/newsfirstlive-kannada/media/post_attachments/wp-content/uploads/2024/06/Tea.jpg)
ಭಾರತದಲ್ಲಿ ಬಹುತೇಕ ಮಂದಿ ಚಹಾ (ಟೀ) ಇಷ್ಟಪಡುತ್ತಾರೆ. ಬೇಸಿಗೆ, ಮಳೆಗಾಲ, ಚಳಿಗಾಲ ಸೇರಿದಂತೆ ಪ್ರತಿ ಋತುವಿನಲ್ಲೂ ಚಹಾ ಹೀರುತ್ತಾರೆ. ಉರಿ ಬಿಸಿಲಿದ್ದರೂ ರಸ್ತೆ ಬದಿಯಲ್ಲಿ ಅದೆಷ್ಟೋ ಮಂದಿ ನಿಂತು ಚಹಾ ಕುಡಿಯುತ್ತಿರೋದನ್ನು ನೀವು ನೋಡಿರುತ್ತೀರಿ. ಆದರೆ ಚಹಾವನ್ನು ಹೆಚ್ಚು ಇಷ್ಟಪಡುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಇಲ್ಲ!
ಜಗತ್ತಿನಲ್ಲಿ ಹೆಚ್ಚು ಚಹಾ ಕುಡಿಯೋದು ಭಾರತದಲ್ಲಿಯೇ ಎಂದು ಅನೇಕರು ಭಾವಿಸಿದ್ದಾರೆ. ನೀವೂ ಕೂಡ ಹಾಗಂದುಕೊಂಡರೆ ತಪ್ಪಾಗುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಚಹಾ ಕುಡಿಯುವವರ ಸಾಲಿನಲ್ಲಿ ಟರ್ಕಿ ಮೊದಲ ಸ್ಥಾನದಲ್ಲಿದೆ.
ಸ್ಟ್ಯಾಟಿಸ್ಟಾ (Statista) ವರದಿಯ ಪ್ರಕಾರ.. ಚಹಾ ಕುಡಿಯುವವರಲ್ಲಿ ಟರ್ಕಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಶೇ.87 ರಷ್ಟು ಜನ ಪ್ರತಿನಿತ್ಯ ಟೀ ಕುಡಿಯುತ್ತಾರೆ. ಕೀನ್ಯಾ ಚಹಾ ಪ್ರಿಯರಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿಶತ 83 ರಷ್ಟು ಜನ ಚಹಾ ಇಷ್ಟಪಡುತ್ತಾರೆ. ಚಹಾ ಪ್ರಿಯರಲ್ಲಿ ಮೊರಾಕೊ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿಶತ 79 ರಷ್ಟು ಜನರು ಚಹಾ ಕುಡಿಯುತ್ತಾರೆ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್​ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!
ಈ ಪಟ್ಟಿಯಲ್ಲಿ ಭಾರತದ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಚಹಾ ಬಹಳ ಜನಪ್ರಿಯವಾಗಿದ್ದರೂ ದೇಶದ ಶೇಕಡಾ 70 ರಷ್ಟು ಜನರು ಮಾತ್ರ ಚಹಾವನ್ನು ಕುಡಿಯುತ್ತಾರೆ. ಐರ್ಲೆಂಡ್ ಐದನೇ ಸ್ಥಾನದಲ್ಲಿದೆ. ಅಲ್ಲಿ ಪ್ರತಿಶತ 64 ರಷ್ಟು ಜನ ಚಹಾ ಕುಡಿಯುತ್ತಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಯಾಕೆ ಬಾಂಗ್ಲಾ ವಿರುದ್ಧ ಆಡಲಿಲ್ಲ..? ಕ್ಯಾಪ್ಟನ್ ರೋಹಿತ್ ಹೇಳಿದ್ದೇ ಬೇರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ