Advertisment

BREAKING NEWS : ಭಾರತ - ಪಾಕ್ ನಡುವಿನ ಪಂದ್ಯಕ್ಕೆ ಭಾರೀ ಆತಂಕ.. ಏನಾಯ್ತು..?

author-image
Ganesh
Updated On
‘ಕೊಹ್ಲಿ, ರೋಹಿತ್​ ಅಲ್ಲ, ಪಾಕಿಸ್ತಾನವನ್ನು ಸೋಲಿಸಲು ಈ ಹುಡುಗರು ಸಾಕು’- ಶ್ರೀಶಾಂತ್​​​ ವ್ಯಂಗ್ಯ
Advertisment
  • ಟಿ-20 ವಿಶ್ವಕಪ್ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ
  • ಜೂನ್ 9 ರಂದು ಭಾರತ ಪಾಕಿಸ್ತಾನ ನಡುವೆ ಪಂದ್ಯ
  • ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ, ಸ್ಟೇಡಿಯಂಗೆ ಭಾರೀ ಭದ್ರತೆ

ವೆಸ್ಟ್​ ವಿಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯುವ ಟಿ-20 ವಿಶ್ವಕಪ್ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ. ಅಂತೆಯೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ಜೂನ್ 9 ರಂದು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿಕೊಂಡು ಕಾದು ಕೂತಿದ್ದಾರೆ. ಈ ಮಧ್ಯೆ ಭಾರತ-ಪಾಕ್ ಪಂದ್ಯಕ್ಕೆ ಉಗ್ರರ ಆತಂಕ ಶುರುವಾಗಿದೆ.

Advertisment

ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್​ ಅಲ್ಲೇ ಟಕ್ಕರ್ ಕೊಟ್ರಾ?

ನ್ಯೂಯಾರ್ಕ್​ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಉಗ್ರರರು ದಾಳಿ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಯಾವುದೇ ಸಂಘಟನೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ವರದಿಗಳ ಪ್ರಕಾರ.. ಐಸಿಸ್ ಬೆದರಿಕೆ ಹಾಕಿದೆ ಎಂದು ಹೇಳಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದರೆ ಎಲ್ಲಾ ಪಂದ್ಯಗಳಿಂತ ಹೆಚ್ಚು ಬಿಗಿ ಪೊಲೀಸ್ ಭದ್ರತೆ ಇದ್ದೇ ಇರುತ್ತದೆ. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಆತಂಕವೂ ನಿರ್ಮಾಣವಾಗಿದೆ.

ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?

Advertisment

publive-image

ದಾಳಿಕೋರರು ಪಂದ್ಯದ ವೇಳೆ ಸಮಸ್ಯೆ ಹೆಚ್ಚಿಸುವ ಬಗ್ಗೆ ಮಾತನಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ನಸ್ಸೌ ಕೌಂಟಿ ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ಬೆದರಿಕೆಯನ್ನು ದೃಢಪಡಿಸಿದ್ದಾರೆ. ಭದ್ರತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಬಹುತೇಕ ಪಂದ್ಯಗಳನ್ನು ನ್ಯೂಯಾರ್ಕ್‌ನಲ್ಲಿ ಆಡಲಿದೆ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಅವರು ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಇದರಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸಲಿದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವು ಜೂನ್ 5 ರಂದು ನಡೆಯಲಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​ನಲ್ಲಿ ಆಫ್​ ಸ್ಪಿನ್ನರ್ಸ್ ಇಲ್ಲವೇ ಇಲ್ಲ -ಲೆಫ್ಟಿ ಸ್ಪಿನ್ನರ್ಸ್ ಆಯ್ಕೆ ಹಿಂದಿನ ಅಸಲಿ ಸತ್ಯ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment