newsfirstkannada.com

ಬೆಂಗಳೂರಿಗರೇ.. ಈ ವಾರ ಪೂರ್ತಿ ಮಳೆ ಸುರಿಯೋದು ಪಕ್ಕಾ.. ಈ ಭಾಗಗಳಲ್ಲಿ ಕರೆಂಟ್​ ಇರಲ್ವಂತೆ!

Share :

Published May 16, 2024 at 7:21am

Update May 16, 2024 at 7:22am

    ಮಳೆಯ ಬಗ್ಗೆ ಹವಾಮಾನ ಇಲಾಖೆ ನೀಡಿದೆ ಮುನ್ಸೂಚನೆ

    ಮಳೆಯ ಸಮಯದಲ್ಲಿ ವಿದ್ಯುತ್​ ವ್ಯತ್ಯಯ ಬಗ್ಗೆ ಬೆಸ್ಕಾಂ ನೀಡಿದೆ ಮಾಹಿತಿ

    ಕರ್ನಾಟಕದಲ್ಲೂ ಅಬ್ಬರಿಸಲಿದೆ ಮುಂಗಾರು ಮಾರುತ.. ಯಾವಾಗ ಬರಲಿದೆ?

ರಾಜಧಾನಿ ಬೆಂಗಳೂರಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಯಾವಾಗಲೂ ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರು ಈಗ ಬಿಸಿಲಿನ ವಿಚಾರದಲ್ಲೂ ರೆಕಾರ್ಡ್​​​ ಕ್ರಿಯೇಟ್​ ಮಾಡುತ್ತಿದೆ. ಮಳೆಗಾಗಿ ಕಾಯುತ್ತಿರೋ ಬೆಂಗಳೂರು ಮಂದಿಗೆ ಮೂರು ದಿನಗಳಿಂದ ವರುಣನ ದರ್ಶನವಾಗಿದೆ. ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ರಾತ್ರಿ ಭರ್ಜರಿ ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 5 ದಿನಗಳಿಂದಲೂ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದ್ದು, ಇಂದು ಕೂಡ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ತಿಳಿಸಿದೆ.

ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ನೀಡಿದ ಐಎಂಡಿ

ಈ ವಾರ ಪೂರ್ತಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ಇದೆ. ಬೆಂಗಳೂರಿನ ಎಲ್ಲೆಡೆ ರಾತ್ರಿ 10 ಗಂಟೆ ಮೇಲೆ ವಿದ್ಯುತ್​ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಕೂಡ ತಿಳಿಸಿದೆ. ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ, ಕೆಆರ್​ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಗಿರಿನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರೆಂಟ್​ ಇರಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗಂಡ, ಹೆಂಡತಿ ಮಧ್ಯೆ ಜಗಳ; ಯಾರನ್ನೂ ನಂಬಲೇಬೇಡಿ; ಇಲ್ಲಿದೆ ಇಂದಿನ ಭವಿಷ್ಯ

ಮುಂಗಾರು ಮಳೆ ಪ್ರವೇಶದ ದಿನಾಂಕ ಪ್ರಕಟಿಸಿದ ಹವಾಮಾನ ಇಲಾಖೆ

ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯ ಉತ್ತಮವಾಗಿದೆ. ಈ ಮಧ್ಯೆ ಪ್ರಸಕ್ತ ಸಾಲಿನ ಮುಂಗಾರು ಮಾರುತ ಜೂ. 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮೇ 19ರಂದು ನೈಋತ್ಯ ಮುಂಗಾರು ಮಾರುತ ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಆಗ್ನೆಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದೆ. ಕೇರಳಕ್ಕೆ ಮುಂಗಾರು ಮಳೆ ಮೇ 31ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂನ್ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸಲಿದೆ. ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕ ಕರಾವಳಿಗೂ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಪೇಪರ್​ ಗೋಡೌನ್​​ನಲ್ಲಿ ಭೀಕರ ಅಗ್ನಿ ಅವಘಡ.. ಓರ್ವ ಕಾರ್ಮಿಕ ಸಾವು

ಒಟ್ಟಾರೆ, ತಂಪಾದ ವಾತಾವರಣಕ್ಕೆ ಕೆಲ ಜಿಲ್ಲೆಗಳಲ್ಲಿ ಜನ ಫುಲ್ ಖುಷ್ ಆಗಿದ್ರೆ.. ಮತ್ತೆ ಕೆಲವೆಡೆ ಅವಾಂತರ ಸೃಷ್ಟಿಯಾಗಿ ಜನ ಹಿಡಿಶಾಪ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ.. ಈ ವಾರ ಪೂರ್ತಿ ಮಳೆ ಸುರಿಯೋದು ಪಕ್ಕಾ.. ಈ ಭಾಗಗಳಲ್ಲಿ ಕರೆಂಟ್​ ಇರಲ್ವಂತೆ!

https://newsfirstlive.com/wp-content/uploads/2024/05/Rain.jpg

Load More