newsfirstkannada.com

ಒಂದು ಕ್ಯಾಚ್,​ ಡ್ರಾಪ್​ ಮಾಡಿದ್ದು ಮೂವರು ಫೀಲ್ಡರ್ಸ್ – ಈ ವಿಡಿಯೋ ನೋಡಲೇಬೇಕು..!

Share :

Published April 1, 2024 at 1:24pm

Update April 1, 2024 at 2:21pm

  ವಾಂಖೆಡೆಯಲ್ಲಿಂದು ಮುಂಬೈ-ರಾಜಸ್ಥಾನ್​ ಫೈಟ್

  ರಾಜಸ್ಥಾನ್​ ಸವಾಲಿಗೆ ಮುಂಬೈ ಭರ್ಜರಿ ತಯಾರಿ

  ಮುಂಬೈ-ರಾಜಸ್ಥಾನ್​ ಆಟಗಾರರ ಸಮಾಗಮ

ಗುಜರಾತ್​​​​ಗೆ​​ ಭರ್ಜರಿ ಜಯ
ನಿನ್ನೆ ನಡೆದ ಐಪಿಎಲ್ ಸಂಡೇ ಧಮಾಕದಲ್ಲಿ ಹಾಲಿ ರನ್ನರ್​ ಅಪ್​ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಹೈದ್ರಾಬಾದ್​​ 162 ರನ್​ ಕಲೆಹಾಕ್ತು. ಹೈದ್ರಾಬಾದ್​​ ಪರ ಅಭಿಷೇಕ್ ಶರ್ಮಾ 29 ಗರಿಷ್ಠ ರನ್ ಸಿಡಿಸಿದದ್ರು. ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್​​​ 3 ವಿಕೆಟ್ ಕಳೆದುಕೊಂಡು 19.1 ಓವರ್​ಗಳಲ್ಲಿ ಗೆದ್ದು ಬೀಗಿತು. ಸಾಯಿ ಸುದರ್ಶನ್​ 45 ಹಾಗೂ ಡೇವಿಡ್ ಮಿಲ್ಲರ್​ 44 ರನ್ ಗಳಿಸಿ ಗೆಲುವಿನ ರೂವಾರಿಯಾದರು.

ವಾಂಖೆಡೆಯಲ್ಲಿಂದು ಮುಂಬೈ-ರಾಜಸ್ಥಾನ್​ ಫೈಟ್
ಐಪಿಎಲ್​ ಟೂರ್ನಿಯ 14ನೇ ಪಂದ್ಯದಲ್ಲಿಂದು ಮುಂಬೈ ಇಂಡಿಯನ್ಸ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಹೋಮ್​ಗ್ರೌಂಡ್​ನಲ್ಲಿ ಆಡ್ತಿರುವ ಮೊದಲ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಆತ್ಮವಿಶ್ವಾಸದಲ್ಲಿ ಮುಂಬೈ ತಂಡವಿದೆ. ಆಡಿದ 2 ಪಂದ್ಯಗಳಲ್ಲೂ ಜಯ ಸಾಧಿಸಿರುವ ರಾಜಸ್ಥಾನ ಹ್ಯಾಟ್ರಿಕ್​ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯನಾ ಟ್ರೋಲ್​ ಮಾಡೋ ರೋಹಿತ್​​ ಫ್ಯಾನ್ಸ್​​ಗೆ ಎಚ್ಚರ! ಏನಿದು ಸ್ಟೋರಿ?

ರಾಜಸ್ಥಾನ್​ ಸವಾಲಿಗೆ ಮುಂಬೈ ಭರ್ಜರಿ ತಯಾರಿ
ಇಂದು ನಡೆಯೋ ರಾಜಸ್ಥಾನ್​ ರಾಯಲ್ಸ್​ ಎದುರಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್​ ತಂಡ ಭರ್ಜರಿ ತಯಾರಿ ನಡೆಸಿದೆ. ನಿನ್ನೆ ವಾಂಖೆಡೆ ಮೈದಾನದಲ್ಲಿ ಮುಂಬೈ ಆಟಗಾರರು ಫೀಲ್ಡಿಂಗ್​ ಪ್ರ್ಯಾಕ್ಟಿಸ್​​ ನಡೆಸಿದ್ದಾರೆ. ಫೀಲ್ಡಿಂಗ್​ ಕೋಚ್​​ ಜೇಮ್ಸ್​ ಪೆಮೆಂಟ್​ ಮಾರ್ಗದರ್ಶನದಲ್ಲಿ ಆಟಗಾರರು ಬೆವರಿಳಿಸಿದ್ದಾರೆ.

ಮುಂಬೈ-ರಾಜಸ್ಥಾನ್​ ಆಟಗಾರರ ಸಮಾಗಮ
ಇಂದು ನಡೆಯುವ ಪಂದ್ಯಕ್ಕೂ ಮುನ್ನ ಮುಂಬೈ ಹಾಗೂ ರಾಜಸ್ಥಾನ್​ ಆಟಗಾರರ ಸಮಾಗಮವಾಗಿದೆ. ವಾಂಖೆಡೆ ಮೈದಾನದಲ್ಲಿ ಅಭ್ಯಾಸದ ವೇಳೆ ಉಭಯ ತಂಡಗಳ ಆಟಗಾರರು ಮುಖಾಮುಖಿಯಾಗಿದ್ದು, ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಮುಂಬೈನ ಇಶಾನ್​ ಕಿಶನ್ಮ, ರಾಜಸ್ಥಾನ್​ ವೇಗಿ ಆವೇಶ್​ ಖಾನ್​ ಕಾಲೆಳೆದಿದ್ದಾರೆ. ಇನ್ನು, ಅಶ್ವಿನ್​ ಹಾಗೂ ರೋಹಿತ್​ ಶರ್ಮಾ ಕೆಲ ಕಾಲ ಚರ್ಚೆ ನಡೆಸಿದ್ದು, ಬಳಿಕ ಫೋಟೋ ಪೋಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ನಿರಾಸೆ ಮಾಡಲಿಲ್ಲ ಧೋನಿ; ಒಂದೇ ಕೈಯಲ್ಲಿ ಅದ್ಭುತ ಸಿಕ್ಸರ್ ಸಿಡಿಸಿದ ವಿಡಿಯೋ

ಐಪಿಎಲ್​ನಿಂದ ವನಿಂದು ಹಸರಂಗ ಔಟ್​.!
ಸನ್​ರೈಸರ್ಸ್​ ಹೈದ್ರಾಬಾದ್​ ತಂಡಕ್ಕೆ ಹೊಸ ಆಘಾತ ಎದುರಾಗಿದೆ. ಸ್ಟಾರ್​ ಸ್ಪಿನ್ನರ್​​ ವನಿಂದು ಹಸರಂಗ ಈ ಬಾರಿಯ ಐಪಿಎಲ್​ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಹೀಲ್​ ಇಂಜುರಿಗೆ ತುತ್ತಾಗಿರುವ ಹಸರಂಗ, ಚೇತರಿಸಿಕೊಳ್ಳಲು ಇನ್ನು ಹೆಚ್ಚಿನ ಸಮಯ ಬೇಕು ಎಂದು ತಿಳಿದುಬಂದಿದೆ. ಐಪಿಎಲ್​ ಹರಾಜಿನಲ್ಲಿ 1.5 ಕೋಟಿಗೆ ಹಸರಂಗ SRH ಪಾಲಾಗಿದ್ರು.

ಒಂದು ಕ್ಯಾಚ್,​ ಡ್ರಾಪ್​ ಮಾಡಿದ್ದು 3 ಫೀಲ್ಡರ್ಸ್​
ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ಮೊದಲ ದಿನ ಡಿಆರ್​​ಎಸ್​ ತೆಗೆದುಕೊಂಡು, ಫಜೀತಿಗೆ ಸಿಲುಕಿದ್ದ ಬಾಂಗ್ಲಾದೇಶ ತಂಡ 2ನೇ ದಿನ ಕ್ಯಾಚ್​ ಡ್ರಾಪ್​ ಮಾಡಿ ಸುದ್ದಿಯಲ್ಲಿದೆ. ಸುಲಭದ ಕ್ಯಾಚ್​​ ಅನ್ನ ಸ್ಲಿಪ್​ನಲ್ಲಿದ್ದ ಮೂವರು ಫೀಲ್ಡರ್​ ಸೇರಿ ಡ್ರಾಪ್​ ಮಾಡಿದ್ದಾರೆ. ಪ್ರಭಾತ್​ ಜಯಸೂರ್ಯ ಬ್ಯಾಟ್​ಗೆ ಸವರಿದ ಚೆಂಡು ನೇರವಾಗಿ ಫಸ್ಟ್​ ಸ್ಲಿಪ್​ನತ್ತ ಶಾಂಟೋ ಕೈಗೆ ಬಂತು. ಶಾಂಟೋ ಕೈಗೆ ತಾಗಿದ ಚೆಂಡು ಸೆಕೆಂಡ್​ ಸ್ಲಿಪ್​, ಆ ಬಳಿಕ ಥರ್ಡ್​ ಸ್ಲಿಪ್​ನತ್ತ ಬಂತು. ಆದ್ರೆ ಮೂವರು ಫೀಲ್ಡ್​ ಎದ್ದೂ-ಬಿದ್ದು ಪ್ರಯತ್ನ ಪಟ್ರೂ ಕ್ಯಾಚ್​ ಕಂಪ್ಲೀಟ್​ ಮಾಡಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಂದು ಕ್ಯಾಚ್,​ ಡ್ರಾಪ್​ ಮಾಡಿದ್ದು ಮೂವರು ಫೀಲ್ಡರ್ಸ್ – ಈ ವಿಡಿಯೋ ನೋಡಲೇಬೇಕು..!

https://newsfirstlive.com/wp-content/uploads/2024/04/CATCH.jpg

Load More