Advertisment

ಬೆಂಗಳೂರಿಗೂ ಬಂತು ಚಾಲಕ ರಹಿತ ಕಾರು.. ಹೆಂಗೆ ಓಡುತ್ತೆ ನೋಡಿ.. VIDEO

ಆರ್​ವಿ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್​ನಲ್ಲಿ ವಿಶೇಷ ಡ್ರೈವರ್ಲೆಸ್ ಕಾರು ಅನಾವರಣಗೊಳಿಸಲಾಗಿದೆ. ವಿಪ್ರೋ, ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಮೈಸೂರು ರಸ್ತೆಯಲ್ಲಿರುವ ಆರ್​ವಿ ಎಂಜಿನಿಯರಿಂಗ್ ಕಾಲೇಜುಗಳ ಸಹಯೋಗದಲ್ಲಿ ಡ್ರೈವರ್ ಲೆಸ್ ಕಾರು ಅಭಿವೃದ್ಧಿಪಡಿಸಲಾಗಿದೆ.

author-image
Ganesh Kerekuli
Driver less car
Advertisment

ಬೆಂಗಳೂರು: ಆರ್​ವಿ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್​ನಲ್ಲಿ (IISc & RV college) ವಿಶೇಷ ಡ್ರೈವರ್ಲೆಸ್ ಕಾರು ಅನಾವರಣಗೊಳಿಸಲಾಗಿದೆ. ವಿಪ್ರೋ, ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಮೈಸೂರು ರಸ್ತೆಯಲ್ಲಿರುವ ಆರ್​ವಿ ಎಂಜಿನಿಯರಿಂಗ್ ಕಾಲೇಜುಗಳ ಸಹಯೋಗದಲ್ಲಿ ಡ್ರೈವರ್ ಲೆಸ್ ಕಾರು ಅಭಿವೃದ್ಧಿಪಡಿಸಲಾಗಿದೆ. 

Advertisment

ಈ ವೇಳೆ ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮಿಗಳು ಈ ಕಾರಿನಲ್ಲಿ ಮೊದಲ ಪ್ರಯಾಣ ಮಾಡಿ ಗಮನ ಸೆಳೆದರು. ಭಾರತದ ರಸ್ತೆಗಳಲ್ಲಿ ಸಂಚರಿಸಲು ಎದುರಾಗುವ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು ಈ ಡ್ರೈವರ್ ಲೆಸ್ ಕಾರನ್ನ ತಯಾರಿಸಲಾಗಿದೆ. ಈ ಕಾರು ಸಂಪೂರ್ಣ ಕೃತಕ ಬುದ್ಧಿಮತ್ತೆ, ಸೆನ್ಸರ್‌ಗಳು ಮತ್ತು ಕ್ಯಾಮೆರಾ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ: QR ಕೋಡ್​​ ಸ್ಕ್ಯಾನ್​ಗೆ ಇನ್ಮುಂದೆ ಮೊಬೈಲ್​ ಬೇಕಿಲ್ಲ.. ನಿಮ್ಮ ಕಣ್ಣುಗಳಿಂದಲೇ​ ಮಾಡಬಹುದು, ಹೇಗೆ?

ಜೊತೆಗೆ ರಸ್ತೆಗಳ ಗುರುತು, ಟ್ರಾಫಿಕ್ ಸಿಗ್ನಲ್ ಮತ್ತು ಪಾದಚಾರಿಗಳ ಚಲನೆಗಳನ್ನ ಗುರುತಿಸಿ ಸ್ವಯಂಪ್ರೇರಿತವಾಗಿ ಚಾಲನೆ ಮಾಡಲಿದೆ. ವಿಶೇಷ ಅಂದ್ರೆ ಈ ಪ್ರಾಜೆಕ್ಟ್​ನಲ್ಲಿ ಆರ್​ವಿ ಎಂಜಿನಿಯರಿಂಗ್ ಕಾಲೇಜು ಕೂಡ ಕೈಜೋಡಿಸಿದೆ. ಕಾಲೇಜಿನ ವಿದ್ಯಾರ್ಥಿಗಳೂ ಕೂಡ ಈ ಪ್ರಾಜೆಕ್ಟ್​ನಲ್ಲಿ ಭಾಗಿಯಾಗಿದ್ದರು.  
ಡ್ರೈವರ್​ಲೆಸ್ ಪ್ರೋಟೋಟೈಪ್ ಕಾರನ್ನು ಅನಾವರಣಗೊಳಿಸಿರುವ ಬಗ್ಗೆ ಐಐಎಸ್​ಸಿ, ವಿಪ್ರೋ ಹಾಗೂ ಆರ್​ವಿ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಯಾವುದೇ ಅಧೀಕೃತ ಮಾಹಿತಿ ಕೊಟ್ಟಿಲ್ಲವಾದರೂ ಕಾರನ್ನ ಅನಾವರಣಗೊಳಿಸಿರುವ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.

Advertisment

ಇದನ್ನೂ ಓದಿ: ನಿಮ್ಮ ಮಗುವಿನ ಹೆಸರಲ್ಲಿ instagram ಖಾತೆ ಇದ್ಯಾ? ಹೊಸ ಗೈಡ್​ಲೈನ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Driverless car
Advertisment
Advertisment
Advertisment