/newsfirstlive-kannada/media/post_attachments/wp-content/uploads/2024/05/SRH-VS-RCB.jpg)
ನಿನ್ನೆ ಹೈದರಾಬಾದ್​ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿದೆ. ಪಂದ್ಯ ರದ್ದಾದ ಹಿನ್ನೆಲೆ ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ. ಇದರೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್‌ಗೆ ಅಧಿಕೃತವಾಗಿ ಪ್ರವೇಶ ಗಿಟ್ಟಿಸಿಕೊಂಡಿದೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?
/newsfirstlive-kannada/media/post_attachments/wp-content/uploads/2024/04/SRH_ABHISHEK.jpg)
ಪ್ಲೇ-ಆಫ್​ ರೇಸ್​ನ ಮೂರನೇ ಅಥವಾ ನಾಲ್ಕನೇ ಸ್ಥಾನ ಹೈದರಾಬಾದ್​​ಗೆ ಕನ್ಫರ್ಮ್ ಆಗಿದೆ. ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಸಿಎಸ್​ಕೆ ನಾಳೆ ಆರ್​ಸಿಬಿ ತಂಡವನ್ನು ಎದುರಿಸಲಿದೆ. ಒಂದು ವೇಳೆ ಆರ್​ಸಿಬಿ ಸಿಎಸ್​ಕೆಯನ್ನು 18 ರನ್​​ಗಳ ಅಂತರ ಅಥವಾ 18.1 ಓವರ್​ಒಳಗೆ ಗೆಲುವು ಸಾಧಿಸಿದ್ರೆ ಆರ್​ಸಿಬಿ ಪ್ಲೇ-ಆಫ್​ಗೆ ಪ್ರವೇಶ ಮಾಡಲಿದೆ. ಸಾಧಾರಣ ಗೆಲುವು ಸಾಧಿಸಿದ್ರೆ ಆರ್​ಸಿಬಿ ಪಾಯಿಂಟ್ಸ್ 14ಕ್ಕೆ ಏರಿಕೆ ಆಗಲಿದೆ. ಆದರೆ, ಪ್ಲೇ-ಫ್ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ. ರನ್​ ರೇಟ್​ನಲ್ಲಿ ಮುಂದಿರುವ ಸಿಎಸ್​ಕೆ ಪ್ಲೇ-ಆಫ್​ ಪ್ರವೇಶ ಮಾಡಲಿದೆ.
ಒಂದು ವೇಳೆ ನಿನ್ನೆಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಹೈದರಾಬಾದ್ ತಂಡವು ಸೋತು, ಮೇ 19 ರಂದು ಪಂಜಾಬ್ ವಿರುದ್ಧವೂ ಸೋತಿದ್ದರೆ ಆರ್​ಸಿಬಿಗೆ ಸುಲಭ ಗೆಲುವು ಸಿಕ್ಕರೂ ಸಾಕಾಗಿತ್ತು. ಪ್ಲೇ-ಆಫ್​ಗೆ ಹೋಗುವ ಅವಕಾಶ ಇತ್ತು. ಆದರೆ ನಾಳೆ ನಡೆಯುವ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಭರ್ಜರಿ ಗೆಲುವು ಪಡೆಯಲೇಬೇಕಿದೆ ಆರ್​ಸಿಬಿ.
ಇದನ್ನೂ ಓದಿ:ಟಿಕೆಟ್ ತೋರಿಸಿ ಎಂದಿದ್ಕೆ ಚಾಕು ಹಾಕೇ ಬಿಟ್ಟ.. ಚಾಲುಕ್ಯ ರೈಲಿನಲ್ಲಿ ನಡೀತು ಬರ್ಬರ ಕೊಲೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us