ದಿನೇಶ್ ಕಾರ್ತಿಕ್ ಬೆನ್ನಲ್ಲೇ ಮತ್ತೋರ್ವ ಸ್ಟಾರ್ ಕ್ರಿಕೆಟರ್ ನಿವೃತ್ತಿ
ಟಿ20 ವಿಶ್ವಕಪ್ ಹೊತ್ತಲ್ಲೇ ಟೀಮ್ ಇಂಡಿಯಾಗೆ ಮತ್ತೊಂದು ಆಘಾತ
ದಿಢೀರ್ ಎಲ್ಲಾ ಮಾದರಿ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ ಅನುಭವಿ!
ಇತ್ತೀಚೆಗೆ ಅತ್ಯುತ್ತಮ ಫಾರ್ಮ್ನಲ್ಲಿ ಇದ್ದಾಗಲೇ ಟೀಮ್ ಇಂಡಿಯಾದ ದಿಗ್ಗಜ ದಿನೇಶ್ ಕಾರ್ತಿಕ್ ತನ್ನ ಎಲ್ಲಾ ಮಾದರಿ ಕ್ರಿಕೆಟ್ಗೂ ಗುಡ್ ಬೈ ಹೇಳಿ ಶಾಕ್ ನೀಡಿದ್ರು. ಈ ಬೆನ್ನಲ್ಲೇ ಮತ್ತೋರ್ವ ಸ್ಟಾರ್ ಕ್ರಿಕೆಟರ್ ನಿವೃತ್ತಿ ಘೋಷಿಸಿದ್ದಾರೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದಿದೆ. ಸದ್ಯ ನಡೆಯುತ್ತಿರೋ ಟಿ20 ವಿಶ್ವಕಪ್ ಟೂರ್ನಿ ಗೆಲ್ಲಲು ಟೀಮ್ ಇಂಡಿಯಾ ಯುಎಸ್ಗೆ ತೆರಳಿದೆ. ಇದರ ಮಧ್ಯೆ ಟೀಮ್ ಇಂಡಿಯಾಗೆ ಶಾಕಿಂಗ್ ನ್ಯೂಸ್ ಇದೆ. ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಕೇದಾರ್ ಜಾಧವ್ ನಿವೃತ್ತಿ ಘೋಷಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರೋ ಕೇದಾರ್ ಜಾಧವ್, 1500 ಗಂಟೆಗಳ ನನ್ನ ವೃತ್ತಿಜೀವನಕ್ಕೆ ಗುಡ್ ಬೈ ಹೇಳುತ್ತಿದ್ದೇನೆ. ನೀವು ಕೊಟ್ಟ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಎಲ್ಲಾ ಮಾದರಿಯಿಂದ ನಿವೃತ್ತನಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಕೇದಾರ್ ಅಂತರಾಷ್ಟ್ರೀಯ ಕರಿಯರ್..!
ಕೇದಾರ್ ಜಾಧವನ್ ಟೀಮ್ ಇಂಡಿಯಾ ಪರ 73 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ತಾನು ಆಡಿರೋ 52 ಇನಿಂಗ್ಸ್ನಲ್ಲಿ ಕೇದಾರ್ ಒಟ್ಟು 1389 ರನ್ ಗಳಿಸಿದ್ದಾರೆ. 2 ಶತಕ ಹಾಗೂ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಜತೆಗೆ 9 ಟಿ20 ಪಂದ್ಯಗಳಿಂದ 1 ಅರ್ಧಶತಕದೊಂದಿಗೆ 122 ರನ್ ಕಲೆಹಾಕಿದ್ದಾರೆ.
ಐಪಿಎಲ್ನಲ್ಲೂ ಮಿಂಚಿದ್ದ ಕೇದಾರ್..!
ಇನ್ನು, ಐಪಿಎಲ್ನಲ್ಲಿ ಆರ್ಸಿಬಿ, ಡೆಲ್ಲಿ ಡೇರ್ ಡೆವಿಲ್ಸ್, ಕೊಚ್ಚಿ ಟಸ್ಕರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ರು. 2023ರ ಐಪಿಎಲ್ನಲ್ಲಿ ರ್ಸಿಬಿ ಪರ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಕೇದಾರ್ ಜಾಧವ್ 2 ಪಂದ್ಯಗಳಲ್ಲಿ ಒಟ್ಟು 12 ರನ್ ಮಾತ್ರ ಗಳಿಸಿದ್ರು.
ಇದನ್ನೂ ಓದಿ: ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್