newsfirstkannada.com

VIDEO: ‘ನಮ್ಮ ಮಕ್ಕಳನ್ನು ನಮಗೆ ಕೊಡಿ’- ಲಕ್ಷ, ಲಕ್ಷ ಕೊಟ್ಟು ಖರೀದಿಸಿದ್ದ ಬಾಡಿಗೆ ಪೋಷಕರ ಕಣ್ಣೀರು

Share :

Published May 28, 2024 at 9:46pm

  ತಂದೆ-ತಾಯಿಯಿಂದ ದೂರವಾದ ಮಕ್ಕಳ ಗೋಳಾಟ ಒಂದು ಕಡೆ

  ಮಕ್ಕಳಿಂದ ದೂರವಾದ ಬಾಡಿಗೆ ಪೋಷಕರ ರೋದನೆ ಮತ್ತೊಂದು ಕಡೆ

  ಮಾರಾಟ ಮಾಡಿದ್ದ ಮಕ್ಕಳು ಹಾಗೂ ಖದೀಮರು ಈಗ ಪೊಲೀಸರ ವಶ

ಹೈದರಾಬಾದ್: ನಿಜಕ್ಕೂ ಇದು ಕರುಣಾಜನಕ ಸ್ಟೋರಿ. ತಂದೆ-ತಾಯಿಯಿಂದ ದೂರವಾದ ಮಕ್ಕಳು ಒಂದು ಕಡೆ, ಮಕ್ಕಳಿಂದ ದೂರವಾದ ಬಾಡಿಗೆ ಪೋಷಕರು ಮತ್ತೊಂದು ಕಡೆ. ಅಬ್ಬಾ.. ಈ ಕಣ್ಣೀರಿನ ಕಥೆ ಕೇಳಿದ್ರೆ ಕರುಳು ಹಿಂಡುವಂತೆ ಆಗುತ್ತೆ.

ಈಗಷ್ಟೇ ಹುಟ್ಟಿದ ಎಳೆಯ ಮಕ್ಕಳು ತಾಯಿಯ ಮಡಿಲಲ್ಲಿ ಬೆಚ್ಚಗೆ ಬೆಳೆಯಬೇಕು. ಆದರೆ ಉತ್ತರ ಭಾರತದಿಂದ ಎಳೆಯ ಮಕ್ಕಳನ್ನು ತಂದು ಲಕ್ಷ, ಲಕ್ಷ ಹಣಕ್ಕಾಗಿ ಮಾರಾಟ ಮಾಡಿರೋ ಜಾಲವೊಂದು ಹೈದರಾಬಾದ್‌ನಲ್ಲಿ ಪತ್ತೆಯಾಗಿದೆ. ದೆಹಲಿ, ಲಕ್ನೋ, ಪುಣೆಯಿಂದ ಎಳೆಯ ಮಕ್ಕಳನ್ನು ತಂದು ಹೈದರಾಬಾದ್‌ ಸುತ್ತಮುತ್ತ ಹಣಕ್ಕಾಗಿ ಮಾರಾಟ ಮಾಡಿದ್ದಾರೆ.

ಈ ಅಂತರ್ ರಾಜ್ಯ ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಹೈದರಾಬಾದ್‌ನ ರಚಕೊಂಡ ಪೊಲೀಸರು ಬೇಧಿಸಿದ್ದಾರೆ. ಈ ಜಾಲದಲ್ಲಿ ಎಳೆಯ ಮಕ್ಕಳನ್ನು 1.8 ಲಕ್ಷ ರೂಪಾಯಿಯಿಂದ 5.5 ಲಕ್ಷ ರೂಪಾಯಿವರೆಗೂ ಮಾರಾಟ ಮಾಡಿರೋದು ಪತ್ತೆಯಾಗಿದೆ.

ಹೈದರಾಬಾದ್‌ನಲ್ಲಿ ಅಂತರ್ ರಾಜ್ಯ ಮಕ್ಕಳ ಕಳ್ಳಸಾಗಣೆ ಮಾಡಲಾಗಿದ್ದ 13 ಶಿಶುಗಳನ್ನ ರಕ್ಷಣೆ ಮಾಡಲಾಗಿದೆ. ಇದರಲ್ಲಿ 4 ಗಂಡು ಮತ್ತು 9 ಹೆಣ್ಣು ಮಕ್ಕಳಿದ್ದಾರೆ. ಹಲವು ಮಕ್ಕಳು 2 ತಿಂಗಳ ಹಸುಗೂಸುಗಳು ಅನ್ನೋದು ಮತ್ತೊಂದು ಅಚ್ಚರಿಯ ವಿಷಯವಾಗಿದೆ.

ಇದನ್ನೂ ಓದಿ: ಹೆಂಡ್ತಿ ಕೊಲೆ ಮಾಡಿ ಚರ್ಮ ಸುಲಿದ.. ನರರಾಕ್ಷಸನ ಕೃತ್ಯಕ್ಕೆ ಬೆಚ್ಚಿ ಬಿದ್ದ ಪೊಲೀಸರು; ಹತ್ಯೆಗೆ ಕಾರಣವೇನು? 

ಉತ್ತರ ಭಾರತದಿಂದ ಎಳೆಯ ಮಕ್ಕಳನ್ನು ತಂದು ಮಾರಾಟ ಮಾಡಿದ್ದ ಮಕ್ಕಳು ಹಾಗೂ ಖದೀಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಸನರ್ ಶೋಭಾ ರಾಣಿ ಸೇರಿದಂತೆ 11 ಮಂದಿ ಬಂಧನ ಮಾಡಲಾಗಿದೆ. ದುಡ್ಡು ಕೊಟ್ಟು ಖರೀದಿ ಮಾಡಿದ್ದವರಿಂದ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಡಿಗೆ ಪೋಷಕರ ಕಣ್ಣೀರು
ಉತ್ತರ ಭಾರತದಿಂದ ಕಳ್ಳ ಸಾಗಾಣಿಕೆಯಾದ ಮಕ್ಕಳು ಸದ್ಯ ಪೊಲೀಸರ ವಶದಲ್ಲಿವೆ. ಆದರೆ ಪೊಲೀಸ್ ಠಾಣೆಯ ಮುಂದೆ ಬಂದು ತಾವು ಖರೀದಿಸಿದ್ದ ಮಕ್ಕಳನ್ನು ಮತ್ತೆ ತಮಗೆ ಕೊಡಿ ಎಂದು ಬಾಡಿಗೆ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರ ನಿಗೂಢ ಸಾವು; ಏನಿದು ಡೆತ್ ಮಿಸ್ಟರಿ? 

ತಮಗೆ ಮಕ್ಕಳಿಲ್ಲ, ಹೀಗಾಗಿ ಮಕ್ಕಳನ್ನು ಹಣ ಕೊಟ್ಟು ಪಡೆದಿದ್ದೇವೆ. ಮಕ್ಕಳ ಜೊತೆಗೆ ತಮಗೆ ಭಾವನಾತ್ಮಕ ನಂಟು ಬೆಳೆದಿದೆ. ದುಡ್ಡು ಕೊಟ್ಟು ಖರೀದಿಸಿದ್ದ ಪೋಷಕರು, ನಮ್ಮ ಮಕ್ಕಳನ್ನು ನಮಗೆ ವಾಪಸ್ ಕೊಡಿ ಎಂದು ಪೊಲೀಸ್ ಠಾಣೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಪೊಲೀಸರು ಆ ಮಕ್ಕಳನ್ನು ನಿಜವಾದ ಹೆತ್ತ ತಂದೆ-ತಾಯಿಗಳಿಗೆ ವಾಪಸ್ ಕೊಡಲು ಯತ್ನಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ನಮ್ಮ ಮಕ್ಕಳನ್ನು ನಮಗೆ ಕೊಡಿ’- ಲಕ್ಷ, ಲಕ್ಷ ಕೊಟ್ಟು ಖರೀದಿಸಿದ್ದ ಬಾಡಿಗೆ ಪೋಷಕರ ಕಣ್ಣೀರು

https://newsfirstlive.com/wp-content/uploads/2024/05/Hyderabad-Child-Sale.jpg

Load More