/newsfirstlive-kannada/media/media_files/2025/09/17/vijayapura-bank-4-2025-09-17-11-59-39.jpg)
ವಿಜಯಪುರ: ಚಡಚಣ ಪಟ್ಟಣದಲ್ಲಿ ನಡೆದ ಎಸ್ಬಿಐ ಬ್ಯಾಂಕ್ ದರೋಡೆ ಸಂಬಂಧ ಪ್ರಕರಣ ದಾಖಲಾಗಿದೆ. ಎಸ್ಬಿಐ ಮ್ಯಾನೇಜರ್ ತಾರಕೇಶ್ವರ ವೆಂಕಟೇಶ್ ಅವರು ನೀಡಿದ ದೂರಿನ ಅನ್ವಯ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ..?
ಅಕೌಂಟ್ ಓಪನ್ ಮಾಡುವ ನೆಪದಲ್ಲಿ ಮೊದಲಿಗೆ ಓರ್ವ ಬ್ಯಾಂಕ್ಗೆ ಎಂಟ್ರಿ ನೀಡಿದ್ದಾನೆ. ಆತ ಕೋವಿಡ್ ಮಾಸ್ಕ್ ಹಾಕಿಕೊಂಡು ಬಂದಿದ್ದ. ಫಾರ್ಮ್ ಸರಿಯಾಗಿ ಭರ್ತಿ ಮಾಡುವಂತೆ ಮ್ಯಾನೇಜರ್ ಹೇಳಿದ್ದಾರೆ. ಇದೇ ವೇಳೆ ಡೇ ಅಂಡ್ ಆ್ಯಕ್ಟಿವಿಟಿ ಮಾಡಲು ಕ್ಯಾಶರ್, ಮ್ಯಾನೇಜರ್ ಶುರು ಮಾಡಿದ್ದರು. ಆಗ ಪಿಸ್ತೂಲು ಹಿಡಿದು ಹೆದರಿಸಿ ಹಣ ಕೊಡಿ, ಇಲ್ಲ ಸಾಯಿಸುವೆ ಎಂದ ಅಪರಿಚಿತ ಬೆದರಿಸಿದ್ದಾನೆ. ನಂತರ ಹೆದರಿಸಿ ಕ್ಯಾಶ್, ಕೀ ಹಾಗೂ ಚಿನ್ನಾಭರಣ ಇರುವ ಸೆಫ್ಟಿ ಲಾಕರ್ ಓಪನ್ ಮಾಡಿ ದರೋಡೆ ಮಾಡಿದ್ದಾರೆ.
ಇದನ್ನೂ ಓದಿ:‘ಆನೆ ಮೇಲಿನ ಅಂಬಾರಿ..’ ನಟಿ ಮಯೂರಿ ಈಗ ಏನ್ಮಾಡ್ತಿದ್ದಾರೆ..? Photos
ಮೂವರಿಂದ ದರೋಡೆ..!
ಇನ್ನು ದರೋಡೆಗೆ ಮೂವರ ಗ್ಯಾಂಗ್ ಬಂದಿತ್ತು. ಬ್ಯಾಂಕಿನಲ್ಲಿ ಒಂದು ಬುಲೆಟ್ ಪತ್ತೆ ಆಗಿದೆ. ದರೋಡೆ ವೇಳೆ ಸಿಬ್ಬಂದಿ, ಗ್ರಾಹಕರನ್ನ ಹೆದರಿಸಲು ಫೈರಿಂಗ್ ಮಾಡಿದ್ದಾರೆ. ನಂತರ ಸುಮಾರು 50 ಕೆಜಿ ಚಿನ್ನಾಭರಣ, 8 ಕೋಟಿ ನಗದು ರಾಬರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣದ ಬಗ್ಗೆ ವಿಜಯಪುರ ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿ.. ನಕಲಿ ನಂಬರ್ವುಳ್ಳ ಕಾರನ್ನು ಬಳಸಿ ಹಣ ಹಾಗೂ ಚಿನ್ನಾಭರಣ ಕದ್ದಿದ್ದಾರೆ. ಚಡಚಣ ಪಟ್ಟಣದಲ್ಲಿ ಬ್ಯಾಂಕ್ ದರೋಡೆ ಮಾಡಿ ಮಹಾರಾಷ್ಟ್ರದ ಕಡೆಗೆ ಹೊರಟಿದ್ದಾರೆ.
ಇದನ್ನೂ ಓದಿ:4 ವರ್ಷ ಪ್ರೀತಿ, ಮದುವೆ, 11 ತಿಂಗಳ ಮಗು ಬೇರೆ ಇತ್ತು.. ಅದೊಂದು ಕಾರಣಕ್ಕೆ ಜೀವಬಿಟ್ಟ ಗೃಹಿಣಿ
ಮಹಾರಾಷ್ಟ್ರದ ಹುಲಿಜಂತಿ ಗ್ರಾಮದ ಬಳಿ ಕಾರು ಅಪಘಾತ ಮಾಡಿದ್ದಾರೆ. ಈ ವೇಳೆ ಬೈಕ್ ಸವಾರರು, ಗ್ರಾಮಸ್ಥರೊಂದಿಗೆ ವಾಗ್ವಾದ ನಡೆದಿದೆ. ನಂತರ ಹಣ, ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:‘ಅನರ್ಹ BPL ಕಾರ್ಡ್ ರದ್ದು ಮಾಡಲ್ಲ, ಆದರೆ..’ ಸಚಿವ ಮುನಿಯಪ್ಪ ಮಹತ್ವದ ಹೇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ