ಧರ್ಮಸ್ಥಳವನ್ನೇ ಟಾರ್ಗೆಟ್ ಮಾಡಿದ್ದ ಸಮೀರ್ ಎಂ.ಡಿ ಯಾರು? ಈತನ ಹಿನ್ನೆಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ..!

ಧರ್ಮಸ್ಥಳವನ್ನೇ ಟಾರ್ಗೆಟ್ ಮಾಡಿದ್ದ ಸಮೀರ್ ಎಂ.ಡಿ ಯಾರು? ಈತನ ಹಿನ್ನೆಲೆ ಏನು? ಈತನಿಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟನೆಗಳಿಗೂ ಏನಾದರೂ ಸಂಬಂಧ ಇದೆಯೇ ಎಂಬ ಕುತೂಹಲ ಜನರಿಗೆ ಇದೆ. ಅದನ್ನು ತಣಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ.

Chandramohan & Veenashree Gangani
sameer md(1)

ಯೂಟ್ಯೂಬರ್ ಸಮೀರ್ ಎಂ.ಡಿ.

Advertisment
  • ಯೂಟ್ಯೂಬರ್ ಸಮೀರ್ ಎಂ.ಡಿ. ಯಾರು? ಈತನ ಹಿನ್ನಲೆ ಏನು ಗೊತ್ತಾ?
  • ಸೌಜನ್ಯಾ ಕೊಲೆ ಕೇಸ್ ಬಗ್ಗೆ ವಿಡಿಯೋ ಮಾಡಿ ಸಂಚಲನ ಸೃಷ್ಟಿ
  • ಈಗ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಆರೋಪದಡಿ ಕೇಸ್ ದಾಖಲು

ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ಯೂಟ್ಯೂಬರ್ ಸಮೀರ್ ಎಂ.ಡಿ.ಗಾಗಿ ಹುಡುಕಾಟ ನಡೆಸಿದ್ದಾರೆ. ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಯೂಟ್ಯೂಬ್ ಚಾನಲ್​ನಲ್ಲಿ ಅಪಪ್ರಚಾರ ನಡೆಸಿದ ಆರೋಪದಡಿ ಕೇಸ್ ದಾಖಲಾಗಿದೆ. 

sameer md

ಧರ್ಮಸ್ಥಳ ಕೇಸ್​ನಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದ ಯೂಟ್ಯೂಬರ್ ಸಮೀರ್ ಎಂಡಿ ಯಾರು? ಈತನ ಹಿನ್ನೆಲೆ ಏನು? ಈತನಿಗೂ ಧರ್ಮಸ್ಥಳಕ್ಕೂ ಏನು ನಂಟು? ಬಳ್ಳಾರಿಯ ಸಮೀರ್ ಬೆಂಗಳೂರಿನ ಸ್ಟಾರ್ ಯೂಟ್ಯೂಬರ್ ಆಗಿದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳು ಇಡೀ ಕರುನಾಡಿನ ಜನರನ್ನ ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿದೆ ಉತ್ತರ.

ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು

Sameer M D

ಕನ್ನಡದ ಯೂಟ್ಯೂಬ್​ ಕಮ್ಯುನಿಟಿಯಲ್ಲಿ ಸ್ಟಾರ್​ಪಟ್ಟ ಪಡೆದ ಯೂಟ್ಯೂಬರ್​ಗಳಲ್ಲಿ ಸಮೀರ್ ಎಂಡಿ ಕೂಡ ಒಬ್ಬರು. ಒಂದೇ ಒಂದು ವಿಡಿಯೋ ಸಮೀರ್ ಎಂಡಿಯನ್ನ ಯೂಟ್ಯೂಬ್​ನ ಉತ್ತುಂಗಕ್ಕೆ ಏರಿಸಿಬಿಡ್ತು. ಎಐ ತಂತ್ರಜ್ಞಾನ ಹಾಗೂ ತನ್ನ ವಿಭಿನ್ನ ಶೈಲಿಯ ವಿಶ್ಲೇಷಣೆ ಮೂಲಕ ಕನ್ನಡಿಗರಿಗೆ ತುಂಬಾ ಚಿರಪರಿಚಿತನಾಗಿಬಿಟ್ಟ. ಹೀಗೆ ತನ್ನ ವಿಭಿನ್ನ ಶೈಲಿಯ ವಿಡಿಯೋ ಮೂಲಕ ಧರ್ಮಸ್ಥಳದ ಬಗ್ಗೆ ಮಾಡಿದ ವಿಡಿಯೋ ಕರ್ನಾಟಕದ ಮಟ್ಟದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಧರ್ಮಸ್ಥಳದ ಬಗ್ಗೆ ಮಾತನಾಡಿದ್ದಕ್ಕೆ ಸೋಷಿಯಲ್ ಮೀಡಿಯಾ ಕಮ್ಯುನಿಟಿ ಸಮೀರ್ ಎಂಡಿ ಬೆನ್ನಿಗೆ ನಿಂತಿತ್ತು. ಆದರೆ ಈಗ ಧರ್ಮಸ್ಥಳ ಪೊಲೀಸರು ಸಮೀರ್ ಎಂಡಿಯ ಬೆನ್ನು ಬಿದ್ದಿದ್ದಾರೆ. 

sameer md(2)

ಸಮೀರ್ ಎಂ.ಡಿ. ಒಂದೆರೆಡು ತಿಂಗಳುಗಳ ಹಿಂದೆ ಧರ್ಮಸ್ಥಳದ ಸೌಜನ್ಯಾ ನಾಪತ್ತೆ ಮತ್ತು ನಿಗೂಢ ಕೊ*ಲೆ ಕೇಸ್​ ಬಗ್ಗೆ ಯೂಟ್ಯೂಬ್​ನಲ್ಲಿ ವಿಡಿಯೋ ಮಾಡಿದ್ದ. ಆ ವಿಡಿಯೋ ಯೂಟ್ಯೂಬ್​ನಲ್ಲಿ ದೊಡ್ಡ ಸಂಚಲನಕ್ಕೆ ಕಾರಣಲಾಯಿತು. ಆ ವಿಡಿಯೋ ಮಾಡಿದ ಬಳಿಕವೇ ರಾಜ್ಯದ ಜನರಿಗೆ ಸಮೀರ್ ಎಂ.ಡಿ. ಎಂಬ ಒಬ್ಬ ಯೂಟ್ಯೂಬರ್ ಅಂತ ಪರಿಚಯವಾಯಿತು. ಆದಾದ ಬಳಿಕ ಧರ್ಮಸ್ಥಳದ ಬಗ್ಗೆಯೂ ಸಮೀರ್ ವಿಡಿಯೋಗಳನ್ನು ಮಾಡಿದ್ದಾನೆ. ಬಳಿಕ ಆಗ್ಗಾಗ್ಗೆ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಜೊತೆಗೂ ಈ ಸಮೀರ್ ಕಾಣಿಸಿಕೊಂಡಿದ್ದಾನೆ. ಅನಾಮಿಕ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಪೊಲೀಸರಿಗೆ ದೂರು ಕೊಟ್ಟ ಬಳಿಕ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಜೊತೆ ಕಾಣಿಸಿಕೊಂಡಿದ್ದಾನೆ.

sameer md(4)

ಆದಾದ ಬಳಿಕ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೂ ಈ ಸಮೀರ್ ಗುರಿಯಾಗಿದ್ದಾನೆ. ಸಮೀರ್ ಎಂ.ಡಿ. ದೂತ ಹೆಸರಿನ ಯೂಟ್ಯೂಬ್ ಚಾನಲ್​ನಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾನೆ. ದೂತ ಯೂಟ್ಯೂಬ್ ಚಾನಲ್ ಜೊತೆಗೆ ಸಮೀರ್ ಎಂ.ಡಿ. ಎಂಬ ಮತ್ತೊಂದು ಚಾನಲ್​ನಲ್ಲೂ ಈತ ಯೂಟ್ಯೂಬ್ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾನೆ. ಈ ಚಾನಲ್​ನಲ್ಲಿ ಧರ್ಮಸ್ಥಳದ ಬಗ್ಗೆಯೂ ವಿಡಿಯೋಗಳನ್ನು ಮಾಡಿದ್ದಾನೆ. ಈತನ ದೂತ ಯೂಟ್ಯೂಬ್ ಚಾನಲ್ ಗೆ 1.25 ಮಿಲಿಯನ್ ಸಬ್ ಸ್ಕ್ರೈಬರ್ ಗಳಿದ್ದಾರೆ. ಈತ ಇದುವರೆಗೂ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋಗಳ ಸಂಖ್ಯೆ ಕಡಿಮೆನೇ. ಇದುವರೆಗೂ 21 ವಿಡಿಯೋಗಳನ್ನು ದೂತ ಯೂಟ್ಯೂಬ್ ಚಾನಲ್ ಗೆ ಸಮೀರ್ ಎಂ.ಡಿ. ಅಪ್ ಲೋಡ್ ಮಾಡಿದ್ದಾನೆ.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ವಿವಾಹಿತೆ.. ಕಾರು ಸಮೇತ ಕೆರೆಗೆ ತಳ್ಳಿ ಜೀವ ತೆಗೆದನಾ ಕಿರಾತಕ..?

sameer md(3)

ಆದ್ರೆ, ಈತನ ವಿಡಿಯೋಗಳಿಗೆ 2 ರಿಂದ 3 ಮಿಲಿಯನ್ ವೀವ್ಸ್ ಕೂಡ ಬಂದಿವೆ. ಒಂದು ತಿಂಗಳ ಹಿಂದೆ ಅಪ್ ಲೋಡ್ ಮಾಡಿರುವ ಧರ್ಮಸ್ಥಳದ ಸರಣಿ ಹಂತಕರು ಯಾರು ಎಂಬ ಟೈಟಲ್ ನ ವಿಡಿಯೋಗೆ 7 ಮಿಲಿಯನ್ ವೀವ್ಸ್ ಕೂಡ ಬಂದಿದೆ. ಅಂದರೆ 70 ಲಕ್ಷ ಜನರು ಆ ವಿಡಿಯೋ ನೋಡಿದ್ದಾರೆ. ಇನ್ನೂ, ಸಮೀರ್ ಎಂ.ಡಿ. ಯಾರು? ಯಾವ ಊರಿನವನು? ಈತನ ಹಿನ್ನಲೆ ಏನು ಅನ್ನೋದನ್ನು ನ್ಯೂಸ್ ಫಸ್ಟ್ ಕೆದಕಿದೆ.

ಸಮೀರ್ ಬಳ್ಳಾರಿಯ ಕೌಲ್ ಬಜಾರ್ ನಿವಾಸಿ..

ಸಮೀರ್ ಎಂಡಿ ಮೂಲತಃ ಬಳ್ಳಾರಿಯ ಕೌಲಬಜಾರ್​ ಮೂಲದವನು. ತಾಯಿ ಬಳ್ಳಾರಿಯವರೇ ಆಗಿದ್ದು, ತಂದೆ ಆಂಧ್ರಪ್ರದೇಶದ ಗಂತಕಲ್​ನವರು. ಸಮೀರ್​ ಓರ್ವ ಅಕ್ಕ ಹಾಗೂ ತಾಯಿಯ ಜತೆ ಬಳ್ಳಾರಿಯಲ್ಲಿ ವಾಸ ಮಾಡುತ್ತಿದ್ದ. ತಂದೆ ಇಲ್ಲ ಅನ್ನೋ ಮಾಹಿತಿ ಇದೆ. ಸಮೀರ್ ಎಂಡಿ 8ನೇ ತರಗತಿವರೆಗೆ ಬಳ್ಳಾರಿಯ ಖಾಸಗಿ ಶಾಲೆಯಲ್ಲಿ ವ್ಯಾಸಾಂಗ ಮುಗಿಸಿದ್ದ. 8ನೇ ತರಗತಿ ಬಳಿಕ ಬೆಂಗಳೂರಿಗೆ ಹೆಚ್ಚಿನ ವಿದ್ಯಾಭ್ಯಾಕ್ಕೆ ಸಮೀರ್ ವಲಸೆ ಬರ್ತಾನೆ. ಸಮೀರ್ ಬೆಂಗಳೂರಿನಲ್ಲೇ ಬಿಸಿಎವರೆಗೆ ವ್ಯಾಸಾಂಗ ಮಾಡಿದ್ದಾನೆ. ನಂತರ ಸಮೀರ್ ಎಂಟ್ರಿ ಕೊಟ್ಟಿದ್ದೇ ಯೂಟ್ಯೂಬ್ ಪ್ರಪಂಚಕ್ಕೆ. ಬನ್ನೇರುಘಟ್ಟದ ಮನೆಯಲ್ಲಿ ಇದ್ದುಕೊಂಡೇ ತನ್ನ ವಿಭಿನ್ನ ಶೈಲಿಯಲ್ಲಿ ವಿಡಿಯೋ ಮಾಡುತ್ತಾ ಬರುತ್ತಾನೆ. ಎಐ ತಂತ್ರಜ್ಞಾನವನ್ನ ಬಳಸಿಕೊಂಡು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದ. ಆದರೆ ಧರ್ಮಸ್ಥಳದ ಕುರಿತು ಮಾಡಿದ ವಿಡಿಯೋ ಸಂಚಲನ ಸೃಷ್ಟಿಸಿತ್ತು. ಈಗ ಅದೇ ವಿಡಿಯೋ ಸಮೀರ್ ಎಂಡಿಯ ಪಾಲಿಗೆ ಹುರುಳಾಗಿ ಪರಿಣಮಿಸಿದೆ.

ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು

ಸಮೀರ್‌ಗೂ ಬಳ್ಳಾರಿಯ ಒಡನಾಟವಿದೆ. ತಾಯಿಯ ತವರೂರು ಬಳ್ಳಾರಿ ನಗರದ ಕೌಲ್ ಬಜಾರ್. ತಂದೆಯ ಊರು ಆಂಧ್ರದ ಗುಂತಕಲ್. ಸಮೀರ್​ಗೆ ಸೇರಿದ ಬಳ್ಳಾರಿಯ ಕೌಲಬಜಾರ್ ವ್ಯಾಪ್ತಿಯಲ್ಲಿ ಒಂದು ಮನೆ ಇದೆ. ಮನೆಗೆ ಪ್ಲಾಸ್ಟಿಂಗ್ ಆಗದ ಹಿನ್ನೆಲೆ‌ಯಲ್ಲಿ ಯಾರು ವಾಸವಿಲ್ಲ. ಬಳ್ಳಾರಿಯಲ್ಲಿ ಸಮೀರ್ ಸಂಬಂಧಿಕರು ಯಾರೂ ಇಲ್ಲ. ಸಮೀರ್​ಗೆ ಬಳ್ಳಾರಿಯಲ್ಲಿ ಯಾವ ಸಂಘಟನೆ ನಂಟೂ ಇಲ್ಲ. ತಾಯಿ, ಅಕ್ಕ ಜೊತೆಗೆ ಬೆಂಗಳೂರಿನ ಪೀಣ್ಯದಲ್ಲಿ ಸಮೀರ್ ವಾಸ ಮಾಡುವ ಬಗ್ಗೆ ಬಳ್ಳಾರಿ ಪೊಲೀಸರಿಗೆ ಮಾಹಿತಿ ಇತ್ತು. ಧರ್ಮಸ್ಥಳದ ಬಗ್ಗೆ ಮೊದಲ ವಿಡಿಯೋ ಮಾಡಿದಾಗ ಸಮೀರ್ ಮೇಲೆ ಬಳ್ಳಾರಿಯ  ಕೌಲಬಜಾರ್ ಪೊಲೀಸ್  ಠಾಣೆಯಲ್ಲಿ 51/2025 ಎಂಬ ಕೇಸ್ ದಾಖಲಾಗಿದೆ. ಬಳ್ಳಾರಿಯಲ್ಲಿ ಪೊಲೀಸರು‌ ಸಮೀರ್ ಬಗ್ಗೆ ಹುಡುಕಾಟ ನಡೆಸಿದಾಗ, ಬಳ್ಳಾರಿಯಲ್ಲಿ ವಾಸದ ಬಗ್ಗೆ ಮಾಹಿತಿ ದೊರೆತಿಲ್ಲ. ಬಳ್ಳಾರಿಯಲ್ಲಿ ಸಮೀರ್ ಆಪ್ತ ವರ್ಗ, ಸ್ನೇಹಿತ ವರ್ಗ ಎಂಬುದು ಯಾವುದೂ ಇಲ್ಲ.

 ಸದ್ಯ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ ಪ್ರಚಾರ ಮಾಡಿದ ಆರೋಪದಡಿ ಕೇಸ್ ದಾಖಲಾಗಿದೆ. ಆ ಕೇಸ್​ನಲ್ಲಿ ಸಮೀರ್ ಬಂಧನಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದ್ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಹುಲ್ಲಳ್ಳಿ ಮನೆಯಲ್ಲಿ ಸಮೀರ್ ಸಿಕ್ಕಿಲ್ಲ. ಮತ್ತೊಂದೆಡೆ ಸಮೀರ್ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಕೋರ್ಟ್​ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. ಸಮೀರ್​ಗೆ ಹಣ ಎಲ್ಲಿಂದ ಬರುತ್ತೆ ಎಂಬ ಬಗ್ಗೆಯೂ ತನಿಖೆಯಾಗಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: BREAKING: ಮಹೇಶ್​ ಶೆಟ್ಟಿ ತಿಮರೋಡಿ ಅರೆಸ್ಟ್

ಈ ಬಗ್ಗೆಯೂ ಪೊಲೀಸ್ ಠಾಣೆ, ಇ.ಡಿ.ಗೂ ಕೆಲವರು ದೂರು ನೀಡಿದ್ದಾರೆ. ಸೌಜನ್ಯಾ ಕೊಲೆ ಕೇಸ್ ಮತ್ತು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಿಕ ಪೊಲೀಸರಿಗೆ ದೂರು ಕೊಟ್ಟ ಬಳಿಕ ಆತನ ಹೇಳಿಕೆಯನ್ನು ಬೆಂಬಲಿಸಿ ಈ ಸಮೀರ್ ಎಂ.ಡಿ. ವಿಡಿಯೋ ಮಾಡಿದ್ದಾನೆ. ಅನಾಮಿಕ ಮಾಸ್ಕ್ ಮ್ಯಾನ್ ನನ್ನು ಮಂಡ್ಯ ಜಿಲ್ಲೆಯ ದಲಿತ ಸಮುದಾಯಕ್ಕೆ ಸೇರಿದವನು. ಅನಕ್ಷರಸ್ಥ. ಧರ್ಮಸ್ಥಳದಲ್ಲಿ ಈ ಹಿಂದೆ ಕೆಲಸ ಮಾಡಿದ್ದಾನೆ ಎಂದು ಸಮೀರ್ ತನ್ನ ವಿಡಿಯೋದಲ್ಲಿ ಹೇಳಿದ್ದಾನೆ. ಈಗ ಸಮೀರ್ ಎಂ.ಡಿ. ಗೆ ದಕ್ಷಿಣ ಕನ್ನಡ ಜಿಲ್ಲಾ ಕೋರ್ಟ್ ನಿರೀಕ್ಷಣಾ ಜಾಮೀನು ನೀಡುತ್ತೋ ಇಲ್ಲವೋ ಎಂಬ ಕುತೂಹಲ ಇದೆ. ನಿರೀಕ್ಷಣಾ ಜಾಮೀನು ಸಿಕ್ಕರೇ, ಬಂಧನದಿಂದ ಸಮೀರ್ ಬಚಾವ್. ಇಲ್ಲದಿದ್ದರೇ, ಬಂಧನಕ್ಕೊಳಗಾಗಿ ಪೊಲೀಸ್ ವಿಚಾರಣೆಯನ್ನು ಎದುರಿಸಬೇಕಾಗುತ್ತೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala case, sameer md
Advertisment