ಕಂಗನಾ ರಣಾವತ್ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕಿ
ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್ಗೆ ಟಿಕೆಟ್ ನೀಡಿದ್ದ ಬಿಜೆಪಿ
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಬದಲಿಗೆ ಟಿಕೆಟ್ ಯಾರಿಗೆ?
ನವದೆಹಲಿ: ಇತ್ತೀಚೆಗಷ್ಟೇ ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್ಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ್ದರು. ಇದಕ್ಕೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದೀಗ ಕಾಂಗ್ರೆಸ್ ಹೈಕಮಾಂಡ್ ಸುಪ್ರಿಯಾ ಶ್ರಿನೇಟ್ಗೆ ಬಿಗ್ ಶಾಕ್ ನೀಡಿದೆ.
ಇದನ್ನೂ ಓದಿ: ಯುಗಾದಿ ಹೊಸತಡಕುಗಾಗಿ ಚೀಟಿ ಹಾಕಿದ್ದವ್ರಿಗೆ ಮಕ್ಮಲ್ ಟೋಪಿ.. ಮಾಂಸದ ಆಸೆಗೆ ಕೋಟಿ, ಕೋಟಿ ಕಳ್ಕೊಂಡ ಜನ!
ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಕ್ಷೇತ್ರದಿಂದ ಸುಪ್ರಿಯಾ ಸ್ಪರ್ಧೆ ಮಾಡ್ತಾರೆ ಎನ್ನಲಾಗ್ತಿತ್ತು. ಇದೀಗ ಕಾಂಗ್ರೆಸ್ ಶ್ರಿನೇಟ್ ಬದಲಿಗೆ ವೀರೇಂದ್ರ ಚೌಧರಿ ಅವರನ್ನು ಕಣಕ್ಕಿಳಿಸಿದೆ. ಬಾಲಿವುಡ್ ನಟಿ ಕಮ್ ರಾಜಕಾರಣಿ ಕಂಗನಾ ರಣಾವತ್ ವಿರುದ್ಧ ಅವಹೇಳನಕಾರಿಯಾಗಿ ಶ್ರಿನೇಟ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಸೇರ್ ಮಾಡಿ ಬಿರುಗಾಳಿ ಎಬ್ಬಿಸಿದ್ದರು.
ಆದ್ದರಿಂದ ಅವರಿಗೆ ಒಂದು ವೇಳೆ ಟಿಕೆಟ್ ನೀಡಿದ್ರೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಟಿಕೆಟ್ ನಿರಾಕರಿಸಲಾಗಿದೆ. 2019ರ ಲೋಕಸಭಾ ಎಲೆಕ್ಷನ್ನಲ್ಲಿ ಇದೇ ಕ್ಷೇತ್ರದಿಂದ ಸೋತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ