/newsfirstlive-kannada/media/media_files/2025/10/08/first-hybrid-phone-2025-10-08-10-11-12.jpg)
HMD Touch 4G: ನೋಕಿಯಾ ಬ್ರಾಂಡ್ ಫೋನ್‌ಗಳ ತಯಾರಕ HMD ಭಾರತದಲ್ಲಿ ಹೊಸ ಫೋನ್ ಬಿಡುಗಡೆ ಮಾಡಿದೆ. ಇದನ್ನು ದೇಶದ ಮೊದಲ ಹೈಬ್ರಿಡ್ ಫೋನ್ (First hybrid phone) ಎಂದು ಕಂಪನಿ ಕರೆದಿದೆ.
ಇದು ಸ್ಮಾರ್ಟ್‌ಫೋನ್ ಮತ್ತು ಫೀಚರ್ ಫೋನ್ ಎರಡರ ಫೀಚರ್ಸ್​ ಹೊಂದಿದೆ. HMD ಟಚ್ 4G ಎಂದು ಕರೆಯಲ್ಪಡುವ ಈ ಫೋನ್, ಫೀಚರ್ ಫೋನ್ (Feature phone) ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಬಯಸೋರಿಗೆ ಉತ್ತಮ ಆಯ್ಕೆಯಾಗಿದೆ.
HMD ಟಚ್ 4G ವಿಶೇಷತೆಗಳೇನು..?
320x240 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಈ ಫೋನ್​ನ ಸ್ಕ್ರೀನ್ 3.2-ಇಂಚು. ಕಂಪನಿಯು ಪ್ಯಾನಲ್ ವಿವರಗಳನ್ನು ಬಹಿರಂಗಪಡಿಸಿಲ್ಲ. ಚಿಕ್ಕದಾದರೂ ಫೀಚರ್ಸ್​​ಗಳಲ್ಲಿ ರಾಜಿ ಮಾಡಿಕೊಂಡಿಲ್ಲ. ಫೋನ್ ಎಕ್ಸ್‌ಪ್ರೆಸ್ ಚಾಟ್ ಅಪ್ಲಿಕೇಶನ್ ಹೊಂದಿದ್ದು, ಇದು ಚಾಟಿಂಗ್ ಅಪ್ಲಿಕೇಶನ್‌ನಂತೆ ಕಾರ್ಯನಿರ್ವಹಿಸುತ್ತದೆ. ವೀಡಿಯೊ ಕರೆಗಳನ್ನೂ ಮಾಡಬಹುದು. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 0.3MP ಫ್ರಂಟ್ ಕ್ಯಾಮೆರಾ ಮತ್ತು 2MP ಬ್ಯಾಕ್ ಕ್ಯಾಮರಾ ಇಡಲಾಗಿದೆ. ಬ್ಯಾಕ್ ಕ್ಯಾಮೆರಾ LED ಫ್ಲ್ಯಾಷ್‌ನೊಂದಿಗೆ ಬರುತ್ತದೆ.
ಇದನ್ನೂ ಓದಿ:ಕೋಲಾರದ ವೇಮಗಲ್ ನಲ್ಲಿ ಎಚ್ 125 ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ಘಟಕ ಆರಂಭ
ಪ್ರೊಸೆಸರ್ ಮತ್ತು ಬ್ಯಾಟರಿ
ಟಚ್ 4G ಫೋನ್ HMD ಯುನಿಸಾಕ್ T127 ಪ್ರೊಸೆಸರ್ ಹೊಂದಿದೆ. ಈ ಫೋನ್ ರಿಯಲ್-ಟೈಮ್ ಆಪರೇಟಿಂಗ್ ಸಿಸ್ಟಮ್ (RTOS) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1,950mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದೆ. ಒಮ್ಮೆ ಚಾರ್ಜ್​ ಮಾಡಿದ್ರೆ 30 ಗಂಟೆ ಬಳಸಬಹುದಾಗಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಹೊಂದಿದೆ.
ಬೆಲೆ ಎಷ್ಟು?
ಕಂಪನಿಯು 64MB RAM ಮತ್ತು 128MB ಸ್ಟೋರೇಜ್‌ನೊಂದಿಗೆ ಫೋಣ್ ಬಿಡುಗಡೆ ಮಾಡಿದೆ. ಮೈಕ್ರೋ SD ಕಾರ್ಡ್ ಮೂಲಕ ಸ್ಟೋರೇಜ್ 32GB ವರೆಗೆ ವಿಸ್ತರಿಸಬಹುದು. ಇದರ ಬೆಲೆ ₹3,999 ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.
ಇದನ್ನೂ ಓದಿ:EMIನಲ್ಲಿ ಫೋನ್ ಖರೀದಿಸಿದ್ದವರಿಗೆ RBI ಬಿಗ್ ಶಾಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ