Sunday Special: ಮನೆಯಲ್ಲೇ ಮಾಡಿ ಚಿಕನ್​​ ಮುಮ್ತಾಜ್.. ​ಸಿಂಪಲ್​ ರೆಸಿಪಿ 10 ನಿಮಿಷದಲ್ಲೇ ರೆಡಿ

author-image
AS Harshith
Updated On
Sunday Special: ಮನೆಯಲ್ಲೇ ಮಾಡಿ ಚಿಕನ್​​ ಮುಮ್ತಾಜ್.. ​ಸಿಂಪಲ್​ ರೆಸಿಪಿ 10 ನಿಮಿಷದಲ್ಲೇ ರೆಡಿ
Advertisment
  • ಕಡಿಮೆ ಸಮಯದಲ್ಲಿ ಮಾಡಬಹುದಾದ ಚಿಕನ್​ ರೆಸಿಪಿ
  • ಭಾನುವಾರದ ಬಾಡೂಟಕ್ಕೆ ಹೇಳಿ ಮಾಡಿಸಿದ ಚಿಕನ್​ ಮುಮ್ತಾಜ್
  • ಚಿಕನ್​ ಮುಮ್ತಾಜ್ ಮಾಡೋದು ತುಂಬಾ ಸುಲಭ.. ಇಲ್ಲಿದೆ ವಿಧಾನ

ಆಫೀಸು, ಕೆಲಸದ ಒತ್ತಡದ ಜೊತೆಗೆ ಭಾನುವಾರ ಬಂದರೆ ಸಾಕಪ್ಪಾ ಅನ್ನೋ ಜನರೇ ಜಾಸ್ತಿ. ಅದರಲ್ಲೂ ಆದಿತ್ಯವಾರ ಬಂತೆಂದರೆ ಫ್ಯಾಮಿಲಿ ಜೊತೆಗೆ ಸಮಯ ಕಳೆಯಲು ಬಯಸುತ್ತಾರೆ. ಇನ್ನು ಕೆಲವರು ಕುಟುಂಬದ ಜೊತೆಗೆ ಮನೆಯಿಂದ ಹೊರಗೆ ಹೋಗಲು ಬಯಸುತ್ತಾರೆ. ಹೋಟೆಲ್​, ರೆಸ್ಟೋರೆಂಟ್​ಗೆ ತೆರಳಿ ರುಚಿಯಾದ ಆಹಾರ ಸವಿಯುತ್ತಾರೆ. ಆದರೆ ಇನ್ನು ಕೆಲವರು ಹಾಗಲ್ಲ ಮನೆಯಲ್ಲೇ ಹೊಸ ಹೊಸ ರೆಸಿಪಿ ಮಾಡುತ್ತಾ ಆಹಾರ ಮಾಡುತ್ತಾ ಕುಟುಂಬದವರ ಜೊತೆಗೆ ಸವಿಯುತ್ತಾರೆ. ಅದರಂತೆ ಸದ್ಯ ಶ್ರಾವಣ ಮಾಸ ಆದರೂ ಕೆಲವರು ಮಾಂಸಹಾರ ಸವಿಯುತ್ತಾರೆ. ಅಂತವರಿಗಾಗಿ ಚಿಕನ್​ ಮುಮ್ತಾಜ್​ ಮಾಡುವ ಸರಳ ವಿಧಾನವನ್ನು ಇಲ್ಲಿ ನೀಡಲಾಗಿದೆ. ಒಂದು ಬಾರಿ ಟ್ರೈ ಮಾಡಿ ನೋಡಿ . ಮನೆಯಲ್ಲಿಯೇ ಭರ್ಜರಿ ಬಾಡೂಟ ಮಾಡಿ.

ಬೇಕಾಗುವ ಸಾಮಾಗ್ರಿಗಳು

ಚಿಕನ್- 1 KG

ಅಡುಗೆ ಎಣ್ಣೆ- ಅಡುಗೆಗೆ ಬೇಕಾದಷ್ಟು

ತುಂಡರಿಸಿದ ನೀರುಳ್ಳಿ- 2

ಟೊಮೊಟೊ- 2

ಹಸಿರು ಮೆಣಸಿನಕಾಯಿ- 7

ಚಕ್ರಮೊಗ್ಗು- 1

ಲವಂಗ- 6

ಕಾಳುಮೆಣಸು- 1/2 ಚಮಚ

(ಇದಲ್ಲದೆ, ಶುಂಠಿ ರಸ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ. ಕರಿಮೆಣಸಿನ ಪುಡಿ, ಉಪ್ಪು, ದನದ ತುಪ್ಪ, ಮೊಸರು, ಪ್ರೆಶ್​​ ಕ್ರೀಮ್​, ಗರಂ ಮಸಾಲ, ಮೆಂತೆ ಎಲೆ ಪುಡಿ)

ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಅಡುಗೆ ಎಣ್ಣೆ ಹಾಕಬೇಕು. ನಂತರ ತುಂಡರಿಸಿದ ನೀರುಳ್ಳಿಯನ್ನು ಹಾಕಿ ಪ್ರೈ ಮಾಡಬೇಕು. ಬಳಿಕ ತುಂಡರಿಸಿದ ಟೊಮೆಟೊ ಮತ್ತು 3 ತುಂಡರಿಸಿದ ಹಸಿ ಮೆಣಸು ಹಾಕಿ ಹದವಾಗಿ ಪ್ರೈ ಮಾಡಬೇಕು. ಬಳಿಕ ಬಾಣಲೆಯಿಂದ ಅದನ್ನು ತೆಗೆದು ತಣ್ಣನೆಯಾದ ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ.

ಇದನ್ನೂ ಓದಿ: ನಗು ನಗುತ್ತಾ ಇರು ಶಿಖರ್​.. ನಿವೃತ್ತಿ ಘೋಷಿಸಿದ ಗಬ್ಬರ್​ ಸಿಂಗ್​ಗೆ ಬೆನ್ನು ತಟ್ಟುವ ನುಡಿಗಳನ್ನಾಡಿದ ಸಚಿನ್​ ​​

publive-image

ನಂತರ ಅಡುಗೆ ಎಣ್ಣೆಯಲ್ಲಿ ಒಂದು ಚಕ್ರಮೊಗ್ಗು, 6 ಲವಂಗ, 1/2 ಚಮಚ ಕರಿ ಮೆಣಸು ಹಾಕಬೇಕು. ನಂತರ ಅದಕ್ಕೆ ಶುಚಿಯಾಗಿ ತುಂಡರಿಸಿದ್ದ 1 ಕೆ.ಜಿ ಚಿಕನ್​ ಹಾಕಬೇಕು. ಹದವಾಗಿ ಬೇಯಿಸಬೇಕು. ಬಳಿಕ ಅದೇ ಚಿಕನ್​ಗೆ 2 ಚಮಚ ಶುಂಠಿ ರಸ ಸೇರಿಸಿ, 1/2 ಚಮಚ ಅರಿಶಿನ ಪುಡಿ, 2 ಚಮಚ ಕೊತ್ತಂಬರಿ ಪುಡಿ, ಜೀರಿಗೆ ಪುಡಿ 1 ಚಮಚ, ಕರಿ ಮೆಣಸಿನ ಪುಡಿ 1 ಚಮಚ, ಉಪ್ಪು 1 ಚಮಚ​ ಹಾಕಿ ಮಿಕ್ಸ್​ ಮಾಡಬೇಕು.

ಬಳಿಕ 3 ಗ್ಲಾಸ್​ ನೀರು ಸೇರಿಸಬೇಕು. ಅದಾದ ಬಳಿಕ ರುಬ್ಬಿಟ್ಟಿರುವ ಟೊಮೆಟೊ, ನೀರುಳ್ಳಿ, ಹಸಿ ಮೆಣಸಿನ ಹಿಟ್ಟನ್ನು ಅದಕ್ಕೆ ಸೇರಿಸಿ ಹದವಾಗಿ ಬೇಯಿಸುತ್ತಿರಿ. ಬೇಯುತ್ತಿದ್ದಂತೆಯೇ ಅದಕ್ಕೆ 1 ಕಪ್​ ಮೊಸರು ಹಾಕಿ ಚಮಚದಲ್ಲಿ ಮಿಕ್ಸ್​ ಮಾಡಿ. ನಂತರ ಮುಚ್ಚಳವನ್ನು ಹಾಕಿ 2 ನಿಮಿಷ ಹಾಗೆಯೇ ಬಿಡಿ.

ಇದನ್ನೂ ಓದಿ: ಸುನೀತಾ ವಿಲಿಯಮ್ಸ್​​ ವಾಪಾಸಾತಿ ಸದ್ಯ ಭಾರೀ ಅಪಾಯಕಾರಿ.. ನಾಸಾದಿಂದ ಅಚ್ಚರಿಯ ಹೇಳಿಕೆ!

ಬೆಂದ ನಂತರ 1/4 ಕಪ್​ ಫ್ರೆಶ್​​ ಕ್ರೀಮ್​, 1/2 ಚಮಚ ಗರಂ ಮಸಾಲಾ ಮತ್ತು ರುಚಿಗೆ ಬೇಕಾದಷ್ಟು ಮೆಂತೆ ಎಲೆ ಪುಡಿಯನ್ನು ಸೇರಿಸಬೇಕು ಬಳಿಕ 3 ನಿಮಿಷಗಳ ಕಾಲ ಬೇಯಲು ಬಿಡಿ.

ಇವಿಷ್ಟು ಆದ ಬಳಿಕ ಮತ್ತೊಂದು ಶುಚಿಯಾದ ಬಾಣಲೆ ತೆಗೆದುಕೊಂಡು ಅದಕ್ಕೆ 1/4 ಚಮಚ ತುಪ್ಪವನ್ನು ಹಾಕಿ. ಅದಕ್ಕೆ 5ರಿಂದ 6 ಉದ್ದವಾಗಿ ಕತ್ತರಿಸಿದ ಹಸಿಮೆಣಸನ್ನು ಹಾಕಿ. 2 ನಿಮಿಷ ಕಳೆದ ಬಳಿಕ ಒಗ್ಗರಣೆಯಂತಾದ ತುಪ್ಪ ಮತ್ತು ಹಸಿಮೆಣಸಿನಿಂದ ಕೂಡಿದ ತುಪ್ಪವನ್ನು ಚಿಕನ್​ ಪದಾರ್ಥ ಮೇಲೆ ಹಾಕಿ. ಈಗ ಚಿಕನ್​ ಮುಮ್ತಾಜ್​ ರೆಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment