newsfirstkannada.com

ರಿಲೀಸ್​​ ಬೆನ್ನಲ್ಲೇ ರೇವಣ್ಣಗೆ ಮತ್ತೆ ಶುರುವಾಯ್ತು ಆತಂಕ.. ಇಂದು ಮಧ್ಯಾಹ್ನದವರೆಗೆ ಮಾತ್ರ ರಿಲೀಫ್​.. ಆಮೇಲೆ?

Share :

Published May 17, 2024 at 6:45am

Update May 17, 2024 at 6:50am

  ಲೈಂಗಿಕ ಕಿರುಕುಳ ಕೇಸ್‌ನಲ್ಲಿ ಜೈಲು ಸೇರಿದ್ದ ಹೆಚ್​ ಡಿ ರೇವಣ್ಣ

  ಜಾಮೀನು ಪಡೆದು ಹೊರಬಂದ ರೇವಣ್ಣಗೆ ಮತ್ತೆ ಶುರುವಾಯ್ತು ಢವಢವ

  ಇಂದು ಮಧ್ಯಾಹ್ನದ ತನಕವಷ್ಟೇ ರೇವಣ್ಣರಿಗೆ ರಿಲೀಫ್.. ಆಮೇಲೆ ಏನು ಕತೆ?

ಕಿಡ್ನಾಪ್ ಕೇಸ್​ನಲ್ಲಿ ಜಾಮೂನೆಂಬ ಜಾಮೀನು ಪಡೆದು ಹೊರಬಂದ್ರೂ ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಮತ್ತೊಂದು ಭೂತ ಬೆನ್ನುಬಿದ್ದಿದೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರೋ ಲೈಂಗಿಕ ಕಿರುಕುಳ ಕೇಸ್‌ನಲ್ಲಿ ಎ1 ಆರೋಪಿಯಾಗಿರೋ ರೇವಣ್ಣಗೆ ಮತ್ತೆ ಢವಢವ ಶುರುವಾಗಿದೆ.

ಹಾಸನದ ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರೋ ರೇವಣ್ಣಗೆ ಕಂಟಕ ಎದುರಾಗಿದೆ. ಕಿಡ್ನಾಪ್ ಕೇಸ್​ನಲ್ಲಿ ಬೇಲ್​​ ಪಡೆದು ಹೊರಬಂದ್ರೂ ಮತ್ತೊಂದು ಭೂತ ಬೆನ್ನುಬಿದ್ದಿದೆ.

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ರೇವಣ್ಣಗೆ ಸದ್ಯಕ್ಕಷ್ಟೆ ರಿಲೀಫ್!

ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರೋ ಲೈಂಗಿಕ ಕಿರುಕುಳ ಕೇಸ್‌ನಲ್ಲಿ ಎ1 ಆರೋಪಿಯಾಗಿರೋ ರೇವಣ್ಣಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಜೆಡಿಎಸ್ ಮಾಜಿ ಸಚಿವ ಬೆಂಗಳೂರಿನ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ಇತ್ತ ಎಸ್‌ಐಟಿ ಕೂಡ ಕಸ್ಟಡಿಗೆ ಪಡೆಯಲು ವಾದ ಮಂಡಿಸಿತ್ತು. ಇನ್ನೂ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಾಜಿ ಸಚಿವರಿಗೆ ಮಧ್ಯಂತರ ಜಾಮೀನು ನೀಡಿ ಸದ್ಯಕ್ಕೆ ಬಂಧನದಿಂದ ಮುಕ್ತಿ ನೀಡಿದೆ. 42 ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನದ ತನಕವಷ್ಟೇ ರೇವಣ್ಣರಿಗೆ ರಿಲೀಫ್ ಕೊಟ್ಟಿದೆ. ಇಂದು ನ್ಯಾಯಾಲಯ ಎರಡು ಕಡೆ ವಾದ ಆಲಿಸಲಿದೆ. ಆ ವಾದದ ಬಳಿಕ ರೆಗ್ಯೂಲರ್ ಬೇಲ್ ತಿರ್ಮಾನವಾಗಲಿದೆ.

ಇದನ್ನೂ ಓದಿ: ಅಬ್ಬಬ್ಬಾ.. ಮುಖೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ 2ನೇ ಅದ್ಧೂರಿ ಪ್ರಿ-ವೆಡ್ಡಿಂಗ್

ಇಂದು ಮಧ್ಯಾಹ್ನ 3 ಗಂಟೆವರೆಗೆ ಜಾಮೀನು ಕೊಟ್ಟ ಜಡ್ಜ್

ಹೊಳೆನರಸೀಪುರ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕೇಸ್‌ನಲ್ಲಿ ಹೆಚ್​.ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಇಂದು ಮಧ್ಯಾಹ್ನ 3 ಗಂಟೆವರೆಗೆ ಜಾಮೀನು ಕೊಟ್ಟು ಜಡ್ಜ್ ಆದೇಶ ಹೊರಡಿಸಿದ್ದರು. ಬೆಂಗಳೂರಿನ 42ನೇ ACMM ಜನಪ್ರತಿನಿಧಿ ಕೋರ್ಟ್‌ ನ್ಯಾಯಾಧೀಶರಾದ ಪ್ರೀತ್ ಜೆ.ರಿಂದ ಜಾಮೀನು ಮಂಜೂರಾಗಿತ್ತು. ಇನ್ನೂ ಬೇಲ್‌ ಜೊತೆ ರೇವಣ್ಣಗೆ ಕೆಲವು ಷರತ್ತುಗಳನ್ನೂ ನ್ಯಾಯಾಲಯ ವಿಧಿಸಿತ್ತು. 5 ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಲು ಸೂಚನೆ ನೀಡಿದ್ದು, ಸಾಕ್ಷಿಗಳ ಮೇಲೆ ಒತ್ತಡ ಮತ್ತು ನಾಶ ಮಾಡದಂತೆ ಷರತ್ತು ಹಾಕಿ ಬೇಲ್ ನೀಡಿತ್ತು.

ಇದನ್ನೂ ಓದಿ: ದೂರದ ಪ್ರಯಾಣದಿಂದ ಅಪಾಯ; ಹಣಕಾಸಿನ ಬಗ್ಗೆ ಎಚ್ಚರವಿರಲಿ! ಇಲ್ಲಿದೆ ಇಂದಿನ ಭವಿಷ್ಯ

ಒಟ್ಟಾರೆ ಇಂದು ಮಧ್ಯಾಹ್ನದವರೆಗೆ ಮಾಜಿ ಸಚಿವ ಹೆಚ್​ಡಿ ರೇವಣ್ಣರಗೆ ರಿಲೀಪ್ ಸಿಕ್ಕಿದೆ. ಮಧ್ಯಾಹ್ನದ ಬಳಿಕ ಕೋರ್ಟ್​ನಲ್ಲಿ ಯಾವ ತೀರ್ಪು ತೆಗೆದುಕೊಳ್ಳಲಾಗುತ್ತದೋ ಕಾದು ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸ್​​ ಬೆನ್ನಲ್ಲೇ ರೇವಣ್ಣಗೆ ಮತ್ತೆ ಶುರುವಾಯ್ತು ಆತಂಕ.. ಇಂದು ಮಧ್ಯಾಹ್ನದವರೆಗೆ ಮಾತ್ರ ರಿಲೀಫ್​.. ಆಮೇಲೆ?

https://newsfirstlive.com/wp-content/uploads/2024/05/Hd-Revanna-3.jpg

Load More