/newsfirstlive-kannada/media/media_files/2025/09/02/udupi-mother-and-baby-2025-09-02-17-57-02.jpg)
ಕಾನೂನು ಪಾಲಿಸಬೇಕಾದ ಪೊಲೀಸರೇ ಯಡವಟ್ಟು ಮಾಡಿಕೊಂಡಿದ್ದಾರೆ. ಪ್ರಕರಣ ಒಂದರ ಆರೋಪಿಯನ್ನು ದಸ್ತಗಿರಿ ಮಾಡುವ ಸಂದರ್ಭ ಆರೋಪಿಯ ಹೆಂಡತಿ ಮಗುವಿನ ಎದುರು ಪೊಲೀಸರು ದರ್ಪ ತೋರಿಸಿರುವ ಆರೋಪ ಇಲ್ಲಿದೆ. ಆಕೆ ಕಣ್ಣೀರು ಸುರಿಸಿದ್ದರೂ ಕೇಳದ ಪೊಲೀಸರು ಮುಗ್ಧೆಗೆ ರೈಟ್ ಲೈಟ್ ಎಂದಿದ್ದಾರೆ ಎನ್ನಲಾಗಿದೆ. ಖಾಕಿಯ ದರ್ಪಕ್ಕೆ ಹೆದರಿದ ತಾಯಿ, ಮಗುವಿನ ಕುತ್ತಿಗೆಗೆ ನೇಣು ಬಿಗಿದು ತಾನೂ ಸಾವಿಗೆ ಶರಣಾಗಿದ್ದಾಳೆ!
ಸೆಪ್ಟೆಂಬರ್ 1. ಮಧ್ಯಾಹ್ನ ಹೊತ್ತಿಗೆ 32 ವರ್ಷದ ತಾಯಿಯ ಸಾವಿನ ಸುದ್ದಿ ಜಿಲ್ಲೆಯಲ್ಲಿ ಕಾಡಿಜ್ಜಿನಂತೆ ಹರಡಿತು. ಯಾವ ರೋಗ ಬಂದಿತೋ ಆ ತಾಯಿಗೆ ಅಂತಾ ಮುರುಕ ಪಟ್ಟಿದ್ರೂ. ಆ ತಾಯಿಯ ಜೊತೆ ಒಂದುವರೆ ವರ್ಷದ ಮಗುವು ಸಾವನ್ನಪ್ಪಿದೆ ಎಂದಾಗ ತಾಯಂದಿರು ಬಾಯಿಬಾಯಿ ಬಡಿದುಕೊಂಡಿದ್ದರು. ಯಾಕಾದ್ರೂ ಈ ನಿರ್ದಾರಕ್ಕೆ ಬಂದಳೋ ಅಂತಾ ಕಸಿಬಿಸಿಗೊಂಡರು. ಫ್ಯಾಮಿಲಿಯವರಂತೂ ಕರುಳೆ ಕಿತ್ತು ಹೋಗುವಂತೆ ಅಳುತ್ತಿದ್ದರು. ಮನೆಯ ಮುಂಭಾಗವೆಲ್ಲ ಜನರ ಭಾವುಕತೆ. ತಾಯಿ ಶವದ ಮೇಲೆ ಮುಗ್ಧ ಮಗುವಿನ ಶವವನ್ನಿಟ್ಟುಕೊಂಡು ಹೊರೆಗೆ ತರುವಾಗ ನೆರೆದಿದ್ದವರು ತಲೆ ಚಚ್ಚಿಕೊಂಡರು. ಚೌತಿ ಆಚರಿಸಿದ ಮನೆ ಸೂತಕ ಮನೆಯಾಗಿ ಮಾರ್ಪಟ್ಟಿದ್ದೆ.
ಆಗಿದ್ದೇನು..?
ಬ್ರಹ್ಮಾವರ ಪೊಲೀಸರು 2009ರ ಪ್ರಕರಣಕ್ಕೆ ಸಬಂಧಿಸಿ ಕೋರ್ಟ್ ವಾರೆಂಟ್ ಹಿಡಿದು ಆರೋಪಿಗಳ ದಸ್ತಗಿರಿ ಮಾಡಲು ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಭಾಷ್ ಮನೆಗೆ ಬಂದಿದ್ದಾರೆ. ಶನಿವಾರ ಬಂದು ಬಂಧನದ ಬಗೆಗಿನ ವಾರೆಂಟ್ ನೋಟಿಸ್ ನೀಡಿದ್ದಾರೆ. ಸೋಮವಾರ ಎರಡು ಬಾರಿ ಮನೆಗೆ ಬರುತ್ತಾರೆ. ಬಂಧನದ ಭಯ ಹಿನ್ನೆಲೆಯಲ್ಲಿ ಸುಭಾಷ್ ಮತ್ತು ಅವರ ತಾಯಿ ಸೇರಿ ಒಟ್ಟು ಆರು ಮಂದಿ ಜಾಮೀನು ಪಡೆಯಲು ಆಚೆ ಹೋಗಿದ್ದರು.
ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಇಸ್ಕಾನ್ ಸಹಯೋಗದಲ್ಲಿ ಪೌಷ್ಠಿಕಾಂಶದ ಆಹಾರ ನೀಡುವ ಯೋಜನೆ ಜಾರಿಗೆ
ಮನೆಯಲ್ಲಿ ಸುಶ್ಮಿತಾ ತನ್ನ ಮಗುವಿನೊಂದಿಗೆ ಇದ್ದಳು. ಪೊಲೀಸರು ನಿನ್ನ ಗಂಡ, ಅತ್ತೆ ಎಲ್ಲಿ ಎಂದು ಗದರಿಸಿದ್ದಾರೆ. ವಿಚಲಿತಗೊಂಡ ಸುಶ್ಮಿತಾ ನನಗೇನು ಗೊತ್ತಿಲ್ಲ ಎಂದಿದ್ದಾರೆ. ಮತ್ತೆ ಪುನಃ ಮಧ್ಯಾಹ್ನ ಬಂದು ಸುಶ್ಮಿತಾಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಹೆದರಿದ ಸುಶ್ಮಿತಾ ಮಾಡಬಾರದ ಕೃತ್ಯ ಮಾಡಿಕೊಂಡಿದ್ದಾಳೆ.
ಪರಿಸ್ಥಿತಿ ಅವಲೋಕಿಸಿ ಕಾನೂನು ಪಾಲಿಸಬೇಕಾದ ಪೊಲೀಸರೇ ಯಡವಿದ್ದಾರೆ. ಬಡತನದಿಂದ ನೊಂದ ಆ ಗೃಹಿಣಿ ಪೊಲೀಸರ ಖಾಕಿ ನೋಡಿ ನಲುಗಿದ್ದಾಳೆ. ತನ್ನ ಗಂಡನನ್ನು ಪೊಲೀಸರು ಬಂಧಿಸುತ್ತಾರೆ. ನಾನು ನನ್ನ ಮಗು ತಬ್ಬಲಿಯಾಗುತ್ತೇವೆ. ಪೊಲೀಸ್ ಠಾಣೆಯನ್ನೂ ನೋಡದ ನನ್ನನ್ನು ಜೈಲಿಗೆ ಹಾಕ್ತಾರೆ ಎಂದು ಭಯಪಟ್ಟ ಸುಶ್ಮಿತಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಇದನ್ನೂ ಓದಿ:ಕಿಚ್ಚ ಸುದೀಪ್ಗೆ ಪ್ರೀತಿಯಿಂದ ಮುತ್ತುಕೊಟ್ಟ ಅಭಿಮಾನಿ VIDEO
ಈ ನಡುವೆ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಬ್ರಹ್ಮಾವರ ಠಾಣೆಯಲ್ಲಿ ದಸ್ತಗಿರಿ ಮಾಡಲು ಮನೆಗೆ ಬಂದವರ ಮೇಲೆ ಸುಶ್ಮಿತಾಳ ಸಿಬ್ಬಂದಿ ಅನುಶ್ರೀ ಬಿ. ಶೆಟ್ಟಿ ದೂರು ಕೊಟ್ಟಿದ್ದಾರೆ. ನೇಣು ಹಾಕಿಕೊಳ್ಳುವ ಕೆಲವೇ ಕ್ಷಣಗಳ ಹೊಂದೆ ಸಂಬಂಧಿಕರಿಗೆ ಫೋನ್ ಮಾಡಿದ್ದಾಳೆ. ಪೊಲೀಸರು ಗದರಿಸಿದ್ದಾರೆ. ಗಂಡನು ಠಾಣೆಗೆ ಬರದಿದ್ದರೆ ನಿನ್ನ ಬಂಧನ ಮಾಡುತ್ತೇವೆ ಅಂದಿದ್ದಾರೆ. ನನ್ನ ಬಳಿ ಮಗುವಿಗೂ ಹಾಲು ತರಲು ಹಣವಿಲ್ಲ. ಸಾಯುವುದೇ ನನಗೆ ಕೊನೆ ದಾರಿ ಎಂದು ಕಣ್ಣೀರು ಇಟ್ಟಿದ್ದಳು ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ. ನಾನ್ನ ಮಗುವನ್ನು ನಾನು ಇದ್ದಲ್ಲೆ ಕರೆದುಕೊಂಡು ಹೋಗ್ತೇನೆ ಎಂದು ಬರೆದಿಟ್ಟಿರೋದು ತಿಳಿದುಬಂದಿದೆ.
ಇದನ್ನೂ ಓದಿ:ಬೆಂಗಳೂರು ಹುಡುಗಿಯರ ಬಗ್ಗೆ ಆಕ್ಷೇಪಾರ್ಹ ಪದ ತೆಗೆಯುತ್ತೇವೆ ಎಂದ ಲೋಕಃ ಸಿನಿಮಾ ತಂಡ, ಕ್ಷಮಾಪಣೆ ಕೋರಿದ ಚಿತ್ರತಂಡ
ನೆರೆಮನೆಯ ಗಲಾಟೆಯು ಇದೀಗ ಸೂತಕದ ಮನೆಯಾಗಿ ಬದಲಾಗಿದೆ. ಬರೋಬ್ಬರಿ 14 ವರ್ಷದ ಪ್ರಕರಣ. ಪಕ್ಕದ ಮನೆಯ ವಿನ್ಸೆಂಟ್ ಪಾಯಸ್ 2009ರಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿದ್ದರು. ಸುಶ್ಮಿತಾಳ ಗಂಡ, ಅತ್ತೆ ಸೇರಿ ಆರು ಜನರು ಈ ಪ್ರಕರಣದ ಆರೋಪಗಳು. ಅಂದು ಮೂರ್ನಾಲ್ಕು ತಿಂಗಳುಗಳು ಜೈಲು ವಾಸ ಅನುಭವಿಸಿದ ಇವರೆಲ್ಲರೂ ಬೈಲಿನ ಮೇಲೆ ಹೊರಗಿದ್ದರು. ಪ್ರಕರಣ ಕೋರ್ಟ್ನಲ್ಲಿ ನಡೆಯುತ್ತಿದ್ದರೂ ದೂರು ಕೊಟ್ಟವರಾಗಲಿ, ಆರೋಪಿತ ಸ್ಥಾನದಲ್ಲಿರುವರಾಗಲಿ ಕೇಸ್ ಗೋಜಿಗೂ ಹೊಗ್ಲಿಲ್ಲ. ಕೋರ್ಟಿಗಂತೂ ಮುಖನೇ ಹಾಕ್ಲಿಲ್ಲ. ಮತ್ತೆ ಬಂಧನ ನೋಟಿಸು ನೋಡುತ್ತಲೇ ತಲೆ ಕೆದುಕಿಕೊಂಡಿದ್ದಾರೆ. ಬಂಧನದ ಭೀತಿಯಿಂದ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ ಈ ನಡುವೆ ನಡೆಯಬಾರದ ಘಟನೆ ನಡೆದಿದೆ.
ಇದನ್ನೂ ಓದಿ:BBMP ಆಡಳಿತ ಯುಗಾಂತ್ಯ.. GBA ಅಧಿಕಾರ ಹಂಚಿಕೆ ಹೇಗಿದೆ..?
ಆತುರದ ನಿರ್ಧಾರದಿಂದ ಮಗುವಿನ ಜೊತೆ ತಾಯಿಯ ಪ್ರಾಣಪಕ್ಷಿಯು ಹಾರಿಹೋಗಿದೆ. ಹಳೆಯ ಪ್ರಕರಣದಲ್ಲಿ ಹೊಸ ಪ್ರಕರಣ ತಳುಕು ಹಾಕಿದೆ. ಸ್ಥಳಕ್ಕೆ ಎಸ್ಪಿ ಹರಿರಾಂ ಶಂಕರ್ ಸೇರಿದಂತೆ ಪೊಲೀಸರ ತಂಡ ತನಿಖೆ ನಡೆಸುತ್ತಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ