/newsfirstlive-kannada/media/post_attachments/wp-content/uploads/2024/09/COFFEE-DRINKING-ADVANTAGES-1.jpg)
ದಿನಕ್ಕೇ ಮೂರೇ ಮೂರು ಕಪ್ ಕಾಫಿ ಸೇವಿಸುವುದರಿಂದ ಲಾಭಗಳು ಎಷ್ಟು ಇವೆ ಗೊತ್ತಾ? ನೀವು ಟೈಪ್​ 2 ಡಯಾಬಿಟಿಸ್ ಕಾಯಿಲೆಯಿಂದ, ಪಾರ್ಶ್ವವಾಯು ಕಾಯಿಲೆಯಿಂದ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಉಳಿಯಬಹುದು ಅಂತ ಒಂದು ಅಧ್ಯಯನ ಹೇಳುತ್ತಿದೆ.
ಇದನ್ನೂ ಓದಿ:ಮಧ್ಯಂತರ ಉಪವಾಸದಲ್ಲಿ ಈ ಪಾನೀಯಗಳನ್ನು ಸೇವಿಸಿ, ತೂಕ ಇಳಿಸಲು ಈ 8 ಡ್ರಿಂಕ್​ ರಾಮಬಾಣ
ಜರ್ನಲ್ ಆಫ್ ಕ್ಲಿನಿಕಲ್ ಎಂಡೊಕ್ರಿನೊಲಾಜಿ ಅಂಡ್ ಮೆಟಾಬೊಲಿಸಂ ( Journal of Clinical Endocrinology & meabolism) ನಡೆಸಿರುವ ಅಧ್ಯಯನ ಪ್ರಕಾರ ನಿತ್ಯ ಮೂರು ಕಪ್ ಕಾಫಿ ಕುಡಿಯುವುದರಿಂದ ದೇಹದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಧಮೇಹದಂತ ಕಾಯಿಲೆಗಳು ಉತ್ಪತ್ತಿಯಾಗುವ ಅಪಾಯದಿಂದ ಶೇಕಡಾ 50 ರಷ್ಟು ನಾವು ಪಾರಾಗಬಹುದು ಎಂದು ಹೇಳಲಾಗಿದೆ. ಚೀನಾದ ಸುಜ್ಹೋ ಮೆಡಿಕಲ್ ಕಾಲೇಜ್​ನ ಅಧ್ಯಯನದ ಪ್ರಮುಖ ರಚನೆಕಾರ ಚಾಹ್​ಫೂ ಕೆ ಹೇಳುವ ಪ್ರಕಾರ, ನಿತ್ಯ ಮೂರು ಕಪ್ ಕಾಫಿ ಅಥವಾ 200 ರಿಂದ 300 ಎಂಜಿ ಕಾಫಿನ್​ನ​ನ್ನು ಸೇವಿಸುವುದರಿಂದ ದೇಹದಲ್ಲಿ ಹೃದಯಸಂಬಂಧಿ ಕಾಯಿಲೆಗಳು ಅಭಿವೃದ್ಧಿಯಾಗುವುದನ್ನು ತಡೆಯುತ್ತದೆ ಎಂದು ಹೇಳಲಾಗಿದೆ. ಇದು ಮಾತ್ರವಲ್ಲ ಕಾಫಿ ಕುಡಿಯುವುದರಿಂದ ಅನೇಕ ಆರೋಗ್ಯಕರ ಅನುಕೂಲಗಳು ಇವೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/09/COFFEE-DRINKING-ADVANTAGES-2.jpg)
ಇದನ್ನೂ ಓದಿ: ಜೇನುಹುಳದ ವಿಷ ಕ್ಯಾನ್ಸರ್​​ ಕೊಲ್ಲುತ್ತಾ? ಏನಿದು ಹೊಸ ಆವಿಷ್ಕಾರ? ನೀವು ಓದಲೇಬೇಕು!
1 ಮಿತವಾದ ಕಾಫಿ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ ಹಾಗೂ ಮಧುಮೇಹದಂತ ಕಾಯಿಲೆಗಳಿಂದ ದೂರ ಇರಬಹುದು
2 ಕಾಫಿ ಕುಡಿಯುವ ಅಭ್ಯಾಸದಿಂದಾಗಿ ಮೆದುಳಿನ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ.
3 ಅಧ್ಯಯನಗಳು ಹೇಳವು ಪ್ರಕಾರ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರಲ್ಲಿಯೂ ಸಹ ಸಹಾಯಕವಾಗುತ್ತದೆಯಂತೆ
ಇದನ್ನೂ ಓದಿ:ನಿತ್ಯ 2 ನಿಮಿಷ ಧ್ಯಾನದಲ್ಲಿ ಹೇಗೆ ಕಳೆದುಹೋಗಬಹುದು ಗೊತ್ತಾ? ಈ ಒಂದು ರೂಢಿ ಬದುಕಲ್ಲಿ ಪವಾಡವನ್ನೇ ಸೃಷ್ಟಿಸಬಲ್ಲದು
4 ಕಾಫಿಯಲ್ಲಿರುವ ಕಾಫಿನ್ ಅಂಶವು ಮೆದುಳಿನ ನರಮಂಡಲದ ಕೇಂದ್ರವನ್ನು ಉತ್ತೇಜನಗೊಳಿಸುವುದರಿಂದ ಉತ್ತಮ ಮನಸ್ಥಿತಿ (Good mood) ನಮ್ಮದಾಗುವುದರ ಜೊತೆಗೆ ಡಿಪ್ರೆಷನ್ (Depression)​ನಂತಹ ಮಾನಸಿಕ ಕಾಯಿಲೆಗಳಿಂದ ದೂರ ಉಳಿಯಬಹುದು.
/newsfirstlive-kannada/media/post_attachments/wp-content/uploads/2024/09/COFFEE-DRINKING-ADVANTAGES-3.jpg)
5 ಅದರ ಜೊತೆಗೆ ಅಲ್ಜಮೈರ್​​ನಂತ ಸಮಸ್ಯೆಗಳು ಕೂಡ ಬಾಧಿಸುವುದಿಲ್ಲ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.
ಹೀಗಾಗಿ ನಿತ್ಯ ಕಾಫಿ ಕುಡಿಯುವುದರಿಂದ ಆರೋಗ್ಯದ ಲಾಭಗಳು ಸಾಕಷ್ಟಿವೆ. ನಿತ್ಯ ಮೂರು ಕಪ್ ಕಾಫಿ ಕುಡಿದು ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us