ಜೈಲರ್ ಸಿನಿಮಾ ನೋಡಿ ಖುಷಿಯಲ್ಲಿದ್ದ ಫ್ಯಾನ್ಸ್ಗೆ ಸಂತಸದ ಸುದ್ದಿ
ಮತ್ತೊಮ್ಮೆ ಯುವ ನಿರ್ದೇಶಕನಿಗೆ ಕಾಲ್ಶೀಟ್ ಕೊಟ್ಟ ಸೂಪರ್ ಸ್ಟಾರ್
ಜೈಭೀಮ್ ಡೈರೆಕ್ಟರ್ ಜೊತೆ 171ನೇ ಚಿತ್ರ ಮಾಡಲಿರುವ ತಲೈವಾ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದ್ದಾರೆ. ಇದೀಗ ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅವರ 171ನೇ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮತ್ತೊಮ್ಮೆ ನೆಚ್ಚಿನ ನಟನನ್ನು ಬಿಗ್ಸ್ಕ್ರೀನ್ನಲ್ಲಿ ನೋಡಲು ರಜನಿಕಾಂತ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನೂ, ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣಗೊಳ್ಳುತ್ತಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಚಿತ್ರಕ್ಕೆ ತಾತ್ಕಾಲಿಕವಾಗಿ ತಲೈವರ್ 171 ಎಂದು ಹೆಸರಿಡಲಾಗಿದೆ. ವಿಶೇಷ ಎಂದರೆ ಈ ಸಿನಿಮಾಗೂ ಅನಿರುದ್ಧ್ ಅವರು ಸಂಗೀತ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಹೊಸ ಹೊಸ ಅಪ್ಡೇಟ್ಗಳು ಹೊರಬೀಳಲಿದೆ.
ಇದನ್ನು ಓದಿ: ರಜನಿ ಹಿಮಾಲಯದ ಭೇಟಿ ರಹಸ್ಯವೇನು.. ತಲೈವಾಗೆ ಸೂಪರ್ ಶಕ್ತಿ ಕೊಡ್ತಿದ್ಯಾ ಬಾಬಾ ಕೊಟ್ಟ ಆ ಬೇರು?
ವಿಕ್ರಮ್, ಲಿಯೋ ಚಿತ್ರಗಳ ಖ್ಯಾತಿಯ ಲೋಕೇಶ್ ಕನಕರಾಜ್ ಅವರು ಮೊದಲ ಬಾರಿಗೆ ಸನ್ ಪಿಚ್ಚರ್ಸ್ ಜೊತೆ ರಜನಿ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಮಾಹಿತಿ ಪ್ರಕಾರ 2024 ಫೆಬ್ರವರಿಯಲ್ಲಿ ರಜಿನಿ 171ನೇ ಚಿತ್ರ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗಿದೆ. ಜೈಲರ್ ಚಿತ್ರವು ರಿಲೀಸ್ ಆಗಿ 600 ರಿಂದ 635 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಆಗಸ್ಟ್ 10ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಜೈಲರ್ ಒಟ್ಟು 10 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ವಿನಾಯಕನ್, ರಮ್ಯಾ ಕೃಷ್ಣನ್ ಮತ್ತು ವಸಂತ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೋಹನ್ಲಾಲ್, ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಮತ್ತು ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ