Advertisment

ಟಿ20 ವಿಶ್ವಕಪ್​​.. ಟೀಂ ಇಂಡಿಯಾಗೆ ಕ್ಯಾಪ್ಟನ್ ರೋಹಿತ್ ಶರ್ಮಾನೇ ಕಂಟಕ..!

author-image
Ganesh
Updated On
T20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​​ ಶರ್ಮಾಗೆ ಜಡೇಜಾ ಬಿಗ್​ ಶಾಕ್​​.. ಆಗಿದ್ದೇನು?
Advertisment
  • ಜೂನ್ 2 ರಿಂದ ಟಿ-20 ವಿಶ್ವಕಪ್ ಪಂದ್ಯಾವಳಿ
  • ವಿಶ್ವಕಪ್ ಗೆಲ್ಲಲು ತಯಾರಿ ನಡೆಸಿರುವ ಭಾರತ
  • ಬಲಿಷ್ಠ ತಂಡ ಪ್ರಕಟಿಸಿರುವ ಬಿಸಿಸಿಐ, ಆದರೆ

ಮುಂಬರೋ T20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಈ ಚುಟುಕು ಸಮರಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಚಿಂತೆಗೆ ಒಳಗಾಗಿದ್ದಾರೆ. ಅದು ಕೂಡ ಹಿಟ್​​ಮ್ಯಾನ್ ರೋಹಿತ್ ಶರ್ಮಾ ಕಾರಣಕ್ಕಾಗಿಯೇ ಆಗಿದೆ.

Advertisment

T20 ವಿಶ್ವಕಪ್ ಸಮರಕ್ಕೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ಏಕದಿನ ವಿಶ್ವಕಪ್ ಕೈಚೆಲ್ಲಿದ್ದ ರೋಹಿತ್ ಶರ್ಮಾ ಪಡೆ, T20 ವಿಶ್ವಕಪ್ ಗೆಲ್ಲಲೇಬೇಕು ಅಂತ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ.! 17 ವರ್ಷದ ಬಳಿಕ ಟಿ20 ವಿಶ್ವಕಪ್​ ಗೆಲ್ಲೋ ತವಕದಲ್ಲಿದೆ. ಇದಕ್ಕೆ ಹಿಟ್​ಮ್ಯಾನ್ ರೋಹಿತ್ ಶರ್ಮಾನೇ ಕಂಟಕವಾಗ್ತಾರಾ ಎಂಬ ಟೆನ್ಶನ್​​.. ಭಾರತೀಯ ಕ್ರಿಕೆಟ್​ ವಲಯದಲ್ಲಿ ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣ ರೋಹಿತ್ ಶರ್ಮಾರ ಪ್ರದರ್ಶನ.

ಇದನ್ನೂ ಓದಿ:ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

publive-image

ಐಪಿಎಲ್​​ನಲ್ಲಿ ಹಿಟ್​ಮ್ಯಾನ್ ರೋಹಿತ್​​ ಫ್ಲಾಫ್​ ಶೋ..!
ಐಪಿಎಲ್​ ಆರಂಭದಲ್ಲಿ ಅಬ್ಬರಿಸಿದ್ದ ರೋಹಿತ್, ದಿನೇ ದಿನೇ ಬ್ಯಾಟಿಂಗ್​ನಲ್ಲಿ ಮಕಾಡೆ ಮಲಗಿದ್ದಾರೆ. ಆರಂಭದಲ್ಲಿ ಅಗ್ರೆಸ್ಸಿವ್ ಅಪ್ರೋಚ್​ನಲ್ಲಿ ಬ್ಯಾಟ್ ಬೀಸಿ ಸೈ ಎನಿಸಿದ್ದ ರೋಹಿತ್ ಶರ್ಮಾ, ಈಗ ಕಂಪ್ಲೀಟ್​​​​​​​​​ ಫೇಲಾಗಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್​​​ ಎದುರಾದ್ರು, ರೌದ್ರಾವಾತರ ತಾಳುವ ನಿರೀಕ್ಷೆ ಹುಸಿಯಾಗಿಸಿರುವ ರೋಹಿತ್, ಜಸ್ಟ್​ ನಾಲ್ಕೇ ನಾಲ್ಕು ರನ್​ಗಳಿಗೆ ವಿಕೆಟ್ ಒಪ್ಪಿಸಿ ಭಾರೀ ನಿರಾಸೆ ಮೂಡಿಸಿದ್ದಾರೆ. ಇದೇ ಫ್ಲಾಫ್ ಶೋ ಈಗ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

Advertisment

5 ಪಂದ್ಯ.. 4 ಸಿಂಗಲ್​ ಡಿಜಿಟ್​..
6, 8, 4, 11, 4.. ಇದು ಮೊಬೈಲ್ ನಂಬರ್​ ಅಲ್ಲ. ಹಿಟ್​ಮ್ಯಾನ್ ರೋಹಿತ್ ಶರ್ಮಾ, ಕಳೆದ ಐದು ಪಂದ್ಯಗಳಿಂದ ಗಳಿಸಿದ ರನ್​​ಗಳಾಗಿವೆ. ಎರಡಂಕಿ ರನ್​​​​​​​​ ಗಳಿಸೋಕು ಪರದಾಡ್ತಿರುವ ರೋಹಿತ್, ಮೊದಲ ಎರಡು ಓವರ್​ಗಳಲ್ಲೇ ವಿಕೆಟ್ ಒಪ್ಪಿಸಿ ನಿರ್ಗಮಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಚೆನ್ನೈ ವಿರುದ್ಧ ವಾಂಖೆಡೆಯಲ್ಲಿ ಶತಕ ಸಿಡಿಸಿದ್ದ ಹಿಟ್​​ಮ್ಯಾನ್, ಪಂಜಾಬ್ ಎದುರು 36 ರನ್ ದಾಖಲಿಸಿದ್ದು ಬಿಟ್ರೆ, ಈ ಬಳಿಕ ಆಡಿದ 5 ಪಂದ್ಯಗಳಿಂದ ಗಳಿಸಿರೋ ರನ್​ ಜಸ್ಟ್​ 33.

ಇದನ್ನೂ ಓದಿ:LSG vs DC ಮಧ್ಯೆ ಹೈ-ವೋಲ್ಟೇಜ್ ಪಂದ್ಯ; ಆರ್​ಸಿಬಿ ಪ್ಲೇ ಆಫ್​ಗೆ ಇವತ್ತು ಯಾವ ತಂಡ ಗೆದ್ದರೆ ಉತ್ತಮ..?

publive-image

ಕಳೆದ 5 ಪಂದ್ಯಗಳಿಂದ ರೋಹಿತ್
ಕಳೆದ 5 ಪಂದ್ಯಗಳಿಂದ 33 ರನ್ ಕಲೆಹಾಕಿರುವ ರೋಹಿತ್, 6.6ರ ಸರಾಸರಿಯಂತೆ ಸ್ಕೋರ್ ಮಾಡಿದ್ರೆ. 92ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಪ್ರಸಕ್ತ IPLನಲ್ಲಿ ಫ್ಲಾಪ್ ಶೋ ನೀಡ್ತಿರುವ ರೋಹಿತ್, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಬ್ಬರಿಸುವಲ್ಲಿ ವಿಫಲರಾಗಿದ್ದಾರೆ. ಶರ್ಮಾರ ಈ ಸಾಲು ಸಾಲು ವೈಫಲ್ಯ, ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಟಿ20 ವಿಶ್ವಕಪ್​​​​​​​​​​​​​​​​​​​​​​​​​​​​​ ಆರಂಭಕ್ಕೆ ಕೆಲ ದಿನಗಳು ಬಾಕಿ ಇರುವಾಗ ರೋಹಿತ್, ರನ್ ಗಳಿಸಲು ಪರದಾಟ ನಡೆಸ್ತಿದ್ದಾರೆ. ಇದು ಟೀಮ್ ಇಂಡಿಯಾಗೆ ಮಾತ್ರವಲ್ಲ. ಭಾರತೀಯ ಅಭಿಮಾನಿಗಳಿಗಳ ಕಳವಳಕ್ಕೂ ಕಾರಣವಾಗಿರೋದು ಸುಳ್ಳಲ್ಲ. ಇನ್ನು ಮೇ 11 ರಂದು ನಡೆದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 24 ಬಾಲ್​ನಲ್ಲಿ 19 ರನ್ ಸಿಡಿಸಿ ನಿರಾಸೆ ಮೂಡಿಸಿದರು.

Advertisment

ರೋಹಿತ್ ಆಟದ ಬಗ್ಗೆ ಕ್ರಿಕೆಟ್​ ಪಂಡಿತರ ಟೀಕೆ..!
ಮೊದಲ 7 ಪಂದ್ಯಗಳಲ್ಲಿ 297 ರನ್ ಸಿಡಿಸಿದ್ದ ರೋಹಿತ್, ಕಳೆದ 6 ಪಂದ್ಯಗಳಿಂದ ಅನುಭವಿಸುತ್ತಿರುವ ವೈಫಲ್ಯಕ್ಕೆ ದಿಗ್ಗಜ ಕ್ರಿಕೆಟಿಗರು ಟೀಕಿಸಿದ್ದಾರೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಹೆಡನ್, ರೋಹಿತ್ ನಾಯಕರಾಗಲಿಲ್ಲ ಅಂದಿದ್ರೆ, ತಂಡದಿಂದ ಕೈಬಿಡಬೇಕಿರುವ ಮೊದಲ ವ್ಯಕ್ತಿ ಎಂದೇ ವ್ಯಾಖ್ಯನಿಸಿದ್ರೆ. ಕಾಮೆಂಟೇಟರ್ ಹರ್ಷ ಬೋಗ್ಲೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೈಬಿಡುವ ಮೊದಲ ಆಟಗಾರ ರೋಹಿತ್!
ರೋಹಿತ್ ಶರ್ಮಾ ನಾಯಕನಲ್ಲದಿದ್ದರೆ, ತಂಡದಿಂದ ಕೈಬಿಡುವ ಮೊದಲ ಆಟಗಾರ ಆಗುತ್ತಿದ್ದರು- ಮ್ಯಾಥ್ಯೂ ಹೇಡನ್, ಆಸಿಸ್​ ಮಾಜಿ ಆಟಗಾರ

ರೋಹಿತ್ ಆಟಕ್ಕೆ ಕಳವಳ
ರೋಹಿತ್ ಶರ್ಮಾ ಫಾರ್ಮ್ ಆತಂಕ ಮೂಡಿಸಿದೆ. ಮೊದಲ 7 ಇನ್ನಿಂಗ್ಸ್‌ಗಳಲ್ಲಿ 297 ರನ್​ ಬಾರಿಸಿದ್ದ ರೋಹಿತ್, ನಂತರದ 5 ಪಂದ್ಯಗಳಿಂದ ಕೇವಲ 33 ಗಳಿಸಿದ್ದಾರೆ. ಹೀಗಾಗಿ ಕೊನೆಯಲ್ಲಿ ಸ್ಟ್ರಾಂಗ್ ಕಮ್​​ಬ್ಯಾಕ್​ನೊಂದಿಗೆ ಮುಗಿಸಬೇಕಿದೆ-ಹರ್ಷಬೋಗ್ಲೆ, ಕಾಮೆಂಟೇಟರ್

publive-image

ಟಿ20 ವಿಶ್ವಕಪ್​​ಗೂ ಆರಂಭಕ್ಕೂ ಮುನ್ನ ರೋಹಿತ್​ಗೆ ಕೇವಲ ಒಂದು ಐಪಿಎಲ್ ಪಂದ್ಯಗಳನ್ನಾಡುವ ಅವಕಾಶ ಸಿಗಲಿದೆ. ಮೇ 17 ರಂದು ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಪಂದ್ಯವನ್ನಾಡಲಿದೆ. ಈ ಪಂದ್ಯಗಳಲ್ಲಿ ಅಬ್ಬರಿಸುವ ಮೂಲಕ ರೋಹಿತ್, ಟಿ20 ವಿಶ್ವಕಪ್​ಗೂ ಮುನ್ನ ಆತ್ಮವಿಶ್ವಾಸ ವೃದ್ದಿಸಿಕೊಳ್ಳಬೇಕಿದೆ. ಇಲ್ಲ ಟೀಮ್ ಇಂಡಿಯಾ ಮೇಲೆ ಭಾರೀ ಪರಿಣಾಮವನ್ನೇ ಬೀರಲಿದೆ. ಈ ನಿಟ್ಟಿನಲ್ಲಿ ರೋಹಿತ್ ಅಬ್ಬರಿಸಲಿ. T20 ವಿಶ್ವಕಪ್​ಗೂ ಮುನ್ನ ಫಾರ್ಮ್ ಕಂಡುಕೊಳ್ಳಲಿ, ಅನ್ನೋದೇ ಅಭಿಮಾನಿಗಳ ಆಶಯ.

Advertisment

ಇದನ್ನೂ ಓದಿ:ಕುಡುಗೋಲಿನಿಂದ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ.. ತ್ರಿಬಲ್ ಮರ್ಡರ್ ಬೆನ್ನಲ್ಲೇ ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment