/newsfirstlive-kannada/media/post_attachments/wp-content/uploads/2024/09/RISHAB-PANT.jpg)
ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ರೋಹಿತ್ ಶರ್ಮಾ ನಾಯಕತ್ವದ 16 ಸದಸ್ಯರ ಬಲಿಷ್ಠ ತಂಡವನ್ನೇ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಟೆಸ್ಟ್ ಸರಣಿಯಲ್ಲಿ ನಿರೀಕ್ಷೆಯಂತೆ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ರೆ, ಕೆಲ ಆಟಗಾರರಿಗೆ ತಂಡದಿಂದ ಕೊಕ್ ನೀಡಲಾಗಿದೆ.
ಮೊದಲ ಟೆಸ್ಟ್‌ಗೆ ಟೀಮ್ ಇಂಡಿಯಾ..!
16 ಸದಸ್ಯರ ತಂಡದಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್ ಕಾಣಿಸಿಕೊಂಡಿದ್ದಾರೆ. ಇನ್ನು ಮಿಡಲ್ ಆರ್ಡರ್​ ಬ್ಯಾಟರ್​ಗಳಾಗಿ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್​ ಅವಕಾಶ ಗಿಟ್ಟಿಸಿದ್ರೆ. ವಿಕೆಟ್ ಕೀಪರ್​​ಗಳಾಗಿ ರಿಷಭ್ ಪಂತ್, ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ. ಆಲ್​ರೌಂಡರ್​​​ ಕೋಟಾದದಲ್ಲಿ ಆರ್​.ಅಶ್ವಿನ್, ಆರ್.ಜಡೇಜಾ, ಅಕ್ಷರ್ ಪಟೇಲ್ ಕಾಣಿಸಿಕೊಂಡರೆ, ಸ್ಪೆಷಲಿಸ್ಟ್​ ಸ್ಪಿನ್ನರ್ ಆಗಿ ಕುಲ್​ದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ಇನ್ನು, ವೇಗಿಗಳಾಗಿ ಜಸ್​ಪ್ರೀತ್​ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆ ಯಶ್​ ದಯಾಳ್ ಕಾಣಿಸಿಕೊಂಡಿದ್ದಾರೆ.
ಉಪನಾಯಕನ ವಿಚಾರದಲ್ಲಿ ಜಾಣ ನಡೆ..!
ಬಿಸಿಸಿಐ ಭವಿಷ್ಯದ ನಾಯಕನ ಹುಡುಕಾಟದಲ್ಲಿದೆ. ಶುಬ್ಮನ್ ಗಿಲ್​ಗೆ ಮೂರು ಮಾದರಿಯ ನೇತೃತ್ವ ನೀಡಬೇಕು ಅನ್ನೋದು ಬಿಸಿಸಿಐ ಲೆಕ್ಕಾಚಾರ. ಅದೇ ಕಾರಣಕ್ಕೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಹಾಗೂ ಟಿ-20 ಟೂರ್ನಿಗಳಲ್ಲಿ ಗಿಲ್​ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು. ಅದೇ ರೀತಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವೈಸ್ ಕ್ಯಾಪ್ಟನ್ ಹುದ್ದೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ ಈ ವಿಚಾರದಲ್ಲಿ ಬಿಸಿಸಿಐ ಜಾಣ ನಡೆ ಮುಂದುವರಿಸಿದೆ. ಈಗಾಗಲೇ ಕ್ಯಾಪ್ಟನ್ಸಿ ವಿಚಾರದಲ್ಲಿ ಜಸ್​ಪ್ರೀತ್ ಬೂಮ್ರಾ ಚಕಾರ ಎತ್ತಿದ್ದರು. ಗಿಲ್​​ಗೆ ಉಪನಾಯಕನ ಪಟ್ಟ ಕೊಟ್ಟಿದ್ರೆ ತಂಡದಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ ಅನ್ನೋದನ್ನು ಬಿಸಿಸಿಐ ಅರಿತುಕೊಂಡಂತಿದೆ. ಮಾತ್ರವಲ್ಲ, ತಂಡ ಪ್ರಕಟ ಮಾಡುವಾಗ ಎಲ್ಲಿಯೂ ಕೂಡ ಉಪನಾಯಕ ಯಾರು ಎಂದು ತಿಳಿಸಿಲ್ಲ. ಟೆಸ್ಟ್ ಪಂದ್ಯಗಳಿಗೆ ಬೂಮ್ರಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗುತ್ತಿತ್ತು. ಕಳೆದ ಇಂಗ್ಲೆಂಡ್ ವಿರುದ್ಧದ ಸೀರೀಸ್​ನಲ್ಲೂ ಬೂಮ್ರಾ ವೈಸ್ ಕ್ಯಾಪ್ಟನ್ ಆಗಿದ್ದರು.
ನಿನ್ನೆ ಪ್ರಕಟವಾಗಿರುವ ತಂಡದಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್​ಗೆ ನಾಯಕತ್ವದ ಗುಣ ಇದೆ. ಕೊಹ್ಲಿಯನ್ನು ಅಧಿಕೃತವಾಗಿ ಜವಾಬ್ದಾರಿ ನೀಡಲು ಬರುವುದಿಲ್ಲ. ಆದರೆ ರಾಹುಲ್, ಪಂತ್​ ದೀರ್ಘ ಕಾಲದಿಂದ ಉಪನಾಯಕರಾಗಿ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಬೂಮ್ರಾ, ಪಂತ್, ರಾಹುಲ್, ಗಿಲ್ ಇಷ್ಟೆಲ್ಲ ಅನುಭವಿಗಳಿದ್ದರೂ ಉಪನಾಯಕನ ಜವಾಬ್ದಾರಿಯನ್ನು ಬಿಸಿಸಿಐ ಅಧಿಕೃತವಾಗಿ ಸೂಚಿಸದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್