/newsfirstlive-kannada/media/media_files/2025/08/16/hillary-clinton-2025-08-16-12-59-03.jpg)
ಹಿಲರಿ ಕ್ಲಿಂಟನ್ ಮತ್ತು ಡೋನಾಲ್ಡ್ ಟ್ರಂಪ್
ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ ಹಿಲರಿ ಕ್ಲಿಂಟನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 2016ರಲ್ಲಿ ಹಿಲರಿ ಕ್ಲಿಂಟನ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ವಿರುದ್ಧ ಸೋಲು ಅನುಭವಿಸಿದ್ದರು. ಅಮೆರಿಕಾದ ರಾಜಕೀಯ ಕ್ಷೇತ್ರದಲ್ಲಿ ಡೋನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ಪರಸ್ಪರ ವೈರಿಗಳು. ಇಬ್ಬರು ಬೇರೆಬೇರೆ ಪಕ್ಷದಲ್ಲಿದ್ದಾರೆ. ಬೇರೆಬೇರೆ ಪಕ್ಷದಿಂದಲೇ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಪರಸ್ಪರರ ವಿರುದ್ಧ ಸ್ಪರ್ಧಿಸಿದ್ದರು.
ಈಗ ಅದೇ ಹಿಲರಿ ಕ್ಲಿಂಟನ್ , ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ. ಆದರೆ ಷರತ್ತುಗಳು ಅನ್ವಯ. ಆ ಷರತ್ತು ಏನೆಂದರೆ ಡೋನಾಲ್ಡ್ ಟ್ರಂಪ್ ಕಳೆದ ಮೂರು ವರ್ಷದಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್ ಯುದ್ಧವನ್ನು ನಿಲ್ಲಿಸಿದರೆ ಮಾತ್ರ ಡೋನಾಲ್ಡ್ ಟ್ರಂಪ್ ಹೆಸರು ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುವುದಾಗಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ಇದನ್ನೂ ಓದಿ:‘ಡೀಲ್ ಆಗೋವರೆಗೆ ಯಾವುದೇ ಒಪ್ಪಂದ ಇಲ್ಲ’ ಟ್ರಂಪ್-ಪುಟಿನ್ 3 ಗಂಟೆ ಮೀಟಿಂಗ್, ಇನ್ನೂ ರಿಸಲ್ಟ್ ಇಲ್ಲ
ಅಮೆರಿಕಾದಲ್ಲಿ ಈ ವಿದೇಶಾಂಗ ಸಚಿವೆಯಾಗಿಯೂ ಕೆಲಸ ಮಾಡಿರುವ ಹಿಲರಿ ಕ್ಲಿಂಟನ್, ರಷ್ಯಾ- ಉಕ್ರೇನ್ ಯುದ್ಧವನ್ನು ಡೋನಾಲ್ಡ್ ಟ್ರಂಪ್ ನಿಲ್ಲಿಸಲಿ. ಜೊತೆಗೆ ವಾಡ್ಲಿಮಿರ್ ಪುಟಿನ್, ಉಕ್ರೇನ್ನ ಯಾವುದೇ ಜಾಗವನ್ನು ವಶಕ್ಕೆ ಪಡೆಯದಂತೆ ಯುದ್ದ ನಿಲ್ಲಿಸಿದರೆ ತಾವು ಡೋನಾಲ್ಡ್ ಟ್ರಂಪ್ ಹೆಸರನ್ನು ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸಿದ್ದ ಎಂದು ಹಿಲರಿ ಕ್ಲಿಂಟನ್ ಹೇಳಿದ್ದಾರೆ. ಪ್ರಾಮಾಣಿಕವಾಗಿ ಒಂದು ವೇಳೆ ಟ್ರಂಪ್, ಈ ಭಯಾನಕ ಯುದ್ಧಕ್ಕೆ ಅಂತ್ಯ ಕಾಣಿಸಿದರೆ ಒಂದು ವೇಳೆ, ಉಕ್ರೇನ್ ತನ್ನ ಭೂಪ್ರದೇಶವನ್ನು ರಷ್ಯಾಕ್ಕೆ ಬಿಟ್ಟುಕೊಡದಂತೆ ಯುದ್ಧವನ್ನು ಅಂತ್ಯ ಮಾಡಿದರೆ ಪುಟಿನ್ಗೆ ಎದುರಾಗಿ ಡೋನಾಲ್ಡ್ ಟ್ರಂಪ್ ನಿಂತರೆ ಅದನ್ನು ನಾವು ಇದುವರೆಗೂ ನೋಡಿಲ್ಲ, ಇದೊಂದು ಅವಕಾಶ ಎಂದು ಹಿಲರಿ ಕ್ಲಿಂಟನ್ ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ಕೂಡ ವರದಿ ಮಾಡಿದೆ.
ಅಲಸ್ಕಾ ಶೃಂಗಸಭೆಯು ಡೋನಾಲ್ಡ್ ಟ್ರಂಪ್ಗೆ ಪುಟಿನ್ಗೆ ಕದನ ವಿರಾಮ ಆಗಲೇಬೇಕು ಎಂದು ಸ್ಪಷ್ಟವಾಗಿ ಹೇಳಲು ಒಂದು ಅವಕಾಶ. ರಷ್ಯಾ ಮತ್ತು ಉಕ್ರೇನ್ ನಡುವೆ ಯಾವುದೆ ಭೂಪ್ರದೇಶದ ವಿನಿಮಯ ಆಗಬಾರದು ಎಂದು ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಜೊತೆ ಅರ್ಧ ಜಗತ್ತನ್ನೇ ನಾಶ ಮಾಡ್ತೀವಿ ಎಂದ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.