newsfirstkannada.com

ವಿವಾದ ಸೃಷ್ಟಿಯಾಗಿತ್ತು ವಿರಾಟ್ ಆಯ್ಕೆ.. ಇಂದು ಹೋಲ್​ಸೆಲ್ ಆಗಿ ಕೌಂಟರ್ ಕೊಡ್ತಿದ್ದಾರೆ ಕೊಹ್ಲಿ

Share :

Published June 5, 2024 at 6:42am

    T20 ವಿಶ್ವಕಪ್​ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಜಪ

    ಈ ಬಾರಿ ಅಮೆರಿಕಾದಲ್ಲಿ ವಿರಾಟರೂಪ ದರ್ಶನ ಪಕ್ಕಾ

    ವಿವಾದ ಸೃಷ್ಟಿಸಿದ್ದ ವಿರಾಟ್​ ವಿಶ್ವಕಪ್​​ ಆಯ್ಕೆ

ಚುಟುಕು ವಿಶ್ವಕಪ್​ ದಂಗಲ್​ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿಯ ಜಪ ಜೋರಾಗಿದೆ. ಅಮೆರಿಕಾದಲ್ಲಿ ವಿರಾಟರೂಪ ದರ್ಶನ ಪಕ್ಕಾ ಅಂತಾ ಫ್ಯಾನ್ಸ್​​ ಕಾದು ಕುಳಿತಿದ್ದಾರೆ. ಇದರ ನಡುವೆ ಕೆಲವು ಕ್ರಿಕೆಟ್​ ಪಂಡಿತರು ಕೊಹ್ಲಿಯನ್ನ ಟೀಕಿಸ್ತಿದ್ದಾರೆ. ಈ ಟೀಕೆಗಳಿಗೆಲ್ಲ ಹೋಲ್​ಸೇಲ್​ ಆನ್ಸರ್​​ ಕೊಟ್ಟು, ಫ್ಯಾನ್ಸ್​ ಫುಲ್​​ ಟ್ರೀಟ್​ ಕೊಡಲು ವಿರಾಟ್​ ಕೊಹ್ಲಿ ಸಜ್ಜಾಗ್ತಿದ್ದಾರೆ.

ಟಿ20 ವಿಶ್ವಕಪ್​ ಟೂರ್ನಿ ಈಗಾಗಲೇ ಆರಂಭವಾಗಿದ್ದು ವಿಶ್ವಕಪ್​​ ಸಮರದಲ್ಲಿ ಒಂದು ಪ್ರತಿಷ್ಟಿತ ಟ್ರೋಫಿ ಮೇಲೆ 20 ತಂಡಗಳು ಕಣ್ಣಿಟ್ಟಿವೆ.

ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

ವಿವಾದ ಸೃಷ್ಟಿಸಿದ್ದ ವಿರಾಟ್​ ವಿಶ್ವಕಪ್​​ ಆಯ್ಕೆ..!
ಈ ಟಿ20 ವಿಶ್ವಕಪ್​ ಟೂರ್ನಿಗೆ ವಿರಾಟ್​ ಕೊಹ್ಲಿ ಆಯ್ಕೆಯೇ ವಿವಾದವನ್ನ ಸೃಷ್ಟಿಸಿತ್ತು. ಟಿ20 ವಿಶ್ವಕಪ್​ ಸೆಲೆಕ್ಷನ್​ ಅಂದಾಗಲೇ ಮೊದಲು ಹುಟ್ಟಿದ್ದ ಪ್ರಶ್ನೆಯೇ ಕೊಹ್ಲಿಯ ಸ್ಟ್ರೈಕ್​ರೇಟ್​. ವಿರಾಟ್​ ಕೊಹ್ಲಿ ಸ್ಟ್ರೈಕ್​ರೇಟ್​​​ ಮುಂದಿಟ್ಟುಕೊಂಡು ಕ್ರಿಕೆಟ್​ ಪಂಡಿತರು ಪ್ರಶ್ನೆ ಮಾಡಿದ್ರು. ಕೆಲವರು, ಟಿ20ಗೆ ಅನ್​ಫಿಟ್​ ಅಂದಿದ್ರು. ಜೊತೆಗೆ ಕೊಹ್ಲಿ ಯಂಗ್​​ಸ್ಟರ್​​ ಜಾಗವನ್ನ ಬ್ಲಾಕ್​ ಮಾಡ್ತಿದ್ದಾರೆ ಅನ್ನೋ ವಾದವೂ ಹುಟ್ಟಿಕೊಂಡಿತ್ತು.

IPLಗೂ ಮುಂಚೆ ಕೊಹ್ಲಿ ಮೇಲೆ ಟೀಕೆಗಳ ಸುರಿಮಳೆ
ಐಪಿಎಲ್​ ಆರಂಭಕ್ಕೂ ಟೀಕೆಗಳ ಟೀಕೆಗಳು ಎದುರಾದ್ವು. ಸಾಮರ್ಥ್ಯದ ಬಗ್ಗೆಯೇ ಪ್ರಶ್ನೆಗಳು ಹುಟ್ಟಿದ್ವು. ಈ ಎಲ್ಲಾ ಟೀಕೆ-ಟಿಪ್ಪಣಿಗಳಿಗೆ ವಿರಾಟ್​ ಕೊಹ್ಲಿ, ಐಪಿಎಲ್​ ಅಖಾಡದಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಆನ್ಸರ್​ ಕೊಟ್ರು. ರನ್​ಮಳೆಯನ್ನೇ ಸುರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ರು. ಬ್ಯಾಟ್​ನಿಂದ ಮಾತ್ರವಲ್ಲ.. ಕೆಲವೊಮ್ಮೆ ಮಾತಿನಿಂದಲೂ ಪರೋಕ್ಷವಾಗಿ ತಿವಿದ್ರು.

ವಿಶ್ವಕಪ್​ ಅಖಾಡದಲ್ಲಿ ಕಿಂಗ್​ ಕೊಹ್ಲಿ 3.O ದರ್ಶನ?
ಐಪಿಎಲ್​ ಅಖಾಡದಲ್ಲಿ ಕಿಂಗ್​ ಕೊಹ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾಯ್ತು. ಇದೀಗ ಅದೇ ರೆಡ್​ ಹಾಟ್​ ಫಾರ್ಮ್​ನಲ್ಲಿ ವಿಶ್ವಕಪ್​ ಅಖಾಡಕ್ಕೆ ಎಂಟ್ರಿ ಕೊಡಲು ವಿರಾಟ್​ ಕೊಹ್ಲಿ ಸಜ್ಜಾಗಿದ್ದಾರೆ. ವಿಶ್ವಕಪ್​ ತಂಡವನ್ನ ಸೇರೋಕೆ ಮೊದಲೇ, ಟೀಕೆಗಳು ಮತ್ತೆ ಹೆಚ್ಚಾಗಿವೆ. ಐಪಿಎಲ್​ ಅಖಾಡದಲ್ಲಿ 150+ ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸಿರೋ ವಿರಾಟ್​ ಕೊಹ್ಲಿ, ಅಮೆರಿಕಾದಲ್ಲೂ ಆರ್ಭಟಿಸ್ತಾರೆ ಅನ್ನೋದು ಅಭಿಮಾನಿಗಳು ನಿರೀಕ್ಷೆಯಾಗಿದೆ.

ಐಪಿಎಲ್​ ಟೂರ್ನಿಯಂತೆ​ ಟಿ20 ವಿಶ್ವಕಪ್​ ಟೂರ್ನಿಗೂ ಕೊಹ್ಲಿನೆ ಕಿಂಗ್​. ಈ ಹಿಂದೆ ಆಡಿದ ಎಲ್ಲಾ ಟಿ20 ವಿಶ್ವಕಪ್​​ಗಳಲ್ಲಿ ಸಾಲಿಡ್​​ ಪರ್ಫಾಮೆನ್ಸ್​ ನೀಡಿರೋ ಟ್ರ್ಯಾಕ್​ ರೆಕಾರ್ಡ್​ ಕೊಹ್ಲಿಯದ್ದಾಗಿದೆ. ಬಿಗ್​​ಸ್ಟೇಜ್​, ಬಿಗ್​ಗೇಮ್​, ಹೈಪ್ರೆಶರ್​ ಗೇಮ್​ಗಳಲ್ಲಿ ಕೊಹ್ಲಿಯಷ್ಟು ಕಾಮ್​ ಆಗಿ ಇನ್ನಿಂಗ್ಸ್​ ಕಟ್ಟೋ ಬ್ಯಾಟ್ಸ್​ಮನ್​ ಮತ್ತೊಬ್ಬ ಇಲ್ಲ. ಫ್ಯಾನ್ಸ್​ ನಿರೀಕ್ಷೆಯಂತೆ ಈ ಟೂರ್ನಿಯಲ್ಲಿ ಕೊಹ್ಲಿ ಸಾಲಿಡ್​ ಆಟವಾಡಲಿ. ಟಿ20 ವಿಶ್ವಕಪ್​ ಗೆಲ್ಲಿಸಿ, ಟೀಮ್​ ಇಂಡಿಯಾಗಿರೋ ICC ಟ್ರೋಫಿ ಬರವನ್ನ ನೀಗಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

ಇದನ್ನೂ ಓದಿ:ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿವಾದ ಸೃಷ್ಟಿಯಾಗಿತ್ತು ವಿರಾಟ್ ಆಯ್ಕೆ.. ಇಂದು ಹೋಲ್​ಸೆಲ್ ಆಗಿ ಕೌಂಟರ್ ಕೊಡ್ತಿದ್ದಾರೆ ಕೊಹ್ಲಿ

https://newsfirstlive.com/wp-content/uploads/2024/05/Kohli_Team-India_1.jpg

Load More