/newsfirstlive-kannada/media/media_files/2025/10/10/kannada-rajyosatva-awards-2025-10-10-18-55-42.jpg)
ಇವತ್ತು ನವೆಂಬರ್ ಒಂದು. ಕನ್ನಡಿಗರೆಲ್ಲರೂ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ‘ಕರ್ನಾಟಕದ ರಾಜ್ಯೋತ್ಸವ ದಿನ’ ಅಥವಾ ‘ಕರ್ನಾಟಕ ರಚನ ದಿನ’ ಎಂದೂ ಕರೆಯುತ್ತಾರೆ. ನಿಮಗೆ ಗೊತ್ತಾ ನಾವು ಯಾಕೆ ಕನ್ನಡ ರಾಜ್ಯೋತ್ಸವ ಆಚರಿಸ್ತೇವೆ ಎಂದು? ಉತ್ತರ ಇಲ್ಲಿದೆ..
ಕನ್ನಡ ರಾಜ್ಯೋತ್ಸವದ ಇತಿಹಾಸ
ಮೌರ್ಯರು, ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಜ್ಯದಂತಹ ರಾಜವಂಶಗಳನ್ನು ವ್ಯಾಪಿಸಿರುವ ಶ್ರೀಮಂತ ಇತಿಹಾಸದೊಂದಿಗೆ ಕರ್ನಾಟಕದ ಬೇರು ಹೊಂದಿದೆ. 1950ರಲ್ಲಿ ಭಾರತವು ಗಣರಾಜ್ಯವಾಯಿತು. ಭಾಷೆಗಳ ಆಧಾರದ ಮೇಲೆ ವಿವಿಧ ಪ್ರಾಂತ್ಯಗಳನ್ನು ರಚಿಸಲಾಯಿತು. ಕನ್ನಡ ಮಾತನಾಡುವ ರಾಜ್ಯವನ್ನು ಸ್ಥಾಪಿಸಲು ನವೆಂಬರ್ 1, 1956ರಂದು ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನದ ಭಾಗವಾಗಿತ್ತು.
ಅಂತೆಯೇ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ. 1956ರ ನವೆಂಬರ್ 1 ರಂದು, ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು (ನಂತರ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು) ಸ್ಥಾಪಿಸಿದ ದಿನವನ್ನು ಸಂಭ್ರಮಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವು ಕನ್ನಡಿಗರ ಏಕತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಮಹತ್ವದ ಸಂಕೇತವಾಗಿದೆ.
ಇದನ್ನೂ ಓದಿ: ಕೃತಕ ಗರ್ಭಧಾರಣೆಗೆ 15 ವರ್ಷಗಳ ನಂತರ ಪೆರೋಲ್​ ಪಡೆದ ಜೋಡಿ ಖೈದಿಗಳು!
ಪ್ರಾರಂಭದಲ್ಲಿ, ಹೊಸದಾಗಿ ರೂಪುಗೊಂಡ ರಾಜ್ಯಕ್ಕೆ ಮೈಸೂರು ಎಂದು ಹೆಸರಿಸಲಾಗಿತ್ತು. ಉತ್ತರ ಕರ್ನಾಟಕದಂತಹ ಕೆಲವು ಪ್ರದೇಶಗಳು ಈ ಹೆಸರನ್ನು ಸ್ವೀಕರಿಸಲಿಲ್ಲ. 1973ರಲ್ಲಿ ಕನ್ನಡ ರಾಜ್ಯವನ್ನು ನವೆಂಬರ್ 1ರಂದು ಕರುನಾಡು ಎಂದು ಮರುನಾಮಕರಣ ಮಾಡಲಾಯಿತು. ಅದಕ್ಕಾಗಿಯೇ ಇಂದು ನಾವು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತೇವೆ.
ರಾಜ್ಯೋತ್ಸವದ ಮಹತ್ವ
ರಾಜ್ಯದ ರಚನೆ: 1956ರಲ್ಲಿ ಮೈಸೂರು, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಮದ್ರಾಸ್ ಕರ್ನಾಟಕಗಳ ಕನ್ನಡ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ಈ ಐತಿಹಾಸಿಕ ಒಕ್ಕೂಟವನ್ನು ನೆನಪಿಸಿಕೊಳ್ಳಲು ರಾಜ್ಯೋತ್ಸವ ಆಚರಿಸಲಾಗುತ್ತದೆ.
ಕನ್ನಡದ ಏಕತೆ: ಇದು ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಂದೇ ರಾಜ್ಯದ ಅಡಿಯಲ್ಲಿ ತಂದ ದಿನವಾಗಿದೆ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಏಕತೆಯನ್ನು ಸಂಕೇತಿಸುತ್ತದೆ.
ಪರಂಪರೆಯ ಆಚರಣೆ: ರಾಜ್ಯದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ನೆನಪಿಸಿಕೊಳ್ಳುವ ಹಾಗೂ ಗೌರವಿಸುವ ಉದ್ದೇಶವಿದೆ.
ಕನ್ನಡಿಗರ ಹೆಮ್ಮೆ: ವಿಶ್ವದಾದ್ಯಂತ ಇರುವ ಕನ್ನಡಿಗರು ಈ ದಿನವನ್ನು ನಾಡಹಬ್ಬವಾಗಿ ಆಚರಿಸುತ್ತಾರೆ, ಇದು ಕನ್ನಡಾಭಿಮಾನವನ್ನು ಹೆಚ್ಚಿಸುತ್ತದೆ.
ಸರಕಾರಿ ರಜಾದಿನ: ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕ ಸರ್ಕಾರವು ಅಧಿಕೃತ ರಾಜ್ಯ ರಜಾದಿನವನ್ನಾಗಿ ಘೋಷಿಸಿದೆ
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಗಳು : ಬುದ್ದಿವಾದ ಹೇಳಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗಳು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us