/newsfirstlive-kannada/media/media_files/2025/09/11/vijayapura-love-story-2025-09-11-07-29-06.jpg)
ಪ್ರಿಯತಮೆ ಮತ್ತು ಪ್ರಿಯಕರ
ಸಿಂಗಲ್ ಲೈಫು ಬೋರು ಮಿಂಗಲ್ ಆಗೋಣ ಅಂತ ಎರಡು ಮಕ್ಕಳ ತಾಯಿ ಜೊತೆ ಪ್ರೀತಿಯ ಬಲೆಗೆ ಬಿದ್ದು ಪೀಕಲಾಟಕ್ಕೆ ಸಿಲುಕಿದ್ದ. ಮಾಯಾಂಗನೆಯ ಮಾತು ಕೇಳಿ ಆಕೆಯ ಪತಿಯನ್ನು ಕೊಲೆ ಮಾಡಲು ಹಾಕಿದ್ದ ಸ್ಕೆಚ್ ಮಿಸ್ ಆಗಿತ್ತು. ಬಳಿಕ ಪರಾರಿಯಾಗಿದ್ದ ಆತ, ವಿಡಿಯೋ ಮಾಡಿ ನನ್ನದೇನು ತಪ್ಪಿಲ್ಲ ಅಂತ ಹೇಳಿದ್ದ. ಹೀಗೆ ತಲೆಮರೆಸಿಕೊಂಡು ಎರಡ್ಮೂರು ದಿನಗಳ ಬಳಿಕ ಆತನ ಶವ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಿಯಕರನ ಸಾವಿನ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ.
ಏನಿದು ಪ್ರಕರಣ..?
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ಬೀರಪ್ಪ ಹಾಗೂ ಇಬ್ಬರು ಮಕ್ಕಳ ಜೊತೆ ಸುಖಸಂಸಾರಿಯಾಗಿದ್ದ. ಆದ್ರೆ ಪರಪುರುಷನಿಗೆ ಪರವಶಳಾದ ಆತನ ಪತ್ನಿ ಸುನಂದಾ, ಬೀರಪ್ಪನ ಆನಂದಕ್ಕೆ ಕೊಳ್ಳಿ ಇಡಲು ಪ್ಲಾನ್ ಮಾಡಿದ್ದಳು. ಆದ್ರೆ ಪ್ರಿಯಕರ ಸಿದ್ದಪ್ಪನ ಜೊತೆ ಸೇರಿ ಹಾಕಿದ್ದ ಸ್ಕೆಚ್ ಜಸ್ಟ್ ಮಿಸ್ ಆಗಿತ್ತು.
ಇದನ್ನೂ ಓದಿ:ಬೆಂಗಳೂರು ಮಳೆಗೆ ನೆಂಟರ ಕಾರು ಜಖಂ.. ರಾತ್ರಿ ಸುರಿದ ಮಳೆಗೆ ಭಾರೀ ಅನಾಹುತ..
/filters:format(webp)/newsfirstlive-kannada/media/media_files/2025/09/11/vijayapura-love-story-1-2025-09-11-07-34-15.jpg)
ಅದಾದ ಬಳಿಕ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಸುನಂದಾಳದ್ದೇ ತಪ್ಪು ಎಂದಿದ್ದ ಸಿದ್ದಪ್ಪ, 4-5 ಜನ ಕರೆದುಕೊಂಡು ಬರ್ತೀನಿ ಅಂತ ಹೇಳಿದ್ದೆ. ಆದ್ರೆ ಆಕೆಯೇ ನೀನೊಬ್ಬನೇ ಬಾ ಅಂತ ಹೇಳಿದ್ದಳು. ಬೀರಪ್ಪ ಕೊಲೆ ಯತ್ನ ಪ್ರಕರಣದಲ್ಲಿ ನನ್ನ ಸಿಲುಕಿಸಲಾಗುತ್ತಿದೆ ಎಂದು ಸಿದ್ದಪ್ಪ ಸಂಶಯ ವ್ಯಕ್ತಪಡಿಸಿದ್ದ.
3 ದಿನಗಳ ಹಿಂದೆ ವಿಡಿಯೋ ಮಾಡಿದ್ದ ಸಿದ್ದಪ್ಪ ಈಗ ನಿಗೂಢ ಸಾವನ್ನಪ್ಪಿದ್ದಾನೆ. ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿದ್ದಪ್ಪನ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಸಿದ್ದಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಝಳಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಧನರಾಜ್ ಆಚಾರ್ ಮನೆಗೆ ಬಂದ ತಂಗಿ ಜಿಂಕೆ.. ಮಂಗಳೂರು ಬನ್ ತಿಂದು ಭವ್ಯಗೌಡ ಹೇಳಿದ್ದೇನು?
/filters:format(webp)/newsfirstlive-kannada/media/media_files/2025/09/11/vijayapura-love-story-2-2025-09-11-07-35-22.jpg)
ಆತನ ಸಾವಿನ ಹಿಂದೆ ಅನುಮಾನಗಳ ಹುತ್ತ ಬೆಳದಿದೆ. ಸಿದ್ದಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನಾ ಅಥವಾ ಆತನನ್ನ ಕೊಲೆ ಮಾಡಲಾಗಿದ್ಯಾ ಅನ್ನೋದು ಸಂಪೂರ್ಣ ತನಿಖೆ ಬಳಿಕವಷ್ಟೇ ಹೊರಬರಬೇಕಿದೆ.. ಊರಲ್ಲಿ ನೆಮ್ಮದಿಯಾಗಿ ಬದುಕು ನಡೆಸ್ತಿದ್ದ ಸಿದ್ದಪ್ಪ ಪರಸತಿಗೆ ಸೋತು ಸಾವಿನ ಮನೆ ಸೇರಿದ್ದು ಮಾತ್ರ ದುರಂತವೇ ಸರಿ..
ಇದನ್ನೂ ಓದಿ:ಪ್ರಥಮ್ಗೆ ಬೆದರಿಕೆ ಹಾಕಿದ್ದ ಕೇಸ್; ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಅರೆಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ