/newsfirstlive-kannada/media/post_attachments/wp-content/uploads/2024/05/RCB-33.jpg)
ಸೋತು ಸುಣ್ಣವಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಂಪ್​ ಇದೀಗ ಫುಲ್​ ಜೋಶ್​ನಲ್ಲಿದೆ. ಹ್ಯಾಟ್ರಿಕ್​ ಗೆಲುವಿನಿಂದ ತಂಡದಲ್ಲಿ ಹೊಸ ಹುರುಪು ಬಂದಿದೆ. ಹಾಗಂತ ಆರ್​​ಸಿಬಿ ರಿಲ್ಯಾಕ್ಸ್​​ ಆಗುವಂತೇ ಇಲ್ಲ. ಅಸಲಿ ಅಗ್ನಿಪರೀಕ್ಷೆ ಆರ್​​ಸಿಬಿಗೆ ಈಗ ಶುರುವಾಗಿದೆ.
ಐಪಿಎಲ್​ ಸೀಸನ್​ 17ನಲ್ಲಿ ಪಾತಾಳಕ್ಕೆ ಕುಸಿದಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಿರೀಕ್ಷೆಯೂ ಮಾಡದ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿದೆ. ಆಡಿದ ಮೊದಲ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿದ್ದ, ಆರ್​​ಸಿಬಿ ನಂತರದ 3 ಪಂದ್ಯದಲ್ಲಿ ಅದ್ಧೂರಿ ಗೆಲುವು ದಾಖಲಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಹೊಸ ಚೈತನ್ಯ ಬಂದಿದೆ.
ಇದನ್ನೂ ಓದಿ:ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನೋಟುಗಳ ಗುಡ್ಡೆ.. ಈ ಕಾಂಗ್ರೆಸ್ ನಾಯಕನ ಹಿನ್ನೆಲೆ ಏನು?
/newsfirstlive-kannada/media/post_attachments/wp-content/uploads/2024/05/RCB-KGF.jpg)
RCB ಡ್ರೆಸ್ಸಿಂಗ್​​ ರೂಮ್​ನಲ್ಲಿ ಸಂಭ್ರಮವೋ ಸಂಭ್ರಮ
ಚಿನ್ನಸ್ವಾಮಿ ಅಂಗಳದಲ್ಲಿ ಗುಜರಾತ್​ ಎದುರು ಆರ್​​ಸಿಬಿ ಭರ್ಜರಿ ಜಯಭೇರಿ ಬಾರಿಸಿತು. ಹೈದ್ರಾಬಾದ್​, ಅಹ್ಮದಾಬಾದ್​ ಬಳಿಕ ಇದೀಗ ಬೆಂಗಳೂರಲ್ಲೂ ವಿಜಯಪತಾಕೆ ಹಾರಿಸಿರೋ ಆರ್​​ಸಿಬಿಯ ಡ್ರೆಸ್ಸಿಂಗ್​ ರೂಮ್​ನ ವಾತಾವರಣವೇ ಬದಲಾಗಿದೆ. ಗೆಲುವಿನ ಬೆನ್ನಲ್ಲೇ ಡ್ರೆಸ್ಸಿಂಗ್​ ರೂಮ್​ನಲ್ಲಿ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ.
ಹ್ಯಾಟ್ರಿಕ್​​ ಗೆಲುವು, ಪ್ಲೇ ಆಫ್​ ಲೆಕ್ಕಾಚಾರ ಜೋರು.!
ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​ಸಿಬಿ ಹ್ಯಾಟ್ರಿಕ್​ ಗೆಲುವು ದಾಖಲಿಸಿದೆ. ವಿನ್ನಿಂಗ್​​ ಟ್ರ್ಯಾಕ್​ಗೆ ಮರಳಿದ ಬೆನ್ನಲ್ಲೇ, ಪ್ಲೇ ಆಫ್​ ಲೆಕ್ಕಾಚಾರ ಜೋರಾಗಿ ನಡೀತಿದೆ. ಬೇಸರದಿಂದ ಕುಗ್ಗಿ ಹೋಗಿದ್ದ ಫ್ಯಾನ್ಸ್​ ಇದೀಗ ಕ್ಯಾಲ್ಕುಲೇಟರ್​ ಹಿಡಿದು ಪ್ಲೇ ಆಫ್​ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ. ಆರ್​​​ಸಿಬಿ ಪ್ಲೇ ಆಫ್​ ಎಂಟ್ರಿಗೆ ಚಾನ್ಸ್​ ಇಲ್ಲ ಅಂತಿಲ್ಲ. ಸದ್ಯ ಸತತ 3 ಪಂದ್ಯ ಗೆದ್ದು, ಒಟ್ಟಾರೆ 8 ಅಂಕ ಸಂಪಾದಿಸಿದ್ರೂ ಉಳಿದ 3 ಪಂದ್ಯಗಳಲ್ಲಿ ಆರ್​​ಸಿಬಿಗೆ ಗೆಲುವು ಅನಿವಾರ್ಯವಾಗಿದೆ. ಉಳಿದೆಲ್ಲಾ ಪಂದ್ಯ ಗೆದ್ದು ಅದೃಷ್ಟ ಕೈಹಿಡಿದ್ರೆ ಮಾತ್ರ ಪ್ಲೇ ಆಫ್​ ಎಂಟ್ರಿ ಸಾಧ್ಯ.
/newsfirstlive-kannada/media/post_attachments/wp-content/uploads/2024/04/RCB-Team.jpg)
ಪಂಜಾಬ್​ ವಿರುದ್ಧ ಕಾದಿದೆ ರಿಯಲ್ ಅಗ್ನಿ ಪರೀಕ್ಷೆ
ಗೆಲುವಿನ ಆತ್ಮವಿಶ್ವಾಸದಲ್ಲಿ ತೇಲಾಡ್ತಿರೋ ಆರ್​​ಸಿಬಿ ಮುಂದಿನ ಪಂದ್ಯದಲ್ಲಿ ಕಳೆದ ಕೆಲ ಪಂದ್ಯಗಳಿಂದ ಕೆಚ್ಚೆದೆಯ ಹೋರಾಟ ನಡೆಸ್ತಿರೋ ಪಂಜಾಬ್​ ಕಿಂಗ್ಸ್​​ ತಂಡವನ್ನ ಎದುರಿಸಲಿದೆ. ಸೀಸನ್​ನ ಮೊದಲ ಮುಖಾಮುಖಿಯಲ್ಲಿ ಆರ್​​ಸಿಬಿ ಸುಲಭದ ಜಯ ದಾಖಲಿಸಿದೆ. ಆದ್ರೆ, ಸದ್ಯ ಅಮೋಘ ಪರ್ಫಾಮೆನ್ಸ್​ ನೀಡ್ತಾ ಇರೋ ಪಂಜಾಬ್​ ಪಡೆಯನ್ನ ಸುಲಭಕ್ಕೆ ಪರಿಗಣಿಸುವಂತಿಲ್ಲ. ಅದ್ರಲ್ಲೂ ಧರ್ಮಶಾಲಾದಲ್ಲಿ ಪಂಜಾಬ್​ ಸೋಲಿಸೋದು ನಿಜಕ್ಕೂ ಟಫ್​ ಟಾಸ್ಕ್​..!
ಚಿನ್ನಸ್ವಾಮಿಯಲ್ಲಿ ಡೇಂಜರ್​ ಡೆಲ್ಲಿಯ ಸವಾಲ್.!
ಧರ್ಮಶಾಲಾದಲ್ಲಿ ಪಂಜಾಬ್​ ಚಾಲೆಂಜ್​ ಎದುರಿಸಿದ್ರೆ ನಂತರದ ಪಂದ್ಯದಲ್ಲಿ ಡೇಂಜರ್​​ ಡೆಲ್ಲಿ ಸವಾಲು ಆರ್​​ಸಿಬಿಗೆ ಎದುರಾಗಲಿದೆ. ಪ್ಲೇ ಆಫ್​ ರೇಸ್​​ನಲ್ಲಿ ಆರ್​​ಸಿಬಿಗಿಂತ ಡೆಲ್ಲಿ ಒಂದೆಜ್ಜೆ ಮುಂದಿದ್ದು, ಅಷ್ಟು ಸುಲಭಕ್ಕೆ ಡೆಲ್ಲಿ ಸೋಲಿಗೆ ಶರಣಾಗೀ ಸೀನೇ ಇಲ್ಲ. ಹೀಗಾಗಿ ಹೋಮ್​​ಗ್ರೌಂಡ್​​ನಲ್ಲಿ ಆರ್​​ಸಿಬಿ, ಸಾಲಿಡ್​​ ಪರ್ಫಾಮೆನ್ಸ್​ ನೀಡಿದ್ರೆ ಮಾತ್ರವೇ ಗೆಲುವು ಸಾಧ್ಯವಾಗಲಿದೆ.
ಚೆನ್ನೈ ವಿರುದ್ಧದ ಸೂಪರ್​ ಕಾಳಗವೇ ಅಂತಿಮ ಪರೀಕ್ಷೆ
ಪಂಜಾಬ್​, ಡೆಲ್ಲಿ ಎದುರು ಗೆದ್ದರೂ 3ನೇ ಟಾರ್ಗೆಟ್​ ಆರ್​​ಸಿಬಿ ಪಾಲಿನ ಕಬ್ಬಿಣದ ಕಡಲೆ ಅಂದ್ರೆ ತಪ್ಪಾಗಲ್ಲ. ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಎದುರು ಆರ್​​ಸಿಬಿ ಅಂತಿಮ ಪರೀಕ್ಷೆ ಎದುರಿಸಲಿದೆ. ಈ ಟೆಸ್ಟ್​ನಲ್ಲಿ ರನ್​ರೇಟ್​ ದೃಷ್ಟಿಯಿಂದ ಫಸ್ಟ್​ ಕ್ಲಾಸ್​​ನಲ್ಲಿ ಪಾಸಾಗಲೇಬೇಕಿದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾಗೆ ಇದೆ ಒಂದು ವಿಚಿತ್ರ ಚಾಳಿ.. ಕಳ್ಳತನ ಮಾಡಿದ ಪ್ರಕರಣ ರಿವೀಲ್..!
/newsfirstlive-kannada/media/post_attachments/wp-content/uploads/2024/04/RCB-win-against.jpg)
ಒಟ್ಟಿನಲ್ಲಿ ಆರ್​​ಸಿಬಿ ಪ್ಲೇ ಆಫ್​ ಕನಸು ಜೀವಂತವಾಗಿರಬೇಕಂದ್ರೆ ಮುಂದಿರೋ ಮೂರು ಕಠಿಣ ಸವಾಲನ್ನ ಗೆಲ್ಲಬೇಕಿದೆ. ಹ್ಯಾಟ್ರಿಕ್​ ಗೆಲುವು ಸಾಧಿಸಿದ ಮಾತ್ರಕ್ಕೆ ಫುಲ್​​ ರಿಲ್ಯಾಕ್ಸ್​ ಆದ್ರೆ, ಪ್ಲೇ ಆಫ್​ ಕನಸು ನುಚ್ಚು ನೂರಾಗಲಿದೆ.
ಇದನ್ನೂ ಓದಿ:ಮಧ್ಯರಾತ್ರಿ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಹಲ್ಲೆ.. ಬೆಚ್ಚಿಬಿದ್ದ ನೆಲಮಂಗಲ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us