/newsfirstlive-kannada/media/post_attachments/wp-content/uploads/2025/06/CHARGER.jpg)
ಅನೇಕರು ಮೊಬೈಲ್ ಚಾರ್ಜ್​​ಗೆ ಇಟ್ಟರೆ ಬ್ಯಾಟರಿ ಶೇಕಡಾ 100 ರಷ್ಟು ಆಗೋ ತನಕ ತೆಗೆಯೋದೇ ಇಲ್ಲ. ಅಂದರೆ ಸಂಪೂರ್ಣ ಚಾರ್ಜ್ ಮಾಡ್ತಾರೆ. ಒಂದು ವೇಳೆ ನಿಮಗೆ ಅಂಥ ಅಭ್ಯಾಸವಿದ್ರೆ ಇವತ್ತೇ ಬಿಟ್ಟು ಬಿಡಿ! ಇಲ್ಲಿದಿದ್ದರೆ ನಿಮ್ಮ ಮೊಬೈಲ್ ಬ್ಯಾಟರಿ ಢಮಾರ್ ಅಷ್ಟೇ.
ಫೋನ್ ಬಳಸಲು ಕೆಲವು ಸ್ಪೆಷಲ್ ವಿಧಾನಗಳಿವೆ. ಮನಸ್ಸಿಗೆ ಬಂದಂತೆ ಬಳಸಿದರೆ ಅದು ಬೇಗ ಹಾಳಾಗುತ್ತದೆ. 100 ಪರ್ಸೆಂಟ್ ಚಾರ್ಜ್ ಮಾಡೋದ್ರಿಂದ ಮೊಬೈಲ್ ಬೇಟರಿಯಲ್ಲಿನ ಶಾಕ ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದ ಬ್ಯಾಟರಿಯ ಸಾಮರ್ಥ್ಯ ಕಡಿಮೆ ಆಗಲಿದೆ. ಇದೇ ಕಾರಣಕ್ಕೆ ಅನೇಕ ಕಂಪನಿಗಳು ಫೋನ್ ಅನ್ನು ಶೇ.80 ಕ್ಕೆ ಚಾರ್ಜ್ ಮಾಡಲು ಶಿಫಾರಸು ಮಾಡುತ್ತವೆ.
ಇದನ್ನೂ ಓದಿ:ವಿಪ್ರೋ ಸರ್ಜಾಪುರ ಕ್ಯಾಂಪಸ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಸಾಧ್ಯವಿಲ್ಲ ಎಂದು ಸಿಎಂಗೆ ಪತ್ರ ಬರೆದ ಅಜೀಂ ಪ್ರೇಮ್‌ಜೀ
ಆಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಬ್ರ್ಯಾಂಡ್‌ಗಳು ಬ್ಯಾಟರಿಯನ್ನು ಚೆನ್ನಾಗಿ ಇರಿಸಿಕೊಳ್ಳಲು ಅನೇಕ ಸಲಹೆಗಳನ್ನ ನೀಡುತ್ತವೆ. ಆ ಕಂಪನಿಗಳ ಪ್ರಕಾರ, ಫೋನ್‌ಗಳನ್ನು ಯಾವಾಗಲೂ ಶೇ.80 ಅಥವಾ 90% ವರೆಗೆ ಚಾರ್ಜ್ ಮಾಡಬೇಕು. ಇದಕ್ಕಾಗಿ ಅವರು ಫೋನ್‌ನಲ್ಲಿ ಕೆಲವು ಫೀಚರ್ಸ್​ ಕೂಡ ಆ್ಯಡ್ ಮಾಡಿವೆ. ಆ ಮೂಲಕ ಬಳಕೆದಾರರು ಚಾರ್ಜ್ ಅನ್ನು ಶೇ.80 ಅಥವಾ 90 ಕ್ಕೆ ಮಿತಿಗೊಳಿಸಬಹುದು. ಇದರಿಂದ ಗ್ರಾಹಕರು ಬ್ಯಾಟರಿಯನ್ನು ಪದೇ ಪದೇ ಬದಲಾಯಿಸುವ ಅಗತ್ಯವಿರಲ್ಲ.
ಸರಿಯಾದ ಚಾರ್ಜ್ ವಿಧಾನ
- ರಾತ್ರಿಯಿಡೀ ನಿಮ್ಮ ಫೋನ್ ಅನ್ನು ಚಾರ್ಜ್‌ನಲ್ಲಿ ಇಡಬೇಡಿ
- ಯಾವಾಗಲೂ ಮೂಲ ಚಾರ್ಜರ್ ಬಳಸಿ
- ಬಿಸಿ ಸ್ಥಳಗಳಲ್ಲಿ ಚಾರ್ಜ್ ಮಾಡಬೇಡಿ
- ಫೋನ್ ಬಿಸಿಯಾದಾಗ ಚಾರ್ಜರ್ ನಿಂದ ತೆಗೆದುಹಾಕಿ
- ಪದೇ ಪದೇ ವೇಗವಾಗಿ ಚಾರ್ಜ್ ಮಾಡುವುದನ್ನು ನಿಲ್ಲಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ