/newsfirstlive-kannada/media/media_files/2025/08/19/iphone-1-2025-08-19-09-02-44.jpg)
ಐಫೋನ್ (iPhone) ಪ್ರಿಯರ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಮುಂದಿನ ತಿಂಗಳು ಹೊಸ ಐಫೋನ್ 17 ಸಿರೀಸ್ ಬಿಡುಗಡೆ ಆಗುವ ನಿರೀಕ್ಷೆ ಇದೆ. ಲೇಟೆಸ್ಟ್ ವಿಷಯ ಏನೆಂದರೆ ಐಫೋನ್ 17 ಮಾದರಿಯ ಉತ್ಪಾದನೆ ಭಾರತದಲ್ಲಿ ಪ್ರಾರಂಭವಾಗಿದೆ. ವರದಿಗಳ ಪ್ರಕಾರ.. ಈ ಫೋನ್ ಅನ್ನು ಕರ್ನಾಟಕದಲ್ಲಿರುವ ಫಾಕ್ಸ್‌ಕಾನ್ (Foxconn) ಸ್ಥಾವರದಲ್ಲಿ ಉತ್ಪಾದಿಸಲಾಗ್ತಿದೆ. ದೇವನಹಳ್ಳಿಯಲ್ಲಿರುವ Foxconn ಕಂಪನಿಯಲ್ಲಿ ಉತ್ಪಾದನೆ ಆರಂಭವಾಗಲಿದೆ.
ಇದನ್ನೂ ಓದಿ: WhatsApp ಬಳಸುವವರೇ.. ಕೇಂದ್ರ ಸರ್ಕಾರದಿಂದ ರೆಡ್ ಅಲರ್ಟ್, ಎಚ್ಚೆತ್ತುಕೊಳ್ಳಿ..!
ಆಪಲ್ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಕ್ರಮೇಣ ಹೆಚ್ಚಿಸುತ್ತಿದೆ. 2024-25 ರಲ್ಲಿ ಕಂಪನಿಯು ಭಾರತದಲ್ಲಿ ಸುಮಾರು 4 ಕೋಟಿ ಐಫೋನ್‌ಗಳನ್ನು ಉತ್ಪಾದಿಸಿತು. ಈ ವರ್ಷ 6 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ. ಫಾಕ್ಸ್‌ಕಾನ್ ಭಾರತದಲ್ಲಿ ಐಫೋನ್ ಉತ್ಪಾದಿಸುತ್ತದೆ. ಕಂಪನಿಯು 2023ರಲ್ಲಿ ಅನುಮೋದನೆ ಪಡೆಯಿತು ಮತ್ತು ಸೆಟಪ್‌ಗಾಗಿ 24,000 ಕೋಟಿ ರೂ.ಗಳಿಗಿಂತ ಹೆಚ್ಚು ಹೂಡಿಕೆ ಮಾಡಿದೆ.
ಐಫೋನ್ 17 ಸರಣಿ ಮುಂದಿನ ತಿಂಗಳು ರಿಲೀಸ್
ಐಫೋನ್ 17 ಸರಣಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಬಹುದು. ಈ ಸರಣಿಯಲ್ಲಿ ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳು ಸೇರಿವೆ. ಈ ಸರಣಿಯಲ್ಲಿ 256GB ಬೇಸ್ ಸ್ಟೋರೇಜ್ ಅನ್ನು ಇಟ್ಟುಕೊಳ್ಳಬಹುದು. ಇದರ ಹೊರತಾಗಿ ಅವುಗಳ ತೂಕ ಕಡಿಮೆ ಮಾಡಲು ಟೈಟಾನಿಯಂ ಬದಲಿಗೆ ಅಲ್ಯೂಮಿನಿಯಂ ಬಾಡಿಯಲ್ಲಿ ತರಬಹುದು. ಐಫೋನ್ 17 ಸರಣಿಯ ಬೆಲೆ 83,300 ರೂ.ಗಳಿಂದ ಪ್ರಾರಂಭವಾಗಬಹುದು.
ಬೆಂಗಳೂರಲ್ಲಿ 1000 ಕೋಟಿಗೆ ಕಚೇರಿ ಲೀಸ್ಗೆ
ಮತ್ತೊಂದು ಕಡೆ ಆ್ಯಪಲ್ ಕಂಪನಿಯು ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಜಾಗವನ್ನು ಭೋಗ್ಯಕ್ಕೆ ಪಡೆದುಕೊಂಡಿದೆ. ಎಂಬೆಸಿ ಗ್ರೂಪ್ನೊಂದಿಗೆ 10 ವರ್ಷಕ್ಕೆ 1000 ಕೋಟಿ ರೂಪಾಯಿಗೆ ಬಾಡಿಗೆ ಪಡೆದುಕೊಂಡಿದೆ ಎಂದು ದತ್ತಾಂಶ ವಿಶ್ಲೇಷಕ ಪ್ರೋಪ್ಸ್ಟ್ಯಾಕ್ ಹೇಳಿದೆ. ಮಾಹಿತಿಗಳ ಪ್ರಕಾರ ಬೆಂಗಳೂರಿನ ವಸಂತ ನಗರದಲ್ಲಿರುವ ಎಂಬೆಸಿ ಕಟ್ಟಡದ 2.7 ಲಕ್ಷ ಚದರ್ ಅಡಿ ಕಟ್ಟಡವನ್ನು ಲೀಸ್ಗೆ ಪಡೆದಿದೆ. ಮಾಸಿಕವಾಗಿ ಇದಕ್ಕಾಗಿ 6.3 ಕೋಟಿ ಕಟ್ಟಲಿದೆ. ಈಗಾಗಲೇ ಕಂಪನಿ 31.6 ಕೋಟಿ ರೂಪಾಯಿ ಹಣವನ್ನು ಮುಂಗಡವಾಗಿ ನೀಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮತ್ತೆ ಅಖಾಡಕ್ಕೆ ಇಳಿದ ಟಾಟಾ ಸುಮೋ.. Tata Motors ಲಾಂಚ್ ಮಾಡಿದ ಕಾರಿನ ಬೆಲೆ ಇಷ್ಟು ಕಡಿಮೆನಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ