newsfirstkannada.com

ಒಂದೊಂದು ಪ್ರೀತಿಗೆ ಒಂದೊಂದು ಬೆಳಗು.. ಮೆದುಳಲ್ಲಿ ಮಿನುಗುತ್ತೆ ಪ್ರೀತಿಯ ಪ್ರಭೆ; ಏನಿದು ಹೊಸ ಅಧ್ಯಯನ?

Share :

Published August 28, 2024 at 6:04am

    ಹಲವು ಬಗೆಯ ಪ್ರೀತಿಗೆ ಮೆದುಳಿನ ಹಲವು ಭಾಗಗಳು ಸಕ್ರಿಯವಾಗುತ್ವೆ

    ಹೊಸ ಅಧ್ಯಯನ ಬಿಚ್ಚಿಟ್ಟಿದೆ ಪ್ರೀತಿಗೆ ಮೆದುಳು ಸ್ಪಂದಿಸುವ ರೀತಿ ರಿವೀಲ್

    ಒಂದೊಂದು ಬಗೆಯ ಪ್ರೇಮಕ್ಕೂ ಮೆದುಳಿನ ಒಂದೊಂದು ಭಾಗ ಬೆಳಗುತ್ತೆ

ಪ್ರೀತಿ ಭಾಷೆಗೆ ನಿಲುಕದ ಪದ. ಹಲವು ವಿಧ, ನಾವು ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ರೀತಿಯ ದಾರಿಯನ್ನು, ಹಲವು ರೀತಿಯ ದೇಹಭಾಷೆಯನ್ನ ಬಳಸುತ್ತೇವೆ. ನಲ್ಲೆಯಿಂದ ಹಿಡಿದು ಮನೆಯಲ್ಲಿರುವ ಮುದ್ದು ಬೆಕ್ಕಿನ ಮರಿಯ ಮೇಲೂ ನಮಗೆ ಒಂದೊಂದು ತರದ ಪ್ರೀತಿ. ಗಡಿಯಾಚೆ, ನುಡಿಯಾಚೆಗೆ ಈ ಪ್ರೀತಿ ನಿಂತಿದೆ. ಪ್ರೀತಿಗೆ ಹಲವು ಭಾವಗಳಿವೆ. ಅದೇ ರೀತಿ ನಮ್ಮಲ್ಲಿ ಸ್ಪುರಿಸುವ ಪ್ರೀತಿಯ ಪ್ರಕಾರವಾಗಿಯೇ ಮೆದುಳಿನ ಹಲವು ಭಾಗಗಳಲ್ಲಿ ಬೆಳಕು ಮೂಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಇದನ್ನೂ ಓದಿ: ಮೆಡಿಕಲ್​ ಫೀಲ್ಡ್​​ಗೂ ಲಗ್ಗೆ ಇಟ್ಟ AI ಮ್ಯಾಜಿಕ್ ಏನು? ಸಿಲಿಕಾನ್‌ ಸಿಟಿಯಲ್ಲೊಂದು ವಿಶೇಷ ಕಾರ್ಯಕ್ರಮ

ಪ್ರೇಮಾರಾಧನೆಯಿಂದ ಹಿಡಿದ ದೇಹಾರಾಧನೆಯವರೆಗೂ ಪ್ರೀತಿ ಹಲವು ರೀತಿ ಹಬ್ಬಿದೆ. ನಲ್ಲೆಯ ಮೇಲಿನ ದೈಹಿಕ ಆಕರ್ಷಣೆ, ಪೋಷಕರ ಮೇಲಿನ ಮಮಕಾರ, ಮುದ್ದು ಕೂಸನ್ನು ನೋಡಿದಾಗ ಹುಟ್ಟುವ ಶುದ್ಧ ಪ್ರೀತಿ ಹೀಗೆ ಹಲವು ಮಜಲುಗಳಲ್ಲಿ ಪ್ರೇಮ ಅಥವಾ ಪ್ರೀತಿ ನಮ್ಮಲ್ಲಿ ಹುಟ್ಟುತ್ತದೆ. ಅದಕ್ಕೆ ತಕ್ಕ ಹಾಗೆ ನಮ್ಮ ಮೆದುಳಿನಲ್ಲಿ ಒಂದೊಂದು ಭಾಗವು ಕಾಂತಿಯುತಗೊಳ್ಳುತ್ತೆ ಎಂದು ಅಲ್ಟೋ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದಲ್ಲಿ ಕಂಡಬಂದಿದೆ. ಈ ವಿಶ್ವವಿದ್ಯಾಲಯದವರು ಮೆದುಳಿನ ಪ್ರಕ್ರಿಯೆಯನ್ನ ಕಂಡು ಹಿಡಿಯಲು ಅಂತ ಫಂಕ್ಷನ್ ಮ್ಯಾಗ್ನೆಟಿಕ್ ರಿಸೋನನ್ಸ್ ಇಮೆಜಿಂಗ್ ( ಎಫ್​ಎಂಆರ್​ಐ) ಅನ್ನೋ ಸಾಧನವನ್ನು ಅಭಿವೃದ್ಧಿಪಡಿಸಿ ಅದರ ಸಹಾಯದಿಂದ ಮೆದುಳಿನ ಕಾರ್ಯವನ್ನು ಕಂಡು ಹಿಡಿದಿದ್ದಾರೆ.

ಇದನ್ನೂ ಓದಿ: ನಿಮ್ಮಲ್ಲಿ ಈ 5 ಹವ್ಯಾಸಗಳು ಇವೆಯೇ? ಹಾಗಾದ್ರೆ ನಿಮ್ಮ ಕಣ್ಣಿಗೆ ಅಪಾಯ ಕಟ್ಟಿಟ್ಟ ಬುತ್ತಿ; ತಪ್ಪದೇ ಸ್ಟೋರಿ ಓದಿ

ವಿವಿಧ ಬಗೆಯ ಪ್ರೇಮಗಳಿಗೆ ವಿವಿಧ ಬಗೆಯಾಗಿ ಮೆದುಳು ಪ್ರತಿಕ್ರಿಯಿಸುತ್ತದೆ ಅನ್ನೋದನ್ನ ನಾವು ಕಂಡು ಹಿಡಿದಿದ್ದೇವೆ. ಇದರ ಹಲವು ರೀತಿಯ ಫೋಟೋಗಳನ್ನು ಕೂಡ ನಾವು ಸಂಗ್ರಹಿಸಿದ್ದೇವೆ ಎಂದು ಅಧ್ಯಯನದ ಸಹಭಾಗಿಯಾಗಿರುವ ತತ್ವಶಾಸ್ತ್ರಜ್ಞ ಮತ್ತು ಸಂಶೋಧಕ ಪೆರ್ಟಿ ರಿನ್ನೇ ಅವರು ಹೇಳಿದ್ದಾರೆ. ಒಂದು ಸಾಮಾಜಿಕವಾಗಿ ಹುಟ್ಟುವ ಪ್ರೀತಿ ಮೆದುಳಿನ ಮಧ್ಯಭಾಗ ಅಂದ್ರೆ ಬಸಲ್ ಗ್ಯಾಂಗಲಿಯಾ ( basal ganglia) ವನ್ನು ತಾಕುತ್ತದೆ. ಅಲ್ಲಿ ಪ್ರೇಮದ ಪ್ರಭೆ ಸೃಷ್ಟಿಯಾಗುತ್ತದೆ. ಹೀಗೆ ಮೋಹದ ಪ್ರೇಮ, ಪೋಷಕರ ಪ್ರೇಮ, ಅಪರಿಚಿತರ ಎಡೆಗೆ ಹುಟ್ಟುವ ಒಂದ ವಿನಾಕಾರಣ ಪ್ರೇಮ, ಸಾಕು ಪ್ರಾಣಿಗಳ ಬಗ್ಗೆ ಹುಟ್ಟುವ ಪ್ರೇಮ ಹೀಗೆ ಅನೇಕ ಪ್ರೇಮದ ಹರಿವು ಮೆದುಳಿನ ಒಂದೊಂದು ಭಾಗವನ್ನು ಬೆಳಗಿಸುತ್ತದೆ ಎಂದು ಈ ಅಧ್ಯಯನ ಹೇಳಿದೆ.

ಅದರಲ್ಲೂ ಅಚ್ಚರಿ ಅಂದ್ರೆ ಇಬ್ಬರು ವ್ಯಕ್ತಿಗಳ ನಡುವೆ ಹುಟ್ಟುವ ಅನೇಕ ಪ್ರಕಾರ ಪ್ರೇಮಗಳು ಹೆಚ್ಚು ಕಡಿಮೆ ಒಂದೇ ತರನಾಗಿ ಒಂದೇ ಕಡೆ ಪ್ರಭೆಯನ್ನು ಹರಡುತ್ತವೆ. ಆದ್ರೆ ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಹುಟ್ಟುವ ಪ್ರೇಮ ಇದೆಯಲ್ಲ ಅದು ಮೆದುಳಿನ ಮೇಲೆ ಬೇರೆಯದ್ದೇ ಪ್ರಭಾವ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಪ್ರಾಣಿಗಳ ಎಡೆಗೆ ಇರುವ ಪ್ರೀತಿ ಮೆದುಳಿನ ಎಲ್ಲಾ ಭಾಗಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೊಂದು ಪ್ರೀತಿಗೆ ಒಂದೊಂದು ಬೆಳಗು.. ಮೆದುಳಲ್ಲಿ ಮಿನುಗುತ್ತೆ ಪ್ರೀತಿಯ ಪ್ರಭೆ; ಏನಿದು ಹೊಸ ಅಧ್ಯಯನ?

https://newsfirstlive.com/wp-content/uploads/2024/08/LOVE-AND-BRAIN.jpg

Load More