Air Taxi: ಜಸ್ಟ್ 7 ನಿಮಿಷದಲ್ಲಿ ದೆಹಲಿ to ಗುರುಗ್ರಾಮ್ ಏರ್​ ಟ್ಯಾಕ್ಸಿ ಸೇವೆ ; ಬೆಂಗಳೂರು ಟ್ರಾಫಿಕ್​ಗೂ ಸಿಗಲಿದೆ ಮುಕ್ತಿ..!

ದೆಹಲಿ ಮತ್ತು ಎನ್‌ಸಿಆರ್ (NCR) ಜನರಿಗೆ ಟ್ರಾಫಿಕ್ ದಟ್ಟಣೆ ಎಂದರೆ ನಿತ್ಯದ ನರಕ. ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವ ಸಂಕಷ್ಟಕ್ಕೆ ಇದೀಗ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಬಹುನಿರೀಕ್ಷಿತ ‘ಏರ್ ಟ್ಯಾಕ್ಸಿ’ (Air Taxi) ಸೇವೆ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ.

author-image
Ganesh Kerekuli
Air Taxi
Advertisment
  • ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳೋ ಸಮಯ ಬಂದಾಗಿದೆ
  • ದೆಹಲಿಯಲ್ಲಿ 2026ರಿಂದಲೇ ಏರ್​ಟ್ಯಾಕ್ಸಿ ಸೇವೆ ಶುರುವಾಗಲಿ
  • ಕ್ಯಾಬ್‌ಗಿಂತ ಸ್ವಲ್ಪ ದುಬಾರಿ ಎನಿಸಿದರೂ, ವಿಮಾನದಷ್ಟು ದುಬಾರಿಯಲ್ಲ

ನವದೆಹಲಿ: ದೆಹಲಿ ಮತ್ತು ಎನ್‌ಸಿಆರ್ (NCR) ಜನರಿಗೆ ಟ್ರಾಫಿಕ್ ದಟ್ಟಣೆ ಎಂದರೆ ನಿತ್ಯದ ನರಕ. ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವ ಸಂಕಷ್ಟಕ್ಕೆ ಇದೀಗ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ.  ಬಹುನಿರೀಕ್ಷಿತ ‘ಏರ್ ಟ್ಯಾಕ್ಸಿ’ (Air Taxi) ಸೇವೆ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ.

2026ರಲ್ಲಿ ಭಾರತದ ಆಕಾಶದಲ್ಲಿ ಹಾರಾಡಲಿರುವ ಈ ಏರ್ ಟ್ಯಾಕ್ಸಿಯ ಪ್ರಮುಖಾಂಶಗಳು ಇಲ್ಲಿದೆ. ರಸ್ತೆ ಮಾರ್ಗದಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್‌ನಿಂದ (CP) ಗುರುಗ್ರಾಮಕ್ಕೆ ಹೋಗಲು ಕನಿಷ್ಠ 90 ನಿಮಿಷ (ಒಂದೂವರೆ ಗಂಟೆ) ಬೇಕಾಗುತ್ತದೆ. ಈ ಏರ್ ಟ್ಯಾಕ್ಸಿ ಮೂಲಕ ಕೇವಲ 7 ರಿಂದ 12 ನಿಮಿಷಗಳಲ್ಲಿ ನೀವು ಆಫೀಸ್ ತಲುಪಬಹುದು. 

ಇದನ್ನು ಓದಿ: IND vs PAK ಮ್ಯಾಚ್​ಗಾಗಿ ಹೈಡ್ರಾಮಾ! ICC ಮುಂದೆ 5 ಬೇಡಿಕೆ ಇಟ್ಟ ಪಾಕ್.. 3 ರಿಜೆಕ್ಟ್, ಜಯ್ ಶಾ ಖಡಕ್ ಉತ್ತರ ಏನು..?

ಯಾವಾಗ ಆರಂಭ?

ಇಂಡಿಗೋ (IndiGo) ಮಾತೃಸಂಸ್ಥೆಯಾದ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಮತ್ತು ಅಮೆರಿಕದ ಆರ್ಚರ್ ಏವಿಯೇಷನ್ ಸೇರಿ ಈ ಸೇವೆಯನ್ನು ಒದಗಿಸುತ್ತಿವೆ. 2026ರಲ್ಲೇ ಈ ಸೇವೆ ವಾಣಿಜ್ಯ ಬಳಕೆಗೆ ಮುಕ್ತವಾಗಲಿದೆ ಎಂದು ವರದಿಗಳು ತಿಳಿಸಿವೆ. ಸಾಮಾನ್ಯ ಕ್ಯಾಬ್‌ಗಿಂತ ಸ್ವಲ್ಪ ದುಬಾರಿ ಎನಿಸಿದರೂ, ವಿಮಾನದಷ್ಟು ದುಬಾರಿಯಲ್ಲ. ವರದಿಗಳ ಪ್ರಕಾರ, ಪ್ರತಿ ಪ್ರಯಾಣಿಕರಿಗೆ 2,000 ದಿಂದ 3,000 ರೂಪಾಯಿ ದರ ನಿಗದಿಯಾಗುವ ಸಾಧ್ಯತೆ ಇದೆ. ಇದು ಉಬರ್ (Uber) ಬ್ಲ್ಯಾಕ್ ನಂತಹ ಪ್ರೀಮಿಯಂ ಕ್ಯಾಬ್ ಸೇವೆಗೆ ಸಮನಾಗಿರಲಿದೆ.

ವಿಶೇಷತೆ ಏನು?

ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳಾಗಿವೆ. ಅಂದರೆ ಹೆಲಿಕಾಪ್ಟರ್‌ನಂತೆ ಲಂಬವಾಗಿ ಮೇಲೇರುತ್ತವೆ ಮತ್ತು ಇಳಿಯುತ್ತವೆ. ಶಬ್ದ ಮಾಲಿನ್ಯವೂ ಕಡಿಮೆ. ಇದರಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರು ಪ್ರಯಾಣಿಸಬಹುದು.

ಮೊದಲ ಮಾರ್ಗ: ಮೊದಲ ಹಂತದಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್‌ನಿಂದ ಹರಿಯಾಣದ ಗುರುಗ್ರಾಮದ ನಡುವೆ ಈ ಹಾರಾಟ ನಡೆಯಲಿದೆ. ನಂತರ ಮುಂಬೈ ಮತ್ತು ಬೆಂಗಳೂರಿಗೂ ವಿಸ್ತರಿಸುವ ಯೋಜನೆಯಿದೆ. ಒಟ್ಟಿನಲ್ಲಿ, ದೆಹಲಿಯ ಆಕಾಶದಲ್ಲಿ ಹಾರಾಡುವ ಕಾರುಗಳ ಕನಸು 2026ರಲ್ಲಿ ನನಸಾಗುತ್ತಿದ್ದು, ಪ್ರಯಾಣಿಕರ ಸಮಯ ಉಳಿತಾಯಕ್ಕೆ ಇದು ರಾಮಬಾಣವಾಗಲಿದೆ.

ಇದನ್ನು ಓದಿ:ನಾಯಿ ಕಡಿತಕ್ಕೆ 3 ಇಂಜೆಕ್ಷನ್ ಪಡೆದ್ರೂ ಉಳಿಯಲಿಲ್ಲ ಪ್ರಾಣ.. ಹೃದಯ ವಿದ್ರಾವಕ ಘಟನೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Air Taxi
Advertisment