Advertisment

ದರ್ಶನ್​ಗೂ ಕೊಡುವ ರಾಜಾತಿಥ್ಯ ಉಳಿದವರಿಗೂ ಕೊಡಬೇಕು; A4 ಆರೋಪಿ ರಘು ಸಹೋದರನ ಹೇಳಿಕೆ

author-image
AS Harshith
Updated On
ದರ್ಶನ್​ಗೂ ಕೊಡುವ ರಾಜಾತಿಥ್ಯ ಉಳಿದವರಿಗೂ ಕೊಡಬೇಕು; A4 ಆರೋಪಿ ರಘು ಸಹೋದರನ ಹೇಳಿಕೆ
Advertisment
  • ದರ್ಶನ್​ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ ವೈರಲ್
  • ದರ್ಶನ್​ ಹೆಂಗಿದಾರೋ ಅವರ ಜೊತೆಗಿರೋರನ್ನು ಚೆನ್ನಾಗಿ ನೋಡ್ಕೋಬೇಕು
  • ಅಚ್ಚರಿ ಮೂಡಿಸಿದ A4 ಆರೋಪಿ ರಘು ಸಹೋದರ ಮುರಳಿ ಪ್ರತಿಕ್ರಿಯೆ

ಚಿತ್ರದುರ್ಗ: ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್​ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಕುರಿತಾಗಿ ಮಾಧ್ಯಮಗಳು ವರದಿ ಬಿತ್ತರಿಸುತ್ತಿವೆ. ಇದನ್ನು ಕಂಡು ರೇಣುಕಾಸ್ವಾಮಿ ಕೊಲೆ ಆರೋಪಿ ರಘು ಸಹೋದರ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್​ಗೆ ಆದ್ಯತೆ ಕೊಡುವಂತೆ ಉಳಿದವರಿಗೂ ಕೊಡಬೇಕು ಎಂದು ಹೇಳಿದ್ದಾರೆ.

Advertisment

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಘು A4 ಆರೋಪಿಯಾಗಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಸದ್ಯ ದರ್ಶನ್​ ರಾಜಾತಿಥ್ಯ ಕಂಡು ರಘು ಸಹೋದರ  ಮುರಳಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್​  ಹೆಂಗಿದಾರೋ ಅವರ ಜೊತೆಗಿರೋರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ದರ್ಶನ್ ಇತರ ಆರೋಪಿಗಳನ್ನೂ ಕೂಡ ಹೊರತರಲು ನೋಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೈಲಲ್ಲೇ ಕುಳಿತು ದರ್ಶನ್​ ವಿಡಿಯೋ ಕಾಲ್​​.. ತನಿಖೆಗೆ ಆದೇಶಿಸಿದ ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಯಾರು?

[caption id="attachment_69858" align="alignnone" width="800"]A4 ಆರೋಪಿ ರಘು A4 ಆರೋಪಿ ರಘು[/caption]

Advertisment

ನನ್ನ ತಮ್ಮ ರಘು. ಇನ್ನೊಬ್ಬ ನನ್ನ ತಮ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ಆದಷ್ಟು ಬೇಗ ಬರ್ತೀನಿ ಅಂತಾ ಹೇಳಿದ್ದಾನೆ. ನನ್ನ ತಾಯಿ ತೀರಿದಾಗ ದರ್ಶನ್ ಕಡೆಯವರು 25 ಸಾವಿರ ಹಣ ಕಳುಹಿಸಿದ್ರು. ಅವರ ಕಡೆಯವರೇ ಬಂದು ಹಣ ಕೊಟ್ಟು ಹೋದ್ರು ಎಂದು ಮುರಳಿ ಹೇಳಿದ್ದಾರೆ.

ಇದನ್ನೂ ಓದಿ: ರೌಡಿಶೀಟರ್​ ಸತ್ಯ, ಧರ್ಮ ಹಿನ್ನೆಲೆಯೇ ಬೇರೆ ಇದೆ.. ಜೈಲಿನಿಂದ ವಿಡಿಯೋ ಕಾಲ್​ನಲ್ಲಿ​​ ದರ್ಶನ್​ ಏನು ಹೇಳಿದ್ರು ಗೊತ್ತಾ?

ರಘುಗೆ ಹೆಂಡ್ತಿ ಇದ್ದಾಳೆ, ಅವರಿಗೆ ದರ್ಶನ್ ಕಡೆಯವರು ಸಹಾಯ ಮಾಡ್ತಾರೆ. ಆಮೇಲೆ ದರ್ಶನ್ ಕಡೆಯವರು ನಮ್ಮನ್ನು ಸಂಪರ್ಕ ಮಾಡಿಲ್ಲ. ಚಿತ್ರದುರ್ಗದಲ್ಲಿ ರಘು ಸಹೋದರ ಮುರಳಿ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment