ಮದುವೆ ಆಗಿರುವ ಬಗ್ಗೆ ಗುಟ್ಟು ಮುಚ್ಚಿಟ್ಟಿದ್ದ ತಾಪ್ಸಿ ಪನ್ನು.. ಸಿಕ್ರೇಟ್​ ಇದೀಗ ರಿವೀಲ್..!

author-image
Ganesh
Updated On
ಮದುವೆ ಆಗಿರುವ ಬಗ್ಗೆ ಗುಟ್ಟು ಮುಚ್ಚಿಟ್ಟಿದ್ದ ತಾಪ್ಸಿ ಪನ್ನು.. ಸಿಕ್ರೇಟ್​ ಇದೀಗ ರಿವೀಲ್..!
Advertisment
  • ಕೊನೆಗೂ ಮುಚ್ಚಿಟ್ಟಿದ್ದ ಮದುವೆ ಗುಟ್ಟು ರಟ್ಟು ಮಾಡಿದ ನಟಿ
  • ತಾಪ್ಸಿ ಪನ್ನು ಕೈ ಹಿಡಿದ ಹುಡುಗ ಯಾರು? ಎಷ್ಟು ಫೇಮಸ್..?
  • ಇನ್ಮುಂದೆ ಮದ್ವೆ ಫೋಟೋಗಳ ಶೇರ್ ಮಾಡುವ ಬಗ್ಗೆ ಹೇಳಿದ್ದೇನು..?

ಗುಟ್ಟಾಗಿ ಮದುವೆ ಆಗಿ ಸುದ್ದಿಯಾಗ್ತಿರುವ ಜನಪ್ರಿಯ ನಟಿ ತಾಪ್ಸಿ ಪನ್ನು ಅವರು, ತಮ್ಮ ವಿವಾಹಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಾವು ಯಾಕೆ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕವಾಗಿ ಮದುವೆ ವಿಚಾರವನ್ನು ಬಹಿರಂಗ ಮಾಡಿಲ್ಲ ಅನ್ನೋದನ್ನು ತಿಳಿಸಿದ್ದಾರೆ.

publive-image

ಇದನ್ನೂ ಓದಿ:ಇವತ್ತು RCB ಗೆಲ್ಲಲು ಪಾಲಿಸಬೇಕು ಐದು ಸೂತ್ರಗಳು.. ರೆಡ್​ ಆರ್ಮಿಗೆ ಟಫ್ ಚಾಲೆಂಜ್..!

ಮದುವೆ ಬಗ್ಗೆ ಸಿಕ್ರೇಟ್ ಮಾಡುವಂತದ್ದು ಏನೂ ಇರಲಿಲ್ಲ. ಆ ಉದ್ದೇಶವೂ ನನಗೆ ಇರಲಿಲ್ಲ. ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ತರಲು ನಾನು ಬಯಸುತ್ತೇನೆಯೇ ಅಂತಾ ನನಗೆ ಗೊತ್ತಿಲ್ಲ. ಹೀಗಾಗಿ ನನ್ನೊಳಗೆ ಅದನ್ನು ಇಟ್ಟುಕೊಂಡೆ. ಮದುವೆಯನ್ನು ಸಾರ್ವಜನಿಕ ವಿಷಯವನ್ನಾಗಿ ಮಾಡಲು ಬಯಸಿರಲಿಲ್ಲ. ಏಕೆಂದರೆ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನಾನು ಚಿಂತಿಸುತ್ತೇನೆ. ಆದರೆ ಮದುವೆಯನ್ನು ರಹಸ್ಯವಾಗಿಡಲು ಬಯಸುವುದಿಲ್ಲ. ನನ್ನ ಆತ್ಮೀಯರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡರು. ಸದ್ಯಕ್ಕೆ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಯಾವುದೇ ಯೋಜನೆ ಇಲ್ಲ. ಇದಕ್ಕೆ ನಾನು ಮಾನಸಿಕವಾಗಿ ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

publive-image

ತಾಪ್ಸಿ ಪನ್ನು ಯಾರನ್ನು ಮದುವೆ ಆಗಿದ್ದಾರೆ..?
ಬಹುಕಾಲದ ಗೆಳೆಯನನ್ನು ತಾಪ್ಸಿ ಪನ್ನು ಕಳೆದ ಮಾರ್ಚ್​ 23 ರಂದು ಮದುವೆ ಆಗಿದ್ದಾರೆ. ಇವರ ಪತಿಯ ಹೆಸರು, ಮಥಿಯಾಸ್ ಬೋ. ಇವರು ಬೇರೆ ಯಾರೂ ಅಲ್ಲ, ಡೆನ್ಮಾರ್ಕ್​​ನ ಹೆಸರಾಂತ ಬ್ಯಾಡ್ಮಿಂಟನ್ ಆಟಗಾರ. ತಾಪ್ಸಿ ಮತ್ತು ಮಥಿಯಾಸ್ ಬೋ ಮೊದಲ ಬಾರಿಗೆ 2013 ರಲ್ಲಿ ಭೇಟಿಯಾದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರಿ ಡೇಟಿಂಗ್ ನಡೆಸ್ತಿದ್ದರು. ಕಳೆದ 10 ವರ್ಷಗಳ ಸ್ನೇಹ, ಪ್ರೀತಿ, ಪ್ರೇಮ ಸಂಬಂಧಕ್ಕೆ ವಿವಾಹದ ಗಂಟು ಬಿದ್ದಿದೆ.

ಇದನ್ನೂ ಓದಿ:ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.​. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment