newsfirstkannada.com

ಪುಷ್ಪಾ 2 ಸಲಾರ್ ದಾಖಲೆ ಬ್ರೇಕ್ ಮಾಡಿದ್ಯಾ? ಇಲ್ವಾ? ಅಲ್ಲು ಅರ್ಜುನ್-ಪ್ರಭಾಸ್​ ಫ್ಯಾನ್ಸ್ ಮಧ್ಯೆ ಬಿಗ್‌ ವಾರ್

Share :

Published April 11, 2024 at 12:40pm

    ಅಲ್ಲು ಅರ್ಜುನ್ ಬರ್ತ್​​ಡೇ ದಿನ ಬಿಡುಗಡೆಯಾಗಿದ್ದ ಪುಷ್ಪಾ2 ಟೀಸರ್​

    ಒಂದೇ ದಿನದಲ್ಲಿ ಸಲಾರ್ ಎಷ್ಟು ಮಿಲಿಯನ್ ವೀವ್ಸ್​ ಆಗಿತ್ತು ಗೊತ್ತಾ?

    ಅಲ್ಲು ಅರ್ಜುನ್- ಪ್ರಭಾಸ್ ಅಭಿಮಾನಿಗಳ ಮಧ್ಯೆ ಟಾಕ್ ವಾರ್

ಟಾಲಿವುಡ್​ ಸಿನಿಮಾ ಹೀರೋಗಳಿಗೆ ಅಭಿಮಾನಿಗಳ ಬಳಗದಲ್ಲಿ ಆಗಾಗ ಸಂಘರ್ಷ ಆಗ್ತಾ ಇರುತ್ತವೆ. ಕೆಲವು ದಿನಗಳ ಹಿಂದಷ್ಟೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಫ್ಯಾನ್ಸ್ ಪ್ರಭಾಸ್​ ಅಭಿಮಾನಿಯೊಬ್ಬರಿಗೆ ಬೆಂಗಳೂರಿನಲ್ಲಿ ಥಳಿಸಿದ್ದರು. ಟಾಲಿವುಡ್​ನಲ್ಲಿ ಈ ರೀತಿ ಫ್ಯಾನ್ಸ್​ ವಾರ್ ಕಾಮಾನ್ ಆಗಿ ಬಿಟ್ಟಿದೆ. ಮೊನ್ನೆಯಷ್ಟೇ ಪುಷ್ಪಾ-2 ಸಿನಿಮಾದ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಸದ್ಯ ಈ ಸಂಬಂಧ ಡಾರ್ಲಿಂಗ್ ಮತ್ತು ಸ್ಟೈಲೀಶ್​ ಸ್ಟಾರ್ ಫ್ಯಾನ್ಸ್ ಮಧ್ಯೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಅಲ್ಲು ಅರ್ಜುನ್ ಬರ್ತ್​​ಡೇ ಹಿನ್ನೆಲೆಯಲ್ಲಿ ಏ.8 ರಂದು ಪುಷ್ಪಾ-2 ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ರಿಲೀಸ್ ಆದ ಮೂರು ದಿನಗಳಲ್ಲಿ ಒಟ್ಟು 97 ಮಿಲಿಯನ್​ ವೀವ್ಸ್​ ಕಂಡರೆ, 1.4 ಮಿಲಿಯನ್​ ಲೈಕ್ಸ್​ ಪಡೆದು ದಾಖಲೆ ಬರೆದಿದೆ. ಆದರೆ ಇದನ್ನು ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಕಡಿಮೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಲ್ಲು ಅರ್ಜುನ್ ಫ್ಯಾನ್ಸ್​ ಇದರಿಂದ ನಿರಾಸೆ ಅನುಭವಿಸಿದರೆ, ಪ್ರಭಾಸ್ ಫ್ಯಾನ್ಸ್ ಫುಲ್ ಜೋಶ್ ಆಗಿ ‘ಖಾನ್ಸರ್​’​​ಗೆ ಒಬ್ಬನೇ ಕಿಂಗ್, ಗಲ್ಲಾ ಪೆಟ್ಟಿಗೆಯಲ್ಲಿ ಪ್ರಭಾಸ್​ ಒಬ್ಬರೇ ಕಿಂಗ್​ಡಮ್ ಎಂದು ಬೀಗುತ್ತಿದ್ದಾರೆ.

ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

ಇದನ್ನೂ ಓದಿ: ‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

ಪುಷ್ಪಾ-2 ಸಿನಿಮಾ ರಿಲೀಸ್ ಆದ 24 ಗಂಟೆಗಳಲ್ಲಿ ಕೇವಲ 39 ಮಿಲಿಯನ್​ ಅಷ್ಟೇ ವೀಕ್ಷಣೆ ಪಡೆದುಕೊಂಡಿದೆ. ಇದನ್ನು ಪ್ರಭಾಸ್ ಅವರ ಸಲಾರ್ ಮೂವಿಗೆ ಹೋಲಿಸಿದರೆ ಶೇಕಡಾ 53 ರಷ್ಟು ಕಡಿಮೆ ಆಗಿದೆ. ಸಲಾರ್ ಮೂವಿ 24 ಗಂಟೆಯಲ್ಲಿ 83 ಮಿಲಿಯನ್ ವೀವ್ಸ್​ ಆಗಿತ್ತು. ಇದರಿಂದ ಕೆಜಿಎಫ್​ನ 68 ಮಿಲಿಯನ್ ವೀವ್ಸ್​ ಹಾಗೂ ಆದಿಪುರುಷ್ ಸಿನಿಮಾದ 69 ಮಿಲಿಯನ್​ ವೀವ್ಸ್​ನ ರೆಕಾರ್ಡ್​ ಬ್ರೇಕ್ ಮಾಡಿತ್ತು. ಆದರೆ ಮೊನ್ನೆ ರಿಲೀಸ್ ಆದ ಪುಷ್ಪಾ-2 ಟೀಸರ್​ ವೀಕ್ಷಣೆಯಲ್ಲಿ ಭಾರೀ ಹಿಂದೆ ಉಳಿದಿದೆ ಎಂದು ಹೇಳಲಾಗುತ್ತಿದೆ. ಇದೇ ಫ್ಯಾನ್ಸ್​ಗಳ ಮಧ್ಯೆ ಕೋಲ್ಡ್​ ವಾರ್​ಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪಾ 2 ಸಲಾರ್ ದಾಖಲೆ ಬ್ರೇಕ್ ಮಾಡಿದ್ಯಾ? ಇಲ್ವಾ? ಅಲ್ಲು ಅರ್ಜುನ್-ಪ್ರಭಾಸ್​ ಫ್ಯಾನ್ಸ್ ಮಧ್ಯೆ ಬಿಗ್‌ ವಾರ್

https://newsfirstlive.com/wp-content/uploads/2024/04/PRABHAS_YASH.jpg

Load More