/newsfirstlive-kannada/media/post_attachments/wp-content/uploads/2024/09/Ibrahim-Aqil-killed.jpg)
ಇಸ್ರೇಲ್, ಇದನ್ನು ಕೆಣಕಿ ಉಳಿದವರು ಬೆರಳೆಣಿಕೆಯಷ್ಟು, ಅದನ್ನು ಇತಿಹಾಸದಲ್ಲಿ ಅನೇಕ ಬಾರಿ ಸಾಬೀತು ಪಡೆಸಿದೆ ಗುಬ್ಬಿ ಗಾತ್ರದಷ್ಟಿರುವ ಈ ದೇಶ. ಜಗತ್ತಿನ ಯಾವುದೇ ಭಯೋತ್ಪಾದಕ ಶಕ್ತಿ ಇದರ ಮೇಲೆ ಆಕ್ರಮಣ ಮಾಡಿದಲ್ಲಿ ಮಾಡುವ ಬಗ್ಗೆ ಯೋಚಿಸಿದಲ್ಲಿ, ಆ ಯೋಚನೆ ಹಿಂದಿರುವ ಕಟ್ಟ ಕಡೆಯ ವ್ಯಕ್ತಿಯನ್ನು ಮಣ್ಣಲ್ಲಿ ಮಲಗಿಸಿಬರುವವರೆಗೂ ಈ ದೇಶ ವಿರಮಿಸುವುದಿಲ್ಲ. ಅದು ಆಪರೇಷನ್ ಎಂಟೆಬ್ಬೆ (OPERATION ENTEBBE) ಇರಬಹುದು, ಮೂನಿಚ್ ಒಲಿಂಪಿಕ್ಸ್​ನಲ್ಲಿ ತನ್ನ ದೇಶದ ಆಟಗಾರರನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಂಡ ರೀತಿ ಇರಬಹುದು. ಇಸ್ರೇಲ್ ತನ್ನ ಕೆಣಕಿದವರ ವಿರುದ್ಧ ಒಮ್ಮೆ ಮೈಕೊಡವಿಕೊಂಡು ಎದ್ದರೆ ಅಲ್ಲಿ ಒಂದೊಂದೇ ಮರಣ ಶಾಸನಗಳನ್ನು ಬರೆಯಲು ಸಿದ್ಧತೆ ಮಾಡಿಕೊಂಡಿದೆ ಎಂದೇ ಅರ್ಥ.
ಇದನ್ನೂ ಓದಿ:ಚೀನಾದ Beautiful ಗವರ್ನರ್​ಗೆ 13 ವರ್ಷ ಜೈಲು ಶಿಕ್ಷೆ,ಕೋಟಿ ರೂಪಾಯಿ ದಂಡ! ಕಾರಣವೇನು?
ಸುತ್ತಲೂ ಶತ್ರುಗಳನ್ನೇ ಇಟ್ಟುಕೊಂಡ ಕಳೆದ 7 ದಶಕಗಳಿಂದ ಯುದ್ಧದ ಕರಿಛಾಯೆಯಲ್ಲಿಯೆ ಬದುಕುತ್ತ ಬಂದಿರುವ ದೇಶ ಇಸ್ರೇಲ್. ಈಗ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಚಾಚಿಕೊಂಡಿದೆ. ಇಸ್ರೇಲ್ ಮೇಲೆ ಮತ್ತೆ ಲೆಬಿನಾನ್ ಪ್ಯಾಲಿಸ್ತೇನ್ ಇರಾನ್ ಈಗ ಇಸ್ರೇಲ್ ವಿರುದ್ಧ ಕತ್ತಿ ಮಸೆಯುತ್ತಿವೆ. ಇತ್ತೀಚೆಗಷ್ಟೇ ಹತನಾದ ಹಮಾಸ್​ನ ಮುಖ್ಯಸ್ಥ. ಪಟಾಕಿಯಂತೆ ಪಟಪಟನೇ ಸಿಡಿದು ಹಲವಾರು ಜನರ ಸಾವಿಗೆ ಕಾರಣವಾದ ಪೇಜರ್​ಗಳು ಈಗ ಶತ್ರು ರಾಷ್ಟ್ರದ ಪಿತ್ತವನ್ನು ನೆತ್ತಿಗೇರುವಂತೆ ಮಾಡಿದೆ ಇದರ ನಡುವೆಯೇ ಈಗ ಇಸ್ರೇಲ್​ ಮತ್ತೊಬ್ಬನ ಕಥೆ ಮುಗಿಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪವಲ್ಲ ಪೆಟ್ರೋಲ್​ನ್ನೇ ಸುರಿದಿದೆ.
ಹಿಜ್ಬುಲ್​ ಸೀನಿಯರ್ ಮಿಲಿಟರಿ ಕಮಾಂಡರ್ ಇಬ್ರಾಹಿಮ್ ಅಕಿಲ್​ನನ್ನು ಇಸ್ರೇಲ್ ತಾನು ನಡೆಸಿದ ಏರ್​ಸ್ಟ್ರೈಕ್ ದಾಳಿಯಲ್ಲಿ ಕೊಂದು ಮುಗಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಿಜ್ಬುಲ್​ನ ಎಲೈಟ್ ರಾಡ್ವನ್​ ಯುನಿಟ್​ನ ಟಾಪ್ ಕಮಾಂಡರ್ ಆಗಿದ್ದ ಇಬ್ರಾಹಿಮ್ ಅಕಿಲ್​ ಇಸ್ರೇಲ್ ನಡೆಸಿದ ಏರ್​ಸ್ಟ್ರೈಕ್​ನಲ್ಲಿ ಹತ್ಯೆಯಾಗಿದ್ದಾನೆ ಎಂದು ಖುದ್ದು ಹಿಜಬುಲ್ ಪಡೆಯೇ ಹೇಳುತ್ತಿದೆ.
ಕಳೆದ ವರ್ಷ ಅಕ್ಟೋಬರ್ 7 ರಿಂದಲೂ ಲೆಬನಾನ್ ಹಾಗೂ ಇಸ್ರೇಲ್ ನಡುವೆ ಗಡಿಯಲ್ಲಿ ಘರ್ಷಣೆಗಳು ನಡೆಯುತ್ತಲೇ ಇದ್ದವು. ಇಬ್ರಾಹಿಮ್ ಅಕಿಲ್​ ಇದ್ದ ಎಲೈಟ್ ರಾಡ್ವನ್ ಯುನಿಟ್ ಇಸ್ರೇಲ್​ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತಿತ್ತು. ಅಕಿಲ್​ನನ್ನ ತಹ್ಸೀನ್ ಅಂತಲೂ ಕೂಡ ಕರೆಯಲಾಗುತ್ತಿತ್ತು. ಅಮೆರಿಕಾದ ಸರ್ಕಾರ ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಗುರುತಿಸಿತ್ತು ಅಲ್ಲದೇ ಇವನ ಬಗ್ಗೆ ಮಾಹಿತಿ ಕೊಟ್ಟವರಿಗೆ 70 ಲಕ್ಷ ಅಮೆರಿಕನ್ ಡಾಲರ್ ನೀಡುವುದಾಗಿಯೂ ಕೂಡ ಹೇಳಿತ್ತು. ಅವನನ್ನು ಈಗ ಇಸ್ರೇಲಿ ಪಡೆ ಹೊಡೆದುರುಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ