Advertisment

ಟೀಂ ಇಂಡಿಯಾದಲ್ಲೇ ಇದ್ದಾರೆ ಐವರು ವಿಲನ್ಸ್​! ಇವ್ರು ಭಾರತಕ್ಕೆ ಹೀರೋ.. ಪಾಕ್​ ಮುಂದೆ ಜೀರೋ!

author-image
AS Harshith
Updated On
ಟೀಂ ಇಂಡಿಯಾದಲ್ಲೇ ಇದ್ದಾರೆ ಐವರು ವಿಲನ್ಸ್​! ಇವ್ರು ಭಾರತಕ್ಕೆ ಹೀರೋ.. ಪಾಕ್​ ಮುಂದೆ ಜೀರೋ!
Advertisment
  • ಹೆಸರಿಗಷ್ಟೇ ಈ ಐವರು ಬಿಗ್ ಮ್ಯಾಚ್​ ವಿನ್ನರ್ಸ್​!
  • ಪಂಚ ಪಾಂಡವರು ಭಾರತಕ್ಕೆ ಆಗ್ತಾರಾ ಕಂಟಕ..?
  • ಪಾಕ್ ಎದುರು ಬಿಗ್ ಮ್ಯಾಚ್ ಪ್ಲೇಯರ್ಸ್ ಫೇಲ್​..!

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಅಭಿಯಾನ ಶುರುವಾಗಿದೆ. ಐರ್ಲೆಂಡ್ ಎದುರು ಶುಭಾರಂಭ ಮಾಡಿರುವ ಟೀಮ್ ಇಂಡಿಯಾ, ಪಾಕ್ ಎದುರಿನ ಹೈವೋಲ್ಟೇಜ್​ ಪಂದ್ಯದತ್ತ ಚಿತ್ತ ನೆಟ್ಟಿದೆ. ಆದ್ರೆ. ಬದ್ಧವೈರಿಯನ್ನ ಮಣಿಸುವ ಲೆಕ್ಕಚಾರದಲ್ಲಿರುವ ರೋಹಿತ್ ಪಡೆಗೆ ತಂಡದಲ್ಲಿರುವ ಆಟಗಾರರೇ ವಿಲನ್ಸ್. ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐವರು.

Advertisment

ಇಂಡೋ ಪಾಕ್ ಹೈವೋಲ್ಟೇಜ್​ ಮ್ಯಾಚ್​ಗೆ ಕೌಂಟ್​ಡೌನ್ ಶುರುವಾಗಿದೆ. ಬದ್ಧ ವೈರಿಗಳನ್ನ ಮಣಿಸಲು ತಂತ್ರ, ಪ್ರತಿತಂತ್ರಗಳನ್ನೇ ಟೀಮ್ ಇಂಡಿಯಾ ರೂಪಿಸ್ತಿದೆ. ಟಿ20ಯಲ್ಲಿ ಪಾಕ್ ಎದುರು ಮೇಲುಗೈ ಸಾಧಿಸಿರುವ ಟೀಮ್ ಇಂಡಿಯಾ, ಸುಲಭ ಜಯದ ನಿರೀಕ್ಷೆಯಲ್ಲಿದೆ. ಆದ್ರೆ, ಟೀಮ್ ಇಂಡಿಯಾ ಪಾಲಿಗೆ ಗೆಲುವು ಸುಲಭದ್ದಲ್ಲ. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿರುವ ಬಿಗ್ ಮ್ಯಾಚ್​ ಪ್ಲೇಯರ್ಸ್​. ಹೌದು! ಪಾಕ್​​​ ತಂಡಕ್ಕಿಂತ ಟೀಮ್ ಇಂಡಿಯಾ ಬಲಿಷ್ಠವಾಗಿದೆ ನಿಜ. ಆದ್ರೆ, ತಂಡದಲ್ಲಿನ ಒಳನೋಟ ಬೇರೇಯದ್ದೇ ಆಗಿದೆ.

publive-image

ಹೆಸರಿಗಷ್ಟೇ ಈ ಐವರು ಬಿಗ್ ಮ್ಯಾಚ್​ ವಿನ್ನರ್ಸ್​..!

ಟೀಮ್ ಇಂಡಿಯಾದಲ್ಲಿ ಸ್ಟಾರ್​ ಆಟಗಾರರ ದಂಡೇ ಇದೆ. ಸಿಂಗಲ್ ಹ್ಯಾಂಡ್​​​ನಲ್ಲಿ ಪಂದ್ಯ ಗೆಲ್ಲಿಸಿಕೊಡ್ತಾರೆ. ಸೂಪರ್ ಸ್ಟಾರ್ ಆಟಗಾರರಾಗಿಯೇ ವಿಶ್ವ ಕ್ರಿಕೆಟ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ರೆ, ಪಾಕ್​​ ವಿರುದ್ಧದ ಟಿ20 ಪಂದ್ಯಗಳಲ್ಲಿ ಮಾತ್ರ, ಇವರ ಆಟ ಶೂನ್ಯ. ಈ ಪೈಕಿ ಮೊದಲ ಆಟಗಾರ ಕ್ಯಾಪ್ಟನ್ ರೋಹಿತ್ ಶರ್ಮಾ..

ಪಾಕ್ ಎದುರು ಟಿ20ಯಲ್ಲಿ ರೋಹಿತ್
ಪಂದ್ಯ 11
ರನ್ 114
50's 00
ಸ್ಟ್ರೈಕ್​ರೇಟ್​ 118.75

ಹೌದು! ಪಾಕ್ ಎದುರು 11 ಟಿ20 ಪಂದ್ಯಗನ್ನಾಡಿರುವ ರೋಹಿತ್, 114 ರನ್ ಗಳಿಸಿದ್ದಾರೆ. ಈ ಪೈಕಿ ಒಂದೇ ಒಂದು ಅರ್ಧಶತಕ ಸಿಡಿಸುವಲ್ಲೂ ವಿಫಲವಾಗಿರುವ ಹಿಟ್​​ಮ್ಯಾನ್​​ನ ಸ್ಟ್ರೈಕ್​​ರೇಟ್​ ಜಸ್ಟ್​ 118.75 ಮಾತ್ರ.

Advertisment

ಇದನ್ನೂ ಓದಿ: ನಕಲಿ ಆಧಾರ್​ ಕಾರ್ಡ್​ ಬಳಸಿ ಸಂಸತ್​ ಪ್ರವೇಶಿಸಲು ಯತ್ನ.. ಮೂವರು ಅರೆಸ್ಟ್​.. ಎಲ್ಲಿಯವರು ಗೊತ್ತಾ?

publive-image

ನಂಬರ್​.1 ಬ್ಯಾಟ್ಸ್​ಮನ್​ ಸೂರ್ಯನೂ ಠುಸ್​..!

ಸೂರ್ಯಕುಮಾರ್ ಯಾದವ್, ಟಿ20 ಕ್ರಿಕೆಟ್​ ಕಾ ಬಾಪ್​.. ಬರೀ ಬೌಂಡರಿ, ಸಿಕ್ಸರ್​ಗಳನ್ನೇ ಸಿಡಿಸುವ ಸೂರ್ಯ, ಟಿ20 ಕ್ರಿಕೆಟ್​ನ ಸೂಪರ್ ಸ್ಟಾರ್​ ಬ್ಯಾಟರ್​.. ಆದ್ರೆ, ಈ ಸೂಪರ್ ಸ್ಟಾರ್​ ಬ್ಯಾಟರ್​​, ಪಾಕ್ ಎದುರು ಅಟ್ಟರ್ ಫ್ಲಾಫ್​.

ಪಾಕ್ ಎದುರು ಟಿ20ಯಲ್ಲಿ ಸೂರ್ಯ
ಪಂದ್ಯ 04
ರನ್ 57
50's 00
ಸ್ಟ್ರೈಕ್​ರೇಟ್​ 123.91

ಯೆಸ್! ಪಾಕ್ ಎದುರು 4 ಟಿ20 ಪಂದ್ಯಗಳನ್ನಾಡಿರುವ ಸೂರ್ಯ, 123.91ರ ಸ್ಟ್ರೈಕ್​​ರೇಟ್​ನಲ್ಲಿ 57 ರನ್ ಗಳಿಸಿದ್ದಾರೆ. ಈ ಪೈಕಿ ಒಂದೇ ಒಂದು ಅರ್ಧಶತಕವೂ ಇಲ್ಲ.

Advertisment

publive-image

ಪಾಂಡ್ಯ & ಜಡೇಜಾ ಜಾದುವೂ ಮಾಯ..!

ರೋಹಿತ್, ಸೂರ್ಯಕುಮಾರ್ ಮಾತ್ರವೇ ಅಲ್ಲ. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕೂಡ ಪಾಕ್ ಎದುರು ಪಲ್ಟಿ ಹೊಡೆದಿದ್ದಾರೆ. ರನ್ ಗಳಿಸಲು ವಿಫಲರಾಗಿರುವ ಇವರು, ಟೀಮ್ ಇಂಡಿಯಾ ಪಾಲಿಗೆ ವಿಲನ್​ಗಳಾದರು ಅಚ್ಚರಿ ಇಲ್ಲ.

ಪಾಕ್ ಎದುರು ಟಿ20ಯಲ್ಲಿ ಪಾಂಡ್ಯ-ಜಡೇಜಾ
6 ಪಂದ್ಯ 06
84 ರನ್ 50
00 50's 00
127.27 ಸ್ಟ್ರೈಕ್​ರೇಟ್​ 108.69

ಪಾಕ್ ಎದುರು 6 ಪಂದ್ಯಗಳನ್ನಾಡಿರುವ ಹಾರ್ದಿಕ್ ಪಾಂಡ್ಯ, 127.27ರ ಸ್ಟ್ರೈಕ್​​ರೇಟ್​​ನಲ್ಲಿ ಜಸ್ಟ್​ 84 ರನ್ ಸಿಡಿಸಿದ್ರೆ. ಜಡೇಜಾ 108.69ರ ಸ್ಟ್ರೈಕ್​​ರೇಟ್​ನಲ್ಲಿ 50 ರನ್ ಮಾತ್ರ ದಾಖಲಿಸಿದ್ದಾರೆ.

Advertisment

ಇದನ್ನೂ ಓದಿ: ಜಸ್ಟ್​ ಮಿಸ್​​! ಕಂಡೆಕ್ಟರ್​ ಸಹಾಯದಿಂದ ಬದುಕಿ ಬಂದ ಬಡ ಜೀವ.. ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ?

publive-image

ಇವ್ರೇ ಅಲ್ಲ! ರಿಷಭ್ ಪಂತ್ ಆಟವೂ ಪಾಕ್​ ವಿರುದ್ಧ ಕಳೆಪೆಯಾಗಿಯೇ ಇದೆ. 2 ಪಂದ್ಯಗಳನ್ನಾಡಿರುವ ಪಂತ್, 126.19ರ ಸ್ಟ್ರೈಕ್​​ರೇಟ್​ನಲ್ಲಿ ಗಳಿಸಿರೋದು ಜಸ್ಟ್​ 53 ರನ್​ ಮಾತ್ರ.. ಪವರ್ ಫುಲ್​​ ಆಟವಾಡಲು ವಿಫಲವಾಗಿರುವ ಈ ಐವರು, ಪಾಕ್ ಎದುರಿನ ಮಹತ್ವದ ಪಂದ್ಯದಲ್ಲಿ ಮತ್ತೆ ಫೇಲ್ಯೂರ್ ಆಗ್ತಾರಾ ಎಂಬ ಅನುಮಾನ ಸಹಜವಾಗೇ ಕಾಡ್ತಿದೆ.

ಇದನ್ನೂ ಓದಿ: ಮದುವೆಯಾಗ್ರಿ.. ಮಕ್ಕಳು ಮಾಡ್ರಿ.. ಅವಿವಾಹಿತರಿಗಾಗಿ ಸರ್ಕಾರವೇ ಪರಿಚಯಿಸಿದೆ ಡೇಟಿಂಗ್​ ಆ್ಯಪ್​!

Advertisment

ಒಟ್ಟಿನಲ್ಲಿ ಸೂಪರ್ ಸ್ಟಾರ್​ ಆಟಗಾರರಾಗಿ ಕರೆಸಿಕೊಳ್ಳುವ ಇವರು, ಈ ಬಾರಿಯಾದ್ರು. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ನೀಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment