/newsfirstlive-kannada/media/post_attachments/wp-content/uploads/2024/08/Thalapathy_Vijay.jpg)
ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಯಾಗಿದ್ದು ದಳಪತಿ ವಿಜಯ್ ಮುಂಬರುವ 2026ರ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಚೆನ್ನೈನ ಪನಾಯೂರ್​ನಲ್ಲಿನ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂನ ಫ್ಲ್ಯಾಗ್ ಮತ್ತು ಗೀತೆಯನ್ನು ಅನಾವರಣಗೊಳಿಸಿದ್ದಾರೆ.
ಇದನ್ನೂ ಓದಿ: ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?
ಒಂದು ವರ್ಷದ ಹಿಂದೆಯೇ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಚೆನ್ನೈನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಫ್ಲ್ಯಾಗ್ ಹಾಗೂ ಗೀತೆಯನ್ನ ಅನಾವರಣಗೊಳಿಸಿದರು. ಪಕ್ಷ ಧ್ವಜರೋಹಣ ಮಾಡುವಾಗ ನಟ ವಿಜಯ್ ಸೇರಿದಂತೆ 300 ಜನರು ಭಾಗಿಯಾಗಿದ್ದರು. ಅಲ್ಲದೇ ವಿಜಯ್ ಅವರ ತಂದೆ ಚಂದ್ರಶೇಖರ್ ಹಾಗೂ ತಾಯಿ ಶೋಭಾ ಕೂಡ ಭಾಗಿಯಾಗಿದ್ದರು. 2026ರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪ್ರಗತಿ ಸಾಧಿಸುವ ಗುರಿ ಇದೆ ಎಂದು ಈಗಾಗಲೇ ವಿಜಯ್ ಅವರು ಹೇಳಿದ್ದಾರೆ.
ಪಕ್ಷದ ಫ್ಲ್ಯಾಗ್ ಧ್ವಜರೋಹಣ ಬಳಿಕ ವಿಜಯ್ ಸೇರಿದಂತೆ ಎಲ್ಲರೂ ಪಕ್ಷದ ಪ್ರಮುಖ ಕಾರ್ಯಗಳಲ್ಲಿ ಭಾಗಿಯಾಗಿದರು. ಇನ್ನು ಫ್ಲ್ಯಾಗ್​ ಕೆಂಫು ಹಾಗೂ ಹಳದಿ ಬಣ್ಣಗಳಿಂದ ಕೂಡಿದ್ದು ಮಧ್ಯೆದಲ್ಲಿ 2 ಆನೆಗಳು ಯುದ್ಧದಲ್ಲಿ ಹೋರಾಡುತ್ತಿರುವಂತೆ ಮುಂದಿನ 2 ಕಾಲು, ಸೊಂಡಿಲುನ್ನು ಮೇಲೆತ್ತಿವೆ. ಈ ಎರಡು ಆನೆಗಳ ಮಧ್ಯೆ ವಾಗೈ ಎನ್ನುವ ಹೂವು ಇದೆ. ಇದು ಸಂಗಂ ಸಾಮ್ರಾಜ್ಯದಲ್ಲಿ ಯುದ್ಧದಿಂದ ಗೆದ್ದು ಬಂದ ನಂತರ ರಾಜರು ಹಾರವಾಗಿ ವಾಗೈ ಹೂವುಗಳನ್ನು ಧರಿಸುತ್ತಿದ್ದರು. ಇದನ್ನೇ ವಿಜಯದ ಸಂಕೇತವಾಗಿ ಪ್ಲ್ಯಾಗ್​ನಲ್ಲಿ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಧ್ವಜರೋಹಣ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ವಿಜಯ್ ಪ್ರತಿಜ್ಞೆ ತೆಗೆದುಕೊಂಡರು. ನಮ್ಮ ದೇಶದ ವಿಮೋಚನೆಗಾಗಿ ಹೋರಾಡಿದ ಮತ್ತು ಪ್ರಾಣ ತ್ಯಾಗ ಮಾಡಿದ ವೀರರನ್ನು ಮತ್ತು ತಮಿಳು ಮಣ್ಣಿನಿಂದ ನಮ್ಮ ಜನರ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡಿದ ಅಸಂಖ್ಯಾತ ಸೈನಿಕರನ್ನು ನಾವು ಯಾವಾಗಲೂ ಶ್ಲಾಘಿಸುತ್ತೇವೆ. ಜಾತಿಯ ಹೆಸರಿನಲ್ಲಿನ ವ್ಯತ್ಯಾಸ ತೆಗೆದುಹಾಕುತ್ತೇನೆ. ಜನರಲ್ಲಿ ಜಾಗೃತಿ ಮೂಡಿಸಿ ಮತ್ತು ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸಮಾನ ಹಕ್ಕುಗಳಿಗಾಗಿ ಶ್ರಮಿಸುತ್ತೇನೆ. ಎಲ್ಲ ಜೀವಿಗಳಿಗೆ ಸಮಾನತೆಯ ತತ್ವವನ್ನು ಎತ್ತಿಹಿಡಿಯಲಾಗುವುದು ಎಂದು ಪ್ರತಿಪಾದಿಸುತ್ತೇನೆ ಎಂದು ಹೇಳಿದರು.
ದಳಪತಿ ವಿಜಯ್ ಅವರು ಫೆಬ್ರುವರಿಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಆರಂಭಿಸಿದ್ದರು. ಈ ವೇಳೆ ಈ ಸಲದ ಎಲೆಕ್ಷನ್​ನಲ್ಲಿ ಸ್ಪರ್ಧೆ ಬಗ್ಗೆ ಮಾತನಾಡಿದ್ದರು. ಯಾವ ಪಕ್ಷದ ಬೆಂಬಲಕ್ಕೆ ನಿಲ್ಲದೇ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದಿದ್ದರು. ಇನ್ನು ಸೆಪ್ಟೆಂಬರ್ 5 ರಂದು ರಿಲೀಸ್ ಆಗಲಿರುವ ಅವರ ಮೂವಿ GOAT ಆಕ್ಷನ್ ಥ್ರಿಲ್ಲರ್​ನಿಂದ ಕೂಡಿದ್ದು ಇದೇ ವಿಜಯ್ ಅವರ ಕೊನೆ ಸಿನಿಮಾ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ