Advertisment

ನಾಯಕನಾದರೂ ಏನು ಬಂತು.. ಛೇ..! ಸೂರ್ಯನ ಅದೊಂದು ಆಸೆ ಇನ್ನೂ ಈಡೇರಿಲ್ಲ

author-image
Ganesh
Updated On
ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್​ಗೆ ಬಿಗ್ ಶಾಕ್..!
Advertisment
  • ಟೀಂ ಇಂಡಿಯಾದ ಟಿ-20 ನಾಯಕ ಸೂರ್ಯ ಕುಮಾರ್ ಯಾದವ್
  • ಸದ್ಯ ದುಲೀಪ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಸೂರ್ಯ ಕುಮಾರ್
  • ಸೂರ್ಯ ದೇಶಿಯ ಕ್ರಿಕೆಟ್​ಗೆ ಧುಮುಕಿರುವ ಹಿಂದಿದೆ ಒಂದು ಕಾರಣ

ಟೀಂ ಇಂಡಿಯಾದ ಟಿ-20 ನಾಯಕರಾಗಿ ಸೂರ್ಯ ಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ನಡೆದ ಲಂಕಾ ವಿರುದ್ಧದ ಸರಣಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಟಿ-20 ತಂಡಕ್ಕೆ ಶಾಶ್ವತ ನಾಯಕರಾದರೂ ಸೂರ್ಯನ ಅದೊಂದು ಆಸೆ ಈಡೇರಲಿಲ್ಲ.
ಅದನೆಂದರೆ ವಾಸ್ತವವಾಗಿ ಸೂರ್ಯ ಅವರ ಕನಸು ಭಾರತೀಯ ಟೆಸ್ಟ್ ತಂಡದಲ್ಲಿ ಶಾಶ್ವತವಾಗಿ ಸ್ಥಾನ ಪಡೆಯೋದು. ಇದೇ ಕಾರಣಕ್ಕೆ ದೇಶಿಯ ಕ್ರಿಕೆಟ್‌ನಲ್ಲಿ ಆಡುವುದಾಗಿ ಹೇಳಿದ್ದಾರೆ. ಟೆಸ್ಟ್ ತಂಡ ಸೇರುವುದು ತನ್ನ ಕೈಯಲ್ಲಿಲ್ಲ, ದೇಶಿಯ ಟೂರ್ನಿಗಳನ್ನು ಆಡುವುದು ತನ್ನ ಕೈಯಲ್ಲಿದೆ ಎಂದಿದ್ದಾರೆ ಸೂರ್ಯ.

Advertisment

ಇದನ್ನೂ ಓದಿ:ಕೊಹ್ಲಿ, ರೋಹಿತ್​​ ಅಷ್ಟೇ ಅಲ್ಲ.. ಟೀಂ ಇಂಡಿಯಾಗೆ ನೇರ ಎಚ್ಚರಿಕೆ ಕೊಟ್ಟ ಬಾಂಗ್ಲಾದ ತ್ರಿಮೂರ್ತಿಗಳು..!

ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಶ್ರಮಿಸಿದ ಅನೇಕ ಆಟಗಾರರಿದ್ದಾರೆ. ನಾನೂ ಆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಬಯಸುತ್ತೇನೆ. ನಾನು ಟೆಸ್ಟ್​ಗೆ ಪದಾರ್ಪಣೆ ಮಾಡಿದ ಮೇಲೆ ಹಲವರು ಪದಾರ್ಪಣೆ ಮಾಡಿದ್ದಾರೆ. ಅವರೆಲ್ಲ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭವಿಷ್ಯದಲ್ಲಿ ನಾನು ಆಡಲು ಬಯಸಿದರೆ, ಅದು ನನ್ನ ನಿಯಂತ್ರಣದಲ್ಲಿಲ್ಲ. ಅದಕ್ಕಾಗಿ ದೇಶಿಯ ಕ್ರಿಕೆಟ್​ ಆಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಮುಂದೆ ಏನಾಗುತ್ತದೆ ಎಂದು ನೋಡೋಣ ಎಂದಿದ್ದಾರೆ.

2023ರಲ್ಲಿ ಟೆಸ್ಟ್​ಗೆ ಪದಾರ್ಪಣೆ
2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸೂರ್ಯ ಟೀಮ್ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು. ಕೇವಲ ಒಂದು ಟೆಸ್ಟ್ ಪಂದ್ಯ ಆಡಿರುವ ಸೂರ್ಯ, ಒಂದು ಇನ್ನಿಂಗ್ಸ್ ಆಡಿ 8 ರನ್ ಬಾರಿಸಿದ್ದಾರೆ.

Advertisment

ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್​ಮ್ಯಾನ್ ದಶಕದ ಕನಸು ನನಸು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment