Advertisment

ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು; ಕಂಪನಿಗೆ ನೋಟಿಸ್, TTD ಮಾಜಿ ಅಧ್ಯಕ್ಷನಿಂದ ಆಣೆ, ಪ್ರಮಾಣ

author-image
Bheemappa
Updated On
ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು; ಕಂಪನಿಗೆ ನೋಟಿಸ್, TTD ಮಾಜಿ ಅಧ್ಯಕ್ಷನಿಂದ ಆಣೆ, ಪ್ರಮಾಣ
Advertisment
  • ಕಂಪನಿ ವಿರುದ್ಧ ತಿಮ್ಮಪ್ಪನಿಗೆ ಕಲಬೆರಕೆ ತುಪ್ಪ ಸಪ್ಲೈ ಮಾಡಿದ ಆರೋಪ
  • ‘ನಿಮ್ಮ ಪರವಾನಗಿಯನ್ನು ಏಕೆ ಅಮಾನತುಗೊಳಿಸಬಾರದು’-ಸರ್ಕಾರ
  • ಪುರೋಹಿತರಿಂದ ತಿರುಪತಿ ದೇವಸ್ಥಾನದಲ್ಲಿ ವಿವಿಧ ಯಾಗ -ಯಜ್ಞಗಳು

ಸಂಕಟ ಬಂದಾಗ ವೆಂಕಟರಮಣ. ಆದ್ರೆ ಈಗ ಆ ವೆಂಕಟರಾಮನ ಸನ್ನಿಧಿ ಕಲಿಯುಗದ ವೈಕುಂಠ, ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ಮೇಲೆಯೇ ಅಪವಾದ ಬಂದಿದೆ. ಆ ಅಪವಾದ, ಅಪಚಾರದಿಂದ ಮುಕ್ತವಾಗಲು ದೇವಸ್ಥಾನದಲ್ಲಿ ವಿವಿಧ ಯಾಗ-ಯಜ್ಞಗಳನ್ನು ಪುರೋಹಿತರು ಮಾಡಿದ್ದಾರೆ. ಇದೀಗ ತಿಮ್ಮಪ್ಪನಿಗೆ ಕಲಬೆರಕೆ ತುಪ್ಪ ಸಪ್ಲೈ ಮಾಡಿದ್ದ ಆರೋಪ ಹೊತ್ತಿರೋ ಕಂಪನಿಗೆ ನೋಟಿಸ್ ಜಾರಿಯಾಗಿದೆ.

Advertisment

ಇದನ್ನೂ ಓದಿ: DCM ಡಿ.ಕೆ ಶಿವಕುಮಾರ್ ರಾತ್ರಿ 2 ಗಂಟೆವರೆಗೆ ಸಿಲಿಕಾನ್ ಸಿಟಿ ರೌಂಡ್ಸ್​.. ಕಾರಣವೇನು?

ಕೋಟಿ ಕೋಟಿ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿ ಆರಾಧಿಸಿ ಆ ತಿಮ್ಮಪ್ಪನ ಪ್ರಸಾದವೆಂದು ಸ್ವೀಕರಿಸುವ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ವಿಚಾರ ವ್ಯಾಪಕ ಚರ್ಚೆ, ಆಕ್ರೋಶಕ್ಕೆ ಕಾರಣವಾಗಿದೆ. ಈ ಸುದ್ದಿ ತಿಮ್ಮಪ್ಪನ ಭಕ್ತರಿಗೆ ಬರಸಿಡಿಲೇ ಅಪ್ಪಳಿಸುವಂತೆ ಮಾಡಿದೆ. ಇದೀಗ ಶ್ರೇಷ್ಠ ಪ್ರಸಾದವನ್ನ ಅಪವಿತ್ರಗೊಳಿಸಿದ ಆರೋಪ ಹೊತ್ತಿರೋ ತುಪ್ಪದ ಕಂಪನಿಯೊಂದಕ್ಕೆ ಕೇಂದ್ರ ಸರ್ಕಾರ ಬಿಸಿಮುಟ್ಟಿಸಲು ಮುಂದಾಗಿದೆ.

ಇದನ್ನೂ ಓದಿ:ಮುಡಾ ಕೇಸ್​​ ತೀರ್ಪು ಪ್ರಕಟಿಸಲಿರೋ ಹೈಕೋರ್ಟ್.. ಇಂದು ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿರ್ಧಾರ

Advertisment

publive-image

ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಅಪಚಾರ ಪ್ರಕರಣ

ತಿರುಪತಿ ತಿರುಮಲ ದೇಗುಲದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರೋ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಈ ಸಂಬಂಧ ಆಂಧ್ರ ಪ್ರದೇಶ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಈ ನಡುವೆ ಕೇಂದ್ರ ಸರ್ಕಾರ ತುಪ್ಪಕ್ಕೆ ಕಲಬೆರಕೆ ಮಾಡಿರೋ ಕಂಪನಿಯ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಎಆರ್ ಡೈರಿಗೆ ನೋಟಿಸ್‌!

  • ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಅಪಚಾರ ಪ್ರಕರಣ
  • ಕೇಂದ್ರ ಆರೋಗ್ಯ ಸಚಿವಾಲಯ ಶೋಕಾಸ್ ನೋಟಿಸ್
  • ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್​​​
  • FSSAI ಮಾನದಂಡ ಪೂರೈಸದ ಕಾರಣಕ್ಕೆ ನೋಟಿಸ್​​
  • ಆಹಾರ ಸುರಕ್ಷತೆ -ಮಾನದಂಡಗಳ ಉಲ್ಲಂಘನೆ ಆರೋಪ
  • ‘ನಿಮ್ಮ ಪರವಾನಗಿಯನ್ನು ಏಕೆ ಅಮಾನತುಗೊಳಿಸಬಾರದು’
  • ಆರೋಪಗಳಿಗೆ ಸಂಬಂಧಿಸಿ ಉತ್ತರ ನೀಡುವಂತೆ ಸೂಚನೆ
  • ವರದಿ ಆಧರಿಸಿ ಕೇಂದ್ರದ ಗ್ರಾಹಕ ವ್ಯವಹಾರ ಇಲಾಖೆ ಕ್ರಮ

ಇದನ್ನೂ ಓದಿ: PUC ಪಾಸ್​ ಆದವರಿಗೆ ಭರ್ಜರಿ ಜಾಬ್​ಗಳು.. ನೂರಲ್ಲ, ಸಾವಿರಲ್ಲ 3 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು 

Advertisment

publive-image

ಟಿಟಿಡಿ ಮಾಜಿ ಅಧ್ಯಕ್ಷ ಕರುಣಾಕರ ರೆಡ್ಡಿ ಆಣೆ, ಪ್ರಮಾಣ

ಪ್ರಸಾದಕ್ಕೆ ಚ್ಯುತಿ ತಂದಿರೋ ಆರೋಪ ಟಿಟಿಡಿ ಮಾಜಿ ಅಧ್ಯಕ್ಷನ ವಿರುದ್ಧ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ತಿರುಮಲದಲ್ಲಿ ನಿನ್ನೆ ಸಂಜೆ ಹೈಡ್ರಾಮಾ ನಡೆದಿದೆ. ಟಿಟಿಡಿ ಮಾಜಿ ಅಧ್ಯಕ್ಷ ಭೂಮಲ ಕರುಣಾಕರರೆಡ್ಡಿ ನಾನು ತಪ್ಪು ಮಾಡಿಲ್ಲ ಅಂತ ಪ್ರಮಾಣ ಮಾಡಿದ್ದಾರೆ. ತಿರುಮಲಕ್ಕೆ ಬಂದು ಕಲ್ಯಾಣಿಯಲ್ಲಿ ಮುಳುಗಿ, ಆರತಿ ಹಿಡಿದು ದೇವರಿಗೆ ಪೂಜೆ ಸಲ್ಲಿಸಿ ಪ್ರಮಾಣ ಮಾಡಿದ್ದಾರೆ. ದೇವರ ಪ್ರಸಾದದ ವಿಚಾರದಲ್ಲಿ ನಾನು ಏನಾದರೂ ತಪ್ಪು ಮಾಡಿದ್ದರೇ, ನನ್ನ ಹಾಗೂ ನನ್ನ ಕುಟುಂಬದ ಜೀವವೇ ಹೋಗಲಿ ಅಂತ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ.

ಲಡ್ಡು ಲಡಾಯಿಯಿಂದ ಅಸಂಖ್ಯ ಭಕ್ತರ ಮನಸ್ಸಿಗೆ ಘಾಸಿಯಾಗಿರೋದಲ್ಲದೇ ಸ್ವತಃ ತಿರುಪತಿ ತಿರುಮಲ ದೇಗುಲ ಮಂಡಳಿಗೂ ಮುಜುರಗ ತರಿಸಿದೆ. ಭಕ್ತರ ಭಾವನೆ ಜೊತೆ ಚೆಲ್ಲಾಟ ಆಡದಂತೆ ಹಾಗೂ ಇನ್ಮುಂದೆ ಇಂತಹ ಅಪಚಾರಗಳು ಆಗದಂತೆ ಕ್ರಮ ವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment