newsfirstkannada.com

ಕೊಹ್ಲಿಯಿಂದ ಸಿದ್ಧತೆಗೆ ತೊಡಕು.. T20 ವಿಶ್ವಕಪ್​​ನಲ್ಲಿ ಸಮಸ್ಯೆ ತಂದೊಡ್ತಾರಾ ಕಿಂಗ್?

Share :

Published May 28, 2024 at 12:18pm

    ಅಮೆರಿಕಾದಲ್ಲಿ ವಿರಾಟ್ ಅಟ್ಟರ್​ ಫ್ಲಾಪ್​ ಶೋ..!

    ಎರಡು ಪ್ರವಾಸದಲ್ಲಿ ರನ್ ಮಷೀನ್​ ಕೆಟ್ಟ ಆಟ

    ಸವಾಲಿನ ಚಕ್ರವ್ಯೂಹ ಬೇಧಿಸ್ತಾರಾ ವಿರಾಟ್​​..?

ಐಸಿಸಿ ಟೂರ್ನಿಗಳಲ್ಲಿ ಕಿಂಗ್ ಕೊಹ್ಲಿ ಭಾರತಕ್ಕೆ ಆಪತ್ಬಾಂಧವ. ಮುಂಬರೋ ಟಿ20 ವಿಶ್ವಕಪ್​ನಲ್ಲಿ ವಿರಾಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆದರೆ ಐಪಿಎಲ್​​ ಆರೆಂಜ್​ ಕ್ಯಾಪ್ ವಿನ್ನರ್​​​, ಅದೇ ಖದರ್​​ ಅನ್ನ ಚುಟುಕು ದಂಗಲ್​ನಲ್ಲಿ ರಿಪೀಟ್ ಮಾಡ್ತಾರಾ ಅನ್ನೋ ಅನುಮಾನ ಕಾಡ್ತಿದೆ.

ಕೊಹ್ಲಿ, ಕೊಹ್ಲಿ, ಕೊಹ್ಲಿ..! 2024ನೇ ಐಪಿಎಲ್​​ನುದ್ದಕ್ಕೂ ಗುನುಗಿದ್ದು ಒಂದೇ ಹೆಸರು ಅದುವೇ ಕಿಂಗ್ ಕೊಹ್ಲಿ. ಔಟ್​ಸ್ಟ್ಯಾಂಡಿಂಗ್​ ಪರ್ಫಾಮೆನ್ಸ್ ನೀಡಿದ ಕೊಹ್ಲಿ 741 ರನ್​ ಚಚ್ಚಿ ಆರೆಂಜ್​ ಕ್ಯಾಪ್ ಮುಡಿಗೇರಿಸಿಕೊಂಡ್ರು. ಇದೇ ಆರ್ಭಟ ಮುಂಬರೋ ಟಿ20 ವಿಶ್ವಕಪ್​​​​​​ನಲ್ಲಿ ಮೂಡಿಬರುತ್ತೆ ಅನ್ನೋದು ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯಾಗಿದೆ. ಆದ್ರೆ ಭರವಸೆ ಸುಳ್ಳಾಗುತ್ತಾ ಅನ್ನೋ ಅನುಮಾನ ಕಾಡ್ತಿದೆ.

ಇದನ್ನೂ ಓದಿ:ಭಾರೀ ಮಳೆಗೆ ದುರಂತ.. 10 ಮಂದಿ ಒಂದೇ ಸ್ಥಳದಲ್ಲಿ ದಾರುಣ ಸಾವು, ಹಲವರು ನಾಪತ್ತೆ

ತಡವಾಗಿ ಅಮೆರಿಕಾಗೆ ಪ್ರಯಾಣ.. ಸಿದ್ಧತೆಗೆ ತೊಡಕು..!
ಕ್ಯಾಪ್ಟನ್ ರೋಹಿತ್ ಶರ್ಮಾ ಆ್ಯಂಡ್​​ ಗ್ಯಾಂಗ್​​ನ ಅನೇಕ ಆಟಗಾರರು ಟಿ20 ವಿಶ್ವಕಪ್​​​​​​​​​​​​​ ಆಡಲು ಅಮೇರಿಕಾಗೆ ತೆರಳಿದ್ದಾರೆ. ಆದರೆ ವಿಶ್ರಾಂತಿ ಬಯಸಿರೋ ಕೊಹ್ಲಿ ಮೊದಲ ಬ್ಯಾಚ್​​​​​​​​ ಜೊತೆ ಪ್ರಯಾಣಿಸಿಲ್ಲ. ಈ ತಿಂಗಳಾಂತ್ಯದಲ್ಲಿ ಅಮೇರಿಕಾಗೆ ಫ್ಲೈಟ್ ಏರಲಿದ್ದಾರೆ ಎಂದು ಹೇಳಲಾಗ್ತಿದೆ. ಜೂನ್​​ 1 ರಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ. ವಿರಾಟ್​​​​​​​ ಆಡುವುದು ಅನುಮಾನ ಎನ್ನಲಾಗ್ತಿದೆ. ಹಾಗೊಂದು ವೇಳೆ ಕೊಹ್ಲಿ ವಾರ್ಮ್​ಅಪ್​​​​ ಮ್ಯಾಚ್​ ತಪ್ಪಿಸಿಕೊಂಡ್ರೆ ಕೊಹ್ಲಿಗೆ ಬಿಗ್​​​ ಲಾಸ್ ಆಗಲಿದೆ. ಯಾಕಂದ್ರೆ ಮೆಗಾ ಬ್ಯಾಟಲ್​ ಮುನ್ನ ಭಾರತ ಆಡುವುದು ಏಕೈಕ ಅಭ್ಯಾಸ ಪಂದ್ಯ ಮಾತ್ರ. ಇದನ್ನ ಬಿಟ್ರೆ ನೇರವಾಗಿ ಜೂನ್​ 5 ರಂದು ಐರ್ಲೆಂಡ್ ವಿರುದ್ಧ ಅಖಾಡಕ್ಕೆ ಧುಮುಕಲಿದೆ. ಕೊಹ್ಲಿ ಸಿದ್ಧತೆ ನಡೆಸದೇ ಏಕ್​​ದಮ್​​​​​​​​​​​​​​​​ ವಿಶ್ವಕಪ್ ಆಡಿದ್ರೆ ಪರ್ಫಾಮೆನ್ಸ್​ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಇದನ್ನೂ ಓದಿ:ಈ 5 ಆಟಗಾರರು ಮಿಂಚಿದ್ರೆ ಟೀಂ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗೋದು ಪಕ್ಕಾ..!

ಅಮೆರಿಕಾದಲ್ಲಿ ಕಿಂಗ್ ಕೊಹ್ಲಿ ಅಟ್ಟರ್​ ಫ್ಲಾಪ್​​ ಶೋ..!
ಭಾರತ ತಂಡ ಗುಂಪು ಹಂತದ 4 ಪಂದ್ಯಗಳನ್ನ ಅಮೆರಿಕಾದಲ್ಲೆ ಆಡಲಿದೆ. ಈ ನೆಲದಲ್ಲಿ ಕಿಂಗ್ ಕೊಹ್ಲಿ ಅಟ್ಟರ್​ ಫ್ಲಾಪ್​ ಶೋ ನೀಡಿದ್ದಾರೆ. ಈ ದಯನೀಯ ವೈಫಲ್ಯ ಸದ್ಯ ಅಭಿಮಾನಿಗಳನ್ನ ಆತಂಕಕ್ಕೆ ದೂಡಿದೆ.

ಅಮೆರಿಕಾದಲ್ಲಿ ಕಿಂಗ್ ಕೊಹ್ಲಿ..!
ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅಮೆರಿಕಾದಲ್ಲಿ ಈವರೆಗೆ 4 ಪಂದ್ಯಗಳನ್ನ ಆಡಿದ್ದಾರೆ. ಬರೀ 63 ರನ್ ಅಷ್ಟೇ ಬಾರಿಸಿದ್ದಾರೆ. ಅದಕ್ಕಾಗಿ 61 ಎಸೆತ ತೆಗೆದುಕೊಂಡಿದ್ದಾರೆ. ಇನ್ನು ಬ್ಯಾಟಿಂಗ್ ಎವರೇಜ್​​ 21 ಆಗಿದೆ. ಕಿಂಗ್ ಕೊಹ್ಲಿ ವೃತ್ತಿ ಜೀವನದಲ್ಲಿ ಎರಡು ಬಾರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಎರಡೂ ಪ್ರವಾಸದಲ್ಲಿ ಅತಿಕೆಟ್ಟ ಆಟವಾಡಿದ್ದಾರೆ. 2016ರ ಮೊದಲ ಪ್ರವಾಸದಲ್ಲಿ ಕೊಹ್ಲಿ 1 ಇನ್ನಿಂಗ್ಸ್ ಆಡಿ ಬರೀ 16 ರನ್​ ಗಳಿಸಲಷ್ಟೇ ಶಕ್ತರಾಗಿದ್ರು. 2019 ರಲ್ಲೂ ಅದೇ ರಾಗ ಅದೇ ಹಾಡು ಎನ್ನುವಂತೆ ಬ್ಯಾಟ್ ಬೀಸಿದ್ರು. 2 ಇನ್ನಿಂಗ್ಸ್ ಆಡಿ ಕೇವಲ 47 ರನ್ ಗಳಿಸಿ ನಿರಾಸೆ ಮೂಡಿಸಿದ್ರು.

ಇದನ್ನೂ ಓದಿ:ಟೀಂ ಇಂಡಿಯಾ ಕೋಚ್​​ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!

ಕಿಂಗ್ ಕೊಹ್ಲಿಗೆ ಮುಂಬರೋ ಟಿ20 ವಿಶ್ವಕಪ್​​​ ಅಂತೂ ಸುಲಭವಿಲ್ಲ. 17ನೇ ಐಪಿಎಲ್​​ನ ರನ್​ರಾಜನ ಮುಂದೆ ಟಫ್ ಚಾಲೆಂಜಸ್​ಗಳಿವೆ. ವೈಫಲ್ಯ ಮೆಟ್ಟಿ ನಿಲ್ಲೋದ್ರ ಜೊತೆ ಅಮೆರಿಕಾ ಕಂಡಿಷನ್​​ಗೆ ಹೊಂದಿಕೊಳ್ಳಬೇಕಾದ ಸವಾಲಿದೆ. ಈ ಸವಾಲಿನ ಚಕ್ರವ್ಯೂಹವನ್ನ ಹೇಗೆ ಬೇಧಿಸ್ತಾರೆ ಅನ್ನೋದನ್ನ ಕಾದು ನೋಡಬೇಕು.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್​​ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿಯಿಂದ ಸಿದ್ಧತೆಗೆ ತೊಡಕು.. T20 ವಿಶ್ವಕಪ್​​ನಲ್ಲಿ ಸಮಸ್ಯೆ ತಂದೊಡ್ತಾರಾ ಕಿಂಗ್?

https://newsfirstlive.com/wp-content/uploads/2024/05/Kohli_Team-India_1.jpg

Load More