ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಐದು ಹವ್ಯಾಸಗಳಿಂದ ದೂರವಿರಿ
ಅತಿಯಾಗಿ ಟಿವಿ, ಕಂಪ್ಯೂಟರ್, ಮೊಬೈಲ್ ನೋಡುವ ಮುನ್ನ ಎಚ್ಚರವಿರಲಿ
20-20-20 ರೂಲ್ಸ್ ಫಾಲೋವ್, ವೈದ್ಯರ ಸಲಹೆ ಪಡೆಯುವುದು ಮರೆಯದಿರಿ
ಕಣ್ಣುಗಳು ದೇಹದ ಪ್ರಮುಖ ಅಂಗ. ಅವುಗಳನ್ನು ಎಷ್ಟು ರಕ್ಷಣೆ ಮಾಡಿದರೂ ಕಡಿಮೆಯೇ. ಜಾಗತಿಕ ಇಂದಿನ ದಿನಗಳಲ್ಲಿ ಸ್ಕ್ರೀನ್ಗಳ ಮೇಲೆಯೇ ನಮ್ಮ ಕಣ್ಣುಗಳು ನೆಟ್ಟಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ನಿತ್ಯ ಮೊಬೈಲ್ ಬಳಕೆ, ಕಂಪ್ಯೂಟರ್, ಲ್ಯಾಪ್ಟಾಪ್, ಟಿವಿ ಎದುರಿಗೆ ಕೂರುವುದರ ಜೊತೆಗೆ ಹಲವು ಹವ್ಯಾಸಗಳು ನಮ್ಮ ನೇತ್ರಗಳ ಆರೋಗ್ಯದಲ್ಲಿ ತೊಂದರೆಯನ್ನು ತಂದಿಡುತ್ತವೆ. ಕಣ್ಣುಗಳ ಆರೋಗ್ಯವನ್ನು ಕಾಪಾಡಲು ನಾವು ಈ ಐದು ಹವ್ಯಾಸಗಳಿಂದ ದೂರವಿರಬೇಕು ಅನ್ನುತ್ತಾರೆ ಕಣ್ಣಿನ ವೈದ್ಯರು.
ಇದನ್ನೂ ಓದಿ: ಕೆಲಸ ಒತ್ತಡದಲ್ಲಿ ತಿಂಡಿ ತಿನ್ನೋದು ಮರೆಯುತ್ತೀರಾ? ಹಾಗಾದ್ರೆ ನೀವು ಓದಲೇಬೇಕಾದ ಸ್ಟೋರಿ!
ಸ್ಕ್ರೀನ್ಗಳ ಎದುರು ಹೆಚ್ಚು ಸಮಯ ಕಳೆಯುವುದು
ಡಿಜಿಟಲ್ ಐ ಸ್ಟ್ರೇನ್, ಅಂದ್ರೆ ಡಿಜಿಟಲ್ ಸ್ಕ್ರೀನ್ಗಳ ಎದುರು ಹೆಚ್ಚು ಸಮಯ ಕಳೆಯುವುದರಿಂದ ನಮ್ಮ ಕಣ್ಣುಗಳಿಗೆ ಹಾನಿಯಗುವ ಸಾಧ್ಯತೆ ತುಂಬಾ ಇದೆ. ಹೀಗಾಗಿ, ಟಿವಿ ಕಂಪ್ಯೂಟರ್ ಮೊಬೈಲ್ಗಳೊಂದಿಗೆ ಕಳೆಯುವ ಸಮಯ ಹೆಚ್ಚು ಇದ್ದರೆ ಅದು ಕಣ್ಣಿನ ಆರೋಗ್ಯಕ್ಕೆ ಹಾನಿಕಾರಕ ಅದರಲ್ಲೂ ಬ್ಲ್ಯೂ ಡಿಸ್ಪ್ಲೇ ಎದುರು ಹೆಚ್ಚು ಸಮಯ ಕಳೆಯುವುದರಿಂದ ಅದು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ 20-20-20 ರೂಲ್ಸ್ ಅನ್ನು ನಾವು ಕಡ್ಡಾಯವಾಗಿ ಪಾಲಿಸಬೇಕು. ಅಂದ್ರೆ ಪ್ರತಿ 20 ನಿಮಿಷಗಳಿಗೊಮ್ಮೆ ಇಪತ್ತು ಸೆಕೆಂಡ್ ಬ್ರೇಕ್ ತೆಗೆದುಕೊಳ್ಳಬೇಕು. 20 ಅಡಿ ದೂರುವಿರಬೇಕು
ಇದನ್ನೂ ಓದಿ: ತುಂಡಾಗಿದ್ದ ಕೈಯನ್ನು ಜೋಡಿಸುವಲ್ಲಿ ಯಶಸ್ವಿಯಾದ ಶಿವಮೊಗ್ಗ ವೈದ್ಯರು; ಆಪರೇಷನ್ ನಡೆದಿದ್ದೇ ರೋಚಕ!
ವಿಕಿರಣಗಳಿಂದ ಕಣ್ಣಿನ ರಕ್ಷಣೆ
ವಿಕಿರಣಗಳು ಅಂದ್ರೆ ಸೂರ್ಯನ ನೇರ ಕಿರಣಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಅತಿಹೆಚ್ಚು ಬಿಸಿಲಿನಲ್ಲಿ ಕಾಲ ಕಳೆಯುವುದರಿಂದಲೂ ಕಣ್ಣಿ ಆರೋಗ್ಯದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಸನ್ಗ್ಲಾಸ್ಗಳನ್ನು ಬಳಸುವು ರೂಢಿಯನ್ನಿಟ್ಟುಕೊಳ್ಳಬೇಕು. ಅವು ನಿಮ್ಮ ಕಣ್ಣುಗಳನ್ನು ಶೇಕಡಾ 100 ರಷ್ಟು ವಿಕಿರಣಗಳಿಂದ ಕಾಪಾಡುತ್ತವೆ.
ಕಣ್ಣು ನೋವಿನಂತಹ ಲಕ್ಷಣಗಳನ್ನು ನಿರ್ಲಕ್ಷಿಸುವುದು
ಗುರುಗ್ರಾಮದ ಮರೆಂಗಾ ಏಷಿಯಾ ಆಸ್ಪತ್ರೆಯ ವೈದ್ಯರಾದ ಡಾ ಶೀಬಲ್ ಭರ್ತಿಯಾ ಹೇಳುವ ಪ್ರಕಾರ, ಸಾಮಾನ್ಯವಾಗಿ ಪದೇ ಪದೇ ಕಾಡುವ ತಲೆನೋವು, ತೇವಾಂಶ ಕಳೆದುಕೊಂಡ ಕಣ್ಣು ಅಥವಾ ಕಣ್ಣಿನಲ್ಲಿ ನಿಶ್ಯಕ್ತಿ ಇವೆಲ್ಲವೂ ಕಣ್ಣಿನ ಸಮಸ್ಯೆಯ ದೊಡ್ಡ ಮೂಲಗಳು ಹೀಗಾಗಿ ಇಂತಹ ಲಕ್ಷಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಂಡು ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ನೀವು ನಿರ್ಲಕ್ಷ್ಯ ಮಾಡಿದಲ್ಲಿ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಡಾ ಭರ್ತಿಯಾ ಹೇಳುತ್ತಾರೆ.
ಇದನ್ನೂ ಓದಿ: ಈ ವಯಸ್ಸಿನ ಯುವಕರಿಗೆ ಅತೀ ಹೆಚ್ಚು ಹಾರ್ಟ್ ಅಟ್ಯಾಕ್.. ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!
ವೈದ್ಯರ ಸಲಹೆಯಿಲ್ಲದೇ ಔಷಧಿ ತೆಗೆದುಕೊಳ್ಳುವುದು
ಇದು ಎಲ್ಲಕ್ಕಿಂತ ಅತ್ಯಂತ ಅಪಾಯಕಾರಿ ನಡೆ. ಕಣ್ಣುಗಳು ಅತ್ಯಂತ ಸೂಕ್ಷ್ಮವಾದ ಭಾಗ. ಹೀಗಾಗಿ ಏನೇ ಸಮಸ್ಯೆ ಬಂದರೂ ಕೂಡ ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಔಷಧೋಪಚಾರವನ್ನು ಮಾಡಿಕೊಳ್ಳಬೇಕು. ನೀವಾಗಿಯೇ ಪ್ರಚಲಿತದಲ್ಲಿರುವ ಮಾತ್ರೆ, ಡ್ರಾಪ್ಸ್ಗಳನ್ನು ಉಪಯೋಗಿಸುವುದು ಅತ್ಯಂತ ಅಪಾಯಕಾರಿ. ಸಾಮಾನ್ಯವಾಗಿ ಕಣ್ಣಿನ ತೊಂದರೆಯಾದಾಗ ಹತ್ತಿರದ ಮೆಡಿಕಲ್ ಅಂಗಡಿಗೆ ಹೋಗಿ ಸಮಸ್ಯೆಯನ್ನು ಹೇಳಿ ಔಷಧಿಯನ್ನು ಪಡೆದುಕೊಂಡು ಬರೋದು ಕಾಮನ್. ಈ ರೀತಿ ಮಾಡುವುದು ತುಂಬಾ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ. ಅವು ಆ ಕ್ಷಣಕ್ಕ ನಿಮಗೆ ನಿರಾಳತೆ ಕೊಡಬಹುದು ಆದ್ರೆ ಮುಂದೆ ದೀರ್ಘಕಾಲದ ಸಮಸ್ಯೆಯನ್ನು ತಂದಿಡುತ್ತವೆ ಎಂದು ಹೇಳುತ್ತಾರೆ ಕಣ್ಣಿನ ತಜ್ಞರು.
ಅನಿಯಂತ್ರಿತ ಮಧುಮೇಹ ಮತ್ತು ರಕ್ತದೊತ್ತಡ
ನಿಮ್ಮಲ್ಲಿ ಮಿತಿಮೀರಿದ ಸಕ್ಕರೆ ಕಾಯಿಲೆ ಅಥವಾ ಬಿಪಿಯಂತಹ ಸಮಸ್ಯೆಗಳಿದ್ದರೆ ಕೂಡಲೇ ಅವುಗಳನ್ನು ನಿಯಂತ್ರಣಕ್ಕೆ ತರುವುದು ಒಳ್ಳೆಯದು. ಇಲ್ಲವಾದಲ್ಲಿ ಅವು ಕಣ್ಣಿನ ಆರೋಗ್ಯದ ಮೇಲೆಯೂ ಕೂಡ ಪರಿಣಾಮ ಬೀರುತ್ತವೆ. ದೇಹದಲ್ಲಿ ವಿಪರೀತ ಸಕ್ಕರೆ ಕಾಯಿಲೆ ಬೆಳೆಯುವುದಿಂದ ಕಣ್ಣಿನಲ್ಲಿ ಕ್ಯಾಟರಾಕ್ಟ್ ಗ್ಲುಕೋಮಾ ಹಾಗೂ ಕಣ್ಣಿನ ಸೋಂಕುಗಳು ಅಭಿವೃದ್ಧಿಗೊಂಡ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವವರು ಅದನ್ನು ನಿಯಂತ್ರಣಕ್ಕೆ ತಂದುಕೊಳ್ಳುವ ಯತ್ನದಲ್ಲಿ ಸದಾ ಇರಬೇಕು ಇಲ್ಲವಾದರೆ ಕಣ್ಣಿನ ಮೇಲೆಯೂ ಅದರ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ವೈದ್ಯರು ಹೇಳಿದ ಚಸ್ಮಾ ಧರಿಸಬೇಕು
ನಿಮ್ಮಲ್ಲಿ ದೃಷ್ಟಿದೋಷವಿದ್ದು ವೈದ್ಯರು ಯಾವುದಾದರೂ ಗ್ಲಾಸ್ ರೆಕೆಮೆಂಡ್ ಮಾಡಿದ್ದಲ್ಲಿ ಅದನ್ನು ತಪ್ಪದೇ ಹಾಕಿಕೊಳ್ಳಬೇಕು. ಕಳೆದು ಹೋಯ್ತೋ, ಒಡೆದು ಹೋಯ್ತೋ ಎಂದು ಅದನ್ನು ಅಲ್ಲಿಗೆ ನಿಲ್ಲಿಸಕೂಡದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಬೇರೆಯದೊಂದು ಗ್ಲಾಸ್ ತೆಗೆದುಕೊಂಡು ಕಣ್ಣಿಗೆ ಹಾಕಿಕೊಳ್ಳುವುದನ್ನು ಮುಂದುವರಿಸಬೇಕು. ಒಂದು ವೇಳೆ ನೀವು ಚಾಳೀಸು ಬಳಿಸುವುದನ್ನು ನಿಲ್ಲಿಸದರೆ ಅಥವಾ ಅನಿಯಮಿತವಾಗಿ ಬಳಸುತ್ತ ಬಂದರೆ ಕಣ್ಣಿನ ಆರೋಗ್ಯದ ಮೇಳೆ ಋಣಾತ್ಮಕ ಪರಿಣಾಮ ಬೀರುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಮ್ಮ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇರುವ ದೃಷ್ಟಿದೋಷನ್ನು ತಿಳಿದು ವೈದ್ಯರು ಹೇಳುವ ಸೂಚನೆಯನ್ನು ಪಾಲಿಸಬೇಕು. ಈ ಐದು ಹವ್ಯಾಸಗಳನ್ನು ಬೆಳೆಸಬೇಕು ಅಥವಾ ಇವುಗಳಿಂದ ದೂರ ಉಳಿಯಬಾರದು. ಆಗಲೇ ನಿಮ್ಮ ಅಕ್ಷಿಪಟಲದ ಆರೋಗ್ಯ ಸದೃಢವಾಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ