newsfirstkannada.com

4, 4, 4, 4, 4, 4, 6, 6, 6.. ಲಕ್ನೋ ವಿರುದ್ಧ ಹಾಫ್​ಸೆಂಚುರಿ ಸಿಡಿಸಿದ ಸುನೀಲ್ ನರೈನ್

Share :

Published May 5, 2024 at 8:31pm

Update May 5, 2024 at 8:37pm

  ಈಗಾಗಲೇ ಐಪಿಎಲ್​ನಲ್ಲಿ ಸೆಂಚುರಿ ಸಿಡಿಸಿರುವ ನರೈನ್

  ಲಕ್ನೋದ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ

  ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರಾಹುಲ್

ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಓಪನರ್ ಸುನೀಲ್ ನರೈನ್ ಅದ್ಭುತ ಬ್ಯಾಟಿಂಗ್​ನಿಂದ ಹಾಫ್ ಸೆಂಚುರಿ ಸಿಡಿಸಿದ್ದಾರೆ.

ಟಾಸ್ ಗೆದ್ದುಕೊಂಡ ಲಕ್ನೋ ಸೂಪರ್ ಜೆಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಅವರು ಫೀಲ್ಡಿಂಗ್ ಆಯ್ದುಕೊಂಡರು. ಓಪನರ್ಸ್ ಆಗಿ ಮೈದಾನಕ್ಕೆ ಆಗಮಿಸಿದ ಪಿಲಿಫ್ ಸಾಲ್ಟ್​ ಮತ್ತು ಸುನೀಲ್ ನರೈನ್ ಭರ್ಜರಿ ಓಪನಿಂಗ್ ಪಡೆದುಕೊಂಡರು. 32 ರನ್​ ಗಳಿಸಿ ಆಡುವಾಗ ಸಾಲ್ಟ್​ ನವೀನ್ ಉಲ್ ಹಕ್ ಬೌಲಿಂಗ್​ನಲ್ಲಿ ಔಟ್ ಆದರು. ಆದರೆ ಕ್ರೀಸ್ ಕಾಯ್ದುಕೊಂಡ ಸುನೀಲ್ ನರೈನ್ ಅವರು ಅಮೋಘ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಧೋನಿ ಡಕೌಟ್​.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

28 ಬಾಲ್​ಗಳನ್ನ ಎದುರಿಸಿದ ಸುನೀಲ್ ನರೈನ್ ಅವರು 6 ಫೋರ್ ಹಾಗೂ 3 ಭರ್ಜರಿ ಸಿಕ್ಸರ್ ಸಮೇತ ಹಾಫ್ ಸೆಂಚುರಿ ಬಾರಿಸಿದರು. ಈ ಮೂಲಕ 2024ರ ಐಪಿಎಲ್​ ಟೂರ್ನಿಯಲ್ಲಿ 400 ರನ್​ಗಳ ಗಡಿಯನ್ನು ದಾಟಿದರು. ಸದ್ಯ ನರೈನ್ ಅವರ ಭರ್ಜರಿ ಬ್ಯಾಟಿಂಗ್​ನಿಂದ 10 ಓವರ್​ಗಳಲ್ಲಿ 111 ರನ್ ಸಿಡಿಸಿ ಕೆಕೆಆರ್ ಬ್ಯಾಟಿಂಗ್ ಮುಂದುವರೆಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

4, 4, 4, 4, 4, 4, 6, 6, 6.. ಲಕ್ನೋ ವಿರುದ್ಧ ಹಾಫ್​ಸೆಂಚುರಿ ಸಿಡಿಸಿದ ಸುನೀಲ್ ನರೈನ್

https://newsfirstlive.com/wp-content/uploads/2024/05/KKR-1.jpg

Load More