newsfirstkannada.com

ಕೊಡಗು: ಬಾಲಕಿ ರುಂಡ ಕತ್ತರಿಸಿದ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಸಲಿಗೆ ನಡೆದಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ!

Share :

Published May 10, 2024 at 5:35pm

  ಬಾಲಕಿ ಎಂಗೇಜ್​ಮೆಂಟ್​ಗಾಗಿ ಪಕ್ಕ ನಿಂತವನೇ ಕೊಲೆಗಾರನಾಗಿದ್ದೇಕೆ?

  ಕೊಡಗಿನಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆ ಪ್ರಕರಣ

  ಸೋಮವಾರಪೇಟೆ ಸುರ್ಲಬಿ ಶಾಲೆಯಲ್ಲಿ SSLC ಪಾಸ್ ಆದ ಏಕೈಕ ವಿದ್ಯಾರ್ಥಿನಿ

ಮಡಿಕೇರಿ: ನಿನ್ನೆ ರಾಜ್ಯದಲ್ಲಿ SSLC ಫಲಿತಾಂಶ ಹೊರ ಬಿದ್ದಿದ್ದು, ಪಾಸ್‌ ಆದ ಮಕ್ಕಳು ಫುಲ್ ಖುಷಿಯಾಗಿದ್ದರು. ಕೊಡಗಿನಲ್ಲೂ ಮೀನಾ ಅನ್ನೋ ಅಪ್ರಾಪ್ತ ಬಾಲಕಿ ಮಧ್ಯಾಹ್ನದ ವೇಳೆಗೆ ಅಮ್ಮ ನಾನು ಪಾಸ್ ಆದೆ ಅಂತ ಮನೆಗೆ ಬಂದು ಪೋಷಕರ ಬಳಿ ಹೇಳಿಕೊಂಡಿದ್ದಳು. ಆದರೆ ಸಂಜೆ ಹೊತ್ತಿಗೆ ಆ ಬಾಲಕಿ ಕೊಲೆಯಾಗಿದ್ದಾಳೆ.

SSLC ಪಾಸ್ ಆದ ಮೀನಾ ಹೇಗೆ ಕೊಲೆಯಾಗಿದ್ದಳು ಅಂದ್ರೆ ರುಂಡ ಒಂದು ಕಡೆ.. ಮುಂಡ ಒಂದು ಕಡೆ ಇದೆ. ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ದುಷ್ಕರ್ಮಿಯೋರ್ವ ಕತ್ತರಿಸಿ ಎಸೆದು ಹೋಗಿದ್ದ. ಕೊಡಗು ಜಿಲ್ಲೆಯ ಸೂರ್ಲಬಿ ಗ್ರಾಮದಲ್ಲಿ ಇಂತಹ ಭೀಕರ ಘಟನೆ ನಡೆದಿದ್ದು ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.

ಅಪ್ರಾಪ್ತ ಬಾಲಕಿ ಮೀನಾ ಕೊಲೆಗೆ ಕಾರಣವೇನು ಅಂತಾ ಹುಡುಕ್ತಾ ಹೋದ್ರೆ ಒಂದು ಎಂಗೇಜ್​ಮೆಂಟ್​ನ ಕಹಾನಿ ಹೊರ ಬಂದಿದೆ. ಕೊಲೆಯಾದ ಅಪ್ರಾಪ್ತ ಬಾಲಕಿ ಮೀನಾಗೆ ಮದುವೆ ಫಿಕ್ಸ್‌ ಆಗಿತ್ತು. ಅಪ್ರಾಪ್ತೆಯಾಗಿದ್ದರಿಂದ ಬಾಲ್ಯವಿವಾಹ ಅಪರಾಧ ಎಂದು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಲಕಿ0 ವಯಸ್ಕಳಾಗುವವರೆಗೆ ಕಾಯಿರಿ ಎಂದು ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿದ್ದರು.

ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ 

ನಿಶ್ಚಿತಾರ್ಥ ರದ್ದಾದ ಕೋಪಕ್ಕೆ ಆರೋಪಿ ಪ್ರಕಾಶ್ ಸಂಜೆ ವೇಳೆಗೆ ಮನೆಯಿಂದ ಹುಡುಗಿನ ಎಳೆದೊಯ್ದಿದ್ದಾನೆ. ತಲೆ ಕತ್ತರಿಸಿ ದೇಹವನ್ನು ಬಿಸಾಡಿ ಹೋಗಿದ್ದ. ರುಂಡ ಇಲ್ಲದ ಮಗಳ ಮೃತದೇಹ ಕಂಡು ಮೀನಾ ಹೆತ್ತವರು ಕಣ್ಣೀರ ಕೋಡಿ ಹರಿಸಿದ್ದಾರೆ. ಇಡೀ ಕೊಡಗಿಗೆ ಕೊಡಗೇ ಈ ಕೃತ್ಯಕ್ಕೆ ಬೆಚ್ಚಿ ಬಿದ್ದಿದೆ.

ರುಂಡ ಕತ್ತರಿಸಿದ ಕೊಲೆಗಾರ ಎಸ್ಕೇಪ್‌!
ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿದ ಕೊಲೆಗಾರ ಪ್ರಕಾಶ್ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕಾಶ್ ಎಲ್ಲಿ ಹೋದ ಅಂತ ಹುಡುಕಾಡಿದ ಪೊಲೀಸರಿಗೆ ತಲೆಮರೆಸಿಕೊಂಡಿದ್ದ ಪ್ರಕಾಶ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕಾಶ್ ತನ್ನ ಮನೆಯ ಸಮೀಪದಲ್ಲೇ ನೇಣಿಗೆ ಶರಣಾಗಿದ್ದಾನೆ. ಪ್ರಕಾಶ್ ಮೃತ ದೇಹ ಪತ್ತೆಯಾದರೂ ಆತ ತೆಗೆದುಕೊಂಡು ಹೋಗಿದ್ದ ಬಾಲಕಿ ರುಂಡ ಇನ್ನೂ ಪತ್ತೆಯಾಗಿಲ್ಲ. ಸದ್ಯ ಬಾಲಕಿಯ ರುಂಡ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಹತ್ಯೆಗೆ ಕಾರಣವೇನು?
ಕೊಡಗು ಜಿಲ್ಲೆಯ ಸೂರ್ಲಬಿ ಗ್ರಾಮದಲ್ಲಿ ಹತ್ಯೆ ಹೇಗಾಯ್ತು ಅನ್ನೋದನ್ನ ಬಾಲಕಿ ಕುಟುಂಬಸ್ಥರು ಬಿಚ್ಚಿಟ್ಟಿದ್ದಾರೆ. ಒಂದು ವರ್ಷದಿಂದ ಮೀನಾ ಹಾಗೂ ಪ್ರಕಾಶ್‌ ಮಧ್ಯೆ ಲವ್ ಇತ್ತು. ಇದು ಕಳೆದ 6 ತಿಂಗಳಿಂದ ಮನೆಯವರಿಗೂ ಗೊತ್ತಿತ್ತು. ಮದುವೆ ಮಾಡಿ ಕೊಡ್ಲಿಲ್ಲ ಅಂದ್ರೆ ಗುಂಡು ಹೊಡೀತೀನಿ ಅಂತ ಪ್ರಕಾಶ್ ಹೇಳುತ್ತಿದ್ದನಂತೆ. ನನ್ನ ತಂಗಿಗೂ ಇಷ್ಟವಿರಲಿಲ್ಲ. ಅವನೇ ಎಂಗೇಜ್ಮೆಂಟ್ ಮಾಡ್ಕೊಂಡ ಎಂದು ಮೀನಾ ಸಹೋದರರು ಹೇಳಿದ್ದಾರೆ.

ಇದನ್ನೂ ಓದಿ: ಬಾಲಕಿಗೆ ಚಾಕಲೇಟ್​ ಕೊಡಿಸ್ತಿದ್ದ, ಪ್ರಶ್ನಿಸಿದ್ರೆ ಅವಾಜ್​ ಹಾಕ್ತಿದ್ದ; ಕೊಲೆಗಾರನ ಬಗ್ಗೆ ಸ್ಥಳೀಯರು ಬಿಚ್ಚಿಟ್ರು ಅಚ್ಚರಿಯ ಮಾಹಿತಿ

ನಿಶ್ಚಿತಾರ್ಥ ಮುಗಿಸಿ ಹೋಗಿದ್ದ ಪ್ರಕಾಶ್‌ ವಾಪಸ್‌ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಸೂರ್ಲಬಿ ಗ್ರಾಮಕ್ಕೆ ಬಂದ ಅಧಿಕಾರಿಗಳು ಬಾಲಕಿಗೆ 18ರವರೆಗೆ ಮದುವೆ ಮಾಡಂಗಿಲ್ಲ ಅಂತ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಪ್ರಕಾಶ, ತಂದೆಯನ್ನ ತಡೆದು, ತಾಯಿ ಕೈ ಕಡಿದು, ತಂಗಿಯನ್ನ ಎಳೆದೊಯ್ದಿದ್ದಾನೆ.

ಅಸಲಿಗೆ ಆಗಿದ್ದೇನು?
ಸೂರ್ಲಬ್ಬಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮೀನಾ ಹಾಗೂ 32 ವರ್ಷದ ಪ್ರಕಾಶ್ ನಡುವೆ ಪ್ರೀತಿ ಹುಟ್ಟಿತ್ತು. ಒಂದು ವರ್ಷಗಳಿಂದ ಪ್ರಕಾಶ್, ಮೀನಾ ಮನೆಗೆ ಬಂದು ಮಾತಾಡಿದ್ದ. ಪ್ರಕಾಶ್ ಇಟ್ಟಿದ್ದ ಮದುವೆ ಪ್ರಪೋಸಲ್‌ಗೆ ಮೀನಾ ಕುಟುಂಬ ಒಪ್ಪಿಕೊಂಡಿದೆ. ಆದರೆ ಬೆದರಿಸಿ ಎಂಗೇಜ್​ಮೆಂಟ್​ಗೆ ಒಪ್ಪಿಸಿದ್ದ ಎಂದು ಮೀನಾ ಕುಟುಂಬಸ್ಥರ ಆರೋಪ ಮಾಡಿದ್ದಾರೆ.

ಕೊಲೆಯಾದ ಬಾಲಕಿ ಅಪ್ರಾಪ್ತೆ ಅಂತ ಗೊತ್ತಿದ್ರೂ ನಿನ್ನೆಯೇ ಎಂಗೇಜ್​ಮೆಂಟ್​ ಫಿಕ್ಸ್ ಮಾಡಿದ್ದಾರೆ. ಎಂಗೇಜ್‌ಮೆಂಟ್ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂಟ್ರಿ ಕೊಟ್ಟಿದೆ. ಅಧಿಕಾರಿಗಳು ಬರೋ ಅಷ್ಟರಲ್ಲಿ ಇಬ್ಬರ ಎಂಗೇಜ್‌ಮೆಂಟ್ ಮುಗಿದಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎರಡೂ ಕುಟುಂಬದವರಿಗೆ ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ ಎಂಗೇಜ್‌ಮೆಂಟ್ ಮುಗಿಸಿ ಮನೆಗೆ ಹೋಗಿದ್ದ ಪ್ರಕಾಶ್, ಕೆಲವೇ ಗಂಟೆಗಳಲ್ಲಿ ಮತ್ತೆ ಬಾಲಕಿ ಮನೆಗೆ ವಾಪಸ್ ಬಂದಿದ್ದಾನೆ. ಚೈಲ್ಡ್ ಹೆಲ್ಪ್ ಲೈನ್‌ಗೆ ನೀನೇ ಕರೆ ಮಾಡಿದ್ದೀಯಾ ಅಂತಾ ಮೀನಾ ಬಳಿ ಗಲಾಟೆ ಮಾಡಿದ್ದಾನೆ. ತಡೆಯಲು ಬಂದ ಬಾಲಕಿಯ ತಂದೆ ಮೇಲೆ ಹಲ್ಲೆ ಮಾಡಿ ತಾಯಿ ಕೈಗೂ ಇರಿದಿದ್ದಾನೆ. ಬಾಲಕಿಯನ್ನು ಮನೆಯಿಂದ ಸುಮಾರು 100 ಮೀಟರ್ ಎಳೆದೊಯ್ದಿದ್ದ ಬಳಿಕ ಮಚ್ಚಿನಿಂದ ಆಕೆಯ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾನೆ.

ಬಾಲಕಿಯ ತಲೆ ಕತ್ತರಿಸಿ, ಆ ರುಂಡವನ್ನ ಪ್ರಕಾಶ್ ಕೊಂಡೊಯ್ದಿದ್ದಾನೆ. ಬಾಲಕಿಯ ಮರ್ಡರ್ ಮಾಡಿದ್ಮೇಲೆ ತನ್ನ ಮನೆಗೆ ಹೋಗಿದ್ದ ಪ್ರಕಾಶ್, ಕೋವಿ ತೆಗೆದುಕೊಂಡು ಕಾಡಿನ ಮಾರ್ಗವಾಗಿ ಪರಾರಿಯಾಗಿದ್ದ ಎನ್ನಲಾಗಿತ್ತು. ಆದರೆ ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್ ಮನೆಯ ಸಮೀಪದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡಗು: ಬಾಲಕಿ ರುಂಡ ಕತ್ತರಿಸಿದ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಸಲಿಗೆ ನಡೆದಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ!

https://newsfirstlive.com/wp-content/uploads/2024/05/Kodagu-murder-1.jpg

Load More