newsfirstkannada.com

ಕಾವ್ಯ ಮಾರನ್ ಕಣ್ಣೀರ ಧಾರೆ ಹಿಂದೆ ಅದೊಂದು ದೊಡ್ಡ ಕನಸಿತ್ತು.. ಆದ್ರೆ ಡ್ರೀಮ್​ ಎಲ್ಲ ಈಗ ಛಿದ್ರ ಛಿದ್ರ, ಏನದು?

Share :

Published May 27, 2024 at 1:17pm

    ಮೂರು ಖಡಕ್ ನಿರ್ಧಾರ ತೆಗೆದುಕೊಂಡಿದ್ದ ಕಾವ್ಯ.. ಲಕ್​​ ಚೇಂಜ್!

    ಕಳೆದ ಸೀಸನ್​​ನಲ್ಲಿ ಅತಿಕೆಟ್ಟ ಪ್ರದರ್ಶನ ನೀಡಿದ್ದ ಹೈದ್ರಾಬಾದ್ ತಂಡ

    ಗಟ್ಟಿಗಿತ್ತಿ ತಂಡದ ಒಡತಿ ಕಾವ್ಯ ಮಾರನ್​ಗೆ ಬಿಗ್ ಥ್ಯಾಂಕ್ಸ್​​ ಹೇಳಬೇಕು

ಕಳೆದ ಸೀಸನ್​ನಲ್ಲಿ ಪಾತಾಳಕ್ಕೆ ಕುಸಿದಿದ್ದ ತಂಡ. ಆದ್ರೆ ಈ ಬಾರಿ ಅದೇ ತಂಡ ರನ್ನರ್​​ಅಪ್​​​ ಆಗಿದೆ. ಇದಕ್ಕೆಲ್ಲ ಕಾರಣ ಒಡತಿ ಕಾವ್ಯ ಮಾರನ್​​ ತೆಗೆದುಕೊಂಡ ಆ ಮೂರು ದಿಟ್ಟ ನಿರ್ಧಾರ. ಆ ನಿರ್ಧಾರ ಹೈದ್ರಾಬಾದ್​​ ತಂಡ ಫೈನಲ್ ಪ್ರವೇಶ ಮಾಡುವಂತೆ ಮಾಡ್ತು. ಅಷ್ಟಕ್ಕೂ ಗಟ್ಟಿಗಿತ್ತಿ ಕಾವ್ಯಾ ತೆಗೆದುಕೊಂಡ ಆ ಬೋಲ್ಡ್​ ಡಿಶಿಷನ್ಸ್​ ಯಾವುವು?.

ಕೆಕೆಆರ್ ಎದುರಿನ ಫೈನಲ್​​ ದಂಗಲ್​​ನಲ್ಲಿ ಹೈದ್ರಾಬಾದ್​​ ಸೋತು ಟ್ರೋಫಿ ಕೈಚೆಲ್ಲಿದೆ. ಸೋಲಿನ ನೋವು ತಡೆಯಲಾಗದೇ ಫ್ರಾಂಚೈಸಿ ಒಡತಿ ಕಾವ್ಯ ಮಾರನ್​​ ಕಣ್ಣೀರು ಸುರಿಸಿದ್ದಾರೆ. ಕಾವ್ಯರ ಈ ಕಣ್ಣೀರ ಧಾರೆ ಹಿಂದೆ ಒಂದು ದೊಡ್ಡ ಕನಸಿತ್ತು. ಆದ್ರೀಗ ಕನಸಿನ ಗೋಪುರ ಛಿದ್ರವಾಗಿದೆ.

ಇದನ್ನೂ ಓದಿ: KKRTC ಬಸ್​- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು​

ತಲಾ ಸರ್​​ಗೆ ನನ್ನದೊಂದು ಮನವಿ. ಮುಂದಿನ ಸಲ ಸನ್​ರೈಸರ್ಸ್​ ಹೈದ್ರಾಬಾದ್​​​​ ತಂಡಕ್ಕೆ ಒಳ್ಳೆ ಆಟಗಾರರನ್ನ ಖರೀದಿಸಿ. ಹೈದ್ರಾಬಾದ್​ ಪಂದ್ಯ ನಡೆಯುವಾಗ ಕಾವ್ಯ ಕೊಡುವ ಎಕ್ಸ್​​ಪ್ರೆಶನ್​​​ ನೋಡಿದ್ರೆ, ನಮಗೆ ಟೆನ್ಷನ್ ಆಗುತ್ತೆ. ಕಾವ್ಯಾಳನ್ನ ನೋಡಿದ್ರೆ ನಮಗೆ ಬಿಪಿ ಹೆಚ್ಚಾಗುತ್ತೆ.

10ನೇ ಸ್ಥಾನದಿಂದ ಸಿಡಿದೆದ್ದು ರನ್ನರ್​​​​​ಅಪ್​​​​​​ ಸಾಧನೆ

ಸೂಪರ್ ಸ್ಟಾರ್ ರಜನಿಕಾಂತ್​ ಆಡಿದ ಈ ಒಂದೇ ಒಂದು ಮಾತು ಹೈದ್ರಾಬಾದ್​​ ತಂಡದ ಹಣೆ ಬರಹವನ್ನೇ ಬದಲಿಸಿದೆ. ಕಳೆದ ಸೀಸನ್​​ನಲ್ಲಿ ಹೈದ್ರಾಬಾದ್ ಅತಿಕೆಟ್ಟ ಪ್ರದರ್ಶನ ನೀಡಿತ್ತು.10ನೇ ಸ್ಥಾನಕ್ಕೆ ತೃಪ್ತಿಪಟ್ಟು ತೀವ್ರ ಮುಖಭಂಗ ಅನುಭವಿಸಿತ್ತು. ಇಂತಹ ತಂಡವೇ ಈಗ ಫಿನಿಕ್ಸ್​​​​​​​​ನಂತೆ ಮೇಲೆದ್ದು 17ನೇ ಐಪಿಎಲ್​​​​ನಲ್ಲಿ ರನ್ನರ್​​​​ ಅಪ್​​ ಆಗಿದೆ. ಇದಕ್ಕೆಲ್ಲಾ ಕಾರಣ ಒಡತಿ ಕಾವ್ಯಾ ಮಾರನ್. ಈಕೆ ತೆಗೆದುಕೊಂಡು ಆ ಮೂರು ಅಗ್ರೆಸ್ಸಿವ್​ ನಿರ್ಧಾರಗಳು ತಂಡದ ಚರಿಷ್ಮಾ ಬದಲಿಸ್ತು.

ನಿರ್ಧಾರ ನಂ.1- 20.5 ಕೋಟಿ ರೂಗೆ ಕಮಿನ್ಸ್ ಖರೀದಿ

ತಲೈವಾ ರಜನಿಕಾಂತ್​​ ತುಂಬಿದ ಸಭೆಯಲ್ಲಿ ಪ್ಲೀಸ್​ ಹೈದ್ರಾಬಾದ್​ ತಂಡಕ್ಕೆ ಒಳ್ಳೆ ಆಟಗಾರರನ್ನ ಖರೀದಿಸಿ ಅಂತ ಫ್ರಾಂಚೈಸಿ ಒಡತಿ ಕಾವ್ಯ ಮಾರನ್​​ಗೆ ರಿಕ್ವೆಸ್ಟ್ ಮಾಡಿದ್ರು. ಇದನ್ನೆ ಸವಾಲಾಗಿ ಸ್ವೀಕರಿಸಿ 2023 ಐಪಿಎಲ್ ಆಕ್ಷನ್​ನಲ್ಲಿ ಬಿಗ್​​​ ಫಿಶ್​​ಗೆ ಗಾಳ ಹಾಕಿದ್ರು. ಬರೋಬ್ಬರಿ 20.5 ಕೋಟಿ ನೀಡಿ ಆಸಿಸ್ ಚಾಂಪಿಯನ್ ಕ್ಯಾಪ್ಟನ್​ ಪ್ಯಾಟ್ ಕಮಿನ್ಸ್​​ ಖರೀದಿಸಿದ್ರು. ಕಮಿನ್ಸ್​ ಹೈದ್ರಾಬಾದ್​ ನಾಯಕನ ಪಟಕ್ಕೇರಿದ್ದ ಬಳಿಕ ತಂಡಕ್ಕೆ ಹೊಸ ಹುಮ್ಮಸ್ಸು ತುಂಬಿದ್ರು. ಎಲ್ಲರಿಗೂ ಅಗ್ರೆಸ್ಸಿವ್ ಪಾಠ ಬೋಧಿಸಿದ್ರು. ಅದರ ಪರಿಣಾಮದ ರಿಸಲ್ಟ್​ ನಮ್ಮ ಕಣ್ಣು ಮುಂದಿದೆ.

ನಿರ್ಧಾರ ನಂ.2: ವೆಟೋರಿಗೆ ಹೆಡ್​ಕೋಚ್​ ಆಗಿ ಬಡ್ತಿ

ಕಾವ್ಯ ಮಾರನ್​​​ ಬರೀ ಉತ್ತಮ ಆಟಗಾರರನ್ನೇ ಖರೀದಿಸಲ್ಲ. ಟೀಮ್ ಮ್ಯಾನೇಜ್​​ಮೆಂಟ್​​ಗೂ ಸರ್ಜರಿ ಮಾಡಿದ್ರು. ಹೆಡ್​ಕೋಚ್​ ಆಗಿದ್ದ ದಿಗ್ಗಜ ಬ್ರಿಯಾನ್​​​ ಲಾರಾಗೆ ಗೇಟ್​ಪಾಸ್​​ ನೀಡಿದ್ರು. ಅವರ ಸ್ಥಾನಕ್ಕೆ ಡೇನಿಯಲ್​​ ವೆಟೋರಿಯನ್ನ ತಂದು ಕೂರಿಸಿದ್ರು. ಈ ಸ್ಟ್ರಾಟಜಿ ವರ್ಕ್​ ಆಯ್ತು. ಕೂಲ್​ ಕಮಿನ್ಸ್ ಹಾಗೂ ಕೂಲ್​​ ವೆಟೋರಿ ಕೂಡಿಕೊಂಡು ತಂಡವನ್ನ ಪ್ರಶಸ್ತಿ ರೇಸ್​​ಗೆ ಕೊಂಡೊಯ್ದರು.

ಇದನ್ನೂ ಓದಿ: ಮಾಡೆಲ್​ ಜೊತೆ ಅಭಿಷೇಕ್​ ಶರ್ಮಾ ಲವ್.. ಆತ್ಮಹತ್ಯೆ ಕೇಸ್​ನಲ್ಲಿ ಹೊರ ಬಂದು ಬ್ಯಾಟ್​ ಬೀಸಿದ್ದೇ ರೋಚಕ

ನಿರ್ಧಾರ ನಂ.3- ಜಿದ್ದಿಗೆ ಬಿದ್ದು ಕ್ಲಾಸೆನ್​ಗೆ ಮಣೆ

ಹೆನ್ರಿಚ್​ ಕ್ಲಾಸೆನ್​​​​ ವಿಧ್ವಸಂಕ ಆಟಕ್ಕೆ ಎತ್ತಿದ ಕೈ. ಪ್ರಸಕ್ತ ಐಪಿಎಲ್​​ನಲ್ಲಿ ವಿಸ್ಫೋಟಕ ಆಟವಾಡಿ ಹೈದ್ರಾಬಾದ್​ ಗತ್ತನ್ನೆ ಬದಲಿಸಿದ್ದಾನೆ. ಇಂತಹ ಕ್ಲಾಸೆನ್​​​ 2023ರ ಹರಾಜಿನಲ್ಲಿ ಮೊದಲು ಡೆಲ್ಲಿ ಪಾಲಾಗಿದ್ರು. ಆದ್ರೆ ಕೊನೇ ಕ್ಷಣದಲ್ಲಿ ಕಾವ್ಯ ಮಾರನ್ ಕೂಡ ಬಿಡ್​​ ಮಾಡೋ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ರು. ಇದನ್ನ ನೋಡಿದ ಆಕ್ಷನರ್, 3 ಬಾರಿ ಹ್ಯಾನರ್​ ಬಾರಿಸಿದ್ರೂ​ ಕೂಡ ಮತ್ತೆ ಬಿಡ್ಡಿಂಗ್​ ಮುಂದುವರೆಸಿದ್ರು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ಜೊತೆಗೆ ಜಿದ್ದಿಗೆ ಬಿದ್ದ ಕಾವ್ಯ, ಹೆನ್ರಿಚ್​ ಕ್ಲಾಸೆನ್​ನ 5.25 ಕೋಟಿ ಕೊಟ್ಟು ಖರೀದಿಸೇ ಬಿಟ್ರು. ಅಂದೇನಾದ್ರು ಕಾವ್ಯ ಮಾರನ್​​​ ಕ್ಲಾಸೆನ್​​ರನ್ನ ಖರೀದಿಸದಿದ್ರೆ, ಹೈದ್ರಾಬಾದ್​​​​ ತಂಡದಿಂದ ಇಂತಹ ಸಾಧನೆ ಸಾಧ್ಯವೇ ಆಗುತ್ತಿರಲಿಲ್ಲ.

ಇದನ್ನೂ ಓದಿ: IPL ಫೈನಲ್​ ಮ್ಯಾಚ್​​ನಲ್ಲಿ ಕ್ಯಾಮೆರಾಮೆನ್​ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್​..?

ಎನಿವೇ ಕಾವ್ಯ ಮಾರನ್​ರ ಈ 3 ಅಗ್ರೆಸ್ಸಿವ್ ನಿರ್ಧಾರಕ್ಕೆ ತಂಡಕ್ಕೆ ರನ್ನರ್​​​​​​​​ಅಪ್ ಪಟ್ಟ ಒಲಿದಿದೆ. ಕೂದಲೆಳೆ ಅಂತರದಲ್ಲಿ ಟ್ರೋಫಿ ಮಿಸ್ಸಾಗಿರಬಹುದು. ಆದ್ರೆ ಟೂರ್ನಿಯುದ್ದಕ್ಕೂ ಹೈದ್ರಾಬಾದ್​ ತಂಡ ಕೊಟ್ಟ ಮನರಂಜನೆ ಇದೆ ಅಲ್ಲ, ಅದು ನಿಜಕ್ಕೂ ನೆಕ್ಸ್ಟ್​​ ಲೆವೆಲ್​​. ಇಂತಹ ಮನರಂಜನೆ ನೀಡಲು ಕಾರಣವಾದ ಗಟ್ಟಿಗಿತ್ತಿ, ತಂಡದ ಒಡತಿ ಕಾವ್ಯ ಮಾರನ್​ಗೆ ಬಿಗ್ ಥ್ಯಾಂಕ್ಸ್​​ ಹೇಳಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಾವ್ಯ ಮಾರನ್ ಕಣ್ಣೀರ ಧಾರೆ ಹಿಂದೆ ಅದೊಂದು ದೊಡ್ಡ ಕನಸಿತ್ತು.. ಆದ್ರೆ ಡ್ರೀಮ್​ ಎಲ್ಲ ಈಗ ಛಿದ್ರ ಛಿದ್ರ, ಏನದು?

https://newsfirstlive.com/wp-content/uploads/2024/05/KAVYA_MARAN.jpg

Load More