/newsfirstlive-kannada/media/post_attachments/wp-content/uploads/2024/06/DARSHAN_GANG.jpg)
ರೇಣುಕಾಸ್ವಾಮಿ ಕೊಲೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಅದೊಂದು ಹಣದ ಸೀಕ್ರೆಟ್​ ಪತ್ತೆ ಹಚ್ಚೋದೇ ದೊಡ್ಡ ಚಾಲೆಂಜ್​ ಆಗಿದೆ. ದರ್ಶನ್​ಗೆ ಮಾಜಿ ಮೇಯರ್​ 40 ಲಕ್ಷ ಕೊಟ್ಟಿದ್ದೇಕೆ ಅನ್ನೋದನ್ನು ಪತ್ತೆ ಹಚ್ಚಲು ಪೊಲೀಸರು ಹಗಲು ರಾತ್ರಿ ಮಾಜಿ ಮೇಯರ್​ಗಾಗಿ ಶೋಧ ನಡೆಸುತ್ತಿದ್ದಾರೆ. ಪಕ್ಕ ತಮಿಳುನಾಡಿಗೂ ಹೋಗಿ ರಾಜ್ಯ ಪೊಲೀಸರು ಮೋಹನ್​ ರಾಜ್​ಗಾಗಿ ಬಲೆ ಬೀಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan1-1.jpg)
ಇದನ್ನೂ ಓದಿ: ಮೇಕಪ್ ರಾಣಿ ಪವಿತ್ರಾ ಗೌಡಗೆ ಇದೆಂಥಾ ಕ್ರೇಜ್.. ಪೆಡಿಕ್ಯೂರ್, ಮೆಡಿಕ್ಯೂರ್ ಬೆನ್ನಲ್ಲೇ ಲಿಪ್‌ಸ್ಟಿಕ್ ರಹಸ್ಯ ಬಯಲು
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಡಿ-ಗ್ಯಾಂಗ್​ನ ಕ್ರೌರ್ಯದ ಮುಂದೆ ನರಳಿ ನರಳಿ ಪ್ರಾಣಬಿಟ್ಟ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಲು ಪೊಲೀಸರು ಖಡಕ್​ ತನಿಖೆಯನ್ನೇ ಮಾಡ್ತಿದ್ದಾರೆ. ಈಗಾಗಲೇ 180ಕ್ಕೂ ಹೆಚ್ಚು ಸಾಕ್ಷ್ಯಗಳ ಸಂಗ್ರಹಿಸಿರುವ ಪೊಲೀಸರಿಗೆ 40 ಲಕ್ಷ ಹಣ ಕೊಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚೋದೇ ಸವಾಲಾಗಿದೆ. ಮಾಜಿ ಮೇಯರ್​ ದರ್ಶನ್​ಗೆ 40 ಲಕ್ಷ ಹಣ ಕೊಟ್ಟಿದ್ದೇಕೆ ಎಂಬ ರಹಸ್ಯವನ್ನು ಬಯಲಿಗೆಳೆಯಲು ತೀವ್ರ ಶೋಧ ಕಾರ್ಯ ಮಾಡ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/06/Darshan-Arrest-Case-8.jpg)
ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್​ ಮೊದಲು ಮುಂದಾಗಿದ್ದೇ ಸಾಕ್ಷ್ಯನಾಶ ಮಾಡಲು. ಅದಕ್ಕಾಗಿ ದರ್ಶನ್​ ಹಣದ ಹೊಳೆಯನ್ನೇ ಹರಿಸಿದ್ದ. ಇದಕ್ಕಾಗಿ ತಮಗೆ ಆಪ್ತರಾಗಿರುವ ಮಾಜಿ ಮೇಯರ್​ ಬಳಿ ಹತ್ತಲ್ಲ.. ಇಪ್ಪತಲ್ಲ ಬರೋಬ್ಬರಿ 40 ಲಕ್ಷ ಹಣವನ್ನು ಪಡೆದಿದ್ದರು. ಆ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಹೀಗಾಗಿ​ ನಾಪತ್ತೆ ಆಗಿರುವ ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/06/DARSHAN-JAIL-4.jpg)
ಮೋಹನ್ ರಾಜು ಸಿಡಿಆರ್ ಮಾಹಿತಿ ಕಲೆ ಹಾಕಿದ್ದ ಪೊಲೀಸರಿಗೆ ತಮಿಳುನಾಡಿನಲ್ಲಿ ಮೋಹನ್ ರಾಜುವಿನ ಕೊನೆಯ ಲೊಕೇಷನ್ ಪತ್ತೆ ಆಗಿತ್ತು. ಹೀಗಾಗಿ ತಮಿಳುನಾಡಿಗೆ ತೆರಳಿದ್ದ ಪೊಲೀಸರು ವಾಪಸ್​ ಬರಿಗೈಯಲ್ಲಿ ಆಗಿದ್ದಾರೆ. ಸದ್ಯ ಮೋಹನ್​ ರಾಜ್​ ಮೊಬೈಲ್​ ನಂಬರ್​ ಅನ್ನು ಪೊಲೀಸರು​ ನಿರಂತರವಾಗಿ ಮಾಡ್ತಿದ್ದಾರೆ. ಒಂದು ಬಾರಿ ಮೊಬೈಲ್​ ಸ್ವಿಚ್​ ಆನ್​ ಮಾಡಿದ್ರೆ ಸಾಕು ಆತನ ಪಕ್ಕಾ ಲೊಕೇಷನ್​ ಟ್ರೇಸ್​ ಆಗಲಿದೆ ಅನ್ನೋದು ಪೊಲೀಸರ ಲೆಕ್ಕಾಚಾರವಾಗಿದೆ.
/newsfirstlive-kannada/media/post_attachments/wp-content/uploads/2024/06/DARSHAN-33-2.jpg)
ಇದನ್ನೂ ಓದಿ:ರೇಣುಕಾಸ್ವಾಮಿ ಹೆಸರಿನ ಹೊಸ ಪೇಜ್ ಓಪನ್​; ಶಾಕಿಂಗ್​ ಸಂಗತಿಗಳ ಬಗ್ಗೆ ಉಲ್ಲೇಖ
ಮಾಜಿ ಮೇಯರ್​ ಮೋಹನ್​ ರಾಜು, ನಟ ದರ್ಶನ್​ಗೆ 40 ಲಕ್ಷ ಹಣ ಕೊಟ್ಟಿದ್ದೇಕೆ ಅನ್ನೋದೇ ಪೊಲೀಸರಿಗೆ ಅನುಮಾನ. ಆದ್ದರಿಂದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಮೋಹನ್ ರಾಜುವಿನ ಹೇಳಿಕೆಯೂ ಬಹುಮುಖ್ಯ ಆಗಲಿದೆ. ಯಾಕಂದ್ರೆ ಕೃತ್ಯವನ್ನು ಮುಚ್ಚಿಡುವುದು ಕೂಡ ಒಂದು ಅಪರಾಧ. ಒಂದ್ವೇಳೆ ಕೊಲೆ ವಿಷ್ಯ ಗೊತ್ತಿದ್ದೂ, ಹಣ ನೀಡಿದ್ರೆ, ಮೋಹನ್​ ರಾಜ್​ ಬಂಧನ ಆಗಲಿದೆ. 40 ಲಕ್ಷ ಹಣದ ರಹಸ್ಯವನ್ನು ಪತ್ತೆ ಹಚ್ಚಲು ಪೊಲೀಸರು ಶತಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಎಲ್ಲ ಅನುಮಾನಗಳಿಗೂ ಉತ್ತರ ಸಿಗಬೇಕು ಅಂದ್ರೆ ಮೋಹನ್​ ರಾಜ್​ ಪೊಲೀಸರ ಕೈಗೆ ಸಿಗಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us