‌ ಮೇಲೆ ಹಲ್ಲೆ.. ಧರ್ಮಸ್ಥಳ ಉದ್ವಿಘ್ನ, ಕೇಸ್​ ದಾಖಲು

ಧರ್ಮಸ್ಥಳದಲ್ಲಿ ಘರ್ಷಣೆ.. 7 ಕೇಸ್​​!

  • ಧರ್ಮಸ್ಥಳದಲ್ಲಿ ನಿನ್ನೆಯ ಹೈಡ್ರಾಮಾ ಕುರಿತಂತೆ ಒಟ್ಟು 7 ಪ್ರಕರಣ
  • ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ 4 & ಬೆಳ್ತಂಗಡಿಯಲ್ಲಿ 3 ಪ್ರಕರಣ
  •  ಸುಮಾರು 150ಕ್ಕೂ ಅಧಿಕ ಜನರ ವಿರುದ್ಧ ಪ್ರತ್ಯೇಕ ಎಫ್​ಐಆರ್​ 
  •  ಅಕ್ರಮ ಕೂಟ ಸೇರಿದ ಆರೋಪದಲ್ಲಿ ಮೂರು ಸುಮೊಟೊ ಕೇಸ್​​
  •  ಪರಸ್ಪರ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ನಾಲ್ಕು ಪ್ರಕರಣ
  •  ಧರ್ಮಸ್ಥಳದ ಪಾಂಗಳದ ಅಕ್ರಮಕೂಟ ಆರೋಪದಡಿ 2 ಕೇಸ್​​​
  •  ಉಜಿರೆ ಬೆನಕ ಆಸ್ಪತ್ರೆಯಲ್ಲಿ ಅಕ್ರಮಕೂಟ ಆರೋಪದಡಿ 1 ಕೇಸ್

ಗಲಾಟೆ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಧರ್ಮಸ್ಥಳ ಗ್ರಾಮ ಕನ್ಯಾಡಿ ನಿವಾಸಿ ಸೋಮನಾಥ ಸಪಲ್ಯ (48) ಬಂಧಿತ ಆರೋಪಿ. ಸೋಮನಾಥ ಸಪಲ್ಯ ಜೀಪು ಚಾಲಕನಾಗಿದ್ದಾನೆ. ಧರ್ಮಸ್ಥಳದ ಸುತ್ತ ನಡೆಯುತ್ತಿರುವ ಈ ಬೆಳವಣಿಗೆ ಸಹಿಸಲು ಅಸಾಧ್ಯ.. ಎಸ್​​ಐಟಿ ತನಿಖೆ ಮಾಡ್ತಿದೆ.. ಅದು ಅಂತಿಮ ಘಟ್ಟ ತಲುಪಿದೆ.. ಎಲ್ಲವೂ ಸರಿ.. ಆದ್ರೆ, ಕೆಲವರ ಕಾರಣಕ್ಕೆ ಪಾವಿತ್ರ್ಯತೆ ನಂಬಿಕೆಗೆ ಘಾಸಿ ಆಗಿಸುವ ಘಟನೆ ನಡೆಯುತ್ತಿರೋದನ್ನ ಸರ್ಕಾರವೂ ತಡೆಯಬೇಕಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಪಾಯಿಂಟ್ 13ರ ಪರಿಶೋಧನೆಗೆ GPR ಬಳಕೆ ಮಾಡಲು ಎಸ್​ಐಟಿ ಪ್ಲಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Kannada News Assault on Youtubers
Advertisment